ಹಾಸನ, ಮೇ 22: “ಅಜಾನ್ ವಿಷಯದಲ್ಲಿ ಸರ್ಕಾರ ದೃಢ ನಿಲುವಿನೊಂದಿಗೆ ಅಗತ್ಯ ಕ್ರಮ ಕೈಗೊಳ್ಳದಿದ್ದಲ್ಲಿ ರಾಜ್ಯಾದ್ಯಂತ ಜೂನ್ 1ರಿಂದ ಎರಡನೇ ಸುತ್ತಿನ ಹೋರಾಟವನ್ನು ಶ್ರೀರಾಮಸೇನೆ ವತಿಯಿಂದ ಹಮ್ಮಿಕೊಳ್ಳಲಾಗುವುದು” ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಎಚ್ಚರಿಸಿದರು. ಹಾಸನದಲ್ಲಿ ಮಾತನಾಡಿದ ಅವರು, “ಸುಪ್ರೀಂಕೋರ್ಟ್ ನಿರ್ದೇಶನದಂತೆ ಮಸೀದಿಗಳಲ್ಲಿ ಅಜಾನ್ ನಿಲ್ಲಿಸಬೇಕಾಗಿದೆ ಹಾಗೂ ನಿರ್ದಿಷ್ಟ ಪ್ರಮಾಣದ ಧ್ವನಿಯೊಂದಿಗೆ ಅಜಾನ್ ಪ್ರಸಾರ ಮಾಡುವುದಕ್ಕೆ ಸೂಚನೆ ನೀಡಲಾಗಿದ್ದರೂ ಸಹ ಬಹುತೇಕ ಮಸೀದಿಗಳಲ್ಲಿ ಇದು ಪಾಲನೆ ಆಗುತ್ತಿಲ್ಲ” …
Read More »ಸಾಮ್ರಾಟರ ಬೆತ್ತಲೆ ಸತ್ಯ ಬಿಚ್ಚಿಟ್ಟ ಮುನಿರಾಜು: ಎಚ್.ಡಿ. ಕುಮಾರಸ್ವಾಮಿ
ಬೆಂಗಳೂರು: ‘ಅಶೋಕ ಅವರು ಸಾಮ್ರಾಟರಾಗಿ ಬೆಳೆಯಲು ಕಾರಣವಾದ ‘ಬೆತ್ತಲೆ ಸತ್ಯ’ದ ಹುತ್ತ ಬಿಚ್ಚಿಕೊಂಡಿದ್ದು, ಇದಕ್ಕೇನು ಹೇಳುತ್ತೀರಿ ಸಾಮ್ರಾಟರೇ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು, ‘1998ರ ವಿಧಾನಸಭೆ ಉಪ ಚುನಾವಣೆಯಲ್ಲಿ ಉತ್ತರಹಳ್ಳಿ ಕ್ಷೇತ್ರದಿಂದ ಹಾಲಿ ಕಂದಾಯ ಸಚಿವ ಆರ್.ಅಶೋಕ ಅವರು ಸ್ಪರ್ಧಿಸಿದಾಗ ಯಲಹಂಕದಿಂದ ಬಂದಿದ್ದ 1,000 ಕಾರ್ಯಕರ್ತರು ತಲಾ 5ರಿಂದ 10 ಕಳ್ಳವೋಟು ಹಾಕಿ ಅವರನ್ನು ಗೆಲ್ಲಿಸಿದ್ದರು. ಅಂಥ …
Read More »ಸಿಲಿಕಾನ್ ಸಿಟಿ ಫ್ಲೈಓವರ್‌ನಲ್ಲಿ ಭೀಕರ ಅಪಘಾತ – ಸವಾರ ಸಾವು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಫ್ಲೈಓವರ್‌ನಲ್ಲಿ ಇಂದು ಮುಂಜಾನೆಯೇ ಬೈಕ್ ಸವಾರ ಮೃತಪಟ್ಟಿದ್ದಾನೆ. ಬೆಂಗಳೂರಿನ ಜಕ್ಕೂರು ಏರೊಡ್ರಮ್ ಬಳಿ ಘಟನೆ ನಡೆದಿದ್ದು, ಏರ್‌ಪೋರ್ಟ್ ಫ್ಲೈಓವರ್ ಮೇಲೆ ಬೈಕ್‍ನಲ್ಲಿ 45 ವರ್ಷದ ಸವಾರ ಮತ್ತು ಹಿಂಬದಿಯಲ್ಲಿ 12 ವರ್ಷದ ಬಾಲಕ ಕುಳಿತುಕೊಂಡಿದ್ದ. ಬೈಕ್ ಎಡಬದಿಯಲ್ಲಿ ಹೋಗುತ್ತಿದ್ದರೂ ಕಾರೊಂದು ರಭಸವಾಗಿ ಬಂದು ಗುದ್ದಿದೆ. ಪರಿಣಾಮ ವಾಹನ ಸವಾರ ಫ್ಲೈ ಓವರ್ ಮೇಲಿಂದ ಕೆಳಗೆ ಬಿದ್ದು ಕೊನೆಯುಸಿರೆಳೆದಿದ್ದಾನೆ. ಬಾಲಕನಿಗೆ ಗಂಭೀರ ಗಾಯವಾಗಿದೆ. ಆಕ್ಸಿಡೆಂಟ್ ಆದ ಸ್ಥಳದಿಂದ …
Read More »ಗೋಕಾಕ ನಗರದಲ್ಲಿ ಹೆರಾಯಿನ್,ಗಾಂಜಾ ವಶ:ನಾಲ್ವರ ಬಂಧನ
ಗೋಕಾಕ ನಗರದಲ್ಲಿ ಹೆರಾಯಿನ್,ಗಾಂಜಾ ವಶ:ನಾಲ್ವರ ಬಂಧನನಿಷೇಧಿತ ಹೆರಾಯಿನ್ ಮಾರಾಟ ಮಾಡುತ್ತಿದ್ದ ಬೆಳಗಾವಿಯ ಮೂವರು ಮತ್ತು ಖರೀದಿಗೆ ಮುಂದಾಗಿದ್ದ ಗೋಕಾಕದ ಒಬ್ಬನನ್ನು ಗೋಕಾಕ್ ನಗರದಲ್ಲಿ ಬಂಧಿಸಿರುವ ಪೊಲೀಸರು ಭಾರಿ ಪ್ರಮಾಣದಲ್ಲಿ ಪೆನ್ನಿಯನ್ನು ವಶಪಡಿಸಿಕೊಂಡಿದ್ದಾರೆ. ಗೋಕಾಕ ಪಿಡಬ್ಲೂಡಿ ಐಬಿಯ ಹತ್ತಿರ ಬೆಳಗಾವಿಯ ಅಬ್ದುಲ್‌ಖಾದಿರ @ಜಿಯಾ ನಾಯಿಕ, ಮೋಸಿನ್ ಜಮಾದಾರ ಮತ್ತು ಸಲ್ಮಾನ ಮುಲ್ಲಾ ಇವರು ತಮ್ಮ ಕಾರ್ (ನಂಬರ ಕೆಎ-5l-ಎಮ್ ಸಿ0787 ನೇದ್ದರಲ್ಲಿ) ನಲ್ಲಿ ನಿಷೇಧಿತ ಹೇರಾಯಿನ್ (ಪೆನ್ನಿ) ಮಾದಕ ವಸ್ತು ಮತ್ತು …
Read More »ಸಂಭಾವ್ಯ ಪ್ರವಾಹ ಮತ್ತು ಅತೀವೃಷ್ಟಿ ನಿಯಂತ್ರಣ ಸಲುವಾಗಿ ಪೂರ್ವಭಾವಿ ಸಭೆ
ಗೋಕಾಕ: ನಿರಂತರ ಮಳೆ ಹಾಗೂ ಮುಂದೆ ಬರಬಹುದಾದ ಪ್ರವಾಹ ಭೀತಿಯನ್ನು ಎದುರಿಸುವ ಸಲುವಾಗಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ತಾಲೂಕಾ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ ಪರಿಶಿಷ್ಟ ಪಂಗಡ ಕಲ್ಯಾಣಾಧಿಕಾರಿಗಳಾದ ಶ್ರೀ ಬಸವರಾಜ ಕುರಿಹುಲಿ ಅವರು ತಾಲೂಕಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇಂದು ತಹಶೀಲ್ದಾರ ಕಛೇರಿಯಲ್ಲಿ ಅತಿವೃಷ್ಟಿ ಮತ್ತು ಪ್ರವಾಹ ನಿಯಂತ್ರಣದ ಬಗ್ಗೆ ಕರೆಯಲಾದ ಪೂರ್ವಭಾವಿ ಸಭೆಯಲ್ಲಿ ಪಂಚಾಯತ ಮಟ್ಟದ ನೋಡಲ್ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳನ್ನು …
Read More »ರಾಜ್ಯಕ್ಕೆ ಮೂರನೆಯ ಸ್ಥಾನ ಪಡೆದ ಗೋಕಾಕ ಮಯೂರ ಶಾಲೆಯ ವಿದ್ಯಾರ್ಥಿನಿ, ಶುಭ ಹಾರೈಸಿದ M.L.C. ಲಖನ ಜಾರಕಿಹೊಳಿ ಅವರು
ಗೋಕಾಕ:ವಿಧಾನ ಪರಿಷತ್ ಸದಸ್ಯ ಹಾಗೂ ಮಯೂರ ಶಾಲೆಯ ಅಧ್ಯಕ್ಷ ರಾದ ಲಖನ ಜಾರಕಿಹೊಳಿ ಅವರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಭ ಹಾರೈಕೆ. ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಎಲ್ಲ ಕಡೆ ಸುಮಾರು ಜನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ ಅದೇರೀತಿ ಗೋಕಾಕ ನಗರದ ಮಯೂರ ಶಾಲೆಯ ಮಕ್ಕಳು ಕೂಡ ಉತ್ತಮ ಸಾಧನೆ ಮಾಡಿದ್ದಾರೆ. ಸಂಜನಾ ಆರ್ ತುಬಚಿ,96.68 ಶೇಕಡಾ ವಾರು ಅಂಕ ಗಳಿಸಿದ್ದು ಮಯೂರ ಶಾಲೆಯ ಕೀರ್ತಿಯನ್ನು …
Read More »ಮೂಡಲಗಿ ಪಟ್ಟಣದ ವಿಶೇಷ: ಎತ್ತುಗಳ ಶರ್ಯತ್ತಿನ ರೋಮಾಂಚನ
ಬೆಳಗಾವಿ): ‘ಕರಿ ಎತ್ತು ಕಾಳಿಂಗ, ಬಿಳಿ ಎತ್ತು ಮಾಲಿಂಗ, ಸರದಾರ ನನ್ನೆತ್ತು, ಸಾರಂಗ ಬರುವಾಗ ಸರ್ಕಾರವೆಲ್ಲ ನಡುಗ್ಯಾವೊ…’ ಎಂದು ರೈತರು ಭೂಮಿಯಲ್ಲಿ ದುಡಿಯುವ ಎತ್ತುಗಳ ಬಗ್ಗೆ ವ್ಯಕ್ತಪಡಿಸುವ ಅಭಿಮಾನ-ಪ್ರೀತಿಗೆ ಪಾರವೇ ಇಲ್ಲ. ಅದರ ಮುಂದುವರಿದ ಭಾಗವಾಗಿ ಇಲ್ಲಿ ಶರ್ಯತ್ತುಗಳನ್ನು ನಡೆಸುವುದು ಇಲ್ಲಿನ ಟ್ರೆಂಡ್ ಆಗಿದೆ. ಶಿವಬೋಧರಂಗ ಜಾತ್ರೆಯಲ್ಲಿ ನಡೆಯುವ ಎತ್ತುಗಳ ಸ್ಪರ್ಧೆಯೂ ಗಮನಸೆಳೆಯುತ್ತದೆ. ಕಟ್ಟುಮಸ್ತಾದ ಎತ್ತುಗಳ ಠಾವು, ಎತ್ತುಗಳ ಮುಗದಾನು ಹಿಡಿದು ಹೆಜ್ಜೆ ಹಾಕುವ ಕುಸ್ತಿ ಪೈಲ್ವಾನರಂತಹ ರೈತರ ನಡಿಗೆಯು …
Read More »ಏಣಗಿ ಬಾಳಪ್ಪ ಕುರಿತ ಕೃತಿ ಮೇ 22ರಂದು ಬಿಡುಗಡೆ
ಬೆಳಗಾವಿ: ಜಿಲ್ಲಾ ಲೇಖಕಿಯರ ಸಂಘ, ರಂಗ ಸಂಪದ ಹಾಗೂ ಚಂದ್ರಕಾಂತ ಕುಸನೂರ ಸಾಂಸ್ಕೃತಿಕ ಪ್ರತಿಷ್ಠಾನದ ಸಹಯೋಗದಲ್ಲಿ ರಂಗಕರ್ಮಿ ಏಣಗಿ ಬಾಳಪ್ಪ ಅವರ ರಂಗಾನುಭವಗಳ ಕುರಿತು ಗಣೇಶ ಅಮೀನಗಡ ನಿರೂಪಿಸಿದ ‘ಬಣ್ಣದ ಬದುಕಿನ ಚಿನ್ನದ ದಿನಗಳು’ ಕೃತಿಯ 8ನೇ ಮುದ್ರಣದ ಬಿಡುಗಡೆ ಸಮಾರಂಭವನ್ನು ಇಲ್ಲಿನ ರಾಣಿ ಚನ್ನಮ್ಮ ವೃತ್ತ ಸಮೀಪದ ಕನ್ನಡ ಸಾಹಿತ್ಯ ಭವನದಲ್ಲಿ ಮೇ 22ರಂದು ಸಂಜೆ 4ಕ್ಕೆ ಆಯೋಜಿಸಲಾಗಿದೆ. ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಸರಜೂ ಕಾಟ್ಕರ್ ಬಿಡುಗಡೆ ಮಾಡಲಿದ್ದಾರೆ. …
Read More »ಕಾಂಗ್ರೆಸ್ ಭದ್ರಕೋಟೆಗೆ ಹೊಸ ಮುಖಗಳ ಲಗ್ಗೆ
ಚಿಕ್ಕಬಳ್ಳಾಪುರ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ರೇಷ್ಮೆ, ಹೈನುಗಾರಿಕೆ, ದ್ರಾಕ್ಷಿ ಮತ್ತು ತರಕಾರಿ ಉತ್ಪಾದನೆಯಲ್ಲಿ ಅಗ್ರಸ್ಥಾನ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆ ಮುನ್ನವೇ ರಾಜಕೀಯ ಜ್ವರ ಆರಂಭವಾಗಿದೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಜಿಲ್ಲೆಯಲ್ಲಿ ಜೆಡಿಎಸ್ ಮತ್ತು ಬಿಜೆಪಿ ಜತೆಗೆ ಸಮಾಜಸೇವಕರು ಲಗ್ಗೆ ಇಟ್ಟಿದ್ದಾರೆ. ವಿವಿಧ ಪಕ್ಷಗಳ ಹಾಲಿ ಶಾಸಕರು ಮತ್ತೂಮ್ಮೆ ಕ್ಷೇತ್ರ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ, ಸಮಾಜ ಸೇವೆ ನೆಪದಲ್ಲಿ ವಿವಿಧ ಕ್ಷೇತ್ರಗಳ ಸಾಧಕರು ರಾಜಕೀಯ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಸನ್ನದ್ಧರಾಗಿದ್ದಾರೆ. …
Read More »ಅಕ್ಕನ ಮದುವೆಗೆ ಬರುತ್ತಿದ್ದ ಎಂಬಿಬಿಎಸ್ ವಿದ್ಯಾರ್ಥಿ ರೈಲಿನಡಿ ಸಿಲುಕಿ ಸಾವು
ರಾಯಚೂರು: ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಯತ್ನಿಸಿದ ಯುವಕನೋರ್ವ ಆಯತಪ್ಪಿ ಬಿದ್ದು ಸಾವನ್ನಪ್ಪಿದ ಘಟನೆ ನಗರದ ರೈಲ್ವೆ ನಿಲ್ದಾಣದಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದೆ. ನಗರದ ಜಹೀರಾಬಾದ್ ನಿವಾಸಿ ವೆಂಕಟೇಶ್ ಮೃತ ಯುವಕನಾಗಿದ್ದಾನೆ. ಬೆಂಗಳೂರಿನಲ್ಲಿ ಎಂಬಿಬಿಎಸ್ ವಿದ್ಯಾಬ್ಯಾಸ ಮಾಡುತ್ತಿದ್ದ ವೆಂಕಟೇಶ್, ಆಹಾರ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿರಸ್ತೆದಾರ್ ಸಂಪತ್‌ಕುಮಾರ್ ಎಂಬುವರ ಮಗನಾಗಿದ್ದ. ಅಕ್ಕನ ಮದುವೆಗೆಂದು ಗುರುವಾರ ರಾತ್ರಿ ಬೆಂಗಳೂರಿನಿಂದ ರೈಲಿನ ಮೂಲಕ ರಾಯಚೂರಿಗೆ ಬರುತ್ತಿದ್ದ. ರೈಲು ಬೆಳಗಿನ ಜಾವ 3ರಿಂದ 4 ಗಂಟೆಯ …
Read More »
Laxmi News 24×7