Breaking News

ರಾಜಕೀಯ

ನನ್ನ ತೇಜೋವಧೆಗೆ ಬಿಜೆಪಿಯಿಂದ ಪುಸ್ತಕ: ಸಿದ್ದರಾಮಯ್ಯ

ಬೆಂಗಳೂರು: ‘ನನ್ನ ತೇಜೋವಧೆ ಮಾಡಲು ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಇಂಥ ಪುಸ್ತಕಗಳನ್ನು (ಸಿದ್ದು ನಿಜ ಕನಸುಗಳು) ಹೊರತರುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ದೂರಿದರು. ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಟಿಪ್ಪು ಹಾಗೂ ನನ್ನ ಬಗೆಗಿನ ಪುಸ್ತಕ ಬಿಡುಗಡೆ ವಿಚಾರ ನನಗೆ ತಿಳಿದಿಲ್ಲ. ಕಾಮಾಲೆ ರೋಗದವರಿಗೆ ಎಲ್ಲವೂ ಹಳದಿಯಾಗಿ ಕಾಣಿಸುತ್ತದೆ. ಟಿಪ್ಪು ಥರ ಖಡ್ಗ ಹಿಡಿದು ಉಡುಗೆ ಧರಿಸಿದವರು ಯಡಿಯೂರಪ್ಪ ಮತ್ತು ಶೋಭಾ ಕರಂದ್ಲಾಜೆ. ಟಿಪ್ಪು ಬಗೆಗಿನ ಶೇಖ್ …

Read More »

ಬಜರಂಗದಳ ಕಾರ್ಯಕರ್ತನ ಮೇಲೆ ಮಚ್ಚು ಬೀಸಿ ಹಲ್ಲೆಗೆ ಯತ್ನ; ನಾಳೆ ಸಾಗರ ಟೌನ್‌ ಬಂದ್

ಶಿವಮೊಗ್ಗ: ಸಾಗರದಲ್ಲಿ ಬಜರಂಗದಳ ಕಾರ್ಯಕರ್ತನ ಮೇಲೆ ಮಚ್ಚು ಬೀಸಿ ಹಲ್ಲೆಗೆ ಯತ್ನಿಸಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ನಗರದಲ್ಲಿ ಸೋಮವಾರ (ಜ.9 ರಂದು) ನಡೆದಿದೆ. ಸಾಗರ ನಗರ ಭಜರಂಗದಳದ ಸಹ ಸಂಚಾಲಕ ಆಗಿರುವ ಸುನೀಲ್ ಎಂಬುವವರ ಮೇಲೆ ಸಮೀರ್ ಎನ್ನುವ ಯುವಕ ಸಾಗರ ನಗರದ ಬಿ.ಹೆಚ್. ರಸ್ತೆಯ ಬಸ್ ನಿಲ್ದಾಣ ಸಮೀಪ ಮಚ್ಚು ಬೀಸಿದ್ದಾನೆ. ಕೂದಲೆಳೆ ಅಂತರದಲ್ಲಿ ಮಚ್ಚಿನ ದಾಳಿಯಿಂದ ಸುನೀಲ್‌ ಪಾರಾಗಿದ್ದಾರೆ. ಶಿವಮೊಗ್ಗದಲ್ಲಿ ನಿನ್ನೆ ನಡೆದ ಶೌರ್ಯ ಸಂಚಲನ ಯಾತ್ರೆಯಲ್ಲಿ …

Read More »

ತಲ್ವಾರ್, ಮಚ್ಚು, ಚಾಕು, ಕುಡಗೋಲು ಇಟ್ಟು ಪೂಜೆ ಮಾಡಬೇಕು ಎಂದ: ಮುತಾಲಿಕ್

ಬೆಳಗಾವಿ: ಮುಸ್ಲಿಮರ ಜೊತೆ ವ್ಯಾಪಾರ ಮಾಡಿದರೆ ಗೋಹತ್ಯೆ, ಲವ್ ಜಿಹಾದ್ ಗೆ ಬೆಂಬಲ ನೀಡಿದಂತೆ ಎಂದು ಪ್ರಮೋದ ಮುತಾಲಿಕ ವಾಗ್ದಾಳಿ ನಡೆಸಿದರು. ನಗರದ ಮಹಾದ್ವಾರ ರಸ್ತೆಯ ಸಂಭಾಜಿ ಮೈದಾನದಲ್ಲಿ ರವಿವಾರ ನಡೆದ ವಿರಾಟ್ ಹಿಂದೂ ಮಹಾಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಲವ್ ಜಿಹಾದ್ ಮಾಡುವವರು, ಹಲಾಲ್, ಹಿಜಾಬ್ ಮೂಲಕ ಸಂವಿಧಾನ ಧಿಕ್ಕರಿಸುವರ ಜೊತೆ ವ್ಯಾಪಾರ ಬೇಡ. ಪೊಲೀಸ್ ಠಾಣೆ ಸುಟ್ಟು ಹಾಕೋರು, ಸೈನಿಕರ ಮೇಲೆ ಕಲ್ಲೆಸೆವರ ಜೊತೆ ವ್ಯಾಪಾರ ನಿಲ್ಲಿಸುವಂತೆ ಕರೆ …

Read More »

ಸ್ಯಾಂಟ್ರೋ ರವಿಯ ವಿರುದ್ಧ ಕಠಿಣ ಕ್ರಮ ಕೈಗೊಂಡು ತಕ್ಕ ಪಾಠವನ್ನು ಕಲಿಸುತ್ತೇವೆ: B.S.Y

ಶಿವಮೊಗ್ಗ: ಸ್ಯಾಂಟ್ರೋ ರವಿ ವಿಷಯದಲ್ಲಿ ಸಿಎಂ ಕ್ರಮ ಕೈಗೊಳ್ಳಲು ಹೇಳಿದ್ದಾರೆ. ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಸಚಿವರ ಹೆಸರು ಕೇಳಿ ಬಂದ ವಿಚಾರ ತನಿಖೆ ನಂತರ ಸತ್ಯಾಸತ್ಯತೆ ತಿಳಿಯಲಿದೆ. ಸ್ಯಾಂಟ್ರೋ ರವಿಯ ವಿರುದ್ಧ ಕಠಿಣ ಕ್ರಮ ಕೈಗೊಂಡು ತಕ್ಕ ಪಾಠವನ್ನು ಕಲಿಸುತ್ತೇವೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ‌ ಹೇಳಿದರು. ನಗರದಲ್ಲಿ ಮಾತಾನಾಡಿದ ಅವರು, ಸಂಪುಟದ ವಿಸ್ತರಣೆ ವಿಷಯ ಚರ್ಚೆಯಾಗುತ್ತಿದೆ. ಕೇಂದ್ರದ ನಾಯಕರ …

Read More »

ಹತ್ತಿ ನೆಲದ ನೆತ್ಯಾಗ ತೆಲಿ ಎತ್ತಿತ್ರಪಾ ಕನ್ನಡಾ

ಹಾವೇರಿ: ಏ ಮಗನಾ ನಿನ್ನ ಜಿಲ್ಲಾ ಅಷ್ಟ … ದೊಡ್ಡದನ ನಮ್ಮ ಜಿಲ್ಲಾದಾಗನೂ ಗಂಡಸೂರ ಅದೇವಿ. ನಾವು ನಮ್ಮ ಸ್ವಂತ ರೊಕ್ಕಾ ಖರ್ಚ ಮಾಡಿ ಸಮ್ಮೇಳಾನಾ ಮಾಡುವಂಗ ಅದೇವಿ. ಮಾಡಿ ತೋರಸ್ತೇವಿ, ಹೊಳ್ಳಾಮಳ್ಳಾ ಮಾತಾಡ್‌ಬ್ಯಾಡ್‌. ಯಾನೋ ಎಲ್ಲಿಂದ ಬಂದಿ ನಮ್ಮ ಜಿಲ್ಲಾ ಏನ ಕಡಿಮೇಯೇನ್‌?   ಓಯ್‌ ಮಾರಾಯಾ ಸ್ವಲ್ಪ ಸುಮ್ಮನಿರಿ ಎಷ್ಟು ಜಗಳ ಮಾರಾಯಾ ನಿಮ್ಮದು. ಮಂಡೆ ಬಿಸಿಯಾಗಿ ಹೋಯ್ತು. ಏ ಅದೆಲ್ಲ ಗೊತ್ತಿಲ್ರಪ್ಪಾ ನಮ್ಗೆ, ಈ ಸಲಾ ಕೊಡ್ತಿವಿ …

Read More »

ಬೆಳಗಾವಿ ವಿವಾದ: ಮಹಾರಾಷ್ಟ್ರ ಪರ ಹರೀಶ್‌ ಸಾಳ್ವೆ ವಾದ?

ಮುಂಬೈ : ಬೆಳಗಾವಿ ತನಗೇ ಸೇರಬೇಕು ಎಂದು ಪದೇ ಪದೆ ಮೊಂಡು ವಾದ ಮಾಡುತ್ತಿರುವ ಮಹಾರಾಷ್ಟ್ರ ಸರ್ಕಾರ ಖ್ಯಾತ ನ್ಯಾಯವಾದಿ ಹರೀಶ್‌ ಸಾಳ್ವೆ ಅವರ ಕಾನೂನು ಸಲಹೆ ಪಡೆದಿದೆ. ಜತೆಗೆ ಅವರೇ ಕರ್ನಾಟಕದ ನೆರೆಯ ರಾಜ್ಯದ ಪರ ವಾದಿಸುವ ಸಾಧ್ಯತೆ ಇದೆ. ಈ ಬಗ್ಗೆ ಭಾನುವಾರ ಔರಂಗಾಬಾದ್‌ನಲ್ಲಿ ಮಾತನಾಡಿದ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ “ಗಡಿ ವಿವಾದವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ವಕೀಲ ಹರೀಶ್‌ ಸಾಳ್ವೆ ಅವರನ್ನೂ ಸಂಪರ್ಕಿಸಿ, ಸಲಹೆ ಪಡೆದಿದ್ದೇವೆ. ಸುಪ್ರೀಂಕೋರ್ಟ್‌ನಲ್ಲಿ ನಮ್ಮ …

Read More »

ಸ್ಯಾಂಟ್ರೊ ರವಿ ವಿಚಾರ: ಹೆಚ್‌ ಡಿಕೆ ರಾಜಕೀಯವಾಗಿ ಹತಾಶ ಸ್ಥಿತಿಗೆ ತಲುಪಿದ್ದಾರೆ; ಆರಗ ಜ್ಞಾನೇಂದ್ರ

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿಯವರು ಅತ್ಯಂತ ಬೇಜವಾಬ್ದಾರಿಯಿಂದ ಸ್ಯಾಂಟ್ರೊ ರವಿ ನನ್ನ ನಿವಾಸದಲ್ಲಿ ಹಣ ಎಣಿಸಿದ್ದ ಎಂಬ ಹಸಿ ಸುಳ್ಳನ್ನು ಹೇಳುವುದರ ಮೂಲಕ ಎಷ್ಟರ ಮಟ್ಟಿಗೆ ರಾಜಕೀಯವಾಗಿ ಹತಾಶ ಸ್ಥಿತಿಗೆ ತಲುಪಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.   ಈ ಕುರಿತು ಮಾಧ್ಯಮ ಪ್ರಕಟನೆ ಬಿಡುಗಡೆ ಮಾಡಿರುವ ಅವರು, ಕುಮಾರಸ್ವಾಮಿಯವರು ನನ್ನ ಮೇಲೆ ಮಾಡಿದ ಆಪಾದನೆಯನ್ನು ಸಾಬೀತು ಪಡಿಸಬೇಕು. ಸಾಂಟ್ರೋ ರವಿಯ ಹಿನ್ನೆಲೆಯ ಬಗ್ಗೆ …

Read More »

ಮತ್ತೆ ಭುಗಿಲೆದ್ದ ಟಿಪ್ಪು- ಸಿದ್ದು ವಿವಾದ; ಕಾಂಗ್ರೆಸ್ ಕಿಡಿ

ಬೆಂಗಳೂರು : ಬೆಂಗಳೂರಿನ ಟೌನ್ ಹಾಲ್ ನಲ್ಲಿ ಇಂದು ಬಿಡುಗಡೆಯಾಗಲಿರುವ ” ಸಿದ್ದು ನಿಜಕನಸುಗಳು” ಪುಸ್ತಕ ಭಾರಿ ವಿವಾದಕ್ಕೆ ಕಾರಣವಾಗಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಟಿಪ್ಪು ನಿಜ ಕನಸು ಮಾದರಿಯಲ್ಲಿ ಸಿದ್ದು ನಿಜಕನಸು ಪುಸ್ತಕ ಬರೆಯಲಾಗಿದ್ದು, ಮಧ್ಯಾಹ್ನ 3 ಗಂಟೆಗೆ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ರೋಹಿತ್ ಚಕ್ರತೀರ್ಥ ಬಿಡುಗಡೆ ಮಾಡಲಿದ್ದಾರೆ.   ಸಿದ್ದರಾಮಯ್ಯ ಆಡಳಿತದಲ್ಲಿ ನಡೆದ ಅಲ್ಪಸಂಖ್ಯಾತರ …

Read More »

ಕಳೆದ ಬಾರಿ ಕುಕ್ಕರ ಈ ಬಾರಿ ಮಿಕ್ಸರ್ ಕೊಟ್ಟು ಮತ ಸೆಳೆಯುವ ಪ್ರಯತ್ನದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್: ಧನಂಜಯ್ ಜಾಧವ

ರಾಜಕೀಯ ಪಕ್ಷಗಳು ಭರ್ಜರಿ ತಯಾರಿ ಶುರು ಮಾಡಿವೆ. ತಮ್ಮ ಮತದಾರರನ್ನು ಸೆಳೆಯಲು ಹೊಸ ಹೊಸ ಆಫರ್​ಗಳ ಮೊರೆ ಹೋಗುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಗಿಫ್ಟ್ ಪಾಲಿಟಿಕ್ಸ್(Gift Politics) ಬಗ್ಗೆ ಸುದ್ದಿಯಾಗಿತ್ತು. ಆದ್ರೆ ಈಗ ತೆಂಗಿನಕಾಯಿ ಮೇಲೆ ಆಣೆ ಪ್ರಮಾಣ ಮಾಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ವಿರುದ್ಧ ಬಿಜೆಪಿ ಮುಖಂಡ ಧನಂಜಯ ಜಾಧವ್ ವಾಗ್ದಾಳಿ ನಡೆಸಿದ್ದಾರೆ.  ಬೆಳಗಾವಿಯಲ್ಲಿ …

Read More »

ಮುಂದಿನ ವರ್ಷ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ: ಡಾ ಮಹೇಶ್ ಜೋಶಿ

ಮುಂದಿನ ವರ್ಷದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ಏರ್ಪಡಲಿದೆ. ಇಂದು 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ ದಿನ ಹಾವೇರಿಯಲ್ಲಿ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿಣಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಹಾವೇರಿ: ಮುಂದಿನ ವರ್ಷದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆ ನಾಡು ಮಂಡ್ಯದಲ್ಲಿ ಏರ್ಪಡಲಿದೆ. ಇಂದು 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ …

Read More »