Breaking News

ರಾಜಕೀಯ

ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಬೆಳಗಾವಿ: ರಾಜ್ಯ ಸರ್ಕಾರ ಜಾರಿಗೆ ತಂದ ಭೂ ಸುಧಾರಣಾ ಕಾಯ್ದೆ ಹಿಂಪಡೆಯಬೇಕು ಹಾಗೂ ಎಲ್ಲ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ, ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಘಟಕದಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.   ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಮುಖಂಡರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಭೂ ಸುಧಾರಣಾ ಕಾಯ್ದೆ ರೈತರಿಗೆ ಮಾರಕವಾಗಿದ್ದು, ಅದನ್ನು ಹಿಂಪಡೆಯದಿದ್ದರೆ ಉಗ್ರ …

Read More »

ಅಂದು ಗೋಕಾಕ್ ಚಳವಳಿ, ಇದು ಕುಪ್ಪಳ್ಳಿ ಕಹಳೆ: ಸಂಗೀತ ನಿರ್ದೇಶಕ ಹಂಸಲೇಖ ಅಭಿಮತ

ಶಿವಮೊಗ್ಗ: ಕನ್ನಡದ ನಡ (ಸೊಂಟ) ಮುರಿಯುವ ನಡೆ ಕನ್ನಡ ನಾಡಿನಲ್ಲಿ ಶುರುವಾಗಿದೆ. ನಾವು ಭಾಷಾಂಧರೂ ಅಂದರೂ ಸರಿ ಈ ನಡೆಯ ವಿರುದ್ಧ ತಮಿಳರನ್ನು ಅನುಸರಿಸಿ ಹೋರಾಟ ಸಂಘಟಿಸಬೇಕಿದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದರು. ರೋಹಿತ್ ಚಕ್ರತೀರ್ಥ ಸಮಿತಿಯಿಂದ ಪಠ್ಯಕ್ರಮ ಪರಿಷ್ಕರಣೆ ಹಾಗೂ ರಾಷ್ಟ್ರಕವಿ ಕುವೆಂಪುಗೆ ಅಪಮಾನ ಖಂಡಿಸಿ ಬುಧವಾರ ಕುಪ್ಪಳ್ಳಿಯ ಕವಿಶೈಲದಿಂದ ತೀರ್ಥಹಳ್ಳಿಗೆ ಆರಂಭವಾದ ಪಾದಯಾತ್ರೆಯಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಅವರ ಭಾಷೆಗೆ ಕೊಂಚ ಯಡವಟ್ಟಾದರೂ …

Read More »

24 ವರ್ಷ ಕಾದ ಬಳಿಕ 57ನೇ ವಯಸ್ಸಿನಲ್ಲಿ ಸಿಕ್ತು ಸರ್ಕಾರಿ ನೌಕರಿ

ಅಮರಾವತಿ: ಸರ್ಕಾರಿ ಶಿಕ್ಷಕನಾಗಬೇಕೆಂದು ಕನಸು ಕಂಡಿದ್ದ ಆಂಧ್ರಪ್ರದೇಶದ ವ್ಯಕ್ತಿ ತನ್ನ 33ನೇ ವಯಸ್ಸಿನಲ್ಲಿ ಪರೀಕ್ಷೆ ಬರೆದು, 24 ವರ್ಷ ಕಾದ ಬಳಿಕ ತನ್ನ 57ನೇ ವಯಸ್ಸಿನಲ್ಲಿ ಉದ್ಯೋಗ ಪಡೆದಿದ್ದಾರೆ. ಪಥಪಟ್ಟಣದ ಪೆದ್ದಾ ಸಿದ್ದಿಯ ಅಲಕಾ ಕೇದಾರೇಶ್ವರ್ ರಾವ್ ತಮ್ಮ ಬ್ಯಾಚುಲರ್ ಆಫ್ ಎಜುಕೇಶನ್ ಅನ್ನು ಪೂರೈಸಿ, 1998ರಲ್ಲಿ ಸರ್ಕಾರಿ ಶಿಕ್ಷಕನಾಗುವ ಸಲುವಾಗಿ ಜಿಲ್ಲಾ ಆಯ್ಕೆ ಸಮಿತಿ(ಡಿಎಸ್‌ಸಿ) ಪರೀಕ್ಷೆ ಬರೆದಿದ್ದರು. ಅವರು ಒಳ್ಳೆಯ ಅಂಕ ಗಳಿಸಿದ್ದರೂ ಕಾನೂನು ಸಮಸ್ಯೆಯಿಂದ ಅವರ ಆಯ್ಕೆ ವಿಳಂಬವಾಯಿತು. …

Read More »

ಕಾಂಗ್ರೆಸ್ ಸರ್ಕಾರ 90ರ ದಶಕದಲ್ಲಿಯೇ ಅಗ್ನಿಪಥ್ ಜಾರಿಗೆ ತರಲು ಚಿಂತಿಸಿತ್ತು: ಉಮೇಶ್ ಕತ್ತಿ

ಚಿಕ್ಕೋಡಿ: ಕಾಂಗ್ರೆಸ್ ಸರ್ಕಾರವೇ 90ರ ದಶಕದಲ್ಲಿ ಅಗ್ನಿಪಥ್ ಯೋಜನೆಯನ್ನು ಜಾರಿಗೆ ತರಲು ಚಿಂತಿಸಿತ್ತು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯದಲ್ಲಿ ಆಯೋಜಿಸಿದ್ದ ಹಸಿರು ಹಬ್ಬ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಉಮೇಶ್ ಕತ್ತಿ, ಇದು ಸ್ವತಃ ಕಾಂಗ್ರೆಸ್‌ನವರೇ ಜಾರಿಗೆ ತರಲು ಯತ್ನಿಸಿದ ಕಾರ್ಯಕ್ರಮ. ಆದರೆ ಇಂದು ಮೋದಿ ನೇತೃತ್ವದ ಸರ್ಕಾರ ಅಗ್ನಿಪಥ್ ಯೋಜನೆಗೆ ಚಾಲನೆ ನೀಡಿದೆ. ಆದರೆ ಕಾಂಗ್ರೆಸ್‌ನವರು …

Read More »

ಮಹಾರಾಷ್ಟ್ರ ಪರಿಷತ್ ಚುನಾವಣೆ: ಬಿಜೆಪಿಯ ಎಲ್ಲ ಐವರು ಅಭ್ಯರ್ಥಿಗಳಿಗೆ ಗೆಲುವು

ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ತಿನ 10 ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ ಬಿಜೆಪಿ ಕಣಕ್ಕಿಳಿಸಿದ ಎಲ್ಲ ಐವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಐದು ಸ್ಥಾನಗಳಿಗೆ ಬಿಜೆಪಿಯಿಂದ ಪ್ರವೀಣ್ ದಾರೆಕರ್, ಪ್ರೊ. ರಾಮ್ ಶಿಂದೆ, ಉಮಾ ಖಾಪ್ರೆ, ಶ್ರೀಕಾಂತ್ ಭಾರತೀಯ ಹಾಗೂ ಪ್ರಸಾದ್ ಲಾಡ್ ಸ್ಪರ್ಧಿಸಿದ್ದರು. ಆಡಳಿತಾರೂಢ ಮೈತ್ರಿಕೂಟ ಮಹಾ ವಿಕಾಸ್ ಅಘಾಡಿ 6 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆದರೆ, ಐವರು ಮಾತ್ರ ಜಯಗಳಿಸಿದ್ದಾರೆ. ಶಿವಸೇನಾದ ಇಬ್ಬರು ಅಭ್ಯರ್ಥಿಗಳು (ಸಚಿನ್ ಅಹಿರ್ ಮತ್ತು …

Read More »

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಅವರಾದಿ-ತಿಮ್ಮಾಪೂರ ರಸ್ತೆ ಅಭಿವೃದ್ಧಿಗೆ 18 ಕೋಟಿ ರೂ ಅನುದಾನ ಮಂಜೂರು 

*ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಅವರಾದಿ-ತಿಮ್ಮಾಪೂರ ರಸ್ತೆ ಅಭಿವೃದ್ಧಿಗೆ 18 ಕೋಟಿ ರೂ ಅನುದಾನ ಮಂಜೂರು   ಮೂಡಲಗಿ  ತಾಲೂಕಿನ ಅವರಾದಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಮಂಜೂರಾದ 18 ಕೋಟಿ ರೂ ವೆಚ್ಚದ ಅವರಾದಿ-ತಿಮ್ಮಾಪೂರ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆ ಕಾಮಗಾರಿಯಿಂದ ಅವರಾದಿಯಿಂದ ಹಳೇಯರಗುದ್ರಿ, ಹೊಸಯರಗುದ್ರಿ ಮೂಲಕ ತಿಮ್ಮಾಪೂರ ರಸ್ತೆ ಅಭಿವೃದ್ಧಿಯಾಗಲಿದೆ ಎಂದು ಅವರು ಹೇಳಿದರು. ಶಾಸಕ ಹಾಗೂ ನಮ್ಮೆಲ್ಲರ ನೆಚ್ಚಿನ …

Read More »

ಶುದ್ದ ಸಸ್ಯಾಹಾರ; ಮೈಸೂರಿನಲ್ಲಿ ಪಿಎಂ ಮೋದಿ ಊಟದ ಮೆನು ಹೇಗಿದೆ ನೋಡಿ

ಮೈಸೂರು: ಯೋಗ ಕಾರ್ಯಕ್ರಮ ನಿಮಿತ್ತ ಮೈಸೂರು ನಗರಕ್ಕೆ ಆಗಮಿಸಲಿರುವ ಪಿಎಂ ನರೇಂದ್ರ ಮೋದಿ ಅವರ ಊಟ-ಉಪಹಾರದ ಮೆನು ಸಿದ್ದವಾಗಿದೆ. ಶುದ್ದ ಸಸ್ಯಹಾರಿ ಊಟ ಸೇವಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮಹಾರಾಜ ಕಾಲೇಜು ಮೈದಾನದಲ್ಲಿ ಅಂತಿಮ ಹಂತದ ಸಿದ್ಧತೆ ನಡೆದಿದ್ದು, ಎಸ್​​ಪಿಜಿಯಿಂದ ವೇದಿಕೆ ಭದ್ರತೆ ಪರಿಶೀಲನೆ ನಡೆಸಲಾಗಿದೆ. ಮಹಾರಾಜ ಕಾಲೇಜು ಮೈದಾನದ ಸುತ್ತ ಪೊಲೀಸರ ಬಿಗಿ ಭದ್ರತೆ, ವೇದಿಕೆ ಹಿಂಬಾಗದಲ್ಲಿ ಬೃಹತ್ ಎಲ್‌ಇಡಿ ಅಳವಡಿಕೆ ಮಾಡಲಾಗಿದೆ.   ಅದೇ ರೀತಿ ಮೈಸೂರಿಗೆ ಬರಲಿರುವ …

Read More »

 15 ವರ್ಷಗಳ ಹಿಂದೆ ಗ್ಯಾಂಗ್‌ಸ್ಟಾರ್ ಪ್ರವೀಣ ಶಿಂತ್ರೆಯನ್ನು ಎನ್‌ಕೌಂಟರ್ ಮಾಡಿದ ಬಳಿಕ ಈಗ ಬೆಳಗಾವಿಯಲ್ಲಿ ಮತ್ತೊಮ್ಮೆ ಗುಂಡಿನ ಸದ್ದು

ಬೆಳಗಾವಿ: 15 ವರ್ಷಗಳ ಹಿಂದೆ ಗ್ಯಾಂಗ್‌ಸ್ಟಾರ್ ಪ್ರವೀಣ ಶಿಂತ್ರೆಯನ್ನು ಎನ್‌ಕೌಂಟರ್ ಮಾಡಿದ ಬಳಿಕ ಈಗ ಬೆಳಗಾವಿಯಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಮಾರ್ದನಿಸಿದ್ದು, ಕೊಲೆ, ಸುಲಿಗೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಮಂಗಳವಾರ ಬೆಳಗಿನ ಜಾವ ನಗರದ ಧರ್ಮನಾಥ ಭವನ ಸಮೀಪ ಪೊಲೀಸರ ಮೇಲೆ ಅಟ್ಯಾಕ್ ಮಾಡಲು ಮುಂದಾದಾಗ ಪೊಲೀಸರು ಗುಂಡು ಹಾರಿಸುವ ಮೂಲಕ ಆತನನ್ನು ಹೆಡೆಮುರಿ ಕಟ್ಟಿದ್ದಾರೆ.   ಮೂಲತಃ ಕಿತ್ತೂರು ತಾಲೂಕಿನ ಚಿಕ್ಕನಂದಿ ಗ್ರಾಮದ ಸದ್ಯ ಶಾಸ್ತ್ರಿ …

Read More »

ಬೆಂಗಳೂರಿಗರ ಎಲ್ಲ ಕನಸುಗಳನ್ನು ನನಸು ಮಾಡಲು ನಾವು ಬದ್ಧ: ಮೋದಿ

ಕರ್ನಾಟಕದಲ್ಲಿ ಹಲವು ಮೂಲಭೂತ ಯೋಜನೆಗಳನ್ನು ಕಲ್ಪಿಸುವ ಯೋಜನೆಗಳಿಗೆ ಚಾಲನೆ ಕೊಟ್ಟಿರುವುದು ಸಂತೋಷ ತಂದಿದೆ.ನಗರದ ಅಭಿವೃದ್ಧಿಯಿಂದ ‌ಲಕ್ಷಾಂತರ ಕನಸುಗಳ ವಿಕಾಸವಾಗಲಿದೆ. ಹಾಗಾಗಿ ಬೆಂಗಳೂರಿಗರ ಎಲ್ಲ ಕನಸುಗಳನ್ನು ನನಸು ಮಾಡಲು ನಾವು ಬದ್ಧವಾಗಿದ್ಧೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.   ಬೆಂಗಳೂರು: ಜಗತ್ತಿನ‌ ಮುಂಚೂಣಿ ನಗರಗಳಲ್ಲಿ ಬೆಂಗಳೂರು ಒಂದು. ಉದ್ಯೋಗ, ನವೋದ್ಯಮಗಳನ್ನು ಸೃಷ್ಟಿ‌ಸುವ ನಗರವೂ ಆಗಿದೆ. ಈ ನಗರಿಯ ಎಲ್ಲ ಕನಸುಗಳನ್ನು ನನಸು ಮಾಡಲು ನಾವು ಬದ್ಧರಾಗಿದ್ಧೇವೆ ಎಂದು ಪ್ರಧಾನಿ ನರೇಂದ್ರ ಮೋದಿ …

Read More »

ಬೆಳಗಾವಿಯ ಸೇನಾ ಶಾಲೆಗೆ​​ ನೇಮಕಾತಿ; ಪಿಯುಸಿ ಆಗಿದ್ರೆ ಸಾಕು

ಬೆಳಗಾವಿಯ ಸೇನಾ ಎಚ್​​ಕ್ಯೂ ಇನ್​ಫ್ಯಾಂಟ್ರಿ ಶಾಲೆಯಲ್ಲಿ ವಿವಿಧ ಗ್ರೂಪ್​ ಸಿ ಹುದ್ದೆಗೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. 88 ಡ್ರಾಟ್ಸ್​ಮನ್​, ಲೋವರ್​ ಡಿವಿಷನ್​ ಕ್ಲರ್ಕ್​ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಆಫ್​ಲೈನ್ (Offline)​ ಮೂಲಕ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಜುಲೈ 25 ಆಗಿದೆ. ಸಂಸ್ಥೆಯ ಹೆಸರು: ಎಚ್​​ಕ್ಯೂ ಇನ್​ಫ್ಯಾಂಟ್ರಿ ಶಾಲೆ ಹುದ್ದೆ: ಡ್ರಾಟ್ಸ್‌ಮನ್, ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗಳ …

Read More »