Breaking News

ಜಿಲ್ಲೆ

ನದಿಗೆ ಹಾರಿ ಅತ್ಮಹತ್ಯೆಗೆ ಯತ್ನಿಸಿದ ಪ್ರೇಮಿಗಳು – ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣೆ

ದಾವಣಗೆರೆ: ತುಂಗಾಭದ್ರ ನದಿಗೆ ಹಾರಿ ಪ್ರೇಮಿಗಳು  ಅತ್ಮಹತ್ಯೆಗೆ ಯತ್ನಿಸಿದ ಘಟನೆ ಹೊನ್ನಾಳಿ  ಪಟ್ಟಣದಲ್ಲಿ ನಡೆದಿದೆ. ತುಂಗಾಭದ್ರ ಬ್ರಿಡ್ಜ್ ಮೇಲಿಂದ ದಾವಣಗೆರೆ ಮೂಲದ ಪ್ರೇಮಿಗಳು ನದಿಗೆ ಜಿಗಿದಿದ್ದಾರೆ. ಇದನ್ನು ಕಂಡ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ನದಿಯಲ್ಲಿ ನೀರಿನ ಮಟ್ಟ ಕಡಿಮೆ ಇದ್ದಿದ್ದರಿಂದ ಜೀವಕ್ಕೆ ಹಾನಿಯಾಗಿಲ್ಲ. ಮನೆಯಲ್ಲಿ ಇಬ್ಬರ ಮದುವೆಗೆ ಒಪ್ಪಿಗೆ ನೀಡದ ಹಿನ್ನಲೆ ಅತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು …

Read More »

ಎಲ್‌ಪಿಜಿ ಸಮಸ್ಯೆ ಬಗೆಹರಿಯುವ ವಿಶ್ವಾಸ ಇದೆ – ಬೊಮ್ಮಾಯಿ

ಬೆಂಗಳೂರು: ದೇಶದಲ್ಲಿ ಪೆಟ್ರೋಲ್, ಡೀಸೆಲ್ ಸಮಸ್ಯೆ ಇಲ್ಲ. ಎಲ್‌ಪಿಜಿ ಗಲ್ಫ್ ದೇಶಗಳಿಂದ ಬರುವುದು ನಿಂತಿದೆ. ನನ್ನ ಪ್ರಕಾರ ಅದು ಕೂಡ ಆದಷ್ಟು ಬೇಗ ಆರಂಭವಾಗಲಿದೆ. ಮುಂದಿನ ಒಂದು ವಾರದಲ್ಲಿ ಬಹುತೇಕ ಸಮಸ್ಯೆಗಳು ಪರಿಹಾರವಾಗಲಿವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ  ಅಭಿಪ್ರಾಯಪಟ್ಟರು. ದೆಹಲಿಯಲ್ಲಿ ಖಾಸಗಿ ಸುದ್ದಿ ಸಂಸ್ಥೆಗೆ ಮಾತನಾಡಿದ ಅವರು, ದೇಶದಲ್ಲಿ ಆಂತರಿಕ ಉತ್ಪಾದನೆ ಹೆಚ್ಚಳ ಮಾಡಬೇಕಾಗುತ್ತದೆ. ಲಾಜಿಸ್ಟಿಕ್ಸ್ ಹೆಚ್ಚಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ರ‍್ಕಾರ ನಿರಂತರ …

Read More »

ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಕೊಟ್ಟಿರೋ ಸಿಎ ಸೈಟ್ ವಾಪಸ್ ಪಡೆಯಬೇಕು: ಬಿಜೆಪಿ ಆಗ್ರಹ

ಬೆಂಗಳೂರು: ಕಾಂಗ್ರೆಸ್ ಭವನಕ್ಕೆ ಕಡಿಮೆ ದರದಲ್ಲಿ ಸಿಎ ನಿವೇಶನಗಳನ್ನು (CA Site) ಕೊಟ್ಟಿರೋ ವಿಚಾರ ವಿಧಾನ ಪರಿಷತ್‌ನಲ್ಲಿ ಇಂದು ಸದ್ದು ಮಾಡಿತು. ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಿಎಸ್.ಅರುಣ್ ಮಾತನಾಡಿ, ಕಾಂಗ್ರೆಸ್ ಭವನಕ್ಕೆ ಸರ್ಕಾರದ ಸಿಎ ಜಾಗ ಕೊಡಲಾಗಿದೆ. ಇದು ಹಗಲು ದರೋಡೆ. ದರ ಕಡಿಮೆ ಮಾಡಿ ಜಾಗ ಕೊಡಲಾಗಿದೆ. ರಾಜ್ಯದಲ್ಲಿ 40 ಕೋಟಿ ಮೌಲ್ಯದ ಜಾಗವನ್ನು 2 ಕೋಟಿ ಮೊತ್ತಕ್ಕೆ ಜಾಗ ಕೊಡಲಾಗಿದೆ. ಯಾವ ಆಧಾರದಲ್ಲಿ ಜಮೀನು ಕಡಿಮೆ …

Read More »

ಇಂದಿರಾ ಕ್ಯಾಂಟೀನ್‌ಗಳಲ್ಲಿ ಡಿಜಿಟಲ್ ಪೇಮೆಂಟ್ ಜಾರಿ: ಬೈರತಿ ಸುರೇಶ್

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳಲ್ಲಿ  ಡಿಜಿಟಲ್ ಪೇಮೆಂಟ್  ಜಾರಿ ಮಾಡಲು ಕ್ರಮವಹಿಸುತ್ತೇವೆ ಎಂದು ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ಜಗದೇವ್ ಗುತ್ತೇದಾರ್ ಪ್ರಶ್ನೆ ಕೇಳಿದರು. ಕಲಬುರಗಿ ಇಂದಿರಾ ಕ್ಯಾಂಟೀನ್‌ನಲ್ಲಿ ಮೆನು ಪ್ರಕಾರ ತಿಂಡಿ ಕೊಡುತ್ತಿಲ್ಲ. ಕ್ವಾಲಿಟಿ ಊಟ ಸಿಗುತ್ತಿಲ್ಲ. ಕೊಡೋ ಊಟವೂ ಸರಿಯಾಗಿಲ್ಲ. ಈ ವ್ಯವಸ್ಥೆ ಸರಿ ಮಾಡಬೇಕು. ಇಂದಿರಾ ಕ್ಯಾಂಟೀನ್‌ನಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯ ಮಾಡಿದರು. ಇದಕ್ಕೆ …

Read More »

ಚಿಕ್ಕೋಡಿ ಕೆಎಲ್ಇ ಇಂಜಿನಿಯರಿಂಗ್ ಕಾಲೇಜಿನಿನ ವಿದ್ಯಾರ್ಥಿನಿ ಹ್ಯಾಂಡಬಾಲ್ ನಲ್ಲಿ ಯುನಿವರ್ಸಿಟಿ ಬ್ಲೂ ಆಯ್ಕೆ

ಚಿಕ್ಕೋಡಿಯ ಕೆ. ಎಲ್. ಇ. ಇಂಜಿನೀಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿಧ್ಯಾರ್ಥಿನಿಯಾದ ಕು. ಸಹನಾ ಲಾಟೆ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ಹ್ಯಾಂಡಬಾಲ್ ಕ್ರೀಡೆಯಲ್ಲಿ 2025-26ನೇ ಸಾಲಿನ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿರುವುದು ಕಾಲೇಜಿಗೆ ಹೆಮ್ಮೆಯ ವಿಷಯವೆಂದು ಪ್ರಾಚಾರ್ಯರಾದ ಡಾ. ದರ್ಶನಕುಮಾರ ಬಿಳ್ಳೂರ ತಿಳಿಸಿದ್ದಾರೆ. ಈ ವಿದ್ಯಾರ್ಥಿನಿ ಕೇರಳದ ಕೊಟ್ಟಾಯಮ ಮಹಾತ್ಮಾ ಗಾಂಧಿ ವಿಶ್ವವಿದ್ಯಾಲಯದಲ್ಲಿ ಮಾರ್ಚ 22 ರಿಂದ 26 ರ ವರೆಗೆ ಜರುಗಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಹ್ಯಾಂಡಬಾಲ್ …

Read More »

ಇಸ್ಪೀಟ್ ಅಡ್ಡೆ ಮೇಲೆ ಯಮಕನಮರಡಿ ಪೊಲೀಸರ ದಾಳಿ: 9 ಜನರ ಬಂಧನ

ಬೆಳಗಾವಿ: ಜಿನರಾಳ ಗ್ರಾಮದ ಬ್ಯಾಡರಟ್ಟಿ ಕ್ರಾಸ್ ಹತ್ತಿರವಿರುವ ಅಕ್ರಮ ಇಸ್ಪೀಟ್ ಅಡ್ಡೆ ಮೇಲೆ ಯಮಕನಮರಡಿ ಪೊಲೀಸರು ದಾಳಿ ನಡೆಸಿದ್ದು, ಜೂಜಾಟದಲ್ಲಿ ನಿರತರಾಗಿದ್ದ ಒಂಬತ್ತು ಜನರನ್ನು ಬಂಧಿಸಿದ್ದಾರೆ. ಯಮಕನಮರ್ಡಿ ಸಿಪಿಐ ಜಾವೀದ್ ಮುಶಾಪುರೆ ನೇತೃತ್ವದ ಪೊಲೀಸ್ ತಂಡವು ಜಿನರಾಳ ಗ್ರಾಮದ ಹದ್ದಿಯಲ್ಲಿರುವ ಬ್ಯಾಡರಟ್ಟಿ ಕ್ರಾಸ್ ಬಳಿಯ ಡೈಕ್ ರಸ್ತೆ ಪಕ್ಕದಲ್ಲಿ ಅಕ್ರಮವಾಗಿ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ಮಿಂಚಿನ ದಾಳಿ ನಡೆಸಿದೆ. ಬಂಧಿತರಲ್ಲಿ ಹುಕ್ಕೇರಿ ತಾಲೂಕಿನ ಹೊಸೂರು, ಯರನಾಳ ನಿವಾಸಿಗಳು ಹಾಗೂ …

Read More »

ಸ್ಮೃತಿ ಇರಾನಿ ಕಾಣುತ್ತಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳಕರ್‌ ವ್ಯಂಗ್ಯ

ವಿಧಾನಸೌಧ, ಬೆಂಗಳೂರು: ಅಡುಗೆ ಅನಿಲದ ಬೆಲೆ ಏರಿಕೆ ಮಾಡುವ ಮೂಲಕ ಮಹಿಳೆಯರಿಗೆ ಉಡುಗೊರೆ ನೀಡಿರುವ ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಲು ಬಯಸುವೆ. ಈ ಬಗ್ಗೆ ಮಾತನಾಡಲು ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಕಾಣೆಸುತ್ತಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್‌ ವ್ಯಂಗ್ಯವಾಡಿದ್ದಾರೆ. ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದೆ 10, 20 ರೂಪಾಯಿ ಏರಿಕೆ ಮಾಡಿದರೂ ಸ್ಮೃತಿ ಇರಾನಿ …

Read More »

ರೇಣುಕಾಸ್ವಾಮಿ ಕೊಲೆ ಕೇಸ್​; ಆರೋಪಿ ವಿನಯ್​ ಕಪಾಳಕ್ಕೆ ಹೊಡೆದ ವಕೀಲರು

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಎ10 ಆಗಿರುವ ವಿನಯ್​ಗೆ ಅವರ ವಕೀಲರಿಂದಲೇ ಕಪಾಳ ಮೋಕ್ಷವಾಗಿರುವ ಘಟನೆ ಬೆಂಗಳೂರಿನ ಕೋರ್ಟ್​ ಆವರಣದಲ್ಲಿ ನಡೆದಿದೆ. ಎ10 ವಿನಯ್  ಸ್ಟೋನಿಬ್ರೂಕ್ ಮಾಲೀಕ. ಇತ್ತೀಚೆಗೆ ಆರೋಪಿ ವಕೀಲರ ಬದಲಾವಣೆಗೆ ಮುಂದಾಗಿದ್ದರು. ಈ ಬಗ್ಗೆ ಮತ್ತೆ ತಕರಾರು ತೆಗೆದಿದ್ದರು. ಇದರಿಂದ ಸದ್ಯ ಕೋರ್ಟ್​ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮಾ.9ರಂದು  ನಟರಾಜ್ ಅವರು ವಿನಯ್ ಪರ ವಕಾಲತ್ತು ವಹಿಸಲು ಬಂದಿದ್ದರು. ಈ ವೇಳೆ ಅವರ ಬಳಿ ಬದಲಾವಣೆ  ಬಗ್ಗೆ  …

Read More »

ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ್ದ ಅತ್ಯಾಚಾರಿಗೆ ಶಿಕ್ಷೆ ಪ್ರಕಟ

ಬೆಳಗಾವಿ: ಅಪ್ರಾಪ್ತೆ ಮೇಲೆ ಒತ್ತಾಯ ಪೂರ್ವಕವಾಗಿ ಅತ್ಯಾಚಾರ ಎಸಗಿದ್ದ ಧಾರವಾಡ ಜಿಲ್ಲೆ ಅಳ್ನಾವರ ತಾಲೂಕಿನ ಡೋರಿ ಗ್ರಾಮದ ನಿವಾಸಿ ಸಂಜಯ ವಿಠ್ಠಲ ಬೈಲೂರ(೩೬) ಎಂಬುವ ಅಪರಾಧಿಗೆ ೩೦ ವರ್ಷ ಕಾರಾಗೃಹ ಶಿಕ್ಷೆ ಹಾಗೂ ೧ ಲಕ್ಷ ರೂ.ದಂಡ ವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಸೋಮವಾರ ತೀರ್ಪು ಪ್ರಕಟಿಸಿದೆ. ಬಾಲಕಿಯನ್ನು ಪ್ರೀತಿಸುವ ನಾಟಕವಾಡಿ, ಮದುವೆಯಾಗುವುದಾಗಿ ನಂಬಿಸಿ ಪುಸಲಾಯಿಸಿ ಅಪರಾಧಿಯು ಒತ್ತಾಯ ಪೂರ್ವಕವಾಗಿ ಅತ್ಯಾಚಾರವೆಸಗಿದ್ದ ಕುರಿತು ಖಾನಾಪುರ ಪೊಲೀಸ್ ಠಾಣೆಯಲ್ಲಿ 2025ರಲ್ಲಿ ದೂರು …

Read More »

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯನ್ನು ಕೊಲೆಗೈದು ಪರಾರಿಯಾಗಿದ್ದ ಬಾಲಕ ಕೊನೆಗೂ ಅರೆಸ್ಟ್‌

ಬಳ್ಳಾರಿ: ಖಾಸಗಿ ಶಾಲಾ ಹಾಸ್ಟೆಲ್‌ನಲ್ಲಿ ಹಲ್ಲೆ ಮಾಡಿ ನಾಪತ್ತೆಯಾಗಿದ್ದ ಬಾಲಕನನ್ನು ಪೊಲೀಸರು  ಕೊನೆಗೂ ಪತ್ತೆ ಹಚ್ಚಿದ್ದಾರೆ. ಮೊನ್ನೆ ರಾತ್ರಿ ಆರೋಪಿ ಹಾಸ್ಟೆಲ್‌ನಲ್ಲಿ ಮಲಗಿದ್ದ ಎಂಟು ವಿದ್ಯಾರ್ಥಿಗಳು ಹಾಗೂ ವಾರ್ಡನ್ ಮೇಲೆ ರಾಡ್‌ನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ. ಘಟನೆಯಲ್ಲಿ ಓರ್ವ ಬಾಲಕ ಮೃತಪಟ್ಟಿದ್ದರೆ, 8 ಜನರಿಗೆ ಗಾಯವಾಗಿತ್ತು. ಆರೋಪಿ ಬಾಲಕನ ಪತ್ತೆಗಾಗಿ 7 ಪ್ರತ್ಯೇಕ ತಂಡ ರಚನೆ ಮಾಡಲಾಗಿತ್ತು. ತೀವ್ರ ಹುಡುಕಾಟ ನಡೆಸಿದ ಬಳ್ಳಾರಿ ಗ್ರಾಮೀಣ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. …

Read More »