Breaking News

ಜಿಲ್ಲೆ

ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ 100 ಅಡಿ ಅಗಲದ ಜಲಪಾತ

ಬೆಂಗಳೂರು, ಮಾರ್ಚ್ 11: ಐಟಿ ಸಿಟಿ, ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಜಲಪಾತವೊಂದು ಸೃಷ್ಟಿಯಾಗಲಿದ್ದು, ಉಪ ಮುಖ್ಯಮಂತ್ರಿ ಡಾ.ಸಿ.ಎನ್ ಅಶ್ವಥ್ ನಾರಾಯಣ ಅವರು ಮಹಾ ಶಿವರಾತ್ರಿ ದಿನದಂದು ಆ ಯೋಜನೆ ಕುರಿತು ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಉದ್ಯಾನನಗರಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸ್ಯಾಂಕಿ ಕೆರೆಯ ಈಜುಕೊಳದ ಪಕ್ಕದಲ್ಲಿ ಜಲಪಾತ ನಿರ್ಮಿಸುವ ಸಂಬಂಧ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ಸ್ಥಳ ಪರಿಶೀಲನೆ ನಡೆಸಿದರು. ಈ ಮೂಲಕ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ …

Read More »

ED ಹೆಸರಲ್ಲಿ ಬ್ಯಾಂಕ್​ಗಳಿಗೆ ನಕಲಿ ಪತ್ರಗಳನ್ನು ಕಳುಹಿಸುತ್ತಿದ್ದ ಖತರ್ನಾಕ್ ವಂಚಕನೊಬ್ಬನನ್ನ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿ: ED ಹೆಸರಲ್ಲಿ ಬ್ಯಾಂಕ್​ಗಳಿಗೆ ನಕಲಿ ಪತ್ರಗಳನ್ನು ಕಳುಹಿಸುತ್ತಿದ್ದ ಖತರ್ನಾಕ್ ವಂಚಕನೊಬ್ಬನನ್ನ ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ. ಮದುಕರ್​ ಸಪಳೆ ಬಂಧಿತ ಆರೋಪಿ. ಬೆಳಗಾವಿಯ ಶಾಸ್ತ್ರೀನಗರದ ನಿವಾಸಿಯಾದ ಆರೋಪಿ ಖಾಸಗಿ ಇನ್ಶೂರೆನ್ಸ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಇವನ ಬಳಿ ಬರುವ ಗ್ರಾಹಕರಿಗೆ ಬಣ್ಣ, ಬಣ್ಣದ ಮಾತುಗಳನ್ನ ಹೇಳಿ ಅವರ ಇನ್ಶೂರೆನ್ಸ್​ ಹಣವನ್ನ ತನ್ನ ಅಕೌಂಟ್​ಗೆ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದ ಅನ್ನೋ ಆರೋಪ ಕೇಳಿ ಬಂದಿದೆ. ಹಣ ಕಳೆದುಕೊಂಡವರು ಬಂದು ಹಣ ಕೇಳಿದರೆ …

Read More »

ಜಲಸಂಪನ್ಮೂಲ ಖಾತೆಯನ್ನು ಬಾಲಚಂದ್ರ ಜಾರಕಿಹೊಳಿ‌ಗೆ ಕೊಡಬೇಕು: ಶ್ರೀಮಂತ ಪಾಟೀಲ

ಬೆಳಗಾವಿ: ಜಲಸಂಪನ್ಮೂಲ ಖಾತೆಯನ್ನು ಬಾಲಚಂದ್ರ ಜಾರಕಿಹೊಳಿ‌ಗೆ ಕೊಡಬೇಕು. ಈ ಬಗ್ಗೆ ನಾನು ಸಹ ಸಿಎಂಗೆ ಒತ್ತಾಯ ಮಾಡುತ್ತೇನೆ ಎಂದು ಸಚಿವ ಶ್ರೀಮಂತ್ ಪಾಟೀಲ ಹೇಳಿದರು. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ‌ ಹೇಳಿದಂತೆ ಸಿಡಿ ಪ್ರಕರಣದ ಬಗ್ಗೆ ಆದಷ್ಟು ಬೇಗ ಉನ್ನತ ಮಟ್ಟದ ತನಿಖೆಯಾಗಬೇಕು. ರಮೇಶ್​ ಒಳ್ಳೆಯ ಮನುಷ್ಯ. ನನ್ನ ಅಭಿಪ್ರಾಯದಂತೆ ಅವರಿಗೆ ಕ್ಲೀನ್ ಚಿಟ್​ ಸಿಗಬಹುದು. ಹೀಗಾಗಿ, ಸಮಗ್ರ ತನಿಖೆ ಆಗಬೇಕು. ಪ್ರಕರಣದಲ್ಲಿ ಯಾರಿದ್ದಾರೋ …

Read More »

ಕಮಲ -ಕೈ TWITTER ಫೈಟ್

ಬೆಂಗಳೂರು, – ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವಾಗ್ವಾದ ನಡೆದಿದೆ. ಬಿಜೆಪಿ ಒಡೆದ ಮನೆಯಲ್ಲ, ಛಿದ್ರಗೊಂಡು ಜೋಡಿಸಲಾಗದ ಮಡಕೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಶೋಕಾಸ್ ನೋಟಿಸ್ ಕಥೆ ಏನಾಯ್ತು ಎಂಬ ವರದಿಯನ್ನು ಲಗತ್ತಿಸಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದೆ. ಬಿಜೆಪಿ ನಡೆಸುತ್ತಿರುವ ಯಡಿಯೂರಪ್ಪ ಮುಕ್ತ ಬಿಜೆಪಿ ಅಭಿಯಾನದ ಮುಖವಾಣಿಯಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ವಿರುದ್ಧ ಬಿಜೆಪಿ …

Read More »

ಕೆ,ಪಿ,ಸಿ,ಸಿ ಕಾರ್ಯಧ್ಯಕ್ಷರಾದ ಸತೀಶ ಜಾರಕಿಹೊಳಿಯವರು ಅವರ ಮಕ್ಕಳೊಂದಿಗೆ ಹಳೆಯ ನೆನಪುಗಳನ್ನು ಹಂಚಿಕೊಂಡರು.

ಗೋಕಾಕ : ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ ಅವರು ಗೋಕಾಕಿನ ಕ್ರಿಂ ಕಾರ್ನರ್ ರಿಂದ ಆನಂದ ಟಾಕೀಸ್ ವರೆಗೆ ಸಾಯಂಕಾಲ ಸಮಯದಲ್ಲಿ ಸತೀಶ ಜಾರಕಿಹೊಳಿ ಅವರು ತಮ್ಮ ಸ್ನೇಹಿತರಿಗೆ ಭೇಟಿ ನೀಡಿ ತಮ್ಮ ಮಕ್ಕಳಾದ ಪುತ್ರ ರಾಹುಲ್ ಜಾರಕಿಹೊಳಿ ಮತ್ತು ಪುತ್ರಿ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ತಮ್ಮ ಗೋಕಾಕಿನ ಸ್ನೇಹಿತರಿಗೆ ಪರಿಚಯ ಮಾಡಿಸುವ ಮೂಲಕ ದಿಡೀರ್ ಭೇಟಿ ನೀಡಿದರು.  

Read More »

ಗೋಕಾಕ ಫಾಲ್ಸ್‌ನಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಆಚರಣೆ..

ಗೋಕಾಕ ಫಾಲ್ಸ್‌ನಲ್ಲಿ ಗೋಕಾಕ ಖ್ಯಾತ ಶಿಲ್ಪಿ ಜಕಣಾಚಾರಿ ಅವರಿಂದ ನಿರ್ಮಿತವಾಗಿರುವ ಐತಿಹಾಸಿಕ ತಡಸಲ ಮಹಾಲಿಂಗೇಶ್ವರ “ತಟಾಕೇಶ್ವರ” ದೇವಸ್ಥಾನದಲ್ಲಿ ಮಹಾಶಿವರಾತ್ರಿವನ್ನು ಪ್ರತಿ ವರ್ಷದಂತೆ ಇ ವರ್ಷವು ಅತಿ ವಿಜೃಂಭಣೆಯಿಂದ ಆಚರಣೆ ಮಾಡಿದಲಾಗಿತ್ತು. 1153 ನೇ ಕಾಲದಲ್ಲಿ ನಿರ್ಮಿತವಾದ ಈ ದೇವಸ್ಥಾನ ಪ್ರತಿ ಶಿಲ್ಪಗಳೂ ಐತಿಹಾಸಿಕ ಮಹತ್ವ ಸಾರುತ್ತವೆ. ಪಕ್ಕದಲ್ಲಿ ಫಾಲ್ಸ್ ಹಸಿರಿನ ನಿಸರ್ಗ ತಾಣ ಇದ್ದು ಇದರ ಮುಂದೆ ಹರಿದು ಬರುವ ಘಟಪ್ರಭೆ 134 ಕಲ್ಲಿನ ಪದರಗಳ ಮಧ್ಯೆ ಸಾಗಿ ಜಲಪಾತವಾಗಿ …

Read More »

ಸಿ. ಡಿ. ನಕಲಿ ಎಂದಾದರೆ ರಮೇಶ್ ಜಾರಕಿಹೊಳಿ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕು: ಅಶೋಕ್ ಪೂಜಾರಿ

ಚಿಕ್ಕೋಡಿ(ಮಾ.11): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರ ಈಗಾಗಲೇ ಬಿಜೆಪಿ ಶಾಸಕರು ಸಚಿವರುಗಳು ಹಾಗೂ ಜೆಡಿಎಸ್ ಬ್ಯಾಟಿಂಗ್ ಶುರು ಮಾಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿಯೇ ರಮೇಶ್ ಜಾರಕಿಹೋಳಿ ಪರ ಮಾತನಾಡಿದ ಬೆನ್ನಲ್ಲೇ, ಈಗ ಗೋಕಾಕ ಕ್ಷೇತ್ರದಲ್ಲಿ ರಮೇಶ್ ಅವರ ರಾಜಕೀಯ ವಿರೋಧಿ ಅಂತಲೇ ಗುರುತಿಸಿಕೊಂಡಿರುವ ಜೆಡಿಎಸ್ ಮುಖಂಡ ಅಶೋಕ್ ಪೂಜಾರಿ ಕೂಡ ರಮೇಶ್ ಜಾರಕಿಹೋಳಿ ಬೆಂಬಲಕ್ಕೆ ನಿಂತಿದ್ದು ಸಿ. ಡಿ. ನಕಲಿ ಎಂದಾದರೆ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕು …

Read More »

ಹಮ್ ತುಮ್ ಹಾರೆ ಸಾಥ್ ಸಾಥ್ ಹೈ ಎಂದು ರಮೇಶ್ ಜಾರಕಿಹೊಳಿ ಅವರಿಗೆ ಸಾಥ್ ನೀಡಿದ ಗೋಕಾಕ ಸವಿತಾ ನಾಭಿಕ ಅಭಿವೃದ್ಧಿ ಸಂಘ

ಗೋಕಾಕ: ರಮೇಶ್ ಜಾರಕಿಹೊಳಿ ಅವರ ಮೇಲೆ ಹೊರಸಿದ ಸಿಡಿ ಪ್ರಕರಣದ ಬಗ್ಗೆ ದಿನದಿಂದ ದಿನಕ್ಕೆ ಹೊಸ ಬೆಳವಣಿಗೆ ಗಳು ಕಂಡು ಬರುತ್ತಿವೆ. ದಿನ ಕಳೆದಂತೆ ಸಾಹುಕಾರರ ಮೇಲೆ ಜನರ ಪ್ರೀತಿ ವಿಶ್ವಾಸ ಜಾಸ್ತಿ ಆಗುತ್ತಿದೆ. ಕಳೆದ ಒಂದು ವಾರದಿಂದ ಬೆಳಗಾವಿ ಜಿಲ್ಲೆ ಯದ್ಯಂತ ಪ್ರತಿಭಟನೆ ಗಳ ಮೇಲೆ ಪ್ರತಿಭಟನೆ ನಡೆಯುತ್ತಿದ್ದು ಇಂದು ಗೋಕಾಕ ನಗರದ ನಾವಿಕ ಅಭಿವೃದ್ಧಿ ಸಂಘ ಒಂದು ಹೊಸ ಪ್ರಯತ್ನ ವನ್ನಾ ಮಾಡಿದ್ದಾರೆ. ಸಾಹುಕಾರರು ಕ್ಷೇತ್ರದ ಹಾಗೂ …

Read More »

ಶಿವರಾತ್ರಿಗೆ ಶಿವಣ್ಣನ ಭರ್ಜರಿ ಗಿಫ್ಟ್.ಹ್ಯಾಟ್ರಿಕ್ ಹೀರೋನ 125ನೇ ಸಿನಿಮಾ ಘೋಷಣೆ

ಬೆಂಗಳೂರು : ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ತಮ್ಮ ಅಭಿಮಾನಿಗಳ ಬಳಗಕ್ಕೆ ಶಿವರಾತ್ರಿ ಹಬ್ಬಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ. ಅವರ 125ನೇ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಚಂದನವನದಲ್ಲಿ ನೂರು ಸಿನಿಮಾಗಳನ್ನು ಪೂರೈಸಿ 125 ನೇ ಚಿತ್ರಕ್ಕೆ ಶಿವಣ್ಣ ಭರ್ಜರಿ ತಯಾರಿ ನಡೆಸಿದ್ದಾರೆ. ತಮ್ಮ ಹೊಸ ಸಿನಿಮಾ ಬಗ್ಗೆ ಕೌತುಕದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಸಿಹಿ ಸುದ್ದಿ ನೀಡಿದ್ದಾರೆ. ಶಿವಣ್ಣ ನಿನ್ನೆ (ಬುಧವಾರ) ಫೇಸ್‍ಬುಕ್ ವಿಡಿಯೋ ಮೂಲಕ ತಮ್ಮ ಹೊಸ ಸಿನಿಮಾ …

Read More »

ಮಂಜು ಎಲ್ಲೆಲ್ಲೋ ಮುಟ್ಟುತ್ತಾರೆ : ನಿಧಿ….?

ಬಿಗ್​ ಬಾಸ್​ ಮನೆಯಲ್ಲಿ ಏನೆಲ್ಲ ಆಗುತ್ತದೆ, ಯಾರು ಹೇಗೆ ನಡೆದುಕೊಳ್ಳುತ್ತಾರೆ ಎಂದು ಊಹೀಸೋದು ತುಂಬಾನೇ ಕಷ್ಟ. ಈಗ ಕನ್ನಡ ಬಿಗ್​ ಬಾಸ್​ ಮನೆಯಲ್ಲೂ ಅದೇ ರೀತಿ ಆಗುತ್ತಿದೆ. ಎಲ್ಲಾ ಸದಸ್ಯರು ತಮ್ಮ ಅಸಲಿ ಮುಖವನ್ನು ಅನಾವರಣ ಮಾಡುತ್ತಿದೆ. ಅದೇ ಮನೆ ಒಳಗೆ ತೆರಳಿರುವ ಪ್ರಶಾಂತ್​ ಸಂಭರಗಿ ಡಬಲ್​ ಗೇಮ್​ ಆಡುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದಕ್ಕೆ ನಿನ್ನೆ ನಡೆದ ಘಟನೆ ಹೊಸ ಉದಾಹರಣೆ. ಮಂಜು ಮತ್ತು ಶಮಂತ್​ ಉದ್ದೇಶಪೂರ್ವಕವಾಗಿ …

Read More »