Breaking News

ಜಿಲ್ಲೆ

ಕಾಂಗ್ರೆಸ್‌ ನಲ್ಲಿ ಡಿಕೆಶಿ ಒಂದು ತೀರ, ಸಿದ್ದರಾಮಯ್ಯ ಇನ್ನೊಂದು ತೀರ: ಸಿಎಂ

ಮೈಸೂರು: ಕಾಂಗ್ರೆಸ್ ಅಧ್ಯಕ್ಷನಾಗಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಡಿಕೆಶಿ ಅವರಿಗೆ ಪಕ್ಷದವರೇ ಬಿಡುತ್ತಿಲ್ಲ. ಕಾಂಗ್ರೆಸ್ ಪಕ್ಷದೊಳಗೆ ಆಂತರಿಕ ತಿಕ್ಕಾಟ ಶುರುವಾಗಿದೆ. ಡಿಕೆಶಿ ನಾನೊಂದು ತೀರ, ಸಿದ್ದರಾಮಯ್ಯ ಇನ್ನೊಂದು ತೀರ ಎನ್ನುತ್ತಿದ್ದಾರೆ. ಅವರ ತಟ್ಟೆಯಲ್ಲಿ ಏನಿದೆ ಎನ್ನುವುದನ್ನು ಬಿಟ್ಟು ನಮ್ಮ‌ ಬಗ್ಗೆ ಮಾತನಾಡಲು ಬರ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಡಿಕೆಶಿ ಹೇಳಿಕೆಗೆ ತಿರುಗೇಟು ನೀಡಿದರು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಮಾತಾನಾಡಿದ ಅವರು, ನಾಡಿನಲ್ಲಿ‌ ಎಲ್ಲಾ ಕಡೆ ಉತ್ತಮ ಮಳೆಯಾಗುತ್ತಿದೆ. ಕಬಿನಿ, …

Read More »

ಡಿ.ಕೆ.ಶಿವಕುಮಾರ್ ಹೇಳುದರಲ್ಲಿ ಯಾವುದೇ ತಪ್ಪಿಲ್ಲ: ಡಿ.ಕೆ.ಶಿವಕುಮಾರ್

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರಾದವರೇ ಸಿಎಂ ಆಗುವುದು ಸಂಪ್ರದಾಯ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ವಾದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.   ಖಾಸಗಿ ಟಿವಿ ಚಾನಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದವರೇ ಸಿಎಂ ಆಗಲೇಬೇಕು ಎಂದೇನಿಲ್ಲ. ಆಗದೇ ಇದ್ದವರನ್ನೂ ಮುಖ್ಯಮಂತ್ರಿಯಾಗಿ ಮಾಡಿದ ಸಂಪ್ರದಾಯ ಇದೆ. ಪಂಜಾಬಿನಲ್ಲಿ ಈ ರೀತಿ ಮಾಡಿಲ್ಲವೇ ? ಎಂದು ಪ್ರಶ್ನಿಸಿದ್ದಾರೆ.   ಯಾರು ಬೇಕಾದರೂ ಮುಖ್ಯಮಂತ್ರಿಯಾಗುತ್ತಾನೆ …

Read More »

ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸ್​; ಕೆ.ಎಸ್​ ಈಶ್ವರಪ್ಪಗೆ ಕ್ಲೀನ್ ಚಿಟ್

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಅಂತಿಮ ವರದಿಯನ್ನು ಉಡುಪಿ ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಪ್ರಕರಣದಲ್ಲಿ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪಗೆ ಕ್ಲೀನ್ ಚಿಟ್  ನೀಡಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸಿದ್ದಕ್ಕೆ ಸಾಕ್ಷ್ಯಗಳೇ ಇಲ್ಲ ಎಂದು ಅಂತಿಮ ವರದಿಯಲ್ಲಿ ಉಡುಪಿ ಪೊಲೀಸರು ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಈಶ್ವರಪ್ಪ ಅವರನ್ನು ಕರೆದು ವಿಚಾರಣೆಯನ್ನೂ ನಡೆಸಿಲ್ಲ. ಆತ್ಮಹತ್ಯೆಗೆ ಕುಮ್ಮಕ್ಕು ಎಂಬುದಕ್ಕೆ ಸಾಕ್ಷ್ಯಾಧಾರಗಳೇ ಇಲ್ಲ ಎಂದು ತನಿಖೆ ನಡೆಸಿರುವ ಉಡುಪಿ ಪೊಲೀಸರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ.

Read More »

ಬೆಳಗಾವಿ: ಹೆರಿಗೆ ವೇಳೆ ಮಗು ಸಾವು; ಬಿಮ್ಸ್ ಆಸ್ಪತ್ರೆಯಲ್ಲಿ ಸಂಬಂಧಿಗಳ ಪ್ರತಿಭಟನೆ

ಬೆಳಗಾವಿ: ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ವೇಳೆ ಮಗು ಮೃತಪಟ್ಟಿರುವುದಾಗಿ ಆರೋಪಿಸಿ ಕುಟುಂಬದವರು ಬಿಮ್ಸ್ ಆಸ್ಪತ್ರೆಯಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.   ಹೊನ್ನಿಹಾಳ ಗ್ರಾಮದ ಸುನೀತಾ ಎಂಬ ಗರ್ಭಿಣಿಯನ್ನು ವಾರದ ಹಿಂದೆ ಹೊಟ್ಟೆನೋವಿನ ಹಿನ್ನೆಲೆಯಲ್ಲಿ ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಲ್ಲಿನ ವೈದ್ಯರು ಅವಳತ್ತ ಲಕ್ಷ್ಯವನ್ನೇ ನೀಡಿಲ್ಲ. ಸಿಜೇರಿಯನ್ ಮಾಡಿ ಎಂದು ಅಂಗಲಾಚಿದರೂ ವೈದ್ಯರು ಕೇಳಿಲ್ಲ ಎಂಬುದು ಕುಟುಂಬದವರ ಆರೋಪ.       “ಸ್ಕ್ಯಾನಿಂಗ್ ಕೂಡ ಹೊರಗಿನಿಂದ ಮಾಡಿಸಿಕೊಂಡು ಬರಲು …

Read More »

ನೇಸರಗಿ: ಅಕ್ರಮ ಸಾಗಾಟವಾಗುತ್ತಿದ್ದ ಪಡಿತರ ಅಕ್ಕಿ ವಶ

ಬೈಲಹೊಂಗಲ: ನೇಸರಗಿಯಲ್ಲಿ ಅಕ್ರಮವಾಗಿ ಗೂಡ್ಸ್ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಪಡಿತರ ಅಕ್ಕಿಯನ್ನು ಅಧಿಕಾರಿಗಳ ತಂಡ ವಶಪಡಿಸಿಕೊಂಡಿದೆ.   ಅಂದಾಜು 76076 ರೂ. ಮೌಲ್ಯದ ಪಡಿತರ ಅಕ್ಕಿಯ 71 ಬ್ಯಾಗ್ ಗಳನ್ನು ಬೊಲೆರೊ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.       ಬೊಲೆರೊ ಪಿಕ್ ಅಪ್ ವಾಹನವನ್ನು ಜಪ್ತಿ ಮಾಡಿ ಕಾನೂನು ಕ್ರಮ ಮುಂದುವರಿಸಲಾಗಿದೆ

Read More »

ಆ.10ರಿಂದ ಮಂತ್ರಾಲಯದಲ್ಲಿ ರಾಯರ ಆರಾಧನೆ

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆ.10ರಿಂದ 16ರವರೆಗೆ ಶ್ರೀರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ನಿಮಿತ್ತ ಸಪ್ತರಾತ್ರೋತ್ಸವವು ಜರುಗಲಿದೆ. ಶ್ರೀಮಠದ ಪೀಠಾಧಿ ಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಕಾರ್ಯಕ್ರಮಗಳು ಜರುಗಲಿವೆ. ಈ ವರ್ಷ ಮಂತ್ರಾಲಯದ ವಿದ್ವಾನ್‌ ಅರ್ಚಕ ಕೃಷ್ಣಾಚಾರ್‌, ಆಂಧ್ರಪ್ರದೇಶದ ನಿವೃತ್ತ ಡಿಜಿಪಿ ಆರ್‌.ಪ್ರಭಾಕರರಾವ್‌, ತಿರುವನಂತಪುರದ ವಿದ್ವಾನ್‌ ಆರ್‌.ಕೃಷ್ಣಮೂರ್ತಿ ಶಾಸ್ತ್ರಿ, ಬೆಂಗಳೂರಿನ ವಿದ್ವಾನ್‌ ಮಾಳಗಿ ರಾಮಾಚಾರ, ಮೈಸೂರಿನ ವಿದ್ವಾನ್‌ ಸಿ.ಎಚ್‌. ಶ್ರೀನಿವಾಸಮೂರ್ತಿ, ಆಂಧ್ರಪ್ರದೇಶದ ಧಾರ್ಮಿಕ ದತ್ತಿ ಇಲಾಖೆ ನಿವೃತ್ತ ಜಂಟಿ …

Read More »

ಮರಾಠರಿಗೆ 2ಎ ಮೀಸಲಾತಿ: ಸಿಎಂ ಭರವಸೆ, ಮರಾಠ ಅಭಿವೃದ್ಧಿ ನಿಗಮ ಉದ್ಘಾಟನೆ

ಬೆಂಗಳೂರು: ರಾಜ್ಯದಲ್ಲಿ ಮರಾಠ ಸಮುದಾಯಕ್ಕೆ 2ಎ ಮೀಸಲಾತಿ ಕೊಡುವ ವಿಚಾರವಾಗಿ ಆಯೋಗದಿಂದ ವರದಿ ತರಿಸಿಕೊಂಡು ಸಂವಿಧಾನಾತ್ಮಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಅರಮನೆ ಮೈದಾನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಟೊಂಕ ಕಟ್ಟಿ ನಿಂತಿರುವ ಸಮುದಾಯಕ್ಕೆ ನ್ಯಾಯ ಒದಗಿಸುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ. ಮರಾಠ ಸಮುದಾಯಕ್ಕೆ ಹಿಂದುಳಿದ …

Read More »

ಪ್ರೇಮ ವಿಫಲ ಅಗಿದೆ ಎಂದು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಹಳಿಯಾಳದ ಪ್ರೇಮಿಗಳು

ಪ್ರಿಯತಮೆಗೆ ಬೇರೆ ಮದುವೆ ಮಾಡಿದ್ದ ಪೋಷಕರು : ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು ಹಳಿಯಾಳದ ಪ್ರೇಮಿಗಳಿಬ್ಬರು ದರುಣವವಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ ಜರುಗಿದೆ ಕಳೆದ ಶುಕ್ರವಾರ ಹಳಿಯಾಳ ಪಟ್ಟಣದ ಜ್ಯೋತಿ ಸುರೇಶ್ ಅಂತ್ರೊಳಕರ್ ಹಾಗೂ ರಿಕೇಶ್ ಸುರೇಶ್ ಮಿರಶಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಅದರೆ ಚಿಕೆತ್ಸೆ ಪಲಕಾರಿ ಆಗದೆ ಇಂದು ಮುಂಜಾನೆ ಕಿಮ್ಸ್ ನಲ್ಲಿ ಸಾವನ್ನಪ್ಪಿದ್ದಾರೆ   ಜ್ಯೋತಿ ಹಾಗೂ ರಿಕೇಶ …

Read More »

ರಾಜ್ಯದ ನಿಯೋಗಕ್ಕೆ ಸ್ಪಂದಿಸಿದ ಕೇಂದ್ರ ಸಚಿವ ಪಿಯುಷ್ ಗೋಯಲ್

ರಬಕವಿ-ಬನಹಟ್ಟಿ: ಕೇಂದ್ರ ಸರ್ಕಾರದ ನಿಯಮದಂತೆ ಪವರ್ ಲೂಮ್ ಮಗ್ಗಗಳ ಮೇಲೆ ಕೇವಲ ಬಿಳಿ ಬಟ್ಟೆಯನ್ನು ಮಾತ್ರ ಉತ್ಪಾದನೆ ಮಾಡಬೇಕು. ಕರಿ ಮತ್ತು ರೇಷ್ಮೆ ಬಟ್ಟೆಯನ್ನು ಕೈಮಗ್ಗದ ಮೇಲೆ ಉತ್ಪಾದನೆ ಮಾಡಬೇಕು. ಈ ನಿಮಿತ್ತವಾಗಿ ಕೇಂದ್ರದ ತಂಡವೊಂದು ರಾಜ್ಯಕ್ಕೆ ಭೇಟಿ ನೀಡಿ ಪವರ್ ಲೂಮ್ ಮಗ್ಗಗಳ ಮೇಲೆ ಕರಿ ಬಟ್ಟೆಯನ್ನು ಉತ್ಪಾದನೆ ಮಾಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಸಜ್ಜಾಗಿತ್ತು.   ಆದ್ದರಿಂದ ಕೇಂದ್ರ ಸಚಿವೆ ಪ್ರಹ್ಲಾದ್ ಜೋಶಿ, ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ, …

Read More »

ಬೆಳಗಾವಿಯ ಸಿಇಎನ್ ಠಾಣೆಯ ಸಿಪಿಐ ಬಿ.ಆರ್.ಗಡ್ಡೇಕರ್ ವರ್ಗಾವಣೆ

ಬೆಳಗಾವಿಯ ಸಿಇಎನ್ ಠಾಣೆಯ ಸಿಪಿಐ ಬಿ.ಆರ್.ಗಡ್ಡೇಕರ್ ಸೇರಿ ರಾಜ್ಯದ 92 ಪೊಲೀಸ್ ಅಧಿಕಾರಿಗಳನ್ನು ದಿಢೀರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.   ಹೌದು ಬಿ.ಆರ್.ಗಡ್ಡೇಕರ್ ಅವರನ್ನು ಬೆಳಗಾವಿಯ ಹೆಸ್ಕಾಂ ಜಾಗೃತ ದಳಕ್ಕೆ ವರ್ಗಾವಣೆ ಮಾಡಲಾಗಿದೆ. ಅದೇ ರೀತಿ ಗಡ್ಡೇಕರ್ ಸ್ಥಾನಕ್ಕೆ ರಾಜ್ಯ ಗುಪ್ತವಾರ್ತೆಯಲ್ಲಿದ್ದ ಸಂಜೀವ್ ಕಾಂಬಳೆ ಅವರನ್ನು ಬೆಳಗಾವಿಯ ಸಿಇಎನ್ ಠಾಣೆ ಸಿಪಿಐ ಆಗಿ ನೇಮಕ ಮಾಡಲಾಗಿದೆ. ಅದೇ ರೀತಿ ರಾಜ್ಯದ ಒಟ್ಟು 92 ಪೊಲೀಸ್ ಅಧಿಕಾರಿಗಳನ್ನು …

Read More »