ಬೆಂಗಳೂರು, ಡಿ.31- ಕೋವಿಡ್-19 ಹಿನ್ನೆಲೆಯಲ್ಲಿ ಕಳೆದ ಮಾರ್ಚ್‍ನಿಂದ ಮುಚ್ಚಲ್ಪಟ್ಟಿದ್ದ ಶಾಲಾ-ಕಾಲೇಜುಗಳು ನಾಳೆಯಿಂದ ಆರಂಭವಾಗಲಿದ್ದು, ಮೊದಲ ದಿನ ವಿದ್ಯಾರ್ಥಿಗಳಿಗೆ ಮೊದಲ ಒಂದು ಗಂಟೆ ಕಾಲ ಪಾಠ ಮಾಡಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ನಿರ್ಧರಿಸಿದೆ. 10 ಮತ್ತು 12ನೆ ತರಗತಿ ಮಕ್ಕಳಿಕೆ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸುವಂತೆ ಇಲಾಖೆ ಈಗಾಗಲೇ ರಾಜ್ಯದ ಎಲ್ಲಾ ಶಾಲೆಗಳಿಗೆ ಸೂಚನೆ ನೀಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ ಧರಿಸುವುದು, ಜನದಟ್ಟಣೆ ಇರುವ ಪ್ರದೇಶಗಳಿಗೆ ತೆರಳದೆ …
Read More »ಬಸ್ ಮೇಲೆ ಬಾಂಬ್ ದಾಳಿ; 28ಕ್ಕೂ ಹೆಚ್ಚು ಜನ ಸಾವು
ಸಿರಿಯಾ: ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಬಸ್ ಮೇಲೆ ಬಾಂಬ್ ದಾಳಿ ನಡೆಸಲಾಗಿದ್ದು, 28 ಕ್ಕೂ ಹೆಚ್ಚು ಜನರು ಸಾವನ್ನಪ್ಪಿರುವ ಘಟನೆ ಸಿರಿಯಾದಲ್ಲಿ ನಡೆದಿದೆ. ರಜೆ ಮುಗಿಸಿ ಸೈನಿಕರು ತಮ್ಮ ನೆಲೆಗಳಿಗೆ ಮರಳುತ್ತಿದ್ದಾಗ ಸೈನಿಕರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಮರಭೂಮಿ ಪ್ರದೇಶದ ಗುಹೆಗಳಲ್ಲಿ ಅಡಗಿಕೊಂಡಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರರು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ದಾಳಿಯಲ್ಲಿ ಸೈನಿಕರು ಸೇರಿದಂತೆ ಹಲವರು ಸಾವನಪ್ಪಿದ್ದಾರೆ.
Read More »ಬೆಳಗಾವಿಯಲ್ಲಿ ಮಹಿಳೆಯ ಭೀಕರ ಕೊಲೆ: ಕೊಲೆಗೆ ಕಾರಣವಾದರೂ ಏನು ?
ತಲವಾರಿನಿಂದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಘಟನೆ ಬುಧವಾರ ಬೆಳ್ಳಂಬೆಳಗ್ಗೆ ಬೆಳಗಾವಿ ಜಿಲ್ಲಾಸ್ಪತ್ರೆ ಕ್ಯಾಂಟೀನ್ ಬಳಿ ನಡೆದಿದೆ. ಬೈಲಹೊಂಗಲ ತಾಲೂಕಿನ ಮೂಗಬಸವ ಗ್ರಾಮದ ಸುಧಾರಾಣಿ ಕೊಲೆಯಾಗಿದ್ದು, ಇವರು ಜಿಲ್ಲಾಸ್ಪತ್ರೆಯಲ್ಲಿ ಸೆಕ್ಯುರಿಟಿಯಾಗಿದ್ದರು. ಈರಣ್ಣ ಬಾಬು ಜಗಜಂಪಿ ಕೊಲೆಗೈದವನು. ಹಣಕಾಸು, ಪ್ರೀತಿ-ಪ್ರೇಮವೇ ಈ ಕೊಲೆಗೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡಿದ್ದಾರೆ.
Read More »ಪೂಜ್ಯನಿಯ ತಂದೆ ಹಾಗೂ ತಾಯಿ ಅವರಿಗೆ ಸ್ಮರಿಸಿದ ಸಚಿವ ರಮೇಶ ಜಾರಕಿಹೊಳಿ.
ಶ್ರೀ ಲಕ್ಷ್ಮಣರಾವ್ ರಾಮಪ್ಪ ಜಾರಕಿಹೊಳಿ ಹಾಗೂ ಶ್ರೀಮತಿ ಭೀಮವ್ವ ಲಕ್ಷ್ಮಣರಾವ್ ಜಾರಕಿಹೊಳಿ ಅವರ ಪುಣ್ಯತಿಥಿ ; ಪೂಜ್ಯನಿಯ ತಂದೆ ಹಾಗೂ ತಾಯಿ ಅವರಿಗೆ ಸ್ಮರಿಸಿದ ಸಚಿವ ರಮೇಶ ಜಾರಕಿಹೊಳಿ ದೈವಿ ಸ್ವರೂಪಿಯಾಗಿದ್ದ ನೀವುಗಳು ನಮ್ಮನ್ನಗಲಿ 9 ವರ್ಷ ಕಳೆದವು. ನಿಮ್ಮ ಬದುಕು ಆಧರ್ಶಗಳು ನಮಗೆ ದಾರಿದೀಪವಾಗಿದ್ದು, ನಿಮ್ಮ ಸವಿ ನೆನಪು ನಮ್ಮ ಹೃದಯದಲ್ಲಿ ಸದಾ ಹಚ್ಚ್ ಹಸರಾಗಿದೆ. ನಿಮ್ಮ ಸರಳ ಸಜ್ಜನಕೆಯ ಜೀವನ, ಮಾರ್ಗದರ್ಶನ ಅವಿಸ್ಮರಣೇಯ. ಸಹಾಯ ಬಯಸಿದವರಿಗೆ ಪ್ರೀತಿ …
Read More »ರಮೇಶ್ ಜಾರಕಿಹೊಳಿ ಅವರ ಬಲಗೈ ಬಂಟನಿಗೆ ಗೆಲುವು
ಗೋಕಾಕ ತಾಲೂಕಿನ ಗುಜನಾಳ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಭೀಮಗೌಡ ಪೊಲೀಸ್ ಗೌಡರ ಭರ್ಜರಿ ಜಯ ಸಾಧಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಬೆಂಬಲಿಗರಾಗಿರುವ ಪೊಲೀಸ್ ಗೌಡರ ವಿಜಯ ಗ್ರಾಮದಲ್ಲಿ ನವೋತ್ಸಾಹ ತಂದಿದೆ.
Read More »ಗ್ರಾಮ ಪಂಚಾಯತ ಚುನಾವಣೆಯಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಡಿ.22 ರಂದು ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಬೆಂಬಲಿತ ಅಭ್ಯರ್ಥಿಗಳು ಅರಭಾವಿ ಮತಕ್ಷೇತ್ರದ 33 ಗ್ರಾಮ ಪಂಚಾಯತಿಗಳಲ್ಲಿ ಮೇಲುಗೈ ಸಾಧಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ. ನಗರದಲ್ಲಿಂದು ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಮತ ಎಣಿಕೆಯಲ್ಲಿ ಅರಭಾವಿ ಮತಕ್ಷೇತ್ರದ ಎಲ್ಲ 33 ಗ್ರಾಮ ಪಂಚಾಯತಿಗಳಲ್ಲಿ ಬಿಜೆಪಿ ಬೆಂಬಲಿತ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದ ಬಣ ಸಂಪೂರ್ಣವಾಗಿ …
Read More »ಎರಡು ವರ್ಷ ಕಳೆದರು ಮುಗಿಯದ ಚಿತ್ರದುರ್ಗ ನಗರದ ರಸ್ತೆಗಳು; ಅಪಘಾತಗಳಿಗೆ ಇನ್ನೆಷ್ಟು ಬಲಿ!
ಚಿತ್ರದುರ್ಗ : ಅದು ಐತಿಹಾಸಿಕ ಖ್ಯಾತಿ ಹೊಂದಿರೋ ಹೆಸರಾಂತ ನಗರ ಚಿತ್ರದುರ್ಗ. ಅಲ್ಲಿ ರಸ್ತೆಗಳ ಅಭಿವೃದ್ದಿ, ಅಗಲೀಕರಣ ಮಾಡೋಕೆ ಪ್ರಾರಂಭ ಮಾಡಿ ಎರಡು ವರ್ಷಗಳೇ ಕಳಿಯುತ್ತಿವೆ. ಆದರೇ ಆ ಕಾಮಗಾರಿಗಳು ಮಾತ್ರ ಮುಗಿಯುವಂತೆ ಕಾಣುತ್ತಿಲ್ಲ. ಪರಿಣಾಮ ನಗರದ ಜನರು ಕಿರಿಕಿರಿ ಅನುಭವಿಸಿ ಸಾಕಾಗಿ ಹೋಗಿದ್ದಾರೆ. ಆ ರಸ್ತೆಗಳು ಬರು ಬರುತ್ತಾ ಸಾವಿನ ಕೂಪಗಳಾಗಿ ಜನರ ಪ್ರಣವನ್ನೇ ಬಲಿ ಪಡೆಯುವಂತಾಗಿವೆ. ಇದ್ರಿಂದ ಬೇಸತ್ತ ಜನರು ಜನರ ಹಿತ ಕಾಯದ ಜಿಲ್ಲಾಡಳಿತಕ್ಕೆ ಹಿಡಿ …
Read More »ಪಂಚಾಯಿತಿ ಚುನಾವಣೆಯ ಫಲಿತಾಂಶದತ್ತ ಎಲ್ಲರ ಚಿತ್ತ3 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳ ಹಣೆಬರಹ ಗೊತ್ತಾಗಲಿದೆ.
ಬೆಂಗಳೂರು: ಮುಂದಿನ ರಾಜಕೀಯ ದಿಗ್ಸೂಚಿ ಎಂದು ಪರಿಗಣಿಸಲಾದ ಹಿನ್ನೆಲೆಯಲ್ಲಿ ವಿವಿಧ ಪಕ್ಷಗಳಿಗೆ ಪ್ರತಿಷ್ಠೆಯ ವಿಚಾರವಾಗಿರುವ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಇದೇ ತಿಂಗಳಲ್ಲಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯಿತಿಗೆ ಚುನಾವಣೆ ನಡೆದಿದ್ದು, ಇಂದು (ಡಿ.30) ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ. ಸಂಜೆಯ ವೇಳೆಗೆ ಅಂತಿಮ ಫಲಿತಾಂಶ ಸಿಗುವ ನಿರೀಕ್ಷೆ ಇದೆ. ನಮ್ಮ ನ್ಯೂಸ್18 ಕನ್ನಡದ ವೆಬ್ಸೈಟ್ನಲ್ಲಿ ನೀವು ಕ್ಷಣಕ್ಷಣಕ್ಕೂ ಕರಾರುವಾಕ್ ಫಲಿತಾಂಶದ ವಿವರವನ್ನು ಪಡೆಯಬಹುದಾಗಿದೆ. …
Read More »ವೈವಾಹಿಕ ಜೀವನಕ್ಕೆ ಕಾಲಿಟ್ಟಿ ನಟ ರಮೇಶ್ ಅರವಿಂದ್ ಪುತ್ರಿ ನಿಹಾರಿಕ
ಬೆಂಗಳೂರು, ಡಿ.28- ರಮೇಶ್ ಅರವಿಂದ್ ಪುತ್ರಿ ನಿಹಾರಿಕಾ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ರಮೇಶ್ ಅರವಿಂದ್ ಹಾಗೂ ಅರ್ಚನಾ ದಂಪತಿಗಳ ಪುತ್ರಿ ನಿಹಾರಿಕ ಅವರ ಮದುವೆ ಅಕ್ಷಯ್ ಅವರೊಂದಿಗೆ ನಡೆದಿದೆ. ನಿಹಾರಿಕ ಹಾಗೂ ಅಕ್ಷಯ್ ಒಂದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈಗ ನವಜೀವನಕ್ಕೆ ಅಡಿಯಿಟಿದ್ದಾರೆ. ಇವರ ವಿವಾಹ ಮಹೋತ್ಸವ ಎರಡು ಕುಟಂಬಗಳ ಸದಸ್ಯರ ಸಮ್ಮುಖದಲ್ಲಿ ಕೋವಿಡ್-19 ನಿಯಮಾನುಸಾರ ನಡೆಯಲಿದೆ.ಜನವರಿ ಎರಡನೇ ವಾರದಲ್ಲಿ ಆರತಕ್ಷತೆ ಆಯೋಜಿಸಲಾಗಿದ್ದು , ಅಂದು ಚಿತ್ರರಂಗ ಸೇರಿದಂತೆ ಎಲ್ಲಾ …
Read More »ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಎಂಜಿ ರಸ್ತೆ ಹಾಗೂ ಮೇಲ್ಸೇತುವೆಗಳ ಮೇಲೆ ಸಂಚಾರ ನಿಷೇಧ
ಬೆಂಗಳೂರು, – ಎಂಜಿ ರಸ್ತೆ ಹಾಗೂ ಸುತ್ತಮುತ್ತಲ ಪ್ರಮುಖ ರಸ್ತೆಗಳಲ್ಲಿ ಹೊಸ ವರ್ಷಾಚರಣೆ ನಡೆಯುವ ಸಾಧ್ಯತೆ ಇರುವುದರಿಂದ ಅದನ್ನು ತಡೆಯಲು ಸಂಚಾರ ನಿಷೇಧ ಮಾಡಲಾಗಿದ್ದು, ಜತೆಗೆ ನಗರದಾದ್ಯಂತ ಇರುವ ಎಲ್ಲ ಮೇಲ್ಸೇತುವೆಗಳ ಮೇಲೂ ಸಂಚಾರವನ್ನು ನಿರ್ಬಂಧಿಸಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಆದೇಶ ಹೊರಡಿಸಿದ್ದಾರೆ. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ರೆಸಿಡೆನ್ಸಿ ರಸ್ತೆ, ಸೆಂಟ್ ಮಾಕ್ರ್ಸ್ ರಸ್ತೆ, ಚರ್ಚ್‍ಸ್ಟ್ರೀಟ್‍ಗಳಲ್ಲಿ ಜನರು ಗುಂಪು ಸೇರುವ ಸಾಧ್ಯತೆಗಳಿವೆ. ಹಾಗಾಗಿ ಅನಿಲ್‍ಕುಂಬ್ಳೆ ವೃತ್ತದಿಂದ …
Read More »
Laxmi News 24×7