Breaking News

ರಾಜಕೀಯ

18ಕ್ಕೂ ಹೆಚ್ಚು ಶಾಸಕರು, ಸಚಿವರು, ಶ್ರೀಮಂತರು, ಪ್ರಭಾವಿಗಳಿಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ

ಭುವನೇಶ್ವರ: ಒಡಿಶಾದ ಬಡತನದ ಕೇಂದ್ರ ಎಂದು ಬಿಂಬಿಸಲ್ಪಟ್ಟಿರುವ ಕಾಳಹಂಡಿ ಜಿಲ್ಲೆಯ 26 ವರ್ಷದ ಮಹಿಳೆ ಅರ್ಚನಾ ನಾಗ್‌ ಇವತ್ತು ಕೋಟ್ಯಧಿಪತಿ! ಶ್ರೀಮಂತರು, ಪ್ರಭಾವಿಗಳ ಖಾಸಗಿ ಕ್ಷಣಗಳ ಚಿತ್ರಗಳನ್ನಿಟ್ಟುಕೊಂಡು, ಅವರನ್ನು ಬೆದರಿಸಿ ಹಣ ವಸೂಲಿ ಮಾಡಿದ ಆರೋಪ ಎದುರಿಸುತ್ತಿರುವ ಆಕೆ ಕಳೆದ ವಾರವೇ ಬಂಧನಕ್ಕೊಳಗಾಗಿದ್ದಾಳೆ. ಈಗ ಆಕೆಯ ವಿರುದ್ಧ ವಸೂಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನೂ ವಿಶೇಷ ಗೊತ್ತಾ? ಒಡಿಶಾ ಚಿತ್ರನಿರ್ದೇಶಕರೊಬ್ಬರು ಆಕೆಯ ಬಗ್ಗೆ ಸಿನಿಮಾ ಮಾಡಲು ಸಿದ್ಧವಾಗಿದ್ದಾರೆ. ಒಂದು ಕಾಲದಲ್ಲಿ ಬಡವಳಾಗಿದ್ದ ಅರ್ಚನಾ …

Read More »

ಬೆಳಗಾವಿಯಲ್ಲಿ ವಿವೇಕಾನಂದರ ಆಗಮನಕ್ಕೆ 130 ವಸಂತಗಳ ಸಂಭ್ರಮ

ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು 1892ರ ಅಕ್ಟೋಬರ್ 16ರಿಂದ 27ರವರೆಗೆ ಬೆಳಗಾವಿಯಲ್ಲಿ ತಂಗಿದ್ದರು. ಆ ಸಂದರ್ಭದಲ್ಲಿ ಅಕ್ಟೋಬರ್ 16ರ ಭಾನುವಾರ ಸ್ವಾಮೀಜಿ ವಾಸಿಸುತ್ತಿದ್ದ ರಿಸಾಲ್ದಾರ್ ಗಲ್ಲಿಯಲ್ಲಿರುವ ಸ್ವಾಮಿ ವಿವೇಕಾನಂದ ಸ್ಮಾರಕದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ರಾಮಕೃಷ್ಣ ಮಿಷನ್ ಮನವಿ ಮಾಡಿದೆ. ಈ ಕುರಿತಂತೆ ಬೆಳಗಾವಿಯಲ್ಲಿ ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ರಾಮಕೃಷ್ಣ ಮಿಶನ್ ಕಾರ್ಯದರ್ಶಿಗಳಾದ ಸ್ವಾಮಿ ಆತ್ಮ ಪ್ರಾಣಾನಂದ ಮಹಾಸ್ವಾಮಿಜಿರವರು, ವಿವೇಕಾನಂದ ಸ್ಮಾರಕದಲ್ಲಿ ಸ್ವಾಮೀಜಿಯವರು ಬೆಳಗಾವಿಯಲ್ಲಿ …

Read More »

ಕಬ್ಬಿನ ಬೆಲೆಯನ್ನು ಕನಿಷ್ಠ 4500ರೂ ನಿಗದಿ ಮಾಡಿ- ರೈತ ಮುಖಂಡ ರವಿ ಪೂಜಾರಿ ಆಗ್ರಹ..!!

ಸರಕಾರ ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಸಲು ಆಯೋಜಿಸಿರುವ ಸಭೆಯನ್ನು ಬೆಳಗಾವಿಯ ಸುವರ್ಣಸೌಧದಲ್ಲಿಯೇ ನಡೆಸಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿ ನೇಗಿಲಯೋಗಿ ರೈತ ಸೇವಾ ಸಂಘದಿAದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಲಿಸಲಾಯಿತು. ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಕಬ್ಬಿನ ಕಾರ್ಖಾನೆಗಳಿವೆ. ಇಲ್ಲಿ ಕಬ್ಬು ಬೆಳೆಗಾರ ರೈತರ ಸಂಖ್ಯೆಯೂ ಹೆಚ್ಚಾಗಿದೆ. ಈ ಕುರಿತು ಕಬ್ಬು ಬೆಳೆಗಾರ ರೈತರ ಸಮಸ್ಯೆಗಳನ್ನು ಕುರಿತಂತೆ ಚರ್ಚೆಯನ್ನು ನಡೆಸಲು ಸಕ್ಕರೆ ಸಚಿವರು, ಆಯುಕ್ತರು, ಹಾಗೂ ಎಲ್ಲಾ ಕಾರ್ಖಾನೆಗಳ ಎಂಡಿಗಳು, ಹಾಗೂ ಎಲ್ಲಾ …

Read More »

ಪುಣ್ಯಕೋಟಿ ದತ್ತು ಯೋಜನೆಗೆ ಸರ್ಕಾರಿ ನೌಕರರಿಂದ ಸಿಎಂ ಬೊಮ್ಮಾಯಿಗೆ ೧೦೦ ಕೋಟಿ

ರಾಜ್ಯ ಸರ್ಕಾರಿ ನೌಕರರು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪುಣ್ಯಕೋಟಿ ದತ್ತು ಯೋಜನೆಗೆ ತಮ್ಮ ಒಂದು ದಿನದ ಸಂಬಳ ನೀಡಿ, ಸರ್ಕಾರಕ್ಕೆ 100 ಕೋಟಿ ರೂ. ದೇಣಿಗೆ ನೀಡುವ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯವರಿಗೆ ನೀಡಿದರು. ಈ ಸಂದರ್ಭದಲ್ಲಿ ಪಶು ಸಂಗೋಪನಾ ಸಚಿವ ಪ್ರಭುಚೌಹ್ವಾಣ್, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ಹಾಗೂ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

Read More »

ಸರಕಾರ ಉತ್ತರ ಕರ್ನಾಟಕ ಕಬ್ಬು ಬೆಳೆಗಾರ ರೈತರನ್ನು ನಿರ್ಲಕ್ಷಿಸುತ್ತಿದೆ: ಮೋದಗಿ

ಸಿಎಂ ಬೊಮ್ಮಾಯಿ ನೇತೃತ್ವದ ಸರಕಾರ ಉತ್ತರ ಕರ್ನಾಟಕ ಕಬ್ಬು ಬೆಳಗಾರ ರೈತರನ್ನು ಕಡೆಗಣಿಸುತ್ತಿದೆ ಎಂದು ಬೆಳಗಾವಿಯಲ್ಲಿ ರೈತಪರ ಸಂಘಟನೆಗಳು ಆರೋಪಿಸಿ ಬೃಹತ್ ಪ್ರತಿಭಟನಾ ರ‍್ಯಾಲಿಯನ್ನು ನಡೆಸಿದವು. ಹೌದು ಬೆಳಗಾವಿ ನಗರದಲ್ಲಿ ಇಂದು ವಿವಿಧ ರೈತಪರ ಸಂಘಟನೆಗಳು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ, ಸರಕಾರ ಉತ್ತರ ಕರ್ನಾಟಕ ಭಾಗದ ಕಬ್ಬು ಬೆಳಗಾರ ರೈತರನ್ನು ನಿರ್ಲಕ್ಷ ಮಾಡುತ್ತಿದೆ. ಹಾಗಾಗಿ ಕಬ್ಬು ಬೆಳಗಾರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಕೂಡಲೇ ರಾಜ್ಯ ಸರಕಾರ …

Read More »

ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಮೇಲೆ ತಲ್ವಾರ್ ದಾಳಿ ಯತ್ನ

ಬಂಟ್ವಾಳ: ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜಾ ಅವರ ಮೇಲೆ ದಾಳಿಗೆ ಯತ್ನಿಸಿದ ಘಟನೆ ಅ. 13ರ ರಾತ್ರಿ ಸುಮಾರು 11.30 ಗಂಟೆಯ ಸಮಯದಲ್ಲಿ ನಡೆದಿದೆ. ಶಾಸಕರು ರಾತ್ರಿ ಮಂಗಳೂರು ವಿಮಾನ ನಿಲ್ದಾಣದಿಂದ ಬೆಳ್ತಂಗಡಿಗೆ ಪ್ರಯಾಣಿಸುತ್ತಿದ್ದ ಸಂದರ್ಭ ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಬಳಿ ಸ್ಕಾರ್ಪಿಯೋ ಕಾರ್‌ ನಲ್ಲಿ ಬಂದ ಒಂದು ತಂಡ ಶಾಸಕರ ಕಾರನ್ನು ಅಡ್ಡಗಟ್ಟಿ ದಾಳಿಗೆ ಯತ್ನಿಸಿದೆ ಎಂದು ತಿಳಿದು ಬಂದಿದೆ.   ಶಾಸಕರು ತಮ್ಮ ಕಾರನ್ನು ಬಿಟ್ಟು ಸಂಬಂಧಿಯೋರ್ವರ …

Read More »

ಮಂಡ್ಯದ ಐದು ರೂಪಾಯಿ ವೈದ್ಯ ಖ್ಯಾತಿಯ ಶಂಕರೇಗೌಡರಿಗೆ ‘ಇಂಡಿಯನ್ ಆಫ್‌ ದಿ ಇಯರ್’ ಪ್ರಶಸ್ತಿ

ಬೆಂಗಳೂರು: ತಮ್ಮ ಕ್ಲಿನಿಕ್‌ ಗೆ ಬರುವ ರೋಗಿಗಳಿಗೆ ಕೇವಲ ಐದು ರೂಪಾಯಿ ಶುಲ್ಕ ಪಡೆದು ಚಿಕಿತ್ಸೆ ನೀಡುತ್ತಿರುವ ಮಂಡ್ಯದ ಪ್ರಸಿದ್ದ ವೈದ್ಯ ಶಂಕರೇಗೌಡ ಅವರಿಗೆ ಸಿಎನ್‌ಎನ್‌ ನ್ಯೂಸ್‌18 ಸಂಸ್ಥೆ ವತಿಯಿಂದ ನೀಡಲಾಗುವ ಈ ಬಾರಿಯ ‘ಇಂಡಿಯನ್ ಆಫ್‌ ದಿ ಇಯರ್-2022’ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.   ಸಾಮಾಜಿಕ ಬದಲಾವಣೆ ವಿಭಾಗದಲ್ಲಿ ಡಾ.ಶಂಕರೇಗೌಡರಿಗೆ ‘ಇಂಡಿಯನ್ ಆಫ್‌ ದಿ ಇಯರ್-2022’ ಪ್ರಶಸ್ತಿ ನೀಡಲಾಗಿದೆ. ಹೊಸದಿಲ್ಲಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ …

Read More »

ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ : ಸರ್ಕಾರದಿಂದ ಶನಿವಾರ ‘ಬ್ಯಾಗ್ ಲೆಸ್ ಡೇ’ ಆಚರಣೆ

ಬೆಂಗಳೂರು: ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ ಸಿಕ್ಕಿದ್ದು, ರಾಜ್ಯ ಸರ್ಕಾರ ಶನಿವಾರ ಬ್ಯಾಗ್ ಹೊರೆಯಿಂದ ಮುಕ್ತಿ ನೀಡುವ ಚಿಂತನೆ ನಡೆಸಿದೆ. ಹೌದು, ಪ್ರತಿನಿತ್ಯ ಪುಸ್ತಕದ ಭಾರ ಹೊತ್ತು ಶಾಲೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇನ್ನು ಮುಂದೆ ಶನಿವಾರ ಬ್ಯಾಗ್ ಬೆನ್ನಿಗೇರಿಸಿ ಮಕ್ಕಳು ಶಾಲೆಗೆ ಹೋಗಬೇಕಾದ ಅಗತ್ಯ ಇಲ್ಲ . ರಾಜ್ಯದಲ್ಲಿ ಶನಿವಾರ ಬ್ಯಾಗ್ ಲೆಸ್ ಡೇ ಆಚರಿಸಲು ಸರ್ಕಾರ ಚಿಂತನೆ ನಡೆದಿದೆ. ಶನಿವಾರ ಪಾಠದ ಬದಲಾಗಿ ಪಠ್ಯೇತರ …

Read More »

ನಕಲಿ ಜಾತಿ ಪ್ರಮಾಣಪತ್ರ ನೀಡಿ ಸರ್ಕಾರಿ ಉದ್ಯೋಗ : 20ಕ್ಕೂ ಹೆಚ್ಚು ಮಂದಿ ಸೇವೆಯಿಂದ ವಜಾ

ಬೆಂಗಳೂರು: ಪಿಎಸ್‌ಐ, ಎಎಸ್‌ಐ, ಪೊಲೀಸ್‌ ಕಾನ್‌ಸ್ಟೆಬಲ್‌, ರೈಲ್ವೆ ಪೊಲೀಸ್‌, ಸರಕಾರಿ ಸ್ವಾಮ್ಯದ ಬ್ಯಾಂಕ್‌ ಅಧಿಕಾರಿಗಳು, ಇನ್ಶೂರೆನ್ಸ್‌ ಕಂಪನಿ ಅಧಿಕಾರಿಗಳು, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಎಚ್‌ಎಎಲ್‌, ವಾಣಿಜ್ಯ ತೆರಿಗೆ, ಆರೋಗ್ಯ, ಕೃಷಿ, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರು, ಸಿ ಆರ್‌ಪಿಎಫ್‌ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹಲವರು ಸುಳ್ಳು ಜಾತಿ ಪ್ರಮಾಣ ಪತ್ರವನ್ನು ನೀಡಿ ಉದ್ಯೋಗ ಪಡೆದುಕೊಂಡಿದ್ದಾರೆ.   ನಕಲಿ ಜಾತಿ ಪ್ರಮಾಣ ಪತ್ರ ನೀಡಿ ಸರ್ಕಾರಿ …

Read More »

ಸಿವಿಲ್ ಪೊಲೀಸ್ ಪೇದೆಯ 1137 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ತೃತೀಯ ಲಿಂಗಿಗಳಿಗೂ ಅವಕಾಶ!

ಕರ್ನಾಟಕ ಸಿವಿಲ್ ಪೊಲೀಸ್ ಪೇದೆಗಳ (ಸಿಪಿಸಿ) 1137 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ರಾಜ್ಯ ಪೊಲೀಸ್ ಇಲಾಖೆಯು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು: ಕರ್ನಾಟಕ ಸಿವಿಲ್ ಪೊಲೀಸ್ ಪೇದೆಗಳ (ಸಿಪಿಸಿ) 1137 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, ರಾಜ್ಯ ಪೊಲೀಸ್ ಇಲಾಖೆಯು ಗೆಜೆಟ್ ಅಧಿಸೂಚನೆ ಹೊರಡಿಸಿದೆ. ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದು, ಅರ್ಜಿ ಸ್ವೀಕಾರ ಪ್ರಕ್ರಿಯೆ 2022 ಅಕ್ಟೋಬರ್ 20ರಿಂದ ಬೆಳಗ್ಗೆ 10 ಗಂಟೆಯಿಂದ …

Read More »