Breaking News

ರಾಜಕೀಯ

ಬೈಲಹೊಂಗಲದಲ್ಲಿ ರಸ್ತೆ ಸುಧಾರಣೆಗೆ ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

ಬೈಲಹೊಂಗಲ ಪುರಸಭೆಯ ವ್ಯಾಪ್ತಿಯ 27 ವಾರ್ಡ್‍ಗಳಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಸ್ತೆ ದುರಸ್ತಿಗೆ ಒತ್ತಾಯಿಸಿ ಬೈಲಹೊಂಗಲ ಪಟ್ಟಣದಲ್ಲಿ ಇಂದು ಧಾರವಾಡ ಬೈಪಾಸ್ ರಸ್ತೆ ತಡೆದು ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷರಾದ ಶಂಕರ ಮಾಡಲಗಿ ನೇತೃತ್ವದಲ್ಲಿ ರಸ್ತೆ ತಡೆದು ಆಕ್ರೋಶ ಹೊರಹಾಕಲಾಯಿತು. ಬೈಲಹೊಂಗಲ ಪುರಸಭೆಯ 27 ವಾರ್ಡ್ ಗಳಲ್ಲಿ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಸ್ತೆ ದುರಸ್ತಿಗೆ ಒತ್ತಾಯಿಸಿ ಬೈಲಹೊಂಗಲ ಪಟ್ಟಣದಲ್ಲಿ ಇಂದು ಸೋಮವಾರ ಜೆಡಿಎಸ್ ಜಿಲ್ಲಾ ಘಟಕ ಅಧ್ಯಕ್ಷ ಶಂಕರ ಮಾಡಲಗಿ …

Read More »

ಮತ್ತೆ ಮುಖಾಮುಖಿ; ಮುನಿರತ್ನ ಕೈಹಿಡಿಯಲು ಬಂದರೆ ಡಿಕೆ ಶಿವಕುಮಾರ್ ಮಾಡಿದ್ದೇನು?

ಬೆಂಗಳೂರು: ಉಪಚುನಾವಣೆ ಸಂದರ್ಭದಲ್ಲಿ ಪರಸ್ಪರ ತೀವ್ರ ವಾಗ್ದಾಳಿ ನಡೆಸಿಕೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಚಿವ ಮುನಿರತ್ನ ಸೋಮವಾರ ಮುಖಾಮುಖಿಯಾದರು. ರಾಷ್ಟ್ರಪತಿ ಚುನಾವಣೆ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಇವರಿಬ್ಬರು ಮುಖಾಮುಖಿಯಾದರು.   ಮುನಿರತ್ನರನ್ನ ನೋಡುತ್ತಿದ್ದಂತೆ ‘ಓ ಏನ್ರೀ..’ ಎಂದು ಡಿ ಕೆ ಶಿವಕುಮಾರ್ ಬೆನ್ನು ತಟ್ಟಿದರು. ಆಗ ಡಿಕೆ ಶಿವಕುಮಾರ್ ಕೈ ಹಿಡಿಯಲು ಮುನಿರತ್ನ ಮುಂದಾದಾಗ ಶಿವಕುಮಾರ್ ನಿರಾಕರಿಸಿದರು.

Read More »

ರಾಜ್ಯ ಸರ್ಕಾರಿ ನೌಕರರ ಸಂಘದ ‘ಅಧ್ಯಕ್ಷ ಸಿಎಸ್ ಷಡಕ್ಷರಿ’ಗೆ KRS ಪಕ್ಷದ ರಾಜ್ಯಾಧ್ಯಕ್ಷ ‘ರವಿಕೃಷ್ಣಾ ರೆಡ್ಡಿ’ ಬಹಿರಂಗ ಪತ್ರ: ಏನಿದೆ ಗೊತ್ತಾ.?

ಬೆಂಗಳೂರು: ರಾಜ್ಯ ಸರ್ಕಾರ ಸರ್ಕಾರಿ ಕಚೇರಿಗಳಲ್ಲಿ ಪೋಟೋ, ವೀಡಿಯೋ ಚಿತ್ರೀಕರಣ ನಿಷೇಧ, ಆ ಬಳಿಕ ವಾಪಾಸ್ ನಂತ್ರ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ C.S. ಷಡಾಕ್ಷರಿ ವಿರುದ್ಧ ಸಿಡಿದೆದ್ದಿದೆ. ಇದೀಗ ಮುಂದುವರೆದು ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾ ರೆಡ್ಡಿಯವರು ಸಿಎಸ್ ಷಡಾಕ್ಷರಿಗೆ ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಆ ಪತ್ರದಲ್ಲಿ ಏನಿದೆ ಎನ್ನುವ ಬಗ್ಗೆ ಮುಂದೆ ಓದಿ.. ಹೀಗಿದೆ.. ರಾಜ್ಯ ಸರ್ಕಾರಿ ನೌಕರರ ಸಂಘದ …

Read More »

ವರ್ಗಾವಣೆ ಸಂಚಲನ ಸೃಷ್ಟಿಸಿದ್ದ ಕರ್ನಾಟಕ ಹೈಕೋರ್ಟ್​ ಜಡ್ಜ್​ ವಿರುದ್ಧ ಸುಪ್ರೀಂ ಭಾರಿ ಅಸಮಾಧಾನ: ಎಸಿಬಿ ವಿರುದ್ಧದ ಆದೇಶಗಳಿಗೆ ತಡೆ

ನವದೆಹಲಿ: ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ವಿರುದ್ಧ ಕೆಲವು ನಿರ್ದೇಶನಗಳನ್ನು ನೀಡಿದ್ದ ಕರ್ನಾಟಕ ಹೈಕೋರ್ಟ್​ ನ್ಯಾಯಮೂರ್ತಿಯೊಬ್ಬರ ಕ್ರಮಕ್ಕೆ ಭಾರಿ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್​, ಎಸಿಬಿ ವಿರುದ್ಧ ನೀಡಲಾಗಿರುವ ಎಲ್ಲಾ ನಿರ್ದೇಶನಗಳಿಗೂ ತಡೆ ನೀಡಿದೆ. ಎಸಿಬಿಯಿಂದ ತನಿಖೆ ಮುಗಿದ ಪ್ರಕರಣಗಳ ಪಟ್ಟಿ ಹಾಗೂ ಅಧಿಕಾರಿಗಳ ಸೇವಾ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್​ ನೀಡಿದ್ದ ಆದೇಶಗಳಿಗೆ ಸುಪ್ರೀಂಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿ ಇವುಗಳಿಗೆ ತಡೆ ನೀಡಿರುವುದಾಗಿ ಹೇಳಿದೆ. ಭ್ರಷ್ಟಾಚಾರ ನಿಗ್ರಹ ದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸೀಮಂತ್ …

Read More »

ನ.11ರಿಂದ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಮಹೇಶ ಜೋಶಿ

ಕಲಬುರಗಿ:ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಈ ಬಾರಿ ನ.11ರಿಂದ 13ರವರೆಗೆ ಹಾವೇರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಶೀಘ್ರವೇ ಸರ್ಕಾರದಿಂದ ಅಧಿಕೃತ ಘೋಷಣೆ ಆಗಲಿದೆ ಎಂದು ಕಸಾಪ ಕೇಂದ್ರ ಸಮಿತಿ ಅಧ್ಯಕ್ಷ ನಾಡೋಜ ಮಹೇಶ ಜೋಶಿ ಹೇಳಿದರು.   ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ಸೆ.21, 22 ಮತ್ತು 23ರಂದು ನಡೆಸಲು ತೀರ್ಮಾನಿಸಲಾಗಿತ್ತು ಎಂದರು. ಹಾವೇರಿಯಲ್ಲಿ ಪ್ರಮುಖವಾಗಿ ಸಿರಿಗೆರೆ ಜಾತ್ರೆ ನಡೆಯುತ್ತದೆ. ದೊಡ್ಡ ಜಾತ್ರೆಯಾದ್ದರಿಂದ ಖುದ್ದು ಸಿರಿಗೆರೆ ಶ್ರೀಗಳೇ ಮಾತನಾಡಿ ದಿನಾಂಕ …

Read More »

ಕಸದ ಬಂಡಿಯಲ್ಲಿ ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್, ಅಬ್ದುಲ್ ಕಲಾಂ ಫೋಟೋ.

ಉತ್ತರ ಪ್ರದೇಶ: ಉತ್ತರ ಪ್ರದೇಶದ ಮಥುರಾದಲ್ಲಿ ವ್ಯಕ್ತಿಯೊಬ್ಬ ತಳ್ಳಿಕೊಂಡು ಹೋಗುತ್ತಿರುವ ಕಸದ ಬಂಡಿಯಲ್ಲಿ ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್, ಎಪಿಜೆ ಅಬ್ದುಲ್ ಕಲಾಂ ಅವರ ಫೋಟೋಗಳು ಕಂಡುಬಂದಿವೆ. ಈ ದೃಶ್ಯವನ್ನು ಅಲ್ಲಿನ ಜನರು ವಿಡಿಯೋ ಮಾಡಿದ್ದು, ವ್ಯಕ್ತಿಯ ಮೇಲೆ ಆಕ್ರೋಶಗೊಂಡಿರುವ ಘಟನೆ ನಡೆದಿದೆ. ಮೂಲಗಳ ಪ್ರಕಾರ, ಎಸೆದ ವಸ್ತುಗಳ ಕಸದ ರಾಶಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮತ್ತು ಎಪಿಜೆ ಅಬ್ದುಲ್ …

Read More »

ದೇಶದ 16ನೇ ರಾಷ್ಟ್ರಪತಿ ಆಯ್ಕೆಗೆ ಇಂದು ಮತದಾನ

ದೇಶದ 16ನೇ ರಾಷ್ಟ್ರಪತಿ ಆಯ್ಕೆಗೆ ಜು.18ರಂದು ಮತದಾನ ನಡೆಯಲಿದ್ದು, ಅದರಂತೆ ರಾಜ್ಯದಲ್ಲೂ ಮತದಾನಕ್ಕೆ ವಿಧಾನಸೌಧದ 106ನೇ ಸಂಖ್ಯೆಯ ಕೊಠಡಿ ಸಜ್ಜುಗೊಂಡಿದೆ. ರಾಷ್ಟ್ರಪತಿ ಚುನಾವಣೆಗೆ ಮತದಾರರಾಗಿರುವ 224 ಶಾಸಕರ ಜತೆಗೆ ವಿಶೇಷ ಅನುಮತಿ ಪಡೆದಿರುವ ಇಬ್ಬರು ಸಂಸದರು ವಿಧಾನಸೌಧದಲ್ಲಿ ಬೆಳಗ್ಗೆ 10ರಿಂದ ಸಂಜೆ 5 ಗಂಟೆ ವರೆಗೆ ಮತದಾನ ಮಾಡಲಿದ್ದಾರೆ.   ಕೇಂದ್ರ ಚುನಾವಣ ಆಯೋಗದ ವಿಶೇಷ ವೀಕ್ಷಕ ಅಮಿತ್‌ ಕುಮಾರ್‌ ಘೋಷ್‌ ಮಾರ್ಗದರ್ಶನದಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್‌ ಕುಮಾರ್‌ …

Read More »

ಇಂದಿನಿಂದ ಹೊಸ ‘GST ದರ’ ಜಾರಿ; ಯಾವುದು ಅಗ್ಗ? ಯಾವುದು ದುಬಾರಿ?.

ನಿಮಗೆ ಪ್ರತಿದಿನ ಮೊಸರು ಖರೀದಿಸುವ ಅಭ್ಯಾಸವಿದೆಯೇ? ಹಾಗಾದ್ರೆ, ಇನ್ಮುಂದೆ ನಿಮ್ಮ ಜೇಬಿನ ಭಾರ ಹೆಚ್ಚಿಸಿಕೊಳ್ಳಲೇಕಾಗುತ್ತೆ. ಯಾಕಂದ್ರೆ, ಇಂದಿನಿಂದ ಪ್ಯಾಕ್ ಮಾಡಿದ ಮತ್ತು ಲೇಬಲ್ ಮಾಡಿದ ಮೊಸರಿನ ಬೆಲೆ ಹೆಚ್ಚಾಗಲಿದೆ. ಕೇವಲ ಇದೊಂದೇ ಅಲ್ಲ, ಪ್ಯಾಕ್ ಮಾಡಿದ ಮತ್ತು ಲೇಬಲ್ ಮಾಡಿದ ಮಜ್ಜಿಗೆ, ಪನ್ನೀರ್ ಮತ್ತು ಲಸ್ಸಿಯಂತಹ ಹಾಲಿನ ಉತ್ಪನ್ನಗಳು ಜಿಎಸ್ಟಿಯಿಂದಾಗಿ ಬೆಲೆಗಳಲ್ಲಿ ಹೆಚ್ಚಳವನ್ನ ಕಾಣುವ ಸಾಧ್ಯತೆಯಿದೆ. ಇನ್ನು ಹವಾಮಾನವು ತಂಪಾಗಿದೆ ಅಂತಾ ನೀವು ಯಾವುದೇ ಟೂರ್‌ ಹೊಡೆಯಲು ಯೋಜಿಸಿದ್ದೀರಾ? ಆದಾಗ್ಯೂ, …

Read More »

ಆರ್‌ಟಿಐ ಕಾರ್ಯಕರ್ತರೊಬ್ಬರು ಪಡೆದ ಮಾಹಿತಿಯಲ್ಲಿ ಮಾಜಿಗಳಿಗೆ ಸರ್ಕಾರ ಪಿಂಚಣಿ, ವೈದ್ಯಕೀಯ ಭತ್ಯೆ ರೂಪದಲ್ಲಿ ಕೋಟಿ ಕೋಟಿ ಹಣ ವ್ಯಯಿಸುತ್ತಿರುವ ಸತ್ಯಾಂಶ ಬೆಳಕಿಗೆ

ಬೆಂಗಳೂರು: ಸರ್ಕಾರ ಪ್ರತಿ ವರ್ಷ ಮಾಜಿ ಶಾಸಕರ ಪಿಂಚಣಿ, ವೈದ್ಯಕೀಯ ಭತ್ಯೆಗಳಿಗಾಗಿ ಕೋಟ್ಯಂತರ ರೂಪಾಯಿ ಹಣ ವ್ಯಯಿಸುತ್ತಿದೆ. ಈ ಸಂಬಂಧ ಆರ್​ಟಿಐ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕು ಮೂಲಕ ಪಡೆದ ಮಾಹಿತಿಯಲ್ಲಿ ಮಾಜಿಗಳಿಂದ ಸರ್ಕಾರದ ಬೊಕ್ಕಸದ ಮೇಲಾಗುತ್ತಿರುವ ಹೊರೆ ಬಯಲಾಗಿದೆ. ಒಂದು ಸಾರಿ ಶಾಸಕನಾದರೆ ಸಾಕು ಆ ವ್ಯಕ್ತಿಗೆ ಜೀವನ ಪೂರ್ತಿ ಭತ್ಯೆಗಳು, ಪಿಂಚಣಿಯನ್ನು ಸರ್ಕಾರ ಪಾವತಿಸಬೇಕಾಗುತ್ತದೆ.‌ ಮಾಜಿ ಶಾಸಕರ ಹೊರೆ ಏನು?: 2013 ರಿಂದ 2021ರವರೆಗೆ ಪಿಂಚಣಿ ಹಾಗೂ ವೈದ್ಯಕೀಯ ಭತ್ಯೆ ರೂಪದಲ್ಲಿ …

Read More »

ರಾಜ್ಯದಲ್ಲಿ ಮತ್ತೊಂದು ಬಹುಕೋಟಿ ರೂಪಾಯಿ ವಂಚನೆ ಪ್ರಕರಣ ಬೆಳಕಿಗೆ: 2 ಸಾವಿರ ಜನರಿಗೆ ಧೋಖಾ

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಬಹುಕೋಟಿ ರೂಪಾಯಿ ವಂಚನೆ ಪ್ರಕರಣ ಬೆಳಕಿಗೆ ಬಂದಿದ್ದು, ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಸಿರಿವೈಭವ ಪತ್ತಿನ ಸಹಕಾರ ಸಂಘದಿಂದ ಹೂಡಿಕೆದಾರರಿಗೆ ಕೋಟ್ಯಾಂತರ ರೂಗಳನ್ನು ವಂಚನೆ ಮಾಡಿದೆ ಆಂತ ತಿಳಿದು ಬಂದಿದೆ.   ಸಿರಿವೈಭವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗವಲ್ಲಿ, ಪತಿ ರಾಜೇಶ್, ಅಪ್ಪಾಲಾಲ್ ಚಕೋಲಿ, ಹಿರೇಮಠ್ ಮತ್ತು ನಿರ್ದೇಶಕರ ವಿರುದ್ಧ ಹಣ ಹೂಡಿಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂದ ಹಾಗೇ ಉತ್ತರಹಳ್ಳಿ, ಆರ್.ಆರ್. ನಗರ, ಬಿಳೇಕಳ್ಳಿ, …

Read More »