ಬೆಂಗಳೂರು : ರಾಜ್ಯದಲ್ಲಿ ಕೊರೋನಾ 2ನೇ ಅಲೆಯ ಇಳಿಕೆಯ ನಂತ್ರ, ಈಗ ಕೊರೋನಾ 3ನೇ ಅಲೆಯ ಆರಂಭದ ಮುನ್ಸೂಚನೆ ದೊರೆತಿದೆ. ಇದೇ ಕಾರಣದಿಂದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮಹತ್ವದ ರಾಜ್ಯ ತಾಂತ್ರಿಕ ಸಲಹಾ ಸಮಿತಿಯ ಸಭೆ ಕೂಡ ನಡೆಯುತ್ತಿದೆ. ಈ ಸಭೆಯಲ್ಲಿ ಕೊರೋನಾ ಪಾಸಿಟಿವಿಟಿ ದರ ಹೆಚ್ಚಿರುವಂತ ಜಿಲ್ಲೆಗಳಲ್ಲಿ ಕಠಿಣ ರೂಲ್ಸ್ ಜಾರಿಗೆ ಸೂಚಿಸಿದೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ( Karnataka Lockdown ) ಫಿಕ್ಸ್ …
Read More »ತಪ್ಪಿದ ಸಚಿವ ಸ್ಥಾನ; ಶಾಸಕಿ ಪೂರ್ಣಿಮಾ ಅಭಿಮಾನಿಗಳಿಂದ ಪಾದಯಾತ್ರೆ
ಚಿತ್ರದುರ್ಗ: ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಹಿರಿಯೂರು ಕ್ಷೇತ್ರದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅಭಿಮಾನಿಗಳು ಅಸಮಾಧಾನಗೊಂಡಿದ್ದು ಪಾದಯಾತ್ರೆ ನಡೆಸಿ ಅಸಾಮಾಧನ ಹೊರ ಹಾಕಿದ್ದಾರೆ. ಶಾಸಕಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ ಅಭಿಮಾನಿಗಳು, ಧರ್ಮಪುರದಿಂದ-ಹಿರಿಯೂರು ನಗರಕ್ಕೆ ಪಾದಯಾತ್ರೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿದ್ದು, ಸಾಮಾಜಿಕ ನ್ಯಾಯ, ಮಹಿಳಾ ಕೋಟಾದಡಿ ಮಂತ್ರಿಗಿರಿ ನೀಡುವಂತೆ ಆಗ್ರಹ ಪಡಿಸಿದ ಅಭಿಮಾನಿಗಳು, ಮಂತ್ರಿ ಸ್ಥಾನ ನೀಡುವುದಾಗಿ ಆಸೆ ತೋರಿಸಿ ಬೊಮ್ಮಾಯಿ ಸರ್ಕಾರ ಮೋಸ ಮಾಡಿದೆ ಎಂದು …
Read More »ವಿಷಾಹಾರ ಸೇವನೆ; ಒಂದೇ ಕುಟುಂಬದ 7 ಜನರ ಸ್ಥಿತಿ ಗಂಭೀರ
ಬಾಗಲಕೋಟೆ; ವಿಷಾಹಾರ ಸೇವಿಸಿದ ಪರಿಣಾಮ ನಾಲ್ಕು ಮಕ್ಕಳು ಸೇರಿದಂತೆ ಕುಟುಂಬದ 7 ಸದಸ್ಯರು ಅಸ್ವಸ್ಥರಾಗಿರುವ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ನಡೆದಿದೆ. ಮನೆಯಲ್ಲಿಯೇ ತಯಾರಿಸಿದ ಗೋಧಿ ಚಪಾತಿ ಸೇವಿಸಿದ ಬಳಿಕ ಕುಟುಂಬ ಸದಸ್ಯರಲ್ಲಿ ಅನಾರೋಗ್ಯ ಕಾಣಿಸಿಕೊಂಡಿದ್ದು, ವಾಂತಿ-ಭೇದಿ ಶುರುವಾಗಿದೆ. ತಾಯಿ, ಮಗ, ಸೊಸೆ, ಮೊಮ್ಮಕ್ಕಳು ಎಲ್ಲರೂ ಆಸ್ಪತ್ರೆಗೆ ದಾಖಲಾಗಿದ್ದಾರೆ. ದುಂಡವ್ವ ಮಹಾರುದ್ರಪ್ಪ (60), ಮಗ ಲಕ್ಷ್ಮಣ (38), ಸೊಸೆ ಶಾಂತಾ (28) ಮೊಮ್ಮಕ್ಕಳಾದ ತೇಜಸ್ವಿನಿ (12), ಪಲ್ಲವಿ (10), ಪ್ರಥಮ್ …
Read More »ಗಣೇಶ ಹಬ್ಬದ ಬಳಿಕ ಯಡಿಯೂರಪ್ಪ ರಾಜ್ಯ ಪ್ರವಾಸ
ಬೆಂಗಳೂರು: ‘ಪಕ್ಷದ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದು, ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿ ಮತ್ತೆ ಅಧಿಕಾರಕ್ಕೆ ತರುವ ತನಕ ವಿಶ್ರಮಿಸುವುದಿಲ್ಲ’ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ನಡೆದ ಕೊಳ್ಳೇಗಾಲ ಕ್ಷೇತ್ರದ ಬಿಎಸ್‌ಪಿ ಶಾಸಕ ಎನ್.ಮಹೇಶ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಗಣೇಶ ಹಬ್ಬದ ಬಳಿಕ ರಾಜ್ಯ ಪ್ರವಾಸ ಆರಂಭಿಸುವರು ಎಂದು ಮೂಲಗಳು ತಿಳಿಸಿವೆ. ‘ರಾಜ್ಯದಲ್ಲಿ ಪಕ್ಷದ ಸಂಘಟನೆ ದುರ್ಬಲವಾಗಿರುವ ಭಾಗದಲ್ಲಿ ಓಡಾಡಿ ಬಲಪಡಿಸುತ್ತೇನೆ. …
Read More »ಕೇಳಿದ ಪ್ರಶ್ನೆಯನ್ನೇ ಪದೇ ಪದೇ ಕೇಳಿ ಕಾಲಹರಣ ಮಾಡಿದರು: ಇ.ಡಿ ದಾಳಿ ಬಗ್ಗೆ ಬೇಗ್
ಬೆಂಗಳೂರು: ಮಾಜಿ ಸಚಿವ ರೋಷನ್ ಬೇಗ್ ಮತ್ತು ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಜಾರಿ ನಿರ್ದೇಶನಾಲಯದ(ಇ.ಡಿ) ಅಧಿಕಾರಿಗಳು ನಡೆಸಿದ್ದ ದಾಳಿ ಶುಕ್ರವಾರ ಬೆಳಗಿನ ಜಾವ ಮುಕ್ತಾಯಗೊಂಡಿದೆ. ಸತತ 23 ಗಂಟೆಗಳ ಕಾಲ ದಾಖಲೆಗಳ ಹುಡುಕಾಟ, ವಿಚಾರಣೆ ನಡೆಸಿ ಬೆಳಗಿನ ಜಾವ ಅಧಿಕಾರಿಗಳ ವಾಪಸ್ ಹೋಗಿದೆ. ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ಹೇಳಲಾಗಿದೆ. ದಾಳಿ ಬಗ್ಗೆ ಪ್ರತಿಕ್ರಿಯಿಸಿದ ರೋಷನ್ ಬೇಗ್, ‘ಅಕ್ರಮ ಹಣಕಾಸು ವ್ಯವಹಾರ(ಮನಿ ಲಾಂಡ್ರಿಂಗ್) …
Read More »ಬಿಎಸ್ವೈ ಬ್ಲೂಪ್ರಿಂಟ್ಗೆ ವಿರೋಧಿ ಬಣ ತತ್ತರ; ವಿರೋಧಿಗಳಿಗೆ ರಾಜಾಹುಲಿ ಕೊಟ್ಟ ಏಟು ಹೇಗಿದೆ?
ಬೆಂಗಳೂರು: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ನೂತನವಾಗಿ ರಾಜ್ಯ ಸಚಿವ ಸಂಪುಟ ರಚನೆ ಹಾಗೂ ಹೊಸ ಕ್ಯಾಬಿನೆಟ್ ಗಮನಿಸಿದರೆ ಪ್ರಮುಖವಾಗಿ ಒಂದು ವಿಚಾರ ಎದ್ದು ಕಾಣುತ್ತದೆ. ಅದೇನೆಂದರೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪರವರು ಅಡಿರುವ ಗೇಮ್ನಿಂದ ಬಿಎಸ್ವೈ ವಿರೋಧಿ ಬಣ ಸದ್ಯಕ್ಕೆ ಪುಲ್ ಸೈಡ್ ಲೈನ್ ಆಗಿದೆ. ರಾಜಾಹುಲಿಯ ಬ್ಲೂಪ್ರಿಂಟ್ಗೆ ಕಕ್ಕಾಬಿಕ್ಕಿಯಾಗಿ ಅಡ್ರೆಸ್ ಕಳೆದುಕೊಂಡು ಆಫೋಸಿಟ್ ಗ್ಯಾಂಗ್ನವರು ಈಗ ಎಲ್ಲಿ ಇದ್ದಾರೆ ಅನ್ನೋದೇ ಗೊತ್ತಾಗ್ತಾ ಇಲ್ಲ. ರಾಜ್ಯ ಬಿಜೆಪಿಯ …
Read More »ಎಸ್‌ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶದ ಕುರಿತಂತೆ ಇಲ್ಲಿದೆ ಮಹತ್ವದ ಮಾಹಿತಿ
ಬೆಂಗಳೂರು: ಬಹು ನಿರೀಕ್ಷಿತ 2021ರ ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟಣೆ ಕುರಿತು ಈಗಾಗಲೇ ಬಹುತೇಕ ಒಂದು ನಿರ್ಧಾರ ತಳೆಯಲಾಗಿದೆ. ಫಲಿತಾಂಶವನ್ನು ಆಗಸ್ಟ್ 10ರೊಳಗೆ ಪ್ರಕಟಿಸುವುದಾಗಿ ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿದ್ದ ಎಸ್.ಸುರೇಶ್ ಕುಮಾರ್ ಹೇಳಿದ್ದರು. ಆದರೆ, ಇದೀಗ ಸಚಿವ ಸಂಪುಟ ಬದಲಾಗಿದ್ದು, ಸಚಿವರ ನೇಮಕವಾಗಬೇಕಿದೆ. ಈ ಮಧ್ಯೆ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಗುರುವಾರ ಮಂಡಳಿ ಸದಸ್ಯರ ಸಭೆ ನಡೆಸಿದ್ದು, ಈ ಸಭೆಯಲ್ಲಿ ಫಲಿತಾಂಶವನ್ನು ಪ್ರಕಟಿಸಲು …
Read More »ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ `ED’ ದಾಳಿ ಅಂತ್ಯ : ದಾಳಿ ಬಗ್ಗೆ ಕೈ ಶಾಸಕ ಹೇಳಿದ್ದೇನು?
ಬೆಂಗಳೂರು : ಮಾಜಿ ಸಚಿವ, ಶಾಸಕ ಜಮೀರ್ ಅಹ್ಮದ್ ಖಾನ್ ಮನೆ ಮೇಲೆ ಇಡಿ ಅಧಿಕಾರಿಗಳ ದಾಳಿ ಅಂತ್ಯವಾಗಿದ್ದು, ಇಡಿ ದಾಳಿ ಕುರಿತಂತೆ ಶಾಸಕ ಜಮೀರ್ ಅಹ್ಮದ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹ್ಮದ್ ಖಾನ್, ನನ್ನ ಮನೆ ವಿಚಾರವಾಗಿ ಯಾರೋ ದೂರು ಕೊಟ್ಟಿದ್ದಾರಂತೆ ಹೀಗಾಗಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾನು ನೀಡಿದ ದಾಖಲೆಗಳು ಸರಿಯಿದ್ದ ಕಾರಣ ನನ್ನ ಮನೆಯಿಂದ ಇಡಿ ಅಧಿಕಾರಿಗಳು ವಾಪಸ್ …
Read More »ಜನತಾ ದರುಶನವನ್ನೇ ಮರೆತ ಸಿಎಂ ಬಸವರಾಜ್ ಬೊಮ್ಮಾಯಿ: ಮುಖ್ಯಮಂತ್ರಿ ನಡೆ ವಿರುದ್ದ ರೈತರ ಆಕ್ರೋಶ
ಬೆಂಗಳೂರು: ಸಿಎಂ ಆಗಿ ಒಂದು ವಾರ ಕಳೆದರೂ ಜನತಾ ದರ್ಶನದ ಕಡೆ ಗಮನ ಹರಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ನೇಮಕಗೊಂಡ ಸಿಎಂ ಬಸವರಾಜ ಬೊಮ್ಮಾಯಿ ಜನತಾ ದರ್ಶನದ ಕಡೆ ಗಮನ ಹರಿಸಿಲ್ಲವೆಂದು ಆರ್ ಟಿ ನಗರದ ನಿವಾಸದ ಬಳಿ ಬೊಮ್ಮಾಯಿ ನಡೆ ವಿರುದ್ದ ರೈತರು ಆಕ್ರೋಶಗೊಂಡಿದ್ದಾರೆ. ಸಿಎಂ ಭೇಟಿ ಸಾಧ್ಯವಾಗದೇ ಇರುವುದಕ್ಕೆ ಕೋಪಗೊಂಡ ರೈತರು, ನಾವು ಎಲ್ಲೆಲ್ಲಿಂದಲೂ ಇಲ್ಲಿಗೆ ಬಂದಿದೇವೆ, ಆದರೆ ಮುಖ್ಯಮಂತ್ರಿಗಳು ನಮ್ಮ ಅಹವಾಲು ಕೇಳುತ್ತಿಲ್ಲ …
Read More »ಳಿನ್ ಕುಮಾರ್ ಕಟೀಲ್ ಭೇಟಿ ಮಾಡಿದ ರಮೇಶ್ ಜಾರಕಿಹೊಳಿ
ಬೆಂಗಳೂರು: ನೂತನ ಸಚಿವ ಸಂಪುಟ ರಚನೆ ಬೆನ್ನಲ್ಲೆ ಬಿಜೆಪಿ ಕಚೇರಿಗೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಭೇಟಿ ನೀಡಿ, ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಜೊತೆ ಚರ್ಚೆ ನಡೆಸಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತ ನನಗೂ ಒಳ್ಳೆಯ ಕಾಲ ಬರುತ್ತದೆ ಎಂದು ಹೇಳಿಕೊಂಡಿದ್ದಾರೆ. ಮಲ್ಲೇಶ್ವರಂ ರಾಜ್ಯ ಬಿಜೆಪಿ ಕಚೇರಿಯಲ್ಲಿ ಸುಮಾರು 15 ನಿಮಿಷಗಳ ಕಾಲ ನಳಿನಕುಮಾರ್ ಕಟೀಲ್ ಅವರ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ. …
Read More »
Laxmi News 24×7