ಗದಗ: ಗಾಂಧಿವಾದಿ, ಜಲಸಂರಕ್ಷಕ ಬೆಳಗಾವಿಯ ಶಿವಾಜಿ ಕಾಗಣಿಕರ್ ಹಾಗೂ ಸಾವಯವ ಕೃಷಿಕ, ಮೈಸೂರಿನ ಎ.ಪಿ.ಚಂದ್ರಶೇಖರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಎಸ್.ಚಟಪಲ್ಲಿ ತಿಳಿಸಿದ್ದಾರೆ. ಶಿವಾಜಿ ಕಾಗಣಿಕರ್ ರಾತ್ರಿ ಶಾಲೆಗಳನ್ನು ಆರಂಭಿಸಿ, ಗ್ರಾಮೀಣ ಜನರಲ್ಲಿ ಶಿಕ್ಷಣ ಹಾಗೂ ಜಲ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿ ಸಿದ್ದಾರೆ. ಕೆರೆಗಳನ್ನು ನಿರ್ಮಿಸಿದ್ದಾರೆ. ಮೈಸೂರಿನ ಎ.ಪಿ. ಚಂದ್ರಶೇಖರ್ 40 ವರ್ಷಗಳಿಂದ ಸಾವಯವ …
Read More »ವಿಧಾನಸಭೆ ಚುನಾವಣೆ | 40 ಕ್ಷೇತ್ರಗಳಲ್ಲಿ ಟಿಕೆಟ್ ನೀಡಿ: ಕುರುಬ ಸಮುದಾಯ ಆಗ್ರಹ
ಬೆಂಗಳೂರು: ರಾಜ್ಯದಲ್ಲಿನ ಕನಿಷ್ಠ 40 ವಿಧಾನಸಭಾ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಅಭ್ಯರ್ಥಿಗಳಿಗೆ ಟಿಕೆಟ್ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘ ರಾಜಕೀಯ ಪಕ್ಷಗಳಿಗೆ ಒತ್ತಾಯಿಸಿದೆ. ‘ರಾಜ್ಯದಲ್ಲಿ ಅತಿ ದೊಡ್ಡ ಸಮುದಾಯವಾಗಿದ್ದರೂ ಕುರುಬರಿಗೆ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. 150ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಸಮುದಾಯದ ಮತದಾರರು ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ನಿರ್ಣಾಯಕರಾಗಿದ್ದಾರೆ. 40ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ಅಭ್ಯರ್ಥಿಗಳು ಗೆಲ್ಲುವ ಸಾಮರ್ಥ್ಯ ಇದ್ದರೂ ಹಲವು ದಶಕಗಳಿಂದ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳು ಪ್ರಾತಿನಿಧ್ಯ …
Read More »ವಿಧಾನಸಭೆ ಚುನಾವಣೆ: ಕಾಂಗ್ರೆಸ್‌ನ 120 ಕ್ಷೇತ್ರಗಳ ಪಟ್ಟಿ 20ರೊಳಗೆ ಪ್ರಕಟ?
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ 120 ಕ್ಷೇತ್ರಗಳಿಗೆ ಇದೇ 20ರ ಒಳಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಎರಡು ದಿನಗಳಿಂದ ನಡೆಯುತ್ತಿರುವ ಸ್ಕ್ರೀನಿಂಗ್ ಸಮಿತಿ ಸಭೆಯಲ್ಲಿ ಈ ಕ್ಷೇತ್ರಗಳಿಗೆ ಸಂಭವನೀಯ ಒಬ್ಬ ಅಭ್ಯರ್ಥಿಯ ಹೆಸರು ಅಂತಿಮಗೊಳಿಸಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. 70 ಕ್ಷೇತ್ರಗಳಿಗೆ ಎರಡು-ಮೂರು ಅಭ್ಯರ್ಥಿಗಳಿದ್ದಾರೆ. ಆ ಕ್ಷೇತ್ರಗಳಿಗೂ ಸಂಭವನೀಯ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಸಮಿತಿಯು ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರದಲ್ಲೇ ಪಕ್ಷದ ವರಿಷ್ಠರಿಗೆ …
Read More »ಯಶಸ್ವಿನಿ ಯೋಜನೆ ನೋಂದಣಿ: ಮಾರ್ಚ್ 31ರವರೆಗೆ ಅವಧಿ ವಿಸ್ತರಣೆ
ಬೆಂಗಳೂರು: ಯಶಸ್ವಿನಿ ಯೋಜನೆಯ ನೋಂದಣಿಗೆ ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು ಮಾರ್ಚ್ 31ರವರೆಗೆ ವಿಸ್ತರಿಸಲಾಗಿದೆ. 2022-23ನೇ ಸಾಲಿನಿಂದ ಈ ಯೋಜನೆಯನ್ನು ಮರು ಜಾರಿಗೊಳಿಸಲಾಗಿದ್ದು, ಮೂರನೇ ಬಾರಿ ನೋಂದಣಿಯ ಅವಧಿಯನ್ನು ವಿಸ್ತರಿಸಲಾಗಿದೆ. ಹೊಸ ಸದಸ್ಯರ ನೋಂದಣಿಗೆ 2023ರ ಫೆ.28 ಕೊನೆಯ ದಿನವಾಗಿತ್ತು. ಈ ಯೋಜನೆ ಅಡಿಯಲ್ಲಿ 30 ಲಕ್ಷ ಸದಸ್ಯರನ್ನು ನೋಂದಾಯಿಸಲು ಗುರಿ ನಿಗದಿಪಡಿಸಲಾಗಿತ್ತು. ಇಲ್ಲಿಯವರೆಗೆ 34.52 ಲಕ್ಷ ಸದಸ್ಯರನ್ನು ನೋಂದಾಯಿಸಿಕೊಳ್ಳಲಾಗಿದೆ. 2023ರ ಜನವರಿ 1ರಿಂದ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಫಲಾನುಭವಿಗಳಿಗೆ ಚಿಕಿತ್ಸೆ ಆರಂಭಿಸಲಾಗಿದ್ದು, …
Read More »ಹೊಲದಲ್ಲಿ ಹಾರಿ ಬಂತು ಸಂದೇಹಾಸ್ಪದ ಬೆಲೂನ್; ಸುದ್ದಿ ಕೇಳಿ ಬೆಚ್ಚಿಬಿತ್ತು ಬೈಲಹೊಂಗಲ ಜನತೆ !
ಬೈಲಹೊಂಗಲ: ತಾಲೂಕಿನ ಗದ್ದಿಕರವಿನಕೊಪ್ಪ ಗ್ರಾಮದ ಹೊಲವೊಂದರಲ್ಲಿ ಪತ್ತೆಯಾಗಿರುವ ಬೆಲೂನ್ ಒಂದು ಜನತೆ ಬೆಚ್ಚಿಬೀಳುವಂತೆ ಮಾಡಿದೆ. ಇತ್ತೀಚೆಗಷ್ಟೇ ಚೀನಾ ಹಾರಿ ಬಿಟ್ಟಿದ್ದು ಎನ್ನಲಾದ ಗೂಢಚಾರ ಬೆಲೂನ್ ಗಳು ಅಮೆರಿಕ ಮತ್ತಿತರೆಡೆ ಪತ್ತೆಯಾಗಿರುವ ಹಾಗೂ ಅವುಗಳನ್ನು ವೈಮಾನಿಕ ದಾಳಿಯಿಂದ ನಾಶಪಡಿಸಿದ ಘಟನೆಗಳು ಸ್ಮೃತಿಪಟಲದಿಂದ ಮಾಸಿ ಹೋಗುವ ಮುನ್ನ ವಿಚಿತ್ರ ಬೆಲೂನ್ ಹೊಲದಲ್ಲಿ ಹಾರಿಬಂದಿರುವುದು ನಾನಾ ರೀತಿಯ ಸಂದೇಹಗಳು, ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿತು. ಬಿಳಿಯ ಬಣ್ಣದ ಈ ಬೆಲೂನ್ ನಲ್ಲಿ ಬ್ಯಾಟರಿ ಹಾಗೂ …
Read More »ನಾಳೆಯಿಂದ 29ರವರೆಗೆ ದ್ವಿತೀಯ ಪಿಯು ಪರೀಕ್ಷೆ; ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದ್ದವರ ಮೇಲೆ ನಿಗಾ
ಬೆಂಗಳೂರು: 2023ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ನಾಳೆ (ಮಾ.9) ಆರಂಭವಾಗಲಿದ್ದು ರಾಜ್ಯಾದ್ಯಂತ 1,109 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಮಾ. 29ರ ವರೆಗೂ ನಡೆಯಲಿರುವ ಈ ಪರೀಕ್ಷೆಗೆ ಸಂಬಂಧಿಸಿದಂತೆ ಸಿಸಿಟಿವಿ ಕ್ಯಾಮರಾ ಹಾಗೂ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. 3,63,698 ಬಾಲಕರು ಮತ್ತು 3,62.497 ಬಾಲಕಿಯರು ಸೇರಿ ಒಟ್ಟಾರೆ 7,26,195 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ ಹೊಸದಾಗಿ 6.29 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು, 25,847 ಖಾಸಗಿ ಮತ್ತು 70,589 …
Read More »ನಟ-ನಿರ್ದೇಶಕ ಸತೀಶ್ ಕೌಶಿಕ್ ನಿಧನ
ಮುಂಬೈ: ನಟ-ನಿರ್ದೇಶಕ ಸತೀಶ್ ಕೌಶಿಕ್ ನಿಧನರಾದರು. ಅವರಿಗೆ 66 ವರ್ಷವಾಗಿತ್ತು. ನಟ ಅನುಪಮ್ ಖೇರ್ ಅವರು ಸತೀಶ ಕೌಶಿಕ್ ಅವರ ನಿಧನ ಕುರಿತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. “45 ವರ್ಷಗಳ ಸ್ನೇಹಕ್ಕೆ ಅಂತಹ ಹಠಾತ್ ಪೂರ್ಣ ವಿರಾಮ! ನೀವು ಇಲ್ಲದೆ ಜೀವನವು ಎಂದಿಗೂ ಒಂದೇ ಆಗುವುದಿಲ್ಲ!”ಎಂದು ಅನುಪಮ್ ಖೇರ್ ಹೇಳಿದ್ದಾರೆ. ನಟಿ ಕಂಗನಾ ರಣಾವತ್ ಕೂಡ ನಟನ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಈ ಭಯಾನಕ ಸುದ್ದಿಯಿಂದ ಎಚ್ಚರವಾಯಿತು. ಅವರು ನನ್ನ …
Read More »ಮೈಸೂರು -ಬೆಂಗಳೂರು- ಮಾರ್ಗ ಬದಲಾವಣೆ
ಬೆಂಗಳೂರು: ಬೆಂಗಳೂರು-ಮೈಸೂರು ದಶಪಥ ರಸ್ತೆ ಉದ್ಘಾಟನೆಗೆ ಸಜ್ಜಾಗಿದ್ದು, ಮಾರ್ಚ್ 12ರಂದು ಪ್ರಧಾನಿ ನರೇಂದ್ರ ಮೋದಿ ದಶಪಥ ರಸ್ತೆ ಲೋಕಾರ್ಪಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಮಂಡ್ಯಕ್ಕೆ ಆಗಮಿಸಲಿದ್ದು, ಅಂದು ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆ ಬಳಿ ದಶಪಥ ರಸ್ತೆಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಅಲ್ಲಿಯೇ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಬೆಳಿಗ್ಗೆ …
Read More »ಕಾನೂನು ಅರಿವಿನಿಂದ ಮಾತ್ರ ಮಹಿಳೆಯರು ಮುಖ್ಯವಾಹಿನಿಗೆ ಬರಲು ಸಾಧ್ಯ : ನ್ಯಾಯವಾದಿ ಪ್ರೀತಿ ಕುಕಡೆ
ಕಾನೂನು ಅರಿವಿನಿಂದ ಮಾತ್ರ ಮಹಿಳೆಯರು ಮುಖ್ಯವಾಹಿನಿಗೆ ಬರಲು ಸಾಧ್ಯ : ನ್ಯಾಯವಾದಿ ಪ್ರೀತಿ ಕುಕಡೆ ಬದಲಾಗುತ್ತಿರುವ ಸಾಮಾಜಿಕ ವ್ಯವಸ್ಥೆಯಲ್ಲಿ ಕಾನೂನಿನ ಅರಿವು ಇಲ್ಲದೆ ವಿವಿಧ ರೀತಿಯ ದೌರ್ಜನ್ಯಕ್ಕೆ ಮಹಿಳೆಯರು ಒಳಗಾಗುತ್ತಿದ್ದಾರೆ.ಆದ್ದರಿಂದ ಮಹಿಳೆಯರಲ್ಲಿ ಕಾನೂನು ಅರಿವು ಮೂಡಿದರೆ ಉತ್ತಮ ಬದುಕು ಕಟ್ಟಿಕೊಳ್ಳಬಹುದು.ಜೊತೆಗೆ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಬಹುದು ಎಂದು ಸಮಾಜ ಸೇವಕಿ ಹಾಗೂ ನ್ಯಾಯವಾದಿ ಪ್ರೀತಿ ಕುಕಡೆ ಹೇಳಿದರು. ಮೇದಾರ ಓಣಿ ಬೆಳಗಾವಿಯಲ್ಲಿ ಇಂದು ಆಯೋಜಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ …
Read More »ಲಂಚ ಪ್ರಕರಣ: ಪ್ರಶಾಂತ್ ಮಾಡಾಳ್ ವಿರುದ್ಧ ಮತ್ತೆರಡು ಎಫ್‌ಐಆರ್
ಬೆಂಗಳೂರು: ಖಾಸಗಿ ಕಚೇರಿಯಲ್ಲಿ ₹ 1.62 ಕೋಟಿ ನಗದು ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಲಮಂಡಳಿ ಪ್ರಧಾನ ಲೆಕ್ಕಾಧಿಕಾರಿ ಪ್ರಶಾಂತ್ ಮಾಡಾಳ್ ಹಾಗೂ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ (ಕೆಎಸ್‌ಡಿಎಲ್) ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರು ಬುಧವಾರ ಎರಡು ಎಫ್‌ಐಆರ್ ದಾಖಲಿಸಿದ್ದಾರೆ. ಕೆಎಸ್‌ಡಿಎಲ್ ಕಚ್ಚಾವಸ್ತು ಖರೀದಿ ಟೆಂಡರ್ ಅಂತಿಮಗೊಳಿಸುವ ಸಂಬಂಧ ₹ 40 ಲಕ್ಷ ಲಂಚ ಪಡೆಯುತ್ತಿದ್ದಾಗ ಮಾರ್ಚ್ 2ರಂದು ಪ್ರಶಾಂತ್ ಮಾಡಾಳ್ ಅವರನ್ನು ಬಂಧಿಸಲಾಗಿತ್ತು. ಕೆಎಸ್‌ಡಿಎಲ್ ಅಧ್ಯಕ್ಷರೂ …
Read More »
Laxmi News 24×7