Breaking News

ಜಿಲ್ಲೆ

ಇವತ್ತಿಂದ ಬಿಜೆಪಿ ಅವನತಿ ಆರಂಭ, ಪಕ್ಷ ಸರ್ವನಾಶ: ರುದ್ರಮುನಿ ಸ್ವಾಮೀಜಿ

ಬೆಂಗಳೂರು: ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ವೀರಶೈವ- ಲಿಂಗಾಯತ ನಾಯಕ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್​​ ಮುಂದುವರಿಸಬೇಕು. ಈಗ ಪಡೆದಿರುವ ರಾಜಿನಾಮೆಯನ್ನು ವಾಪಸ್​ ಪಡೆಯಬೇಕು ಎಂದು ರುದ್ರಮುನಿ ಸ್ವಾಮೀಜಿ ಮಂಗಳವಾರ ಬಿಜೆಪಿಯ ಹೈಕಮಾಂಡ್​ ವಿರುದ್ದ ಗುಡುಗಿದ್ದಾರೆ. ಮುಖ್ಯಮಂತ್ರಿಸ್ಥಾನದಿಂದ ಬಿಎಸ್​ ಯಡಿಯೂರಪ್ಪ ಅವರನ್ನು ಇಳಿಸಿ ಇಡೀ ರಾಜ್ಯದಲ್ಲೇ ಅತ್ಯಂತ ಪ್ರಬಲ ಸಮುದಾಯವನ್ನು ಎದುರು ಹಾಕಿಕೊಳ್ಳಲಾಗಿದೆ. ಈ ಕಾರಣದಿಂದ ಪಕ್ಷಕ್ಕೆ ನಷ್ಟವಾಗುತ್ತದೆ ಎಂದು ಹೇಳಿದರು. ಯಡಿಯೂರಪ್ಪ ಅವರು ಕೇವಲ ಲಿಂಗಾಯತರ ನಾಯಕರಾಗಿ ಮಾತ್ರ ಇರಲಿಲ್ಲ, …

Read More »

ರಾಜಕೀಯ ಜಂಜಾಟಕ್ಕೆ ಬ್ರೇಕ್​: ಹಸುಗಳನ್ನು ಮುದ್ದಾಡಿದ ಬಿಎಸ್​ವೈ

ಬೆಂಗಳೂರು: ಬಿಜೆಪಿ ಕಟ್ಟಾಳು ಬಿಎಸ್​ ಯಡಿಯೂರಪ್ಪ ನಿನ್ನೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ತಾವು ರಾಜೀನಾಮೆ ನಿರ್ಧರಿಸಿರುವುದನ್ನು ಹೇಳುವಾಗ ಯಡಿಯೂರಪ್ಪ ಗದ್ಗದಿತರಾದರು ಆ ಕ್ಷಣ ಅವರ ಅಭಿಮಾನಿಗಳಷ್ಟೇ ಅಲ್ಲದೇ ರಾಜ್ಯದ ಪ್ರತಿಯೊಬ್ಬರಿಗೂ ಬೇಸರವಾಗಿತ್ತು. ಇದೀಗ ಬಿಎಸ್​ವೈ ಅವರು ತಮ್ಮ ನಿವಾಸದಲ್ಲಿ ಕಾಲಕಳೆಯುತ್ತಿದ್ದು, ಬೆಳ್ಳಂಬೆಳಿಗ್ಗೆ ನಿವಾಸದಲ್ಲಿರುವ ಹಸುಗಳನ್ನು ಮುದ್ದಾಡಿದ್ದಾರೆ. ಸದ್ಯ ರಾಜಕೀಯ ಜಂಜಾಟಗಳನ್ನು ಬದಿಗೊತ್ತಿ, ಎಸ್.ಆರ್.ವಿಶ್ವನಾಥ್ ತಂದು ಕೊಟ್ಟಿದ್ದ ಹಸುಗಳ ಜೊತೆ ಸಮಯ ಕಳೆದಿದ್ದಾರೆ. ಇನ್ನು ಈ ಹಸುಗಳ ಮೇಲೆ ಯಡಿಯೂರಪ್ಪ …

Read More »

ಯಡಿಯೂರಪ್ಪಗೆ ವಯಸ್ಸು 75 ವರ್ಷ, ಅವರಿಗೆ ಮದುವೆ ಮಾಡಿದ್ರೆ ಇಬ್ರು ಮಕ್ಕಳಾಗ್ತಾರೆ – ಕಾಂಗ್ರೆಸ್ ಎಂಎಲ್ಸಿ ಸಿ.ಎಂ. ಇಬ್ರಾಹಿಂ

ಬೆಂಗಳೂರು: ಕೇರಳದಲ್ಲಿ ಶ್ರೀಧರನ್ 80 ವರ್ಷದ ಮುದಿಯಾ, ಅವರನ್ನೇ ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ್ದರು. ಆದರೆ ಇಲ್ಲಿ ಯಡಿಯೂರಪ್ಪಗೆ 75 ವರ್ಷ ವಯಸ್ಸು. ಇಲ್ಲಿ ವಯಸ್ಸಾಯ್ತು ಅಂತ ಕಿತ್ತು ಹಾಕಿದ್ದಾರೆ. ಯಡಿಯೂರಪ್ಪ ಅವರಿಗೆ ಮದುವೆ ಮಾಡಿದ್ರೆ ಇಬ್ರು ಮಕ್ಕಳಾಗ್ತಾರೆ ಅಂತ ಕಾಂಗ್ರೆಸ್ ಎಂಎಲ್ಸಿ ಸಿ.ಎಂ.ಇಬ್ರಾಹಿಂ ಹೇಳಿಕೆ ನೀಡಿದ್ದಾರೆ. ಆರೂವರೆ ಕೋಟಿ ಜನರಿರುವ ರಾಜ್ಯದಲ್ಲಿ ಬದಲಾವಣೆ ಸಹಿಸಲ್ಲ. ಏಕಾಏಕಿ ರಾಜಕೀಯ ಒತ್ತಡ ಹಾಕಿ ಪಡೆಯೋದು ಸರಿಯಲ್ಲ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ. ಅಕ್ಟೋಬರ್​ನಲ್ಲಿ ಅಲ್ಪಸಂಖ್ಯಾತರ …

Read More »

ಸಚಿವ ಸ್ಥಾನ ಸಿಗದಿದ್ರೆ ಎಲ್ಲಾ ಅಳಲನ್ನು ಮುಂದಿನ ದಿನಗಳಲ್ಲಿ ತೋಡಿಕೊಳ್ತೇನೆ -ಬಿಜೆಪಿ ಶಾಸಕ ದುರ್ಯೋಧನ ಐಹೊಳೆ

ಬೆಳಗಾವಿ: ನಾನು 3 ಬಾರಿ ಶಾಸಕನಾಗಿದ್ದೇನೆ, ದಲಿತನೂ ಆಗಿದ್ದೇನೆ. ಈ ಬಾರಿ ನನಗೂ ಸಚಿವ ಸ್ಥಾನವನ್ನು ನೀಡಬೇಕು ಅಂತ ಹೇಳಿಕೆ ನೀಡಿದ ಜಿಲ್ಲೆಯ ರಾಯಬಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ, ಕಳೆದ 25 ವರ್ಷಗಳಿಂದ ರಾಯಬಾಗ ಮತಕ್ಷೇತ್ರಕ್ಕೆ ಸಚಿವ ಸ್ಥಾನ ಸಿಕ್ಕಿಲ್ಲ. ಕಳೆದ ಬಾರಿಯೂ ನನ್ನನ್ನ ಕಡೆಗಣನೆ ಮಾಡಲಾಗಿದೆ. ಈ ಬಾರಿ ನನಗೆ ಸಚಿವ ಸ್ಥಾನ ನೀಡಬೇಕು ಅಂತ ಒತ್ತಾಯಿಸಿದ್ದಾರೆ. ಇವತ್ತು ಬೆಂಗಳೂರಿಗೆ ಹೋಗುತ್ತಿದ್ದೇನೆ. ಹೈಕಮಾಂಡ್ ಭೇಟಿಯಾಗಿ ಸಚಿವ …

Read More »

ಛಲದಂಕಮಲ್ಲನ ಹೋರಾಟದ ಹಾದಿ

ಬೆಂಗಳೂರು: ರಾಜ್ಯ ರಾಜಕಾರಣದ ಇತಿಹಾಸದಲ್ಲಿ ಆಯಾ ಕಾಲಘಟ್ಟದಲ್ಲಿ ರಾಜ್ಯವನ್ನಾಳಿದ ನಾಯಕರು ತಮ್ಮದೇ ಆದ ಛಾಪು ಮೂಡಿಸಿದ್ದು, ಜನನಾಯಕ ರಾಗಿ, ಸಮುದಾಯದ ನಾಯಕರಾಗಿ ಗುರುತಿಸಿ ಕೊಂಡಿದ್ದು, ಇನ್ನೂ ರಾಜ್ಯದ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ಪ್ರಸ್ತುತ ರಾಜ್ಯ ರಾಜಕಾರಣದಲ್ಲಿ ತೆರೆಯ ಹಿಂದೆ ಸರಿಯುವ ಪ್ರಮುಖ ನಾಯಕರಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರದಿ ಬಂದಿದೆ. ಹೋರಾಟದಿಂದಲೇ ಅಧಿಕಾರಕ್ಕೆ ಬಂದು, ಅಧಿಕಾರ ನಡೆಸುವಾಗಲೂ ಹೋರಾಟ ನಡೆಸುತ್ತಲೇ ಅಧಿಕಾರ ನಡೆಸುವಂತಾಯಿತು. ಪ್ರತಿಪಕ್ಷದ ನಾಯಕನಾಗಿ ಆಡಳಿತ ಪಕ್ಷದ ವಿರುದ್ದ …

Read More »

ಬೆಳಗಾವಿ: ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭೇಟಿ ನೀಡಿ ಪರಿಶೀಲನೆ

ಬೆಳಗಾವಿ: ಜಿಲ್ಲೆಯ ನೆರೆ ಪೀಡಿತ ಪ್ರದೇಶಗಳಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯ ಖಾನಾಪುರ ಪಟ್ಟಣದಲ್ಲಿ ಪೊಲೀಸ್ ತರಬೇತಿ ಶಾಲೆ ಬಳಿಯ ಸೇತುವೆಯನ್ನು ವೀಕ್ಷಣೆ ಮಾಡಿ, ದುರ್ಗಾನಗರದಲ್ಲಿ ನೆರೆಯಿಂದ ಮುಳಗಡೆಯಾಗಿದ್ದ ಮನೆಗಳನ್ನು ವೀಕ್ಷಿಸಿದರು. ಈ ನಡುವೆ ನೆರೆ ಸಂತ್ರಸ್ತರ ಅಳಲನ್ನು ಆಲಿಸಿದರು. ಅಲ್ಲದೇ ಮಲಪ್ರಭಾ ನದಿಯಿಂದ ಮುಳುಗಡೆಯಾಗಿದ್ದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಮನೆಗೂ ಭೇಟಿ ನೀಡಿದರು. ನೆರೆ ಪೀಡಿತ ಪ್ರದೇಶಗಳನ್ನು ವೀಕ್ಷಿಸಿದ ಸಿದ್ದರಾಮಯ್ಯ …

Read More »

ಇಂದು ಸಂಜೆ ಬಿಜೆಪಿ ಶಾಸಕಾಂಗ ಸಭೆ: ಇಂದೇ ನೂತನ ಸಿಎಂ ಆಯ್ಕೆ ಸಾಧ್ಯತೆ

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಬಿಜೆಪಿಯಲ್ಲಿ ನೂತನ ನಾಯಕನ ಆಯ್ಕೆಗೆ ಕಸರತ್ತು ಆರಂಭವಾಗಿದೆ. ಸಿಎಂ ಕುರ್ಚಿ ರೇಸ್ ನಲ್ಲಿ ಈಗಾಗಲೇ ಮೂರು- ನಾಲ್ಕು ಜನರ ಹೆಸರು ಕೇಳಿಬರುತ್ತಿದ್ದು, ‘ಇವರ್ ಬಿಟ್ಟು ಅವರ್ ಬಿಟ್ಟು ಮತ್ಯಾರು’ ಎಂಬ ಪರಿಸ್ಥಿತಿಗೆ ಬಂದಿದೆ. ಇದರ ನಡುವೆ ಇಂದು (ಜು.27) ಸಂಜೆ 7.30 ಕ್ಕೆ ಬಿಜೆಪಿ ಶಾಸಕಾಂಗ ಸಭೆ ಕರೆಯಲಾಗಿದೆ. ನಗರದ ಖಾಸಗಿ ಹೋಟೆಲ್ ನಲ್ಲಿ ಶಾಸಕಾಂಗ ಪಕ್ಷದ ಸಭೆ …

Read More »

ಹೆದರಿಸಿ ಯಡಿಯೂರಪ್ಪನವರ ರಾಜೀನಾಮೆ ಪಡೆಯಲಾಗಿದೆ: ಸಿದ್ದರಾಮಯ್ಯ ಟೀಕೆ

ಬೆಳಗಾವಿ: ‘ಬಿಜೆಪಿ ಹೈಕಮಾಂಡ್‌ನವರು ಬಿ.ಎಸ್. ಯಡಿಯೂರಪ್ಪ ಅವರನ್ನು ಹೆದರಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದಾರೆ. ಯಡಿಯೂರಪ್ಪ ಸ್ವಇಚ್ಛೆಯಿಂದ ರಾಜೀನಾಮೆ ನೀಡಿಲ್ಲ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು. ‘ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಪ್ರವಾಹ ಬಂದಾಗ ಸಚಿವ ಸಂಪುಟ ಇರಲಿಲ್ಲ. ಈ ಬಾರಿ ಪ್ರವಾಹ ಬಂದಾಗ ರಾಜ್ಯದಲ್ಲಿ ಮುಖ್ಯಮಂತ್ರಿಯೇ ರಾಜೀನಾಮೆ ನೀಡಿದ್ದಾರೆ. ಯಡಿಯೂರಪ್ಪ ಕೇರ್‌ ಟೇಕರ್‌ ಮುಖ್ಯಮಂತ್ರಿಯಾಗಿದ್ದಾರೆ. ಈಗ ಮಂತ್ರಿಮಂಡಲವೇ ಇಲ್ಲ. ಸ್ವಲ್ಪ ದಿನ ಕಾದು ಬಳಿಕ ರಾಜೀನಾಮೆ …

Read More »

ಯಾರಾಗ್ತಾರೆ ರಾಜ್ಯ ದ ಮುಂದಿನ ಸಿಎಂ?..

ಬೆಂಗಳೂರು: ರಾಜ್ಯದ ಮುಂದಿನ ಮುಖ್ಯಮಂತ್ರಿ ಗಾದಿ ಎಂಬ ಕುತೂಹಲ ಈಗ ತೀವ್ರವಾಗಿದೆ. ಬಿಜೆಪಿ ಹೈಕಮಾಂಡ್‌ ಭಾಗವಾಗಿರುವ ನಾಯಕರು, ಹಿರಿಯ ಸಚಿವರು, ಶಾಸಕರು ಸೇರಿದಂತೆ ಹಲವರ ಹೆಸರುಗಳು ಸಂಭವನೀಯರ ಪಟ್ಟಿಯಲ್ಲಿವೆ. ಸಂಭವನೀಯರ ಪಟ್ಟಿಯಲ್ಲಿರುವರ ಸಾಮರ್ಥ್ಯ- ದೌರ್ಬಲ್ಯದ ಅಂಶಗಳೇನು ಎಂಬ ವಿವರ ಇಲ್ಲಿದೆ. ಪ್ರಲ್ಹಾದ ಜೋಶಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಉತ್ತರ ಕರ್ನಾಟಕದವರು, ಸಂಘ ಪರಿವಾರದ ನಿಷ್ಠಾವಂತ ಮತ್ತು ಪ್ರಧಾನಿ ಮೋದಿ ಅವರೊಂದಿಗಿನ ನಿಕಟ ಒಡನಾಟ ಇರುವುದು ವರದಾನವಾಗಬಹುದು. ವಿವಾದಗಳಿಲ್ಲ. …

Read More »

ಜೊಲ್ಲೆ ಮೊಟ್ಟೆ ಡೀಲ್; ರಾಜ್ಯದ ವಿವಿಧೆಡೆ ಪ್ರತಿಭಟನೆ

ಬೆಳಗಾವಿ: ಸಚಿವೆ ಶಶಿಕಲಾ ಜೊಲ್ಲೆ ಮೊಟ್ಟೆ ಡೀಲ್ ಪ್ರಕರಣಕ್ಕ ಸಂಬಂಧಿಸಿ ಇಂದು ಚಿಕ್ಕೋಡಿ ಪಟ್ಟಣದಲ್ಲಿ ಯೂಥ್ ಕಾಂಗ್ರೆಸ್ ಪ್ರತಿಭಟನೆ ನಡೆಸಿದೆ. ಚಿಕ್ಕೋಡಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದ ಯೂತ್ ಕಾಂಗ್ರೆಸ್ ಕಾರ್ಯಕರ್ತರು, ಮೊಟ್ಟೆ ಭ್ರಷ್ಟಾಚಾರದಲ್ಲಿ ತೊಡಗಿದ ಸಚಿವೆಯನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಮೊಟ್ಟೆ ಕಳ್ಳಿ ಶಶಿಕಲಾ ಜೊಲ್ಲೆಗೆ ಧಿಕ್ಕಾರ ಎಂದು ಕೂಗಿದ ಕಾರ್ಯಕರ್ತರು ಜೊಲ್ಲೆ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.     ಕಲಬುರಗಿ: …

Read More »