ಬೆಳಗಾವಿ : ಟಿಳಕವಾಡಿಯ ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಮಾ.13ರಿಂದ 15ರವರೆಗೆ 16ನೇ ಸರಣಿಯ ಎಂ.ಕೆ.ನಂಬಿಯಾರ್ ಸ್ಮರಣಾರ್ಥ ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಕಾಲೇಜಿನ ಆಡಳಿತ ಮಂಡಳಿ ಚೇರ್ಮನ್ ಆರ್.ಎಸ್.ಮುತಾಲಿಕ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲೇಜಿನ ಹಳೇ ವಿದ್ಯಾರ್ಥಿ, ಮಾಜಿ ಅಟಾರ್ನಿ ಜನರಲ್ ಪದ್ಮವಿಭೂಷಣ ಕೆ.ಕೆ. ವೇಣುಗೋಪಾಲ್ ಪ್ರಾಯೋಜಕತ್ವದಲ್ಲಿ ಆಯೋಜಿಸಿರುವ ಈ ಸ್ಪರ್ಧೆಯಲ್ಲಿ ಕರ್ನಾಟಕ ಸೇರಿದಂತೆ 9 ರಾಜ್ಯಗಳಿಂದ ಒಟ್ಟು …
Read More »ಮೂಲ ಸೌಕರ್ಯ ವಿಕಾಸಕ್ಕೆ ಮೊದಲ ಆದ್ಯತೆ
ಅಥಣಿ: ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ೨೦೨೬-೨೭ನೇ ಸಾಲಿನ ಬಜೆಟ್‌ನ್ನು ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ ಮಂಡಿಸಿದರು. ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪುರಸಭೆಯ ಒಟ್ಟು ಆದಾಯ ೩೮,೭೭,೭೯,೦೦೦ ರೂ. ಎಂದು ನಿರೀಕ್ಷಿಸಲಾಗಿದ್ದು, ಇದರಲ್ಲಿ ಮುಂಬರುವ ವರ್ಷದಲ್ಲಿ ೩೮,೪೩,೦೧,೬೦೩ ರೂ. ಒಟ್ಟು ಖರ್ಚು ಮಾಡಲು ಅಂದಾಜಿಸಲಾಗಿದೆ. ಒಟ್ಟು ೩೪,೭೬,೮೯೭ ರೂ. ಉಳಿತಾಯವಾಗಲಿದ್ದು, ಪುರಸಭೆ ಆರ್ಥಿಕವಾಗಿ ಸದೃಢ ಸ್ಥಿತಿಯಲ್ಲಿದೆ. ರಸ್ತೆ ನಿರ್ಮಾಣ, ಕುಡಿಯುವ ನೀರು ಪೂರೈಕೆ, ಒಳಚರಂಡಿ, ಬೀದಿದೀಪ …
Read More »ಗ್ಯಾರಂಟಿಗಳ ಬಜೆಟ್ ಇಡೀ ರಾಜ್ಯದ ಆರ್ಥಿಕತೆ ಕುಸಿತಕ್ಕೆ ಕಾರಣವಾಗಲಿದೆ
ಬೆಳಗಾವಿ: ಶಿಸ್ತುಬದ್ಧ ತೆರಿಗೆ ಪಾವತಿ ಸೇರಿ ದೇಶದ ಕಾನೂನು ಪಾಲನೆಯಲ್ಲಿ ಯೋಜನಾ ಬದ್ಧ ಜೀವನ ವ್ಯವಸ್ಥೆ ಹೊಂದಿರುವ ಕರ್ನಾಟಕಕ್ಕೆ ಭಾರತದ ಆರ್ಥಿಕ ವ್ಯವಸ್ಥೆಯಲ್ಲಿ ವಿಶೇಷ ಸ್ಥಾನವಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಗ್ಯಾರಂಟಿಗಳ ಬೆನ್ನು ಹತ್ತಿ ಮಂಡಿಸಿದ ಬಜೆಟ್ ಇಡೀ ರಾಜ್ಯದ ಆರ್ಥಿಕತೆ ಕುಸಿತಕ್ಕೆ ಕಾರಣವಾಗಲಿದೆ ಎಂದು ವಿಧಾನ ಪರಿಷತ್ ಮಾಜಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆರ್ಥಿಕ ತಜ್ಞರೆಂದು ಹೇಳಿಕೊಳ್ಳುವ ಸಿಎಂ ಸಿದ್ದರಾಮಯ್ಯ, ಉತ್ತರ ಕರ್ನಾಟಕ …
Read More »ಶಾಲಾ ಕಾಲೇಜ್‌ಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ
ಬೆಳಗಾವಿ : ರಾಜ್ಯದಲ್ಲಿ 1995ರಿಂದ ಪ್ರಾರಂಭವಾಗಿರುವ ಅನುದಾನ ರಹಿತ ಶಾಲಾ ಕಾಲೇಜ್‌ಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಕರ್ನಾಟಕ ಅನುದಾನ ರಹಿತ ಶಾಲಾ ಕಾಲೇಜ್ ನೌಕರರ ಆಡಳಿತ ಮಂಡಳಿಗಳ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದ ನೇತೃತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ರ‌್ಯಾಲಿ ಮೂಲಕ ಆಗಮಿಸಿ, ತಮ್ಮ ಪ್ರಮುಖ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಹೋರಾಟ ಸಮಿತಿಯ ಗೌರವ …
Read More »ಶಾಲಾ ಕಾಲೇಜ್‌ಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಪ್ರತಿಭಟನೆ
ಬೆಳಗಾವಿ : ರಾಜ್ಯದಲ್ಲಿ 1995ರಿಂದ ಪ್ರಾರಂಭವಾಗಿರುವ ಅನುದಾನ ರಹಿತ ಶಾಲಾ ಕಾಲೇಜ್‌ಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಕರ್ನಾಟಕ ಅನುದಾನ ರಹಿತ ಶಾಲಾ ಕಾಲೇಜ್ ನೌಕರರ ಆಡಳಿತ ಮಂಡಳಿಗಳ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದ ನೇತೃತೃತ್ವದಲ್ಲಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪ್ರತಿಭಟನಾ ರ‌್ಯಾಲಿ ಮೂಲಕ ಆಗಮಿಸಿ, ತಮ್ಮ ಪ್ರಮುಖ ಬೇಡಿಕೆಗಳ ಕುರಿತು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು. ಈ ವೇಳೆ ಹೋರಾಟ ಸಮಿತಿಯ ಗೌರವ …
Read More »ನಿರಂತರ ನೀರು ಸರಬರಾಜು ಯೋಜನೆ ಪರಿಶೀಲನೆಗೆ ವಿಶ್ವಬ್ಯಾಂಕ್ ನಿಯೋಗ ಭೇಟಿ ನೀಡಿ
ಬೆಳಗಾವಿ: ವಿಶ್ವ ಬ್ಯಾಂಕ್ ದಕ್ಷಿಣ ಏಷ್ಯಾ ಪ್ರದೇಶದ ಉಪಾಧ್ಯಕ್ಷ ಜೋಹಾನ್ಸ್ ಜುಟ್ ನೇತೃತ್ವದ ವಿಶ್ವ ಬ್ಯಾಂಕ್ ನಿಯೋಗವು ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆ (24/7 ನಿರಂತರ ನೀರು ಸರಬರಾಜು ಯೋಜನೆ) ಪರಿಶೀಲನೆಗಾಗಿ ಗುರುವಾರ ಬೆಳಗಾವಿ ನಗರಕ್ಕೆ ಭೇಟಿ ನೀಡಿತ್ತು. ವಂಟಮುರಿ ಕಾಲನಿ ಮತ್ತು ಮುತ್ತ್ಯಾನಟ್ಟಿಗೆ ಘಟಕಗಳಿಗೆ ಭೇಟಿ ನೀಡಿ, ಸಾರ್ವಜನಿಕೊಂದಿಗೆ ಸಂವಾದ ನಡೆಸಿದರು. ಕೆಯುಐಡಿಎಫ್‌ಸಿ ವ್ಯವಸ್ಥಾಪಕ ನಿರ್ದೇಶಕಿ ಪೂವಿತಾ ಎಸ್. ವಿಶ್ವಬ್ಯಾಂಕ ಪ್ರತಿನಿಧಿಗಳಿಗೆ ನಗರ ನೀರು ಸರಬರಾಜು ಆಧುನೀಕರಣ …
Read More »ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಮಹಾಪೌರ ಸ್ಥಾನಕ್ಕೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡಬೇಕು
ಬೆಳಗಾವಿ: ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಚುನಾವಣೆಯಲ್ಲಿ ಮಹಾಪೌರ ಸ್ಥಾನಕ್ಕೆ ವೀರಶೈವ ಲಿಂಗಾಯತ ಸಮುದಾಯಕ್ಕೆ ಆದ್ಯತೆ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಜಿಲ್ಲಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಒತ್ತಾಯಿಸಿದ್ದಾರೆ. ಮೇಯರ್ ಹುದ್ದೆ ಸಾಮಾನ್ಯ ಮಹಿಳೆ, ಉಪ ಮೇಯರ್ ಸಾಮಾನ್ಯ ವರ್ಗಕ್ಕೆ ಸೇರಿದ್ದು, ಇಂತಹ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಅಭ್ಯರ್ಥಿಯನ್ನು ಕಡೆಗಣಿಸುತ್ತಿರುವುದು ಸರಿಯಲ್ಲ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ವೀರಶೈವ ಲಿಂಗಾಯತ ಸಮುದಾಯದ ಕೊಡುಗೆ ಬಹು ಮುಖ್ಯ. …
Read More »ಮಾ.18ರಿಂದ ಏ.2ರವರೆಗೆ ನಿಷೇಧಾಜ್ಞೆ ಜಾರಿ
ಬೆಳಗಾವಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾ.18ರಿಂದ ಏ.2ರವರೆಗೆ ಚಿಕ್ಕೋಡಿಯ 131 ಹಾಗೂ ಬೆಳಗಾವಿ ಶೈಕ್ಷಣಿಕ ಜಿಲ್ಲೆಯ 104 ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದ್ದು, ಈ ಒಟ್ಟು 235 ಪರೀಕ್ಷಾ ಕೇಂದ್ರಗ ಸುತ್ತ ಪರೀಕ್ಷೆ ಅವಧಿಯಲ್ಲಿ ಭಾರತೀಯ ನಾಗರೀಕ ಸುರಕ್ಷಾ ಸಂಹಿತಾ ಅನ್ವಯ ಸುತ್ತಮುತ್ತ 200ಮೀ. ವ್ಯಾಪ್ತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ನೋಡಿಕೊಳ್ಳಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಹಿತ …
Read More »ಮಕ್ಕಳ ಮೇಲಿನ ದೌರ್ಜನ್ಯ ತೊಲಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು
ಐನಾಪುರ: ಮಕ್ಕಳ ಮೇಲಿನ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ ಮತ್ತು ಬಾಲ್ಯವಿವಾಹದಂತಹ ಸಾಮಾಜಿಕ ಪಿಡುಗು ತೊಲಗಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ವಕೀಲ ರಾಹುಲ ಕಟಗೇರಿ ಹೇಳಿದರು. ಪಟ್ಟಣದ ಶಾಂತಿಸಾಗರ ಆಂಗ್ಲ ಮಾಧ್ಯಮ ಶಾಲೆ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳನ್ನು ರಕ್ಷಿಸಲು ಪೋಕ್ಸೋ ಕಾಯ್ದೆ ಬೆಂಬಲವಿದ್ದು, ಮಕ್ಕಳು ಮೊಬೈಲ್ ಬಳಕೆ …
Read More »ನಾರಾಯಣ ಪೇಟೆಯ ವಿಠ್ಠಲ ಪಾಂಡುರಂಗ ರುಕ್ಮಿಣಿ ದೇವರ ರಥೋತ್ಸವ
ರಾಮದುರ್ಗ: ನಗರದ ನಾರಾಯಣ ಪೇಟೆಯ ವಿಠ್ಠಲ ಹರಿಮಂದಿರದಲ್ಲಿ ಸಪ್ತಾಹ ಮಹೋತ್ಸವ ಹಾಗೂ ಪಾಂಡುರಂಗ ದೇವರ ರಥೋತ್ಸವ ಭಕ್ತರ ಹಷೋರ್ದ್ಗಾರದ ಮಧ್ಯೆ ಬುಧವಾರ ಸಂಪನ್ನಗೊಂಡಿತು. ಒಂದು ವಾರದಿಂದ ಸಪ್ತಾಹ ಆಚರಣೆ, ವಿವಿಧ ಧಾರ್ಮಿಕ ಕಾರ್ಯಕ್ರಮ ಕೀರ್ತನೆ ವೈಭವದಿಂದ ಜರುಗಿವು. ಪಾಂಡುರಂಗ ರುಕ್ಮಿಣಿ ದೇವರ ರಥೋತ್ಸವದ ಅಂಗವಾಗಿ ಸಂತರ ದಿಂಡಿ ನಗರ ಪ್ರದಣೆ ಹಾಕಿ ರಥೋತ್ಸವದಲ್ಲಿ ಪಾಲ್ಗೊಂಡಿತು. ಸುಮಂಗಲೆಯರ ಆರತಿಯೊಂದಿಗೆ ಪಲ್ಲಕ್ಕಿ ಉತ್ಸವ, ಮೆರವಣಿಗೆ ಹಾಗೂ ವಾರಕರಿ ಸಂಪ್ರದಾಯದ ಸಂತರ ಭಜನೆ ಜರುಗಿತು. …
Read More »
Laxmi News 24×7