ಚಿತ್ರದುರ್ಗ: ಕೋವಿಡ್ ಮೊದಲ ಅಲೆಯ ವೇಳೆ ಬಡತನ ರೇಖೆಗಿಂತ ಕಡಿಮೆ ಇರುವ ಜನರನ್ನು ಕಳೆದ ವರ್ಷ ಗುರುತಿಸಿ ಮುರುಘಾಮಠದಿಂದ ಆಹಾರ ಕಿಟ್ ವಿತರಿಸಲಾಗಿತ್ತು. ಎರಡನೇ ಅಲೆಯಲ್ಲೂ ಇದೇ ಮಾದರಿ ಅನುಸರಿಸಿದ್ದು, ಶನಿವಾರದಿಂದ ಈ ಕಾರ್ಯ ಆರಂಭವಾಗಿದೆ. ವಿವಿಧ ಸಮುದಾಯಗಳನ್ನು ಗುರುತಿಸಿರುವ ಶ್ರೀಮಠ ಸವಿತಾ ಸಮುದಾಯದ 100 ಬಡವರಿಗೆ ಅಕ್ಕಿ, ಬೇಳೆ ಹಾಗೂ ಗೋಧಿ ಹಿಟ್ಟು ಹೊಂದಿರುವ ‘ಆಹಾರ ಸಾಮಗ್ರಿ ಕಿಟ್’ಗಳನ್ನು ವಿತರಿಸಿತು. ಶಿವಮೂರ್ತಿ ಮುರುಘಾ ಶರಣರು ಇದಕ್ಕೆ ಚಾಲನೆ ನೀಡಿದರು. …
Read More »ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಶ್ರೀದೇವಿ ಹುದಲಿ ಸರಕಾರಿ ಶಾಲೆಯಶಿಕ್ಷಕಿ ಕೋವಿಡ್ ಗೆ ಬಲಿ
ಬೆಳಗಾವಿ: ಬೆಳಗಾವಿಯಲ್ಲಿ ಕೋವಿಡ್ ಅಟ್ಟಹಾಸಕ್ಕೆ ಮತ್ತೋರ್ವ ಶಿಕ್ಷಕಿ ಬಲಿಯಾಗಿದ್ದಾರೆ. ಹುದಲಿ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಮೃತ ಶಿಕ್ಷಕಿ 32 ವರ್ಷದ ಶ್ರೀದೇವಿ ಹುಕ್ಕೇರಿ ಎಂದು ತಿಳಿದುಬಂದಿದೆ. ಹುದಲಿ ಸರಕಾರಿ ಶಾಲೆಯ ಕನ್ನಡ ಭಾಷೆ ಶಿಕ್ಷಕಿಯಾಗಿ ಕೆಲಸಮಾಡುತ್ತಿದ್ದ ಶ್ರೀದೇವಿಯವರು, ರಾಜ್ಯ ಸಂಪನ್ಮೂಲ ವ್ಯಕ್ತಿಯಾಗಿ, ಬರಹಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಉಪಚುನಾವಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಶ್ರೀದೇವಿ ಅವರು ಕೆಲದಿನಗಳಿಂದ ಕೊರೊನಾ ಸೋಂಕಿನಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ತಡರಾತ್ರಿ ಕೊನೆಯುಸಿರೆಳೆದಿದ್ದಾರೆ. …
Read More »ಸೋಂಕಿತರು ಇನ್ನು ಮುಂದೆ ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ನಲ್ಲಿರಬೇಕು ; ಆರೋಗ್ಯ ಸಚಿವರು
ಬೆಂಗಳೂರು : ಸೋಂಕಿತರು ಇನ್ನು ಮುಂದೆ ಹೋಂ ಐಸೋಲೇಷನ್ ನಲ್ಲಿ ಇರುವಂತಿಲ್ಲ. ಅವರು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯಬೇಕು. ಈ ಕುರಿತು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ಹೇಳಿದ್ದಾರೆ. ಗದಗ ನಗರದ ಜಿಲ್ಲಾಡಳಿತ ಭವನದಲ್ಲಿ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿತರ ಸ್ವ್ಯಾಬ್ ಪರೀಕ್ಷೆ ವರದಿ 24 ರಿಂದ 36 ಗಂಟೆಯ ಒಳಗಾಗಿ ಸಿಗುವಂತೆ ಕ್ರಮ …
Read More »ಬೆಂಗಳೂರಿಗೆ ಬರೋ ವ್ಯಕ್ತಿಗಳಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ?
ಬೆಂಗಳೂರು: ಲಾಕ್‍ಡೌನ್ ಮುಗಿದ ಬಳಿಕ ಬೆಂಗಳೂರಿಗೆ ಬರುವ ವ್ಯಕ್ತಿಗಳಿಗೆ ಸರ್ಕಾರ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ ಮಾಡುತ್ತಾ ಎಂಬ ಪ್ರಶ್ನೆ ಈಗ ಎದ್ದಿದೆ. ಹೌದು. ಸದ್ಯ ಈಗ ಜೂನ್ 7ರವರೆಗೆ ಲಾಕ್‍ಡೌನ್ ಮುಂದುವರಿಯಲಿದ್ದು, ನಂತರ ಏನು ಎನ್ನುವುದು ತಿಳಿದು ಬಂದಿಲ್ಲ. ಲಾಕ್‍ಡೌನ್ ತೆರವಾದ ಕೂಡಲೇ ಮತ್ತೆ ಊರಿನಿಂದ ಬೆಂಗಳೂರಿಗೆ ವಲಸೆ ಆರಂಭವಾಗಲಿದೆ. ಲಾಕ್‍ಡೌನ್ ಹೇರಿದ ಬಳಿಕವೂ ಕೊರೊನಾ ನಿಯಂತ್ರಣಕ್ಕೆ ಬಾರದೇ ಇದ್ದಲ್ಲಿ ಜೂನ್ 7ರ ಬಳಿಕ ಬೆಂಗಳೂರಿಗೆ ಬರುವ ವ್ಯಕ್ತಿಗಳಿಗೆ …
Read More »ಅನುಮತಿ ಇಲ್ಲದೆ ವಿವಾಹ ಆಯೋಜನೆ- 25 ಸಾವಿರ ದಂಡ
ಚಿಕ್ಕೋಡಿ/ಬೆಳಗಾವಿ: ಅನುಮತಿ ಪಡೆಯದೇ ಸರ್ಕಾರದ ಮಾರ್ಗಸೂಚಿ ಉಲ್ಲಂಘಿಸಿ ಮದುವೆ ಸಮಾರಂಭದ ಆಯೋಜಿಸಿದ್ದಕ್ಕೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ದಾಳಿ ನಡೆಸಿ ಕುಟಂಬಕ್ಕೆ 25 ಸಾವಿರ ರೂ. ದಂಡ ವಿಧಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಮತನೂರು ಗ್ರಾಮದಲ್ಲಿ ನಡೆದಿದೆ. ಕಮತನೂರು ಗ್ರಾಮದ ವರ ಕಾಶಿನಾಥ ಕಾಡಿ ಹಾಗೂ ಅವರಗೋಳ ಗ್ರಾಮದ ವಧು ಕಾಂಚನಾ ಬಾಳಾಜಿ ಅವರ ಮದುವೆಯನ್ನು ಶುಕ್ರವಾರ ಕಮತನೂರು ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಆದರೆ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದಿರಲಿಲ್ಲ. …
Read More »ಮಕ್ಕಳ ಮನೆಗೇ ಬರಲಿದೆ ಪಠ್ಯಪುಸ್ತಕ : ಆಗಸ್ಟ್ ಅಂತ್ಯದ ವೇಳೆಗೆ ಶಾಲೆಗಳಿಂದ ರವಾನೆ
ಬೆಂಗಳೂರು : ಕೊರೊನಾ ದಿಂದಾಗಿ ಮನೆಯಲ್ಲೇ ಇರುವ ವಿದ್ಯಾರ್ಥಿಗಳ ಸ್ವಯಂ ಅಧ್ಯಯನಕ್ಕೆ ಅನುಕೂಲವಾಗುವಂತೆ ಆಗಸ್ಟ್ ಅಂತ್ಯದೊಳಗೆ ಪಠ್ಯಪುಸ್ತಕ ಪೂರೈಕೆಗೆ ಶಿಕ್ಷಣ ಇಲಾಖೆ ಮುಂದಾಗಿದೆ. 2021-22ನೇ ಸಾಲಿನ ಪಠ್ಯಪುಸ್ತಕ ಮುದ್ರಣ ಸಂಬಂಧ ಕರ್ನಾಟಕ ಪಠ್ಯಪುಸ್ತಕ ಸಂಘವು ಎಲ್ಲ ಶಾಲೆಗಳಿಂದ ಈಗಾಗಲೇ ಪುಸ್ತಕದ ಮಾಹಿತಿ ಪಡೆದಿದೆ. ಪುಸ್ತಕ ಮುದ್ರಣ ಕ್ಕಾಗಿ ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ. ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು, ಕಾರ್ಯಾದೇಶ ನೀಡಿದ 100 ದಿನಗಳೊಳಗೆ ಟೆಂಡರ್ ಪಡೆದ ಸಂಸ್ಥೆ ಪುಸ್ತಕಗಳನ್ನು ಮುದ್ರಿಸಿ, ಕರ್ನಾಟಕ …
Read More »ಕೊರೋನಾ ಸೋಂಕಿತರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಂದ ಔಷಧ ಕಿಟ್ ವಿತರಣೆ
ಮೂಡಲಗಿ: ಕೊರೋನಾ ಎರಡನೇ ಅಲೆಗೆ ಬ್ರೇಕ್ ನೀಡಲು ಸಂಕಲ್ಪ ತೊಟ್ಟಿರುವ ಕಹಾಮ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗೋಕಾಕ್ ಹಾಗೂ ಮೂಡಲಗಿ ತಾಲ್ಲೂಕಿನ ಸೋಂಕಿತರಿಗೆ ಔಷಧೀಯ ಕಿಟ್ ಗಳನ್ನು ವಿತರಿಸಲಾಯಿತು. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಕೊವಿಡ್ ಕಾಳಜಿ ಕೇಂದ್ರದಲ್ಲಿ ಶನಿವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕರ ಪರವಾಗಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ ಅವರು ವೈದ್ಯಾಧಿಕಾರಿಗಳಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಗೋಕಾಕ್ …
Read More »ಬೆಳಗಾವಿ: ಸಂಪೂರ್ಣ ಲಾಕ್‌ಡೌನ್: ಜನರಿಂದ ಉತ್ತಮ ಸ್ಪಂದನೆ
ಬೆಳಗಾವಿ: ಕೊರೊನಾ ಸೋಂಕಿನ ಸರಪಳಿ ತುಂಡರಿಸುವ ಉದ್ದೇಶದಿಂದ ಜಿಲ್ಲಾಡಳಿತ ಘೋಷಿಸಿರುವ ಸಂಪೂರ್ಣ ಲಾಕ್‌ಡೌನ್‌ಗೆ ಮೊದಲ ದಿನವಾದ ಶನಿವಾರ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಶನಿವಾರ ಬೆಳಿಗ್ಗೆ 6ರಿಂದ ಸೋಮವಾರ ಬೆಳಿಗ್ಗೆ 6ರವರೆಗೆ ಸಂಪೂರ್ಣ ಲಾಕ್‌ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ. ಅದರಂತೆ ಪೊಲೀಸರು ಅನುಷ್ಠಾನಕ್ಕೆ ಕ್ರಮ ಕೈಗೊಂಡರು. ಬ್ಯಾರಿಕೇಡ್‌ಗಳನ್ನು ಹೆಚ್ಚಿಸಿ ಸಂಚಾರ ನಿರ್ಬಂಧಿಸಿದರು. ಬಹುತೇಕರು ಮನೆಗಳಲ್ಲೇ ಉಳಿದು ಸಹಕರಿಸಿದ್ದರಿಂದ ಜಿಲ್ಲೆಯು ಸ್ತಬ್ಧವಾಗಿತ್ತು. ಆಸ್ಪತ್ರೆಗಳಿಗೆ, ಮೆಡಿಕಲ್ …
Read More »ಮಂಡ್ಯ: ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಆದೇಶ
ಮಂಡ್ಯ: ಜಿಲ್ಲೆಯಾದ್ಯಂತ ವಾರದಲ್ಲಿ ನಾಲ್ಕು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ಆದೇಶ ಹೊರಡಿಸಿದ್ದಾರೆ. ಭಾನುವಾರ, ಸೋಮವಾರ, ಗುರುವಾರ ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಎಂದಿನಂತೆ ಅವಕಾಶ ಇರಲಿದೆ. ಉಳಿದಂತೆ ಮಂಗಳವಾರ, ಬುಧವಾರ, ಶುಕ್ರವಾರ ಹಾಗೂ ಶನಿವಾರ ಸಂಪೂರ್ಣ ಲಾಕ್ ಡೌನ್ ಇರಲಿದೆ. ಅಂದು ಹೋಟೆಲ್ ಪಾರ್ಸೆಲ್ ಗೆ ಮಾತ್ರ ಅವಕಾಶ ಕಲ್ಪಿಸಿ ಆದೇಶಿಸಿದ್ದಾರೆ.
Read More »ಕೋವಿಡ್ ಲಸಿಕೆಯ 2ನೇ ಡೋಸ್ ನೀಡಲು ತರ್ಕಬದ್ಧ ನೀತಿ ಜಾರಿಗೊಳಿಸಿ: ಹೈಕೋರ್ಟ್
ಬೆಂಗಳೂರು, ಮೇ 21: ರಾಜ್ಯದಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ನೀಡಲು ತರ್ಕಬದ್ಧ ನೀತಿಯನ್ನು ಜಾರಿಗೊಳಿಸಿ ಎಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಮೇ 25ರಂದು ತರ್ಕಬದ್ಧವಾದ ಲಸಿಕೆ ನೀತಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ರಾಜ್ಯದಲ್ಲಿ ಕೋವಿಡ್ ಲಸಿಕೆಯ ವ್ಯಾಪಕ ಕೊರತೆಯಿದೆ ಎಂಬ ವಿಚಾರವನ್ನು ಮನಗಂಡ ಮೇಲೆ ನ್ಯಾಯಾಲಯವು …
Read More »
Laxmi News 24×7