Breaking News

ಜಿಲ್ಲೆ

ಲೋಕಸಭಾ ಕ್ಷೇತ್ರಕ್ಕೆ ಇಂದೇ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆ

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ರಾಜ್ಯದ ಮೂರು ವಿಧಾನಸಭಾ ಮತ್ತು ಒಂದು ಲೋಕಸಭಾ ಕ್ಷೇತ್ರಕ್ಕೆ ಇಂದೇ ಚುನಾವಣಾ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದೆ. ಕೇಂದ್ರ ಚುನಾವಣಾ ಆಯೋಗ ಇಂದು ಸಂಜೆ ಸುದ್ದಿಗೋಷ್ಠಿ ನಡೆಸಲಿದ್ದು, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಹಾಗೂ ಪುದುಚೆರಿ ರಾಜ್ಯಗಳ ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.ಇನ್ನು ರಾಜ್ಯದ 3 ವಿಧಾನಸಭಾ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳ ಚುನಾವಣೆಗೂ ಮುಹೂರ್ತ ಫಿಕ್ಸ್ …

Read More »

ಸೈಬರ್‌ ಲೋಕದಲ್ಲಿ ‘ಬೆತ್ತಲೆ’ ಬ್ಲ್ಯಾಕ್‌ಮೇಲ್

ಬೆಂಗಳೂರು: ಅವರೊಬ್ಬ ಗ್ರಾನೈಟ್ ಉದ್ಯಮಿ. ಯುವತಿ ಹೆಸರಿನಲ್ಲಿ ಬಂದ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಿ, ಆಕೆಯ ಗುಂಗಿನಲ್ಲೇ ದಿನ ಕಳೆಯಲಾರಂಭಿಸಿದ್ದವರು. ಅಂದು ರಾತ್ರಿ ಏಕಾಏಕಿ ವಿಡಿಯೊ ಕರೆ ಮಾಡಿ ಸಲುಗೆಯಿಂದ ಮಾತನಾಡಿದ್ದ ಯುವತಿ, ‘ನಿಮ್ಮ ದೇಹ ನೋಡಬೇಕು’ ಎಂದು ಹೇಳಿ ಉದ್ಯಮಿ ಬಟ್ಟೆ ಬಿಚ್ಚಿಸಿ ಬೆತ್ತಲಾಗಿಸಿದ್ದಳು. ಬೆತ್ತಲೆ ದೃಶ್ಯವನ್ನು ಸದ್ದಿಲ್ಲದೇ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡು, ಮರುದಿನದಿಂದಲೇ ಉದ್ಯಮಿಯನ್ನು ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದಳು. ಇದು ಗ್ರಾನೈಟ್ ಉದ್ಯಮಿಯೊಬ್ಬರ ಕಥೆಯಲ್ಲ. ಕೆಲ ಗಣ್ಯರು, ಕೆಲ ಉದ್ಯಮಿಗಳು, ಕೆಲ …

Read More »

ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಜಿಲ್ಲಾ ಪ್ರವಾಸ.!

ಗೋಕಾಕ್: ಜಲ ಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಫೆ.೨೭ ರಿಂದ ಮಾ.೨ ರ ವರಗೆ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ.೨೭ ರಂದು ೧೦ ಗಂಟೆಗೆ ನಗರದ ಎನ್‌ಇಎಸ್ ಶಾಲಾ ಆವರಣದಲ್ಲಿ ನಡೆಯಲಿರುವ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು, ಸಂಜೆ ನಗರದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಫೆ.೨೮ ರಂದು ಗೋಕಾಕ ತಾಲೂಕಿನ ಜಮನಾಳ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನದ ಹತ್ತಿರ ಆಣೆಕಟ್ಟು ಸ್ಥಳ …

Read More »

ಪೆಟ್ರೋಲ್‌ – ಡಿಸೇಲ್‌ – ಗ್ಯಾಸ್‌ ಬೆಲೆ ಏರಿಕೆ ಬೆನ್ನಲ್ಲೇ ರಾಜ್ಯದ ಜನತೆಗೆ ಮತ್ತೊಂದು ಶಾಕ್

ಬೆಂಗಳೂರು: ಪೆಟ್ರೋಲ್-ಡೀಸೆಲ್, ಗ್ಯಾಸ್ ಸಿಲಿಂಡರ್ ದರ ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಬಸ್ ಪ್ರಯಾಣಿಕರಿಗೆ ಶಾಕ್ ನೀಡಲು ಮುಂದಾಗಿದೆ. ಬಸ್ ಟಿಕೆಟ್ ದರ ಹೆಚ್ಚಳ ಮಾಡಲು ಸಾರಿಗೆ ಇಲಾಖೆ ಮುಂದಾಗಿದ್ದು, ಈ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಮುಂದೆ ಪ್ರಸ್ತಾಪ ಇಡಲು ನಿರ್ಧರಿಸಿದೆ.   ಬಸ್ ಪ್ರಯಾಣ ದರ ಹೆಚ್ಚಳ ಕುರಿತು ಸುಳಿವು ನೀಡಿದ ಡಿಸಿಎಂ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಹಾಗಾಗಿ ಬಸ್ …

Read More »

ಪಂಚಮಸಾಲಿ ಸಮುದಾಯಕ್ಕೆ ಬಿಗ್‌ ಶಾಕ್:‌ ʼಮೀಸಾಲಾತಿ ಸಾಧ್ಯವಿಲ್ಲʼ ಎಂದ ರಾಜ್ಯ ಸರ್ಕಾರ..!

ಬೆಂಗಳೂರು: ಪಂಚಮಸಾಲಿ ಸಮುದಾಯವನ್ನ ಪ್ರವರ್ಗ 2ಎ ಸೇರಿಸಬೇಕು ಎಂದು ಆಗ್ರಹಿಸಿ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಮುಂದುವರೆದಿದೆ. ಈ ಮಧ್ಯೆ ರಾಜ್ಯ ಸರ್ಕಾರ ಶಾಕ್ ಪಂಚಮಸಾಲಿ ಸಮುದಾಯಕ್ಕೆ ಬಿಗ್‌ ಶಾಕ್‌ ನೀಡಿದ್ದು, ಮೀಸಲಾತಿ ಕಲ್ಪಿಸಲು ಸಾಧ್ಯವಿಲ್ಲ ಎಂದು ಸಚಿವರ ಮೂಲಕ ಸ್ಪಷ್ಟ ಸಂದೇಶ ರವಾನಿಸಿದೆ. ಹೌದು, ಸರ್ಕಾರದ ನಿಲುವನ್ನ ಧರಣಿ ನಿರತ ಮುಖಂಡರಿಗೆ ತಿಳಿಸಿದ್ದು, ನೀವು ಪಟ್ಟು ಕದಿಲಿಸದೇ ಈ ರೀತಿ ಹೋರಾಟ ಮಾಡಿದ್ರೆ ಪ್ರಯೋಜನೆ ಇಲ್ಲ. ಹೋರಾಟ …

Read More »

1.20 ಕೋಟಿ ರೂ. ಮೊತ್ತದ ಜೆಜೆಎಂ ಹಾಗೂ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಗುದ್ದಲಿ ಪೂಜೆ

ಗೋಕಾಕ : ಪೈಪಲೈನ್ ಮೂಲಕ 1242 ಮನೆಗಳಿಗೆ ಕುಡಿಯುವ ನೀರಿನ ಸೌಕರ್ಯ ತಲುಪಲಿದ್ದು, ಈ ಯೋಜನೆಗಾಗಿ ಒಂದು ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇತ್ತೀಚೆಗೆ ತಾಲೂಕಿನ ಕೌಜಲಗಿಯಲ್ಲಿ ಜರುಗಿದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನೆರವೇರಿಸಿ ಮಾತನಾಡಿದ ಅವರು, ಮನೆ ಮನೆಗೆ ಗಂಗೆ ಎಂಬ ವಿನೂತನ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದ್ದು, ಇದನ್ನು ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳುವಂತೆ ಕೋರಿದರು. ಈಗಾಗಲೇ ಜಲಜೀವನ …

Read More »

ಬಿಎಂಟಿಸಿ ಟಿಕೆಟ್ ದರ ಏರಿಕೆ ಸುಳಿವು ನೀಡಿದ ಸಚಿವ ಲಕ್ಷಣ ಸವದಿ

ಬೆಂಗಳೂರು (ಫೆ. 25): ಕೋವಿಡ್​ನಿಂದಾಗಿ ಬಿಎಂಟಿಸಿ ​ ನಷ್ಟ ಅನುಭವಿಸುತ್ತಿದ್ದು, ಟಿಕೆಟ್​ ದರ ಏರಿಕೆ ಪ್ರಸ್ತಾವನೆ ಬಂದಿದೆ. ಈ ಬಗ್ಗೆ ಚಿಂತನೆ ನಡೆಸಲಾಗಿದ್ದು,  ದರ ಏರಿಕೆ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿಗಳೇ ನಿರ್ಧರಿಸಲಿದ್ದಾರೆ ಎಂದು ಸಾರಿಗೆ ಸಚಿವರಾಗಿರುವ ಡಿಸಿಎಂ ಲಕ್ಷ್ಮಣ ಸವದಿ ತಿಳಿಸಿದ್ದಾರೆ. ಈ ಮೂಲಕ ಈ ಬಾರಿ ಬಜೆಟ್​ನಲ್ಲಿ ಬಿಎಂಟಿಸಿ ದರ ಏರಿಕೆ ಪ್ರಸ್ತಾಪ ಮುಂದಿಡುವ ಸುಳಿವು ನೀಡಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳ ಹಿಂದೆ ಕೆಎಸ್​ಆರ್​ಟಿಸಿ …

Read More »

ಕ್ರಿಕೆಟ್ ಬೆಟ್ಟಿಂಗ್ ಗೃಹ ಮಂತ್ರಿ‌ ಕಿವಿಗೂ ಬಿತ್ತು

ಬೆಳಗಾವಿ. ಕ್ರಿಕೆಟ್ ಬೆಟ್ಟಿಂಗ್ ಅಷ್ಟೇ ಅಲ್ಲ ಹವಾಲಾ ಮತ್ತಿತರ ದಂಧೆಗಳಿಗೆ ಕಡಿವಾಣ ಹಾಕಲು ಪೊಲೀಸರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಈ ದಂಗೆಯನ್ನು ಮಟ್ಟ ಹಾಕಲು ಕೇವಲ ಜಿಲ್ಲಾ ಪೊಲೀಸರು‌ ಅಷ್ಟೇ  ಅಲ್ಲ ಬೆಳಗಾವಿ ನಗರ ಪೊಲೀಸರು ತಯಾರಾಗಿ ಕುಳಿತಿದ್ದಾರೆ. ಗಮನಿಸಬೇಕಾದ  ಸಂಗತಿ ಎಂದರೆ, ಬೆಟ್ಟಿಂಗ್ ದಂಧೆ ಸಮಗ್ರ ಮಾಹಿತಿ ಈಗ  ಗೃಹ ಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಿವಿಗೂ ಬಿದ್ದಿದೆ. ಹೀಗಾಗಿ  ಈ ಪ್ರಕರಣ ತಾರ್ಕಿಕ ಅಂತ್ಯ ಕಾಣುವುದರಲ್ಲಿ ಎರಡು …

Read More »

ಅಭಿಮಾನಿಗಳ ವರ್ತನೆಗೆ ಕ್ಷಮೆ ಕೋರಿದ ‘ಡಿ ಬಾಸ್​’

ಬೆಂಗಳೂರು: ಅಭಿಮಾನಿಗಳ ವರ್ತನೆಗೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಕ್ಷಮೆ ಕೇಳಿದ್ದು, ನವರಸ ನಾಯಕ ಜಗ್ಗೇಶ್​ ಮತ್ತು ಡಿ ಬಾಸ್​ ಅಭಿಮಾನಿಗಳ ವಿವಾದ ಸುಖಾಂತ್ಯ ಕಂಡಿದೆ. ಜಗ್ಗೇಶ್ ಅವ್ರು ಹಿರಿಯರು. ಅವರೇ ಮುಂದಿರಲಿ. ಅವರ ಮೇಲೆ ಅಭಿಮಾನಿಗಳು ಮುತ್ತಿಗೆ ಹಾಕಿರೋದು ನನಗೆ ಗೊತ್ತಿರಲಿಲ್ಲ. ಅದು ಹೇಗೆ ಶುರುವಾಯ್ತು ಎಂಬುದೂ ನನಗೆ ಗೊತ್ತಿಲ್ಲ ಎಂದ ದರ್ಶನ್, ನನ್ನ ಫ್ಯಾನ್ಸ್ ನಿಂದ ನಿಮಗೆ ನೋವಾಗಿದೆ. ಅವರ ಪರವಾಗಿ ನಾನು ಕ್ಷಮೆ ಕೇಳುತ್ತೇನೆ ಎಂದು ದರ್ಶನ್ …

Read More »

Alert : ‘FDA ಸ್ಪರ್ಧಾತ್ಮಕ ಪರೀಕ್ಷೆ’ ಬರೆಯುತ್ತಿರುವ ‘ಅಭ್ಯರ್ಥಿ’ಗಳಿಗೆ ‘ಬಹುಮುಖ್ಯ ಸೂಚನೆ’ಗಳು ಹೀಗಿದೆ ನೋಡಿ, ತಪ್ಪದೇ ಪಾಲಿಸಿ

ಬೆಂಗಳೂರು : ಫೆಬ್ರವರಿ 28ರ, ಭಾನುವಾರದಂದು ಈಗಾಗಲೇ ಮುಂದೂಡಿಕೆಯಾಗಿದ್ದಂತ ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಇಂತಹ ಪರೀಕ್ಷೆಗೆ ಹಳೆಯ ಪ್ರವೇಶ ಪತ್ರ ರದ್ದು ಪಡಿಸಲಾಗಿದ್ದು, ಹೊಸ ಪ್ರವೇಶ ಪತ್ರ ಡೌನ್ ಲೋಡ್ ಗೆ ಕೆಪಿಎಸ್ಸಿ ಅನುಮತಿಸಿದೆ. ಇದೇ ಸಂದರ್ಭದಲ್ಲಿ ಪರೀಕ್ಷೆಗೆ ಹಾಜರಾಗುತ್ತಿರುವಂತ ಅಭ್ಯರ್ಥಿಗಳು ಪಾಲಿಸಬೇಕಾದಂತ ಸೂಚನೆಗಳನ್ನು ಕರ್ನಾಟಕ ಲೋಕಸೇವಾ ಆಯೋಗವು ತಿಳಿಸಿದೆ. ಅಂತಹ ಅಭ್ಯರ್ಥಿಗಳ ಸೂಚನೆಗಳು ಈ ಕೆಳಗಿನಂತಿವೆ. ಎಫ್.ಡಿ.ಎ …

Read More »