Breaking News

ರಾಜಕೀಯ

ವಿಧಾನಪರಿಷತ್ ನಲ್ಲಿ `ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ ವಿಧೇಯಕ’ ಅಂಗೀಕಾರ

ಬೆಳಗಾವಿ : ವಿಧಾನಪರಿಷತ್ ನಲ್ಲಿ ಸುದೀರ್ಘ ಚರ್ಚೆ ಬಳಿಕ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕ-2022 ಕ್ಕೆ ಅಂಗೀಕಾರ ದೊರೆಯಿತು.   ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಈ ಕುರಿತು ಮಾತನಾಡಿದ್ದು, 2005 ಕ್ಕಿಂತ ಪೂರ್ವದಲ್ಲಿ ಕೃಷಿ ಮಾಡಿಕೊಂಡು ಬಂದಿರುವವರಿಗೆ 25 ಎಕರೆ ಭೂಮಿಯನ್ನು 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡುವ ಪ್ರಸ್ತಾಪ ಇದರಲ್ಲಿದೆ. ಆದರೆ ಇದ್ದವರಿಗೆ ಕೊಡುವ ಬದಲು ಇಲ್ಲದ ರೈತರಿಗೆ ಭೂಮಿ ನೀಡಿದರೆ ಅವರ ಜೀವನ …

Read More »

ಕರ್ನಾಟಕದ ವಿರುದ್ಧ ಮಹಾರಾಷ್ಟ್ರದ ನಿರ್ಣಯಕ್ಕೆ ರಾಜ್ಯದಲ್ಲಿ ರೋಷಾಗ್ನಿ

ನಾಗ್ಪುರ/ಬೆಳಗಾವಿ: ಬೆಳಗಾವಿ ಗಡಿ ವಿವಾದದ ವಿಚಾರದಲ್ಲಿ ನಿರಂತರವಾಗಿ ಕನ್ನಡಿಗರನ್ನು ಕೆರಳಿಸುತ್ತಿರುವ ಮಹಾರಾಷ್ಟ್ರ, ಈಗ “ನಿರ್ಣಯ’ದ ಮೂಲಕ ಕರ್ನಾಟಕವನ್ನು ಕೆಣಕಿದೆ. ಮಂಗಳವಾರ ಮಹಾರಾಷ್ಟ್ರ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಕರ್ನಾಟಕದ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಲಾಗಿದ್ದು, ಇದಕ್ಕೆ ರಾಜ್ಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜತೆಗೆ, ಗಡಿ ತಂಟೆ ಕುರಿತು ಮಹಾರಾಷ್ಟ್ರದ ವರ್ತನೆ ವಿರುದ್ಧ ರಾಜ್ಯ ವಿಧಾನ ಪರಿಷತ್‌ನಲ್ಲಿ ಸರ್ವಾನುಮತ ನಿರ್ಣಯವನ್ನು ಕೈಗೊಳ್ಳಲಾಗಿದೆ. ರಾಜ್ಯದ ಹಿತಾಸಕ್ತಿಯನ್ನು ರಕ್ಷಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರವು ಇತ್ತೀಚೆಗೆ ವಿಧಾನಸಭೆಯಲ್ಲಿ ನಿರ್ಣಯ …

Read More »

ಕುಕ್ಕರ್‌ ಪ್ರಕರಣ : ಹಗುರಗೊಳಿಸುವ ಯತ್ನ : ಸಿಎಂ ಬೊಮ್ಮಾಯಿ

ಬೆಳಗಾವಿ: ಕುಕ್ಕರ್‌ ಪ್ರಕರಣದಂತಹ ಗಂಭೀರ ವಿಚಾರವನ್ನೂ ಮತಬ್ಯಾಂಕ್‌ ಉದ್ದೇಶದಿಂದ ಹಗುರಗೊಳಿಸುವಂತಹ ಹೇಳಿಕೆ ಖಂಡನೀಯ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮಂಗಳವಾರ ವಿಧಾನಸಭೆಯಲ್ಲಿ ಅವರು ಶಾಸಕ ಸಿ.ಟಿ.ರವಿ ಅವರ ಭಯೋತ್ಪಾದನೆ ಕುರಿತ ನಿಯಮ 69ರಡಿಯ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿ, ಕುಕ್ಕರ್‌ ಬ್ಲಾಸ್ಟ್‌ ಆಕಸ್ಮಿಕವಾಗಿ ನಡೆದಿದೆ. ಒಂದು ವೇಳೆ ಅದು ಜನನಿಬಿಡ ಪ್ರದೇಶದಲ್ಲಿ ಸ್ಫೋಟಿಸಿ ದೊಡ್ಡ ಪ್ರಮಾಣದ ಸಾವುನೋವು ಉಂಟಾಗಿದ್ದರೆ ಏನಾಗುತ್ತಿತ್ತು ಎನ್ನುವುದನ್ನು ಗಮನದಲ್ಲಿರಿಸಬೇಕು ಎಂದು ತಿಳಿಸಿದರು. ಪೊಲೀಸರ ದೊಡ್ಡ ಲೋಪ ಉಪನಾಯಕ …

Read More »

ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಮಸೂದೆಗೆ ಅಂಗೀಕಾರ

ಬೆಳಗಾವಿ: ರಾಜ್ಯದಲ್ಲಿ ಕೈಗಾರಿಕೋದ್ಯಮಿಗಳು ಮತ್ತು ಹೂಡಿಕೆದಾರರಿಗೆ ಹಾದಿ ಸುಗಮ ಮಾಡಿಕೊಡಲು ಹಾಗೂ ಕೈಗಾರಿಕಾ ಸ್ಥಾಪನೆಗೆ ಎದುರಾಗುವ ತಾಂತ್ರಿಕ, ಕಾನೂನಾತ್ಮಕ ಅಡೆತಡೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರತ್ಯೇಕವಾಗಿ ಕರ್ನಾಟಕ ರಾಜ್ಯ ಹೂಡಿಕೆದಾರರ ಪ್ರಾಧಿಕಾರ ರಚಿಸುವ ಕರ್ನಾಟಕ ವಿಶೇಷ ಹೂಡಿಕೆ ಪ್ರದೇಶ ಮಸೂದೆ-2022ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರಕಿತು.   ವಿಧಾನಸಭೆಯಲ್ಲಿ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಸೂದೆ ಮಂಡಿಸಿ, ರಾಜ್ಯದಲ್ಲಿ ದೊಡ್ಡ-ಅತಿದೊಡ್ಡ ಅಥವಾ ಬೃಹತ್‌ ಗಾತ್ರದ ಅಂದರೆ 1,250 ಎಕರೆಗೂ ಮೀರಿದ ಹೂಡಿಕೆ ಪ್ರದೇಶ, ಕೈಗಾರಿಕಾ …

Read More »

ದೇಶದಲ್ಲೇ ರಾಜ್ಯದ ಪೊಲೀಸರು ಉತ್ತಮ ಎನಿಸಿದ್ದಾರೆ: ಸಿಎಂ ಬೊಮ್ಮಾಯಿ

ಬೆಳಗಾವಿ: ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಕೃತ್ಯಗಳು ನಡೆದ ಸಂದರ್ಭದಲ್ಲಿ ಕ್ಷಿಪ್ರ ಗತಿಯಲ್ಲಿ ಕಾರ್ಯಾಚರಣೆ ನಡೆಸಿ ಅಪರಾಧಿಗಳನ್ನು ಬಂಧಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೊಲೀಸ್ ಇಲಾಖೆಗೆ ಸೂಚನೆ ನೀಡಿದರು.   ಬೆಳಗಾವಿ ನಗರ ಪೊಲೀಸ್‌ ಆಯುಕ್ತರ ನೂತನ ಕಚೇರಿಯ ಕಟ್ಟಡವನ್ನು ಬುಧವಾರ ಉದ್ಘಾಟಸಿ ಮಾತನಾಡಿದ ಅವರು,ಬೆಳಗಾವಿ ಸೇರಿದಂತೆ ಎಲ್ಲಾ ಜಿಲ್ಲೆಗಳ ಪೊಲೀಸರು ಜನರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಳ್ಳಬೇಕು. ಪೊಲೀಸ್ ಇಲಾಖೆ ಜನರ ಸಹಕಾರದಿಂದ ಶಾಂತಿ ಸುವ್ಯವಸ್ಥಿತ ಕಾಪಾಡಬೇಕು. …

Read More »

ಹಳೇ ಪಿಂಚಣಿ ವ್ಯವಸ್ಥೆ ಜಾರಿ ಇಲ್ಲ: ಸಿಎಂ ಬೊಮ್ಮಾಯಿ

ಬೆಳಗಾವಿ: ಹಳೆಯ ಪಿಂಚಣಿ ಯೋಜನೆಯನ್ನು ರಾಜ್ಯದಲ್ಲಿ ಮತ್ತೆ ಜಾರಿಗೆ ತರುವ ಪ್ರಸ್ತಾವ ನಮ್ಮ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ. ಇದರಿಂದಾಗಿ ಬೆಂಗಳೂರಿನಲ್ಲಿ ಹಳೆ ಪಿಂಚಣಿ ಯೋಜನೆ ಜಾರಿಗಾಗಿ ಹೋರಾಡು ತ್ತಿರುವ ಸರಕಾರಿ ನೌಕರರಿಗೆ ಹಿನ್ನಡೆಯಾಗಿದೆ.   ಮಂಗಳವಾರ ಬಿಜೆಪಿಯ ರೇಣುಕಾ ಚಾರ್ಯ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಸಿಎಂ, ಹಳೆಯ ಪಿಂಚಣಿ ಯೋಜನೆಯ ಆರ್ಥಿಕ ಹೊರೆಯನ್ನು ನಿಭಾಯಿಸಲು ಸಾಕಷ್ಟು ನಿಧಿ ಇಲ್ಲ. ಹಾಗಾಗಿ ಮರು ಜಾರಿ ಕಷ್ಟ. ಅಲ್ಲದೇ ಆರ್‌ಬಿಐ …

Read More »

ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ, ವೃತ್ತಿ ಅನುಭವಗಳನ್ನು ಹೊಸ ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು

ಬೆಳಗಾವಿ: ‘ಹಳೆಯ ವಿದ್ಯಾರ್ಥಿಗಳು ತಮ್ಮ ಶಿಕ್ಷಣ, ವೃತ್ತಿ ಅನುಭವಗಳನ್ನು ಹೊಸ ವಿದ್ಯಾರ್ಥಿಗಳಿಗೆ ಧಾರೆ ಎರೆಯಬೇಕು. ಸುಸ್ಥಿರ ಸಮಾಜ ನಿರ್ಮಾಣಕ್ಕೆ ಇದೇ ಮೊದಲ ಹೆಜ್ಜೆ’ ಎಂದು ನಿವೃತ್ತ ಮುಖ್ಯಶಿಕ್ಷಕ ವೈ.ಎಂ.ಕಾಮಕರ ಕಿವಿಮಾತು ಹೇಳಿದರು. ಇಲ್ಲಿನ ಫುಲಬಾಗ್‌ ಗಲ್ಲಿಯಲ್ಲಿರುವ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ-ನಂಬರ್‌ 7ರಲ್ಲಿ ಭಾನುವಾರ ನಡೆದ, 1994ರಿಂದ 2000ರವರೆಗಿನ ವಿದ್ಯಾರ್ಥಿಗಳ ಒಕ್ಕೂಟದಿಂದ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಹಾಗೂ ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.   ‘ಹಳೆಯ …

Read More »

ಹೊರನಾಡ ಕನ್ನಡಿಗರಿಗೆ ಮೀಸಲಾತಿ: ಸೂಕ್ತ ಚರ್ಚೆ

ಬೆಳಗಾವಿ: ‘ಮಹಾರಾಷ್ಟ್ರವೂ ಸೇರಿದಂತೆ ಹೊರನಾಡ ಕನ್ನಡಿಗರಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಕಲ್ಪಿಸಲು ಸೂಕ್ತ ಚರ್ಚೆ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು. ನಗರದಲ್ಲಿ ಮಂಗಳವಾರ ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಮತ್ತು ಜತ್ತ ಕನ್ನಡಿಗರ ನಿಯೋಗದೊಂದಿಗೆ ಮಾತನಾಡಿದ ಅವರು, ‘ಹೊರನಾಡ ಕನ್ನಡಿಗರ ಮೀಸಲಾತಿ ಸಂಬಂಧ ಚರ್ಚಿಸಲು ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನು ಬೆಳಗಾವಿಗೆ ಕಳಿಸಲಾಗುವುದು. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ …

Read More »

ಸುವರ್ಣ ವಿಧಾನಸೌಧ ಹತ್ತಿರ ಪ್ರತಿಭಟನ ಸ್ಥಳದಲ್ಲಿ ಎಸೆದಿದ್ದ ಆಹಾರ ತಿಂದು 10 ಕುರಿಗಳು ಮೃತಪಟ್ಟಿವೆ.

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧ ಹತ್ತಿರ ಪ್ರತಿಭಟನ ಸ್ಥಳದಲ್ಲಿ ಎಸೆದಿದ್ದ ಆಹಾರ ತಿಂದು 10 ಕುರಿಗಳು ಮೃತಪಟ್ಟಿವೆ. 40ಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿವೆ. ‘ಡಿ.22ರಂದು ಇಲ್ಲಿ ನಡೆದಿದ್ದ ವಿರಾಟ್‌ ಪಂಚಶಕ್ತಿ ಸಮಾವೇಶದ ಸ್ಥಳದಲ್ಲಿಯೇ ಉಳಿದಿದ್ದ ಆಹಾರ ಎಸೆಯಲಾಗಿತ್ತು. ಭಾನುವಾರ ಸಂಜೆ ಇದನ್ನೇ ಕುರಿಗಳು ತಿಂದಿದ್ದವು. ಸೋಮವಾರ ಬೆಳಗಿನವರೆಗೆ ನರಳಾಡಿ ಸತ್ತಿವೆ’ ಎಂದು ಕುರಿಗಾಹಿಗಳು ದೂರಿದ್ದಾರೆ. ‘ಆಹಾರವನ್ನು ಮೂರು ದಿನದ ಬಳಿಕ ಕುರಿಗಳು ತಿಂದಿದ್ದು, ಜೀರ್ಣವಾಗದೆ ಮೃತಪಟ್ಟಿವೆ. ಇದಕ್ಕೆ ‘ರುಮಿನಲ್ ಅಸಿಡೋಸಿಸ್‌’ …

Read More »

ಪರಿಷತ್‌ ಸದಸ್ಯರಿಗೆ ತಲಾ ₹ 25 ಕೋಟಿ ಅನುದಾನಕ್ಕೆ ಪ್ರಕಾಶ ಹುಕ್ಕೇರಿ ಆಗ್ರಹ

ಬೆಳಗಾವಿ: ವಿಧಾನ ಪರಿಷತ್‌ನ ಎಲ್ಲ ಸದಸ್ಯರಿಗೂ ಅಭಿವೃದ್ಧಿ ಕಾಮಗಾರಿಗಳಿಗಾಗಿ ತಲಾ ₹ 25 ಕೋಟಿ ಅನುದಾನ ನೀಡಬೇಕು ಎಂದು ಕಾಂಗ್ರೆಸ್‌ನ ಪ್ರಕಾಶ ಹುಕ್ಕೇರಿ ವಿಧಾನ ಪರಿಷತ್‌ನಲ್ಲಿ ಸೋಮವಾರ ಒತ್ತಾಯಿಸಿದರು. ಪ್ರಶ್ನೋತ್ತರ ಕಲಾಪದ ಬಳಿಕ ವಿಷಯ ಪ್ರಸ್ತಾಪಿಸಿದ ಅವರು, ‘ವಿಧಾನಸಭೆಯ ಸದಸ್ಯರಿಗೆ ತಲಾ ₹ 50 ಕೋಟಿಯವರೆಗೂ ಅನುದಾನ ನೀಡಲಾಗಿದೆ. ಆದರೆ, ವಿಧಾನ ಪರಿಷತ್‌ ಸದಸ್ಯರಿಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಯಾವುದೇ ಅನುದಾನ ಒದಗಿಸಿಲ್ಲ. ಇದರಿಂದ ಜನರ ಪ್ರಶ್ನೆಗಳಿಗೆ ಉತ್ತರ ನೀಡುವುದು …

Read More »