Breaking News

ಜಿಲ್ಲೆ

ಬಿಜೆಪಿ ಆಯ್ಕೆಯಿಂದ ಭ್ರಷ್ಟ ಆಡಳಿತಕ್ಕೆ ಚಾಟಿ ಏಟು: ವಿ.ಸೋಮಣ್ಣ

ಬಿಜೆಪಿ ಸಭೆಗೆ ಕಾಂಗ್ರೆಸ್ ಕಾರ್ಯಕರ್ತರ ಅಡ್ಡಿ ಬಾಗಲಕೋಟೆ: ಭ್ರಷ್ಟ ಆಡಳಿತಕ್ಕೆ ಚಾಟಿ ಏಟು ಕೊಡಲು ಸೂಕ್ತ ಅವಕಾಶ ಒದಗಿ ಬಂದಿದ್ದು ಐಹೊಳೆ ಅಭಿವೃದ್ಧಿಗೆ ಮಾರಕವಾದ ಕಾಂಗ್ರೆಸ್ ತೊಲಗಿಸಿ ಬಿಜೆಪಿ ಗೆಲ್ಲಿಸಿ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು. ಉಪಚುನಾವಣೆ ಹಿನ್ನೆಲೆ ಐಹೊಳೆಯಲ್ಲಿ ಹಮ್ಮಿಕೊಂಡ ಮತಯಾಚನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಐಹೊಳೆ ಸ್ಥಳಾಂತರಕ್ಕೆ ಸರಕಾರ ಆದೇಶ ಮಾಡಿದರೂ ಅದನ್ನು ನಿಲ್ಲಿಸಿ ಕಾಂಗ್ರೆಸ್ ಮೋಸ ಮಾಡಿದೆ. ಉಪಚುನಾವಣೆ ಮುಗದ ತಕ್ಷಣವೇ ಕೇಂದ್ರ ಸರಕಾರದಿಂದ …

Read More »

ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಆಗಮನ

ಬೆಂಗಳೂರು: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಬೆಂಗಳೂರಿಗೆ ಆಗಮಿಸಿದರು. ಅವರನ್ನು ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹೆಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷ ನಾಯಕರಾದ ಚಲವಾದಿ ನಾರಾಯಣಸ್ವಾಮಿ, ಸಂಸದ ಪಿ.ಸಿ ಮೋಹನ್‌ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Read More »

ಎರಡು ಗುಂಪುಗಳ ನಡುವೆ ಮಾರಾಮಾರಿ – ಮಹಿಳೆಯನ್ನ ಬೆತ್ತಲುಗೊಳಿಸಿ ಹಲ್ಲೆಗೆ ಯತ್ನ

ಹಾಸನ: ದಾರಿ ವಿಚಾರಕ್ಕೆ ಗ್ರಾಮದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ಮಹಿಳೆಯನ್ನ ಬೆತ್ತಲೆಗೊಳಿಸಿ ಹಲ್ಲೆಗೆ ಯತ್ನಿಸಿರುವ ಘಟನೆ ಹಾಸನ  ಜಿಲ್ಲೆಯ ಬೇಲೂರು  ತಾಲ್ಲೂಕಿನ ಹಂಚಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಾ.22ರಂದು ಬೆಳಿಗ್ಗೆ ಗ್ರಾಮದ ಗೋವಿಂದಪ್ಪ, ಕುಮಾರ್ ಹಾಗೂ ಇತರರ ಮನೆಗೆ ತೆರಳಲು ದಾರಿ ನಿರ್ಮಾಣ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ವೇಳೆ ಗೋವಿಂದಪ್ಪನ ಸಂಬಂಧಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆಗೆ ಮುಂದಾಗಿದ್ದು, ಘಟನೆ ಸಂಬಂಧ ಹಳೆಬೀಡು ಪೊಲೀಸ್ ಠಾಣೆಯಲ್ಲಿ …

Read More »

ಅತ್ತೆ, ಮಾವನ ಕಿರುಕುಳಕ್ಕೆ ಬೇಸತ್ತು ಗರ್ಭಿಣಿ ನರ್ಸ್‌ ಆತ್ಮಹತ್ಯೆ – ನಾಲ್ವರು ಅರೆಸ್ಟ್‌

ಶಿವಮೊಗ್ಗ: ಅತ್ತೆ, ಮಾವನ ಕಿರುಕುಳಕ್ಕೆ 4 ತಿಂಗಳ ಗರ್ಭಿಣಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಸೊರಬ (Soraba) ತಾಲೂಕಿನ ಹೊಡಬಟ್ಟೆ ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ಶ್ವೇತಾ (30) ಎಂದು ಗುರುತಿಸಲಾಗಿದೆ. ಮಹಿಳೆ ಸ್ಟಾಫ್‌ ನರ್ಸ್ (Nurse) ಆಗಿ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಮಾರ್ಚ್ 29 ರಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡು ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸಾಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, …

Read More »

ಬೆಳಗಾವಿ: ಗ್ರಾಹಕರ ಹಣ ಮರಳಿಸದ ಸೊಸೈಟಿ ಅಧ್ಯಕ್ಷನಿಗೆ ಒಂದು ವರ್ಷ ಜೈಲು ಶಿಕ್ಷೆ

ಗ್ರಾಹಕರ ಠೇವಣಿ ಮರಳಿಸುವಂತೆ ನೀಡಿದ್ದ ಆದೇಶ ಪಾಲಿಸದ ಬೆಳಗಾವಿಯ ರಿದ್ದಿಸಿದ್ಧಿ ವಿವಿಧೋದ್ದೇಶ ಕೋ-ಆಪ್ ಸೊಸೈಟಿ ಅಧ್ಯಕ್ಷ ಶ್ಯಾಮ ಜಾಧವಗೆ 1 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ಪ್ರಕಟಿಸಿದೆ ಎಂದು ನ್ಯಾಯವಾದಿ ಎನ್.ಆರ್.ಲಾತೂರ್ ತಿಳಿಸಿದರು. ಶುಕ್ರವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಠೇವಣಿ ಅವಧಿ ಮುಗಿದರೂ ಹಣ ಮರಳಿಸುತ್ತಿಲ್ಲ ಎಂದು ಸೊಸೈಟಿ ಗ್ರಾಹಕರಾದ ಸ್ನೇಹಾ ನಾದ ಮತ್ತು …

Read More »

ರೈತರ ಏಳಿಗೆಗೆ ಶ್ರಮಿಸುತ್ತಿದೆ ಸರ್ಕಾರ

ಅಥಣಿ ಗ್ರಾಮೀಣ: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಜತೆಗೆ ರಸ್ತೆ, ನೀರಾವರಿ, ಶಾಲಾ ಕೊಠಡಿ ಸೇರಿದಂತೆ ಹಲವು ಕಾಮಗಾರಿ ಕೈಗೊಂಡು ಹಿಂದುಳಿದವರು, ರೈತರು, ಕೂಲಿ ಕಾರ್ಮಿಕರ ಏಳಿಗೆಗೆ ಶ್ರಮಿಸುತ್ತಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅಥಣಿ ತಾಲೂಕಿನ ಅಬ್ಬಿಹಾಳ ಗ್ರಾಮದ ಬಳಿ ೩.೬೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಖಿಳೇಗಾಂವ ಅಥಣಿ, ಸತ್ತಿ ರಾಜ್ಯ ಹೆದ್ದಾರಿ ಡಾಂಬರೀಕರಣ ಹಾಗೂ ೩ ಕೋಟಿ ರೂ. ವೆಚ್ಚದಲ್ಲಿ ದರೂರ ಗ್ರಾಮದಿಂದ ಖವಟಕೊಪ್ಪ …

Read More »

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪೋಕ್ಸೋ ನ್ಯಾಯಾಲಯದಿಂದ ಶಿಕ್ಷೆ ಪ್ರಕಟ

ಬೆಳಗಾವಿ:ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ್ದ ಖಾನಾಪೂರ ತಾಲೂಕಿನ ಭೂರಣಕಿ ಗ್ರಾಮದ ನಿವಾಸಿ ಮೊಶೀನ್ ಸಾಹುಕಾರ(೩೦)ಮತ್ತು ಇರ್ಫಾನ್ ವಸ್ತಾದ (೨೪) ಅಪರಾಧಿಗಳಿಗೆ ತಲಾ ೩ ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂ ವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಬುಧವಾರ ತೀರ್ಪು ಪ್ರಕಟಿಸಿದೆ.   ಅಪರಾಧಿಗಳು ೨೦೨೪ರಲ್ಲಿ ಬಾಲಕಿಯನ್ನು ಪ್ರೀತಿಸುವಂತೆ ಪೀಡಿಸಿವಂತೆ, ಕಿರುಕುಳ ನೀಡುವುದರ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ತನಿಖಾಧಿಕಾರಿ ಜಿಲ್ಲಾ ನ್ಯಾಯಾಲಯ …

Read More »

ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ನಿರ್ಣಯ ಮಂಡನೆಗೆ ಆಗ್ರಹ

ಬೆಳಗಾವಿ : ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ಎಂದು ಸರ್ವಾನುಮತದ ನಿರ್ಣಯ ಅಂಗೀಕರಿಸುವಂತೆ ಆಗ್ರಹಿಸಿ ನಗರದಲ್ಲಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆಯ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಮಹಾನಗರ ಪಾಲಿಕೆಯಲ್ಲಿ ಈ ಹಿಂದೆ ಮಹಾರಾಷ್ಟ್ರ ಪರ ನಿರ್ಣಯ ಮಂಡಿಸಿರುವುದನ್ನು ಖಂಡಿಸಿದರು. ಪಾಲಿಕೆಯಲ್ಲಿ ಈಗ ಕನ್ನಡಿಗರೇ ಮಹಾಪೌರ ಮತ್ತು ಉಪಮೇಯರ್ ಆಗಿರುವುದರಿಂದ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಿರ್ಣಯ …

Read More »

ಪೆಟ್ಟುಕೊಟ್ಟ ಕಾಂಗ್ರೆಸ್ ಪತನವೇ ದಲಿತರ ಗುರಿ: ಪಿ.ರಾಜೀವ

ಬಾಗಲಕೋಟೆ: ಬಂಜಾರಾ ಸಮುದಾಯಕ್ಕೆ ಕಾಂಗ್ರೆಸ್ ಮಾಡಿದ ಮೋಸ ಮತ್ತು ಬಿಜೆಪಿಯ ಅಭಿವೃದ್ಧಿ ಕಾರ್ಯಗಳು ಅರ್ಥವಾಗಿವೆ. ಮುಂದಿನ ಭವಿಷ್ಯಕ್ಕಾಗಿ ಎಸ್.ಸಿ ಎಸ್.ಟಿ ಪಂಗಡಗಳಿಗೆ ಬಹುದೊಡ್ಡ ಪೆಟ್ಟು ಕೊಟ್ಟ ಕಾಂಗ್ರೆಸ್ ಸೋಲಿಸಿ ಬಿಜೆಪಿಯನ್ನು 30 ಸಾವಿರಗಳ ಅಂತರದಲ್ಲಿ ಗೆಲ್ಲಸಲಿದ್ದಾರೆ ಎಂದು ಕುಡಚಿ ಶಾಸಕ ಪಿ.ರಾಜೀವ ಹೇಳಿದರು. ಉಪಚುನಾವಣೆ ಹಿನ್ನೆಲೆ ನೀರಲಕೇರೆ ತಾಂಡಾದಲ್ಲಿ ಮತಯಾಚನೆ ಸಂದರ್ಭದಲ್ಲಿ ತುಂತುರು ಮಳೆಯ ನಡುವೆಯೂ ಬಸವಣ್ಣನ ಗುಡಿಯಿಂದ ಮಾರುತೇಶ್ವರ ದೇವಸ್ಥಾನ ಮಾರ್ಗವಾಗಿ ದುರ್ಗಾ ದೇವಸ್ಥಾನದವರೆಗೂ ಬೃಹತ್ ಪಾದಯಾತ್ರೆ ಮಾಡಲಾಯಿತು. …

Read More »

ಹಿಂದೂಗಳು ಒಂದಾಗಿ ಬಿಜೆಪಿ ಮತ ನೀಡಿ ಹಿಂದೂತ್ವ ಗೆಲ್ಲಿಸಿ : ಯತ್ನಾಳ

ಬಾಗಲಕೋಟೆ: ಹಿಂದೂಗಳು ಒಂದಾಗಿ ಬಿಜೆಪಿ ಗೆಲ್ಲಿಸಿದರೆ ಹಿಂದುತ್ವ ಗೆಲ್ಲುತ್ತದೆ. ಉಪಚುನಾವಣೆಯಲ್ಲಿ ಬಾಗಲಕೋಟೆಯನ್ನು ಆರಿಸಿ ತಂದರೆ ಕರ್ನಾಟಕದ ರಾಜಕೀಯವೇ ಬದಲಾಗುತ್ತದೆ ಎಂದು ಶಾಸಕ ಬಸನಗೌಡ ಯತ್ನಾಳ ಹೇಳಿದರು. ಉಪಚುನಾವಣೆ ನಿಮಿತ್ತ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಪರವಾಗಿ ಭಗವತಿಯಲ್ಲಿ ಮತಯಾಚನೆ ಮಾಡಿ ಮಾತನಾಡಿದ ಅವರು ಹಿಂದೂ ಸಮಾಜಗಳೆಲ್ಲವೂ ಒಗ್ಗಟ್ಟಾಗಿ ಮತದಾನ ಮಾಡಿದರೆ ಬಿಜೆಪಿಗೆ ಬೃಹತ್ ಶಕ್ತಿ ಬರುತ್ತದೆ. ಇಲ್ಲಿಯವರೆಗೂ ಏನು ಕೆಲಸ ಮಾಡದ ಕಾಂಗ್ರೆಸ್ ಎರಡು ವರ್ಷದ ನಂತರ ಸಾರ್ವತ್ರಿಕ ಚುನಾವಣೆಯಲ್ಲಿ …

Read More »