ಬೆಂಗಳೂರು : ಸಿಡಿ ಯುವತಿ ಪೋಷಕರು ನೀಡಿದ ಹೇಳಿಕೆ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಡಿಕೆಶಿ ವಿರುದ್ಧ ಹರಿಹಾಯ್ದಿರುವ ರಮೇಶ್, ಮಹಾನಾಯಕ ರಾಜಕೀಯಕ್ಕೆ ನಾಲಾಯಕ್, ಕನಕಪುರದಲ್ಲಿ ನಾನು ಅವರ ವಿರುದ್ಧ ನಿಲ್ತೀನಿ. ಅವರನ್ನು ಸೋಲಿಸಲು ಹೋರಾಡ್ತೀನಿ ಎಂದಿದ್ದಾರೆ. ನನ್ನ ಬಳಿ 11 ಸಾಕ್ಷಿಗಳಿವೆ, ಡಿಕೆಶಿ ಅವರ ಮೇಲೆ ಅಟ್ರಾಸಿಟಿ ಕೇಸ್ ಹಾಕ್ತೀನಿ ಎಂದು ಸಿಡಿದೆದ್ದಿದ್ದಾರೆ
Read More »ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು ಹೆಚ್ಚಳ : ಬೆಳಗಾವಿ ಗಡಿ ರಸ್ತೆಗಳು ಬಂದ್!
ಬೆಳಗಾವಿ : ಮಹಾರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಅಬ್ಬರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಗಡಿ ಜಿಲ್ಲೆ ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಗ್ರಾಮಗಳಿಂದ ನೆರೆ ರಾಜ್ಯ ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಿಸಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಗಡಿಜಿಲ್ಲೆಯ ಗ್ರಾಮಗಳಿಂದ ಜನರು ಮಹಾರಾಷ್ಟ್ರಕ್ಕೆ ಹೋಗುತ್ತಿದ್ದಾರೆ. ಹೀಗಾಗಿ ಇದನ್ನು ತಪ್ಪಿಸಲು ಚಿಕ್ಕೋಡಿ ಹಾಗೂ ಅಥಣಿ ತಾಲೂಕಿನ ಅಧಿಕಾರಿಗಳೇ ರಸ್ತೆ ಬಂದ್ ಮಾಡಿಸಿದ್ದಾರೆ. …
Read More »ವೀಡಿಯೋದಲ್ಲಿರುವುದು ನಾನಲ್ಲ, ಗ್ರಾಫಿಕ್ಸ್ ಮಾಡಲಾಗಿದೆ ಎಂದು ಯುವತಿಯೇ ಹೇಳಿದ್ದಾಳೆ.: ರಮೇಶ್ ಜಾರಕಿಹೊಳಿ
ಬೆಂಗಳೂರು : ವೀಡಿಯೋದಲ್ಲಿರುವುದು ನಾನಲ್ಲ, ಗ್ರಾಫಿಕ್ಸ್ ಮಾಡಲಾಗಿದೆ ಎಂದು ಯುವತಿಯೇ ಹೇಳಿದ್ದಾಳೆ. ಜತೆಗೆ ಈ ವಿಷಯದಲ್ಲಿ ನಾನು ಯಾರ ಹೆಸರನ್ನು ವೈಯಕ್ತಿಕವಾಗಿ ಹೇಳುವುದಿಲ್ಲ. ಜತೆಗೆ ನಾಳೆ (ಶನಿವಾರ) ಸಂಜೆ ಇನ್ನಷ್ಟು ಮಾಹಿತಿಯನ್ನು ಮಾಧ್ಯಮ ಮತ್ತು ರಾಜ್ಯದ ಜನರ ಮುಂದೆ ಹಂಚಿಕೊಳ್ಳುತ್ತೇನೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಎಫ್‌ಐಆರ್ ಹಾಗೂ ಯುವತಿಯ ಆಡಿಯೋ ಬಿಡುಗಡೆ (ವೈರಲ್) ಬಗ್ಗೆ ಸದಾಶಿವ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಅವರು …
Read More »ಸಿಡಿ ಪ್ರಕರಣ: ‘ಮಹಾನಾಯಕ’ನ ರಾಜೀನಾಮೆಯನ್ನು ರಾಷ್ಟ್ರೀಯ ‘ಮಹಾನಾಯಕಿ’ ತಕ್ಷಣವೇ ಪಡೆಯಬೇಕು; ಬಿಜೆಪಿ ಆಗ್ರಹ
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದಲ್ಲಿ ಕೇಳಿ ಬಂದಿರುವ ಕಾಂಗ್ರೆಸ್ ‘ಮಹಾನಾಯಕ’ನ ರಾಜೀನಾಮೆಯನ್ನುಆ ಪಕ್ಷದ ಮಹಾನಾಯಕಿ ಕೂಡಲೇ ಪಡೆಯಬೇಕು ಎಂದು ಬಿಜೆಪಿ ಆಗ್ರಹಿಸಿದೆ. ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಆರಂಭದಿಂದಲೂ ಮಹಾನಾಯಕನ ಸುತ್ತಲೂ ಪ್ರಕರಣ ಗಿರಕಿ ಹೊಡೆಯುತ್ತಿತ್ತು. ಮಹಾನಾಯಕನ ಮನೆಯ ಬಳಿಗೆ ನಾನು ಬಂದಿದ್ದೇನೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಮಹಾನಾಯಕನಿಗೂ ಪ್ರಕರಣದ ಮಾಸ್ಟರ್ ಮೈಂಡ್ ಗಳಿಗೂ ಇರುವ ಸಂಬಂಧವವನ್ನು ಕರ್ನಾಟಕ ಕಾಂಗ್ರೆಸ್ ಬಹಿರಂಗಗೊಳಿಸಬೇಕು. …
Read More »ಬಿಜೆಪಿ ಟಿಕೆಟ್ ಹಂಚಿಕೆ: ತೇಜಸ್ವಿನಿ – ಮಂಗಲಾಗೆ ವಿಭಿನ್ನ ನಿಲುವು
ಬೆಂಗಳೂರು: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಾಜಿ ಕೇಂದ್ರ ಸಚಿವ ದಿವಂಗತ ಸುರೇಶ ಅಂಗಡಿ ಆವರ ಪತ್ನಿ ಮಂಗಲಾ ಅಂಗಡಿಯವರಿಗೆ ಟಿಕೆಟ್ ನೀಡಿದ ವಿಚಾರ ರಾಜ್ಯ ಬಿಜೆಪಿಯಲ್ಲಿ ಚರ್ಚೆಗೆ ಕಾರಣವಾಗಿದೆ. ಕೋವಿಡ್‌ನಿಂದ ಸುರೇಶ ಅಂಗಡಿ ಮೃತಪಟ್ಟ ಕಾರಣ ಉಪಚುನಾವಣೆ ಎದುರಾಗಿದೆ. ಈ ಕ್ಷೇತ್ರವನ್ನು ಗೆಲ್ಲುವುದು ಬಿಜೆಪಿಗೆ ಪ್ರತಿಷ್ಠೆಯ ವಿಷಯ. ಆದರೆ, ಹಿಂದೆ ದಿವಂಗತ ಎಚ್.ಎನ್. ಅನಂತ್ ಕುಮಾರ್ ಪತ್ನಿಗೆ ಟಿಕೆಟ್ ತಪ್ಪಿಸಿದ್ದು ಎಷ್ಟು ಸರಿ ಎಂಬ ‘ಯಕ್ಷ ಪ್ರಶ್ನೆ’ ಚರ್ಚೆಯ …
Read More »ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಡೀಲ್ : ಖೂಬಾ
ಬೀದರ್: ‘ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಟಿಕೆಟ್ ಹಂಚಿಕೆಯಲ್ಲಿ ಡೀಲ್ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈಗ ನನಗೂ ಈ ಸಂಶಯ ಕಾಡುತ್ತಿದೆ’ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಹೇಳಿದರು. ‘ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಬಿಜೆಪಿ ಟಿಕೆಟ್‌ಅನ್ನು ಈ ತಾಲ್ಲೂಕು ಹಾಗೂ ಬೀದರ್ ಜಿಲ್ಲೆಯವರನ್ನು ಬಿಟ್ಟು ಬೇರೆ ಜಿಲ್ಲೆಯವರಿಗೆ ಕೊಡಲಾಗಿದೆ. ಡೀಲ್ ಆರೋಪ ಸತ್ಯವೋ, ಮಿಥ್ಯವೋ …
Read More »ವೈರಲ್ ಆಡಿಯೋ, ಎಫ್‌ಐಆರ್‌ಗೆ ಹೆದರಲ್ಲ ಎಂದ ರಮೇಶ್ ಜಾರಕಿಹೊಳಿ
ಬೆಂಗಳೂರು, ಮಾರ್ಚ್ 26: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಪೂರಕವಾಗಿ ಇಂದು ಆಡಿಯೋ ಸಂಭಾಷಣೆಯೊಂದು ಹೊರ ಬಂದಿದೆ. ಸಿಡಿಯಲ್ಲಿರುವ ಯುವತಿ ತಮ್ಮ ವಕೀಲ ಜಗದೀಶ್ ಕುಮಾರ್ ಮೂಲಕ ಪೊಲೀಸರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ರಮೇಶ್ ಜಾರಕಿಹೊಳಿ ವಿರುದ್ಧ ಎಫ್‌ಐಆರ್ ಹಾಕಿದ್ದಾರೆ. ಈ ಪ್ರಕರಣದ ಎಲ್ಲಾ ಬೆಳವಣಿಗೆ ಬಗ್ಗೆ ಮೂರು ಬಾರಿ ಮಾಧ್ಯಮಗಳ ಮುಂದೆ ಬಂದ ರಮೇಶ್ ಅವರು ಸಂಜೆ ವೇಳೆಗೆ ಆಡಿಯೋ ಹಾಗೂ …
Read More »ನಾಳೆ 4-6 ಗಂಟೆವರೆಗೆ ರಮೇಶ್ ಜಾರಕಿಹೊಳಿ ಸಿಡಿಸುವ ಮಹಾ ಬಾಂಬ್ ಮೇಲೆ ಎಲ್ಲರ ಚಿತ್ತ
ಬೆಂಗಳೂರು: ಸಿಡಿ ಲೇಡಿ ಎನ್ನಲಾದ ಯುವತಿ ಆಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಪ್ರಸ್ತಾಪಿಸಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ಗೆ ಒಳ್ಳೆಯದಾಗಲಿ, ಆಡಿಯೋದಲ್ಲಿ ಅವರ ಹೆಸರಿದ್ದ ಮಾತ್ರಕ್ಕೆ ಅವರು ಅಪರಾಧಿಯಲ್ಲ ಎಂದು ಹೇಳಿದ್ದಾರೆ. ಸಿಡಿಯಲ್ಲಿದ್ದ ಯುವತಿ ಆಡಿಯೋ ವೈರಲ್ ಹಿನ್ನೆಲೆಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಡಿ.ಕೆ.ಶಿವಕುಮಾರ್ ನನ್ನ ಹಳೇ ಸ್ನೇಹಿತ. ಅವರಿಗೆ ಒಳ್ಳೆಯದಾಗಲಿ. ಆಡಿಯೋದಲ್ಲಿ ಹೆಸರಿದ್ದ ಮಾತ್ರಕ್ಕೆ ಅವರು ಆರೋಪಿಯಲ್ಲ. ಅವರು ಕೆಪಿಸಿಸಿ ಅಧ್ಯಕ್ಷ …
Read More »ರಾಜ್ಯಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್
ಬೆಳಗಾವಿ: ಕೋವಿಡ್-೧೯ ಮತ್ತೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ನೆರೆಯ ಮಹಾರಾಷ್ಟ್ರದಿಂದ ಆಗಮಿಸುವ ಎಲ್ಲ ಪ್ರಯಾಣಿಕರು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ರಾಜ್ಯದಾದ್ಯಂತ ಕೋವಿಡ್ ಹರಡುವಿಕೆ ತಡೆಗಟ್ಟಲು ಅಂತರ್ ರಾಜ್ಯ ಗಡಿಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ನೆರೆಯ ರಾಜ್ಯದಿಂದ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ತಪಾಸಣಾ ವರದಿಯನ್ನು ನೀಡಬೇಕು ಎಂದು …
Read More »ಹೊಳಿ ದಿನವೇ ನಾಮಪತ್ರ, ಜನಸಾಮಾನ್ಯರ ಸಮಸ್ಯೆಗಳೇ ಚುನಾವಣೆ ಅಜೆಂಡಾ: ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ
ನನ್ನ ಮೇಲೆ ನಂಬಿಕೆ ಇರಿಸಿ ಎಐಸಿಸಿ ವರಿಷ್ಠರು ಲೋಕಸಭೆಗೆ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದ್ದಾರೆ. ಸೋಮವಾರ ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಎಸ್.ಆರ್.ಪಾಟೀಲ ಸೇರಿದಂತೆ ನಮ್ಮ ರಾಜ್ಯದ ನಾಯಕರು ಈ ವೇಳೆ ಹಾಜರಿರಲಿದ್ದಾರೆ. ಸಿಡಿ ಕೇಸಗೂ ನಮಗೂ ಸಂಬಂಧವಿಲ್ಲ, ನಮ್ಮ ಗೆಲುವಿಗೆ ಯಾವ ಅಡೆತಡೆಗಳೂ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ, ಮಾಜಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾಜಿ ಸಚಿವ …
Read More »
Laxmi News 24×7