Breaking News

ಜಿಲ್ಲೆ

ಟ್ಯಾಬ್ಲೆಟ್ ಸೇವಿಸಿ ಸುಮಾರು 55 ವಿದ್ಯಾರ್ಥಿಗಳು ಅಸ್ವಸ್ಥ

ಬೆಳಗಾವಿ: ಅನಿಮಿಯ ಮುಕ್ತ ಭಾರತ್ ಯೋಜನೆಯಡಿ ಶಾಲಾ ವಿದ್ಯಾರ್ಥಿಗಳಿಗೆ ನೀಡಲಾಗುವ ಕಬ್ಬಿಣದ ಅಂಶದ ಮಾತ್ರೆ ಅಂದರೆ ಐರನ್ ಟ್ಯಾಬ್ಲೆಟ್ ಸೇವಿಸಿ ಸುಮಾರು 55 ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದಲ್ಲಿ ನಡೆದಿದೆ.   ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಬಸಿಡೋಣಿ ಗ್ರಾಮದಸರ್ಕಾರಿ ಶಾಲೆಯ 239 ಮಕ್ಕಳಿಗೆ ಫಾಲಿಕ್ ಆಸಿಡ್ ಮಾತ್ರೆ ನೀಡಲಾಗಿತ್ತು. ಮಾತ್ರೆ ಸೇವಿಸಿದ ಕೆಲ ಹೊತ್ತಿನಲ್ಲೇ ಕೆಲವು ವಿದ್ಯಾರ್ಥಿಗಳು ಹೊಟ್ಟೆ ನೋವಿನ ಬಗ್ಗೆ ದೂರು …

Read More »

ಕೃಷ್ಣ ಮೃಗ ಚರ್ಮ ಮಾರಾಟ ಮಾಡುತ್ತಿದ್ದ ಐವರನ್ನು ಬಂಧಿಸಿದ ಬೆಳಗಾವಿ ಸಂಚಾರಿ ಜಾಗೃತ ದಳದ ಸಿಬ್ಬಂದಿ

ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಕೃಷ್ಣ ಮೃಗ ಚರ್ಮ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ವಶಕ್ಕೆ ಪಡೆಯುವಲ್ಲಿ ಬೆಳಗಾವಿ ಅರಣ್ಯ ಸಂಚಾರಿ ಜಾಗೃತ ದಳದ ತಂಡ ಯಶಸ್ವಿಯಾಗಿದೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಕಜ್ಜರಿ, ದೇವರಗುಡ್ಡ, ರಾಣೆಬೆನ್ನೂರಿನ ಮೂವರು ವ್ಯಕ್ತಿಗಳು ಹಾಗೂ ಬ್ಯಾಡಗಿ ತಾಲೂಕಿನ ಬಡಪ್ಪನಹಳ್ಳಿ ಗ್ರಾಮದ ಓರ್ವ ವ್ಯಕ್ತಿ, ಹಾವೇರಿ ತಾಲೂಕಿನ ಬರಡಿ ಗ್ರಾಮದ ಓರ್ವ ವ್ಯಕ್ತಿಯನ್ನು ಕೃಷ್ಣ ಮೃಗ ಚರ್ಮ ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ಬಂಧಿಸುವಲ್ಲಿ ಬೆಳಗಾವಿಯ ಅರಣ್ಯ …

Read More »

ಹರ ಘರ್ ತಿರಂಗಾ ಪೊಸ್ಟರ್ ತ್ರೀ ಚಕ್ರ ವಿತರಣೆ ಬಿಡುಗಡೆಗೊಳಿಸಿದ ಸಚಿವ ಕತ್ತಿ

ವಿಜಯಪುರ ನಗರದ ಜಿ.ಪಂ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ನೇತೃತ್ವದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ 1 ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ವಿಕಲಚೇತನ ಇಲಾಖೆಯಿಂದ 10 ಜ‌ನ ಅಂಗವಿಕಲರಿಗೆ ತ್ರೀ ಚಕ್ರ ಸೈಕಲ್ ವಿತರಣೆ ನಡೆಯಿತು. ಸಭೆಯಲ್ಲಿ ವಿವಿಧ ಯೋಜನೆಯ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕಿಟ್ ಹಾಗೂ ಚೆಕ್ ವಿತರಿಸಲಾಯಿತು. ಹರ್ ಘರ್ ತಿರಂಗಾ ಪ್ರಚಾರದ ಪೋಸ್ಟರ್ …

Read More »

ರಾಜಕುಮಾರ ಟಾಕಳೆಗೆ ಶಿಕ್ಷೆಯಾಗುವಂತೆ ಮಾಡುತ್ತೇನೆ-: ನವ್ಯಶ್ರೀ

ನವ್ಯಶ್ರೀ ರಾವ್ ಅಶ್ಲೀಲ ವೀಡಿಯೋ ವೈರಲ್ ಪ್ರಕರಣಕ್ಕೆ ಸಂಬoಧಿಸಿದoತೆ ನವ್ಯಶ್ರೀ ರಾವ್ ವಿರುದ್ಧ ರಾಜ್‌ಕುಮಾರ್ ಟಾಕಳೆ ದೂರನ್ನು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ನವ್ಯಶ್ರೀ ರಾವ್ ಇಂದು ವಿಚಾರಣೆಗೆ ಎಪಿಎಂಸಿ ಠಾಣೆಗೆ ಹಾಜರಾಗಿದ್ದಾರೆ.  ಕೆಲ ದಿನಗಳ ಹಿಂದೆ ಕೈ ನಾಯಕಿ ನವ್ಯಶ್ರೀ ರಾವ್‌ರವರ ಅಶ್ಲೀಲ ವೀಡಿಯೋ ಹಾಗೂ ಕಾಂಗ್ರೆಸ್ ನಾಯಕರೊಂದಿಗೆ ಇದ್ದ ಫೊಟೊ ವೈರಲ್ ಆಗಿದ್ದವು. ಈ ಕುರಿತಂತೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ನವ್ಯಶ್ರೀ ವಿರುದ್ಧ ಜುಲೈ …

Read More »

ಗಣೇಶೋತ್ಸವ ಆಚರಣೆ ಹಿನ್ನೆಲೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ

ಬೆಳಗಾವಿಯಲ್ಲಿ ಮುಂಬರುವ ಗಣೇಶೋತ್ಸವ ಆಚರಣೆ ಹಿನ್ನೆಲೆ ಜಿಲ್ಲೆಯಲ್ಲಿ ಮಾಡಿಕೊಳ್ಳಬೇಕಾದ ಸಿದ್ಧತೆಗಳನ್ನು ಕುರಿತಂತೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಬೇಯನ್ನು ಹಮ್ಮಿಕೊಳ್ಳಲಾಗಿತ್ತು. ಹೌದು ಇಂದು ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಗಣೇಶೋತ್ಸವ ಆಚರಣೆ ಕುರಿತಂತೆ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಗಣೇಶೋತ್ಸವ ಆಚರಣೆ ಕುರಿತಂತೆ ಈಗ ಅನುಮತಿ ಇದೆ. ಆದರೆ ಮುಂಬರುವ ದಿನಗಳಲ್ಲಿ ಸರಕಾರ ಹಾಗೂ ನ್ಯಾಯಾಲಯಗಳು ಏನು ಆದೇಶಗಳನ್ನು ಹೊರಡಿಸುತ್ತವೆಯೋ ಅದನ್ನು ಕಟ್ಟುನಿಟ್ಟಾಗಿ …

Read More »

ಆಲಮಟ್ಟಿ ಜಲಾಶಯದಲ್ಲಿ ಅವನಲ್ಲ, ಅವಳು. ಬುರ್ಖಾಧಾರಿಯ ಅಸಲಿಯತ್ತೇನು? ಪೊಲೀಸರು ಹೇಳಿದ್ದೇನು?

ವಿಜಯಪುರ: ಆಲಮಟ್ಟಿ ಜಲಾಶಯ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ ಬುರ್ಖಾಧಾರಿ ವ್ಯಕ್ತಿಯೊಬ್ಬ ಸಂಚರಿಸಿ ಭಾರಿ ಆತಂಕ ಸೃಷ್ಟಿಯಾಗಿತ್ತು. ಆಲಮಟ್ಟಿ ಜಲಾಶಯದ ಸುತ್ತಮುತ್ತ ಅನುಮಾನಾಸ್ಪದವಾಗಿ ತಿರುಗಾಡುತ್ತಾ ಇದ್ದ ಈ ವ್ಯಕ್ತಿ ಬುರ್ಖಾ ಧರಿಸಿದ್ದ ಕಾರಣ ಮೊದಲು ಮಹಿಳೆ ಎಂದು ಅಂದುಕೊಳ್ಳಲಾಗಿತ್ತು. ಕೆಲ ಸಮಯದ ಬಳಿಕ ಆ ಬುರ್ಖಾಧಾರಿ, ಪಕ್ಕದಲ್ಲಿರುವ ಮುಳ್ಳು ಕಂಟಿಗಳ ಕಡೆಗೆ ಹೋಗಿ ವಾಪಸ್​ ಬರುವಾಗ ಬುರ್ಖಾ ತೆಗೆದು ಆಚೆ ಬಂದಿದ್ದನ್ನು ಗಮನಿಸಿದ ಪೊಲೀಸರು ಬುರ್ಖಾ ಧರಿಸಿದ್ದು ಮಹಿಳೆ ಅಲ್ಲ. ಪುರುಷ ಎಂಬುದು …

Read More »

ಚೈನ ಸ್ನ್ಯಾಚರ ಹಾಗೂ ಬೈಕ ಕಡಿಯುತ್ತಿದ್ದ ಕಳ್ಳರನ್ನು ಹೆಡೆ ಮೂರಿ ಕಟ್ಟಿದ ಗೋಕಾಕ ಪೊಲೀಸರು

ಗೋಕಾಕ ಶಹರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ಕೆಲವು ತಿಂಗಳುಗಳಿಂದ ಚೈನ್ ಸ್ಟ್ಯಾಚಿಂಗ ಹಾಗೂ ಮೋಟಾರ ಸೈಕಲಗಳು ಕಳ್ಳತನವಾಗುತ್ತಿದ್ದು ಈ ಬಗ್ಗೆ ಪ್ರಕರಣಗಳು ದಾಖಲಾಗಿದ್ದು ಅವುಗಳ ಪತ್ತೆಗಾಗಿ ಮಾನ್ಯ ಶ್ರೀ ಸಂಜೀವ ಪಾಟೀಲ ಆರಕ್ಷಕ ಅಧೀಕ್ಷಕರು ಬೆಳಗಾವಿ, ಹಾಗೂ ಮಾನ್ಯ ಶ್ರೀ ಮಹಾನಿಂಗ ನಂದಗಾವಿ ಹೆಚ್ಚುವರಿ ಎಸ್ ಪಿ ಬೆಳಗಾವಿ ರವರು ಮತ್ತು ಶ್ರೀ ಮನೋಜಕುಮಾರ ನಾಯಿಕ ಡಿಎಸ್‌ಪಿ ಗೋಕಾಕ ರವರ ಮಾರ್ಗದರ್ಶನದಲ್ಲಿ, ಗೋಕಾಕ ವೃತ್ತದ ಸಿಪಿಐ ಶ್ರೀ ಗೋಪಾಲ …

Read More »

ಮೋದಿ-ಯೋಗಿಗೆ ಕುಟುಂಬವಿಲ್ಲ, ನಮಗಿದೆ: ಕುಟುಂಬ ರಾಜಕಾರಣಕ್ಕೆ ಸಚಿವ ಉಮೇಶ್​ ಕತ್ತಿ ಸಮರ್ಥನೆ

ವಿಜಯಪುರ: ಪ್ರಧಾನಿ ಮೋದಿ ಹಾಗೂ ಯೋಗಿಗೆ ಕುಟುಂಬ ಇಲ್ಲ. ಹೀಗಾಗಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುತ್ತಾರೆ. ಆದರೆ ಕುಟುಂಬ ರಾಜಕಾರಣ ಎನ್ನುವುದು ಇದೆ ಎಂದು ಅರಣ್ಯ ಹಾಗೂ ಆಹಾರ, ನಾಗರಿಕ ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಉಮೇಶ ಕತ್ತಿ ಪ್ರತಿಕ್ರಿಯಿಸಿದರು‌.   ಮೋದಿ, ಯೋಗಿ ಕುಟುಂಬ ಇಲ್ಲದ ನಾಯಕರು. ನಾವೆಲ್ಲ ಕುಟುಂಬ ರಾಜಕಾರಣದಿಂದ ಬಂದವರು. ನನ್ನ ತಂದೆ ರಾಜಕಾರಣದಲ್ಲಿ ಇದ್ದರು, ಈಗ ನಾನೂ ಇದ್ದೇನೆ. ಯಡಿಯೂರಪ್ಪ ರಾಜಕಾರಣದಲ್ಲಿದ್ದರು, ಈಗ ಅವರ ಪುತ್ರ …

Read More »

ಆಂಜನೇಯ ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿದ್ದ ವ್ಯಕ್ತಿ ಅರೆಸ್ಟ್

ಹಾವೇರಿ: ಹಾವೇರಿ ತಾಲೂಕಿನ ಕನವಳ್ಳಿ ಗ್ರಾಮದಲ್ಲಿ ಆಂಜನೇಯ ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿ ಅಪವಿತ್ರಗೊಳಿಸಿದ ವ್ಯಕ್ತಿಯ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಆರೋಪಿಯನ್ನು 32 ವರ್ಷದ ಜಾಫರ್ ಕನ್ಯಾನವರ ಎಂದು ಗುರುತಿಸಲಾಗಿದೆ. ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ಜಾಫರ್‌ನ ಕೃತ್ಯ ಸೆರೆಯಾಗಿದೆ. ದೇವಸ್ಥಾನದ ಆವರಣದಲ್ಲಿ ಮಲಗಿ, ಎದ್ದು ದೇವಸ್ಥಾನದ ಗೋಡೆಗೆ ಮೂತ್ರ ವಿಸರ್ಜನೆ ಮಾಡಿ ದೇವಸ್ಥಾನ ಅಪವಿತ್ರಗೊಳಿಸಿದ ಎಂದು ಆರೋಪಿಸಿದ್ದಾರೆ. 

Read More »

ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆ

ರಾಯಚೂರು: ಜಿಲ್ಲೆಯಲ್ಲಿ ಕಾಲೇಜಿಗೆ ತೆರಳಿದ್ದಂತ ಒಂದೇ ಕಾಲೇಜಿನ ನಾಲ್ವರು ವಿದ್ಯಾರ್ಥಿನಿಯರು ನಾಪತ್ತೆಯಾಗಿರೋದಾಗಿ ತಿಳಿದು ಬಂದಿದೆ. ಹೀಗಾಗಿ ಪೋಷಕರು ಮಕ್ಕಳು ನಾಪತ್ತೆಯಾಗಿರೋದ್ರಿಂದ ಆತಂಕಗೊಂಡಿದ್ದಾರೆ.   ರಾಯಚೂರು ಜಿಲ್ಲೆಯ ಸ್ಟೇಷನ್ ರಸ್ತೆಯಲ್ಲಿರುವಂತ ಸರ್ಕಾರಿ ಕಾಲೇಜಿನಲ್ಲಿ ಓದುತ್ತಿದ್ದಂತ ನಾಲ್ವರು ವಿದ್ಯಾರ್ಥಿನಿಯರು, ಕಾಲೇಜಿಗೆ ಹೋಗಿ ಬರೋದಾಗಿ ತೆರಳಿದ್ದರು. ಹೀಗೆ ತೆರಳಿದ್ದಂತ ನಾಲ್ವರು ವಿದ್ಯಾರ್ಥಿನಿಯರು ಮನೆಗೆ ವಾಪಾಸ್ ಆಗಿಲ್ಲ ಎಂಬುದಾಗಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.   ವಿದ್ಯಾರ್ಥಿನಿಯರ ಪೋಷಕರು ನೀಡಿದಂತ ದೂರನಿಂದಾಗಿ ಸದರಬಜಾರ್ ಠಾಣೆಯ ಪೊಲೀಸರು …

Read More »