ಮೈಸೂರು : ಮುಂದಿನ ವರ್ಷ ಆಷಾಢ ಮಾಸಕ್ಕೆ ಚಾಮುಂಡಿ ಬೆಟ್ಟಕ್ಕೆ ಬರುವ ಹೊತ್ತಿಗೆ ನರೇಂದ್ರ ಮೋದಿಯವರೇ 3ನೇ ಬಾರಿ ಪ್ರಧಾನ ಮಂತ್ರಿಯಾಗಲಿ ಎಂದು ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿಕೊಂಡಿದ್ದೇನೆ ಎಂದು ಕೇಂದ್ರ ಕೃಷಿ ಖಾತೆಯ ರಾಜ್ಯ ಸಚಿವೆಯಾದ ಶೋಭಾ ಕರಂದ್ಲಾಜೆ ಹೇಳಿದರು. ಚಾಮುಂಡೇಶ್ವರಿಯ ಪರಮ ಭಕ್ತೆಯಾದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇಂದು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದರು. ಕಡೆಯ ಆಷಾಢ ಶುಕ್ರವಾರದಂದು ನಾಡದೇವತೆಯ ದರ್ಶನ ಪಡೆಯಲು ಆಗಮಿಸಿದ ಅವರು, …
Read More »ಮದ್ಯದ ಅಮಲಿನಲ್ಲಿ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು, ಕೊಲೆ ಮಾಡಿದಪತಿ
ಬೆಂಗಳೂರು: ಕೌಟುಂಬಿಕ ಕಲಹ ಹಿನ್ನೆಲೆ ಮದ್ಯದ ಅಮಲಿನಲ್ಲಿ ಪತ್ನಿಯ ತಲೆಗೆ ಸುತ್ತಿಗೆಯಿಂದ ಹೊಡೆದು, ಕೊಲೆ ಮಾಡಿದ ಆರೋಪದಡಿ ಪತಿಯನ್ನ ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಪತ್ನಿ ಚಿಕ್ಕತಾಯಮ್ಮನನ್ನ ಹತ್ಯೆ ಮಾಡಿದ್ದ ಆರೋಪದಡಿ ಪೊಲೀಸರು ಪತಿ ನಾಗರತ್ನಂ ನನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ತಮಿಳುನಾಡು ಮೂಲದ ನಾಗರತ್ನಂ ಮತ್ತು ಚಿಕ್ಕತಾಯಮ್ಮ ದಂಪತಿ ಕಾಮಾಕ್ಷಿಪಾಳ್ಯ ಕರೆ ಕಲ್ಲು ಏರಿಯಾದಲ್ಲಿ ವಾಸ ಮಾಡುತ್ತಿದ್ದರು. ಇವರಿಗೆ ಮದುವೆಯಾಗಿ 29 ವರ್ಷಗಳಾಗಿವೆ. ದಂಪತಿಗೆ ಮೂವರು ಮಕ್ಕಳಿದ್ದು ಎಲ್ಲರಿಗೂ ವಿವಾಹವಾಗಿದೆ. ಆರೋಪಿ ನಾಗರತ್ನಂಗೆ …
Read More »ಉಗ್ರ ಬಸಿತ್ ಅಹ್ಮದ್ ದಾರ್ ಬಗ್ಗೆ ಸುಳಿವು ನೀಡಿದವರೆಗೆ 10 ಲಕ್ಷ ರೂಪಾಯಿ ಬಹುಮಾನ:N.I.A
ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ನಿವಾಸಿ, ಉಗ್ರ ಬಸಿತ್ ಅಹ್ಮದ್ ದಾರ್ ಎಂಬಾತನ ಬಂಧನಕ್ಕೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) 10 ಲಕ್ಷ ರೂಪಾಯಿ ಬಹುಮಾನ ಘೋಷಿಸಿದೆ. ಬಸಿತ್ ದಾರ್ ಉಗ್ರ ಸಂಘಟನೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (The Resistance Front – TRF)ನೊಂದಿಗೆ ನಂಟು ಹೊಂದಿದ್ದಾನೆ. ಈತನ ಬಂಧನಕ್ಕಾಗಿ ತನಿಖಾ ಸಂಸ್ಥೆ ಶೋಧ ಕಾರ್ಯ ನಡೆಸುತ್ತಿದೆ. ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ …
Read More »ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಬಂಡಾಯ ಸುಪ್ರೀಂಕೋರ್ಟ್ ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ಗೆ ನೋಟಿಸ್ ಜಾರಿ ಮಾಡಿದೆ.
ನವದೆಹಲಿ: ಏಕನಾಥ್ ಶಿಂಧೆ ನೇತೃತ್ವದ ಬಂಡಾಯ ಶಿವಸೇನೆ ಶಾಸಕರ ವಿರುದ್ಧದ ಅನರ್ಹತೆ ಅರ್ಜಿಗಳ ತ್ವರಿತ ನಿರ್ಧಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಶಿವಸೇನೆ (ಯುಬಿಟಿ) ಶಾಸಕ ಸುನೀಲ್ ಪ್ರಭು ಅವರು ಸಲ್ಲಿಸಿದ ಮನವಿಯ ಮೇರೆಗೆ ಸುಪ್ರೀಂಕೋರ್ಟ್ ಶುಕ್ರವಾರ ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್ಗೆ ನೋಟಿಸ್ ಜಾರಿ ಮಾಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠವು ಪ್ರಭು ಅವರ ಮನವಿ ಮೇರೆ ನೋಟಿಸ್ ಜಾರಿ ಮಾಡಿದೆ. ಏಕನಾಥ್ ಶಿಂಧೆ ನೇತೃತ್ವದ ಮಹಾರಾಷ್ಟ್ರ ಸರ್ಕಾರಕ್ಕೆ ಎನ್ಸಿಪಿ …
Read More »ಕೋಲಾರದ ಟೊಮೆಟೊ ಮಾರುಕಟ್ಟೆ ವಿಸ್ತರಣೆ ಮಾಡಲು ಜಾಗ ಪಡೆದುಕೊಳ್ಳಲು ಕ್ರಮ : ಶಿವಾನಂದ ಪಾಟೀಲ್
ಬೆಂಗಳೂರು: ರಾಜ್ಯದಲ್ಲಿ ನಿರ್ಮಾಣಗೊಳ್ಳುವ ಜವಳಿ ಪಾರ್ಕ್ಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸುವುದು ಅನಿವಾರ್ಯ ಎಂದು ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಇಂದು ಪ್ರಶ್ನೋತ್ತರದ ವೇಳೆ ಕಾರ್ಕಳದ ಶಾಸಕ ಸುನೀಲ್ ಕುಮಾರ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಹಿಂದೆ ಶಿಗ್ಗಾಂವಿ ಮತ್ತು ಕಾರ್ಕಳಕ್ಕೆ 2020-21ನೇ ಸಾಲಿನಲ್ಲಿ ಜವಳಿ ಪಾರ್ಕ್ ಗಳನ್ನು ಮಂಜೂರು ಮಾಡಲಾಗಿತ್ತು. ಶಿಗ್ಗಾಂವಿ ಕ್ಷೇತ್ರದ ಜವಳಿ ಪಾರ್ಕ್ ಅನ್ನು 50 ಕೋಟಿ ರೂ. …
Read More »ಗೃಹಲಕ್ಷ್ಮಿ ಯೋಜನೆಗೆ ಇನ್ನೂ ಅರ್ಜಿ ಕರೆದಿಲ್ಲ: ಲಕ್ಷ್ಮಿ ಹೆಬ್ಬಾಳ್ಕರ್
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ ಹೊಸ ಆಯಪ್ ಸಿದ್ದಪಡಿಸಲಾಗಿದೆ. ಮುಂದಿನ ನಾಲ್ಕೈದು ದಿನಗಳಲ್ಲಿ ಆಯಪ್ ಬಿಡುಗಡೆ ಮಾಡಿ ಅರ್ಜಿ ಸ್ವೀಕಾರ ಕಾರ್ಯ ಆರಂಭಿಸಲಾಗುತ್ತದೆ. ಆಗಸ್ಟ್ 16ರಿಂದ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ. ವಿಧಾನಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯೆ ಹೇಮಲತಾ ನಾಯಕ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ನಾವು ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿಯನ್ನು ಇನ್ನೂ ಕರೆದಿಲ್ಲ. ಅರ್ಜಿಯನ್ನೇ ಕರೆದಿಲ್ಲ ಎಂದ …
Read More »ಜೈನ ಮುನಿ ಹತ್ಯೆ ನಂದಿ ಪರ್ವತ ಆಶ್ರಮಕ್ಕೆ ಸತೀಶ್ ಜಾರಕಿಹೊಳಿ ಅವರ ಭೇಟಿ
ಜೈನ ಮುನಿ 1008 ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಹಿನ್ನೆಲೆಯಲ್ಲಿ ಹಿರೇಕೊಡಿ ಗ್ರಾಮದ ನಂದಿ ಪರ್ವತ ಆಶ್ರಮಕ್ಕೆ ಇಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ, ಭಕ್ತಾದಿಗಳಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜೈನ ಮುನಿ 1008 ಕಾಮಕುಮಾರ ನಂದಿ ಮಹಾರಾಜರ ಹತ್ಯೆಯಿಂದ ಆಘಾತವಾದ ಸಮಸ್ತ ಜೈನ ಸಮುದಾಯದ ಬಂಧುಗಳ, ಅಪಾರ ಸಂಖ್ಯೆಯ ಭಕ್ತರ ನೋವಿನಲ್ಲಿ ನಾವೆಲ್ಲ …
Read More »ಬಿಲೀವ್ ಫೌಂಡೇಶನ್ ವತಿಯಿಂದ ಹಸುವಿನ ಅಂತ್ಯಸಂಸ್ಕಾರ
ಬೆಳಗಾವಿಯ ಮುಜಾವರ ಗಲ್ಲಿಯಲ್ಲಿ ಬಿಡಾಡಿ ಹಸು ಸತ್ತು ಬಿದ್ದಿರುವ ಬಗ್ಗೆ ಬಿಲೀವ್ ಫೌಂಡೇಶನ್ ಸದಸ್ಯರಿಗೆ ಮಾಹಿತಿ ಸಿಕ್ಕಿದೆ. ಅದರಂತೆ ಬಿಲೀವ್ ಫೌಂಡೇಶನ್ ಸದಸ್ಯರು ಸ್ಥಳಕ್ಕೆ ತೆರಳಿ ಹಸುವನ್ನು ವಶಕ್ಕೆ ಪಡೆದು ಹಿಂದೂ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಿದರು. ಸೌರಭ್ ಸಾವಂತ್, ಅತಿಶ ಧಾತೋಂಬೆ, ಅವಧೂತ್ ತುಡ್ವೇಕರ್, ನೀಲೇಶ್ ಹಿರೇಹೊಳ್ಳಿ, ರೋಹಿತ್ ಫಸಲ್ಕರ್ ಈ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಅವರಿಗೆ ಸ್ಥಳೀಯ ಕಾರ್ಪೊರೇಟರ್ ಮತ್ತು ಮಹಾನಗರ ಸಭೆಯ ಬೆಂಬಲ ಸಿಕ್ಕಿತು.
Read More »ಹುಂಚೇನಟ್ಟಿ ಗ್ರಾಮದ ಇಂಜಿನಿಯರಿಂಗ್ ಕಾಲೇಜು ಬಳಿ ಯುವಕನನ ಬರ್ಬರ ಹತ್ಯೆ
ಬೆಳಗಾವಿ ಸಮೀಪದ ಹುಂಚೇನಟ್ಟಿ ಗ್ರಾಮದ ಇಂಜಿನಿಯರಿಂಗ್ ಕಾಲೇಜು ಬಳಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗುರುವಾರ ರಾತ್ರಿ ಇಂಜಿನಿಯರಿಂಗ್ ಕಾಲೇಜು ಹಿಂಭಾಗದ ಆವರಣದಲ್ಲಿ ಕುಡಿದ ಮತ್ತಿನಲ್ಲಿ ಕೆಲ ಯುವಕರ ನಡುವೆ ಮಾರಾಮಾರಿ ನಡೆದಿದೆ. ಈ ಜಗಳದಲ್ಲಿ ಯುವಕ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ಪಿರನವಾಡಿ ನಿವಾಸಿ ಅರ್ಬಾಜ್ ರಫೀಕ್ ಮುಲ್ಲಾ (25) ಕೊಲೆಯಾದವರು. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಗಾಂಜಾ ಅಥವಾ ಮದ್ಯದ ಅಮಲಿನಿಂದ ಗೊಂದಲ ಉಂಟಾಗಿರಬಹುದು …
Read More »ಬಾಯಿ ಚಪ್ಪರಿಸಿ ಹಾವು ತಿಂದ ಜಿಂಕೆ!, ಹೌಹಾರುವ ವಿಡಿಯೋ ಇಲ್ಲಿದೆ ನೋಡಿ
ನವದೆಹಲಿ: ಜಿಂಕೆ ಮಾಂಸಹಾರಿಯೇ..? ಜಿಂಕೆ ಕೇವಲ ಹುಲ್ಲು ತಿಂದು ಬದುಕುತ್ತದೆ ಅಲ್ಲವೇ? ಆದರೆ ಈ ವಿಡಿಯೋ ನೋಡಿದ್ರೆ ನೀವು ಹೌಹಾರುತ್ತೀರಿ. ಏಕೆಂದರೆ ಇಲ್ಲಿ ಜಿಂಕೆಯೊಂದು ಬಾಯಿ ಚಪ್ಪರಿಸಿ ಹಾವೊಂದನ್ನು ತಿನ್ನುತ್ತಿದೆ. ಹೌದು, ಇದು ಆಶ್ಚರ್ಯವಾದರೂ ನಿಜ. ಜಿಂಕೆ ಹಾವು ತಿನ್ನುತ್ತಿರುವ ವಿಡಿಯೋಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟಿಜನ್ಗಳು ಹೌಹಾರಿದ್ದಾರೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ (IFS) ಅಧಿಕಾರಿ ಡಾ.ಸಾಮ್ರಾಟ್ ಗೌಡ ತಮ್ಮ ಟ್ವಿಟರ್ ಖಾತೆಯಲ್ಲಿ …
Read More »
Laxmi News 24×7