Breaking News

ಜಿಲ್ಲೆ

ಪಾಲಿಕೆ ಸದಸ್ಯರಿಗೆ ಸಿಗದ ಧ್ವಜಾರೋಹಣ ಭಾಗ್ಯ

ಬೆಳಗಾವಿ: ಸ್ವಾತಂತ್ರ್ಯ ಮಹೋತ್ಸವದ ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮೇಲೆ ರಾಷ್ಟ್ರ ಧ್ವಜಾರೋಹಣ ಮಾಡುವ ಸೌಭಾಗ್ಯ ಪಾಲಿಕೆಯ ಸದಸ್ಯರಿಗೆ ಒಲಿದು ಬರಲಿಲ್ಲ. ಈ ವಿಷಯದಲ್ಲಿ ಸರಕಾರ ಮತ್ತು ಸ್ಥಳೀಯ ಬಿಜೆಪಿ ಶಾಸಕರ ಭರವಸೆ ಮತ್ತೂಮ್ಮೆ ಹುಸಿಯಾಗಿದೆ.   ಶಾಸಕರ ಮಾತು ನಂಬಿ ಮೇಯರ್‌ ಅಗುವ ಮೂಲಕ ದ್ವಜಾರೋಹಣ ಮಾಡುವ ಕನಸು ಕಂಡಿದ್ದ ಸದಸ್ಯರಿಗೆ ನಿರಾಸೆಯಾಗಿದೆ. ಜೊತೆಗೆ ಈ ನಿರಾಸೆಯ ಬೆನ್ನಲ್ಲೇ ಬಿಜೆಪಿ ಸದಸ್ಯರಲ್ಲಿ ಶಾಸಕರ ನಡೆಯ ಬಗ್ಗೆ ಅಸಮಾಧಾನ …

Read More »

ಸ್ವಾತಂತ್ರ್ಯ ದಿನಾಚರಣೆ; ಅಂಬೇಡ್ಕರ್ ಭಾವಚಿತ್ರ ಮರೆತ ತಾಲೂಕಾಡಳಿತ; ದಲಿತ ಸಂಘನೆಗಳ ಆಕ್ರೋಶ

ಚಿಕ್ಕೋಡಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆಯ ವೇಳೆ ಚಿಕ್ಕೋಡಿ ತಾಲೂಕಾಡಳಿತ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರ ಮರೆತಿದ್ದ ಹಿನ್ನಲೆ ದಲಿತ ಸಂಘಟನೆಗಳು ತಾಲೂಕಾಡಳಿತ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಚಿಕ್ಕೋಡಿ ನಗರದ ತಾಲೂಕು ಕ್ರೀಡಾಂಗಣದಲ್ಲಿ ನಡೆದ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನಾಚರಣೆ ಸಂದರ್ಭ ಚಿಕ್ಕೋಡಿ ತಾಲೂಕಾಡಳಿತ ಮಹಾತ್ಮಾ ಗಾಂಧೀಜಿಯವರ ಒಂದೇ ಪೋಟೋ ಇಟ್ಟು ಯಡವಟ್ಟು ಮಾಡಿಕೊಂಡಿದೆ.   ಡಾ. ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಬಿಟ್ಟು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ …

Read More »

ಸ್ವಾತಂತ್ರ್ಯ ದಿನಾಚರಣೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಚಾಮರಾಜಪೇಟೆ ಮೈದಾನ

ಬೆಂಗಳೂರು: ಹಲವು ವಿವಾದಗಳ ಬಳಿಕ ಚಾಮರಾಜಪೇಟೆ ಮೈದಾನದಲ್ಲಿ ಇಂದು ಬೆಳಿಗ್ಗೆ ಎಂಟು ಗಂಟೆಗೆ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿಲಾಯಿತು.   ಇದೇ ಪ್ರಥಮ ಬಾರಿಗೆ ಈ ಮೈದಾನದಲ್ಲಿ ಸರ್ಕಾರದಿಂದ ಆಯೋಜಿಸಿದ್ದ ಧ್ವಜಾರೋಹಣವನ್ನು ಉಪವಿಭಾಗಾಧಿಕಾರಿಗಳಾದ ಡಾ.ಎಂ. ಜಿ. ಶಿವಣ್ಣ ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸಂಸದರಾದ ಪಿ.ಸಿ. ಮೋಹನ್, ಶಾಸಕರಾದ ಜಮೀರ್ ಅಹಮ್ಮದ್, ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಉಪ ಪೊಲೀಸ್ …

Read More »

ಸ್ವಾತಂತ್ರ್ಯ ಹೋರಾಟಕ್ಕಾಗಿ ಬೊಮ್ಮಾಯಿ ಜೈಲುವಾಸ ಅನುಭವಿಸಿದ್ದರಾ?: ಸಿದ್ದರಾಮಯ್ಯ

ಬೆಂಗಳೂರು: ನೆಹರು ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಬೊಮ್ಮಾಯಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಜೈಲುವಾಸ ಅನುಭವಿಸಿದ್ದರಾ? ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.   ಕೆಪಿಸಿಸಿ ಕಚೇರಿಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಕ್ಕೆ‌ ನೆಹರು ಅವರ ಕೊಡುಗೆಯಿದೆ. ನೆಹರು ಜೈಲು ವಾಸ ಅನುಭವಿಸಿದ್ದರು. ಈಶ್ವರಪ್ಪ ಸ್ವಾತಂತ್ರ್ಯಕ್ಕಾಗಿ ಜೈಲಿಗೆ ಹೋಗಿದ್ರಾ? ಬೊಮ್ಮಾಯಿ ಜೈಲುವಾಸ ಅನುಭವಿಸಿದ್ರಾ? ಅವನ್ಯಾವನೋ ರವಿಕುಮಾರ್ ಜೈಲಿಗೆ …

Read More »

ಶಾಸಕ ಅಭಯ ಪಾಟೀಲ್ ವಿರುದ್ಧ ಪರೋಕ್ಷ ಕಿಡಿ ಕಾರಿದ :ಕಾರಜೋಳ

ಚಿರತೆ ಪತ್ತೆಗೆ ಮುಧೋಳ ನಾಯಿ ತರೋಣ: ಬೆಳಗಾವಿ ಜಿಲ್ಲೆಯಲ್ಲಿ ಚಿರತೆ ಹಾವಳಿ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಬೆಳಗಾವಿ ನಗರದಲ್ಲಿ ಪ್ರತ್ಯೇಕ್ಷವಾಗಿರುವ ಚಿರತೆ ಸೆರೆ ಹಿಡಿಯಲು 8 ಕಡೆಗಳಲ್ಲಿ ಬೋನ್ ಇಟ್ಟು ಕಾಯುತ್ತಿದ್ದಾರೆ. 50 ಜನ ಸಿಬ್ಬಂದಿ ನೇಮಕ ಮಾಡಲಾಗಿದೆ. ತಜ್ಞರನ್ನು ಸಹ ನೇಮಕ ಮಾಡಿದೆ. ಇಷ್ಟಕ್ಕೂ ಸೆರೆ ಸಿಗದಿದ್ದರೇ ಮುಧೋಳ ನಾಯಿಯನ್ನು ತಂದು ಚಿರತೆ ಸೆರೆ ಹಿಡಿಯಲಾಗುವುದು ಎಂದರು. ಶಾಸಕ ಅಭಯ ಪಾಟೀಲ್ ವಿರುದ್ಧ ಪರೋಕ್ಷ ಕಿಡಿ ಜಿಲ್ಲಾ ಉಸ್ತುವಾರಿ …

Read More »

ವಿಟಿಯು “ಜ್ಞಾನ ಸಂಗಮ”ದಲ್ಲಿ ಗಮನ ಸೆಳೆದ 100 ಮೀಟರ್ ತಿರಂಗಾ ರ್ಯಾಲಿ

ಬೆಳಗಾವಿ: ಬೆಳಗಾವಿಯ ವಿಶ್ವೇಶ್ವರಯ್ಯ ‌ತಾಂತ್ರಿಕ ವಿಶ್ವವಿದ್ಯಾಲಯ “ಜ್ಞಾನ ಸಂಗಮ”ದಲ್ಲಿ ಸ್ವಾತಂತ್ರ‍್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ 76ನೇ ಸ್ವಾತಂತ್ರ‍್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು. ವಿ ತಾ ವಿ ಯ ಕುಲಪತಿಗಳಾದ ಪ್ರೋ. ಕರಿಸಿದ್ದಪ್ಪ ಅವರು ಧ್ವಜಾರೋಹಣವನ್ನು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕರ್ನಲ್ ದೀಪಕ ಕುಮಾರ ಗುರುಂಗ ಆಗಮಿಸಿದ್ದರು. ಧ್ವಜಾರೋಹಣ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಷಣ ಮಾಡಿದ ಕರ್ನಲ್ ದೀಪಕ ಗುರುಂಗ, ಕನ್ನಡ ನಾಡನ್ನು ಆಳಿದ ರಾಜಮನೆತನಗಳ ಕೊಡುಗೆಗಳನ್ನು, ಸಂಗೀತ, …

Read More »

ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆಗೆ ಚಾಲನೆ ನೀಡಿದ ಸಿದ್ದರಾಮಯ್ಯ, ಡಿ.ಕೆ.ಶಿ.

ಬೆಂಗಳೂರು: 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಾಂಗ್ರೆಸ್ ಸ್ವಾತಂತ್ರ್ಯ ನಡಿಗೆಗೆ ಚಾಲನೆ ನೀಡಿದೆ. ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬೃಹತ್ ಪಾದಯಾತ್ರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದ್ದಾರೆ. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಆರಂಭವಾಗಿರುವ ಸ್ವಾತಂತ್ರ್ಯ ನಡಿಗೆ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೂ ನಡೆಯಲಿದೆ. ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್,ಡಿ,ಕೆ.ಸುರೇಶ್,ಜಮೀರ್ ಅಹ್ಮದ್, ರಾಮಲಿಂಗಾರೆಡ್ಡಿ, ಡಾ.ಜಿ.ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ದಿನೇಶ್ ಗುಂಡೂರಾವ್, ಲಕ್ಷ್ಮಿ ಹೆಬ್ಬಾಳ್ಕರ್, ಚೆನ್ನರಾಜ ಹಟ್ಟಿಹೊಳಿ ಸೇರಿದಂತೆ …

Read More »

ಕುಟುಂಬ ಸಮೇತ ತಾಯಿ ಸವದತ್ತಿ ಯಲ್ಲಮ್ಮನ ದರ್ಶನ ಪಡೆದ ಸಂತೋಷ್ ಜಾರಕಿಹೊಳಿ ಅವರು

ಸವದತ್ತಿ: ಸವದತ್ತಿ ಯಲ್ಲಮ್ಮ ನಮ್ಮ ಬೆಳಗಾವಿಯ ಆರಾಧ್ಯ ದೇವತೆ ಸದಾ ಭಕ್ತಿ ಭಾವ ಸಾಮಾಜಿಕ ಚಟುವಟಿಕೆ ಗಳಲ್ಲಿರುವ ಶ್ರೀ ಸಂತೋಷ್ ಜಾರಕಿಹೊಳಿ ಅವರು ಇಂದು ಕುಟುಂಬ ಸಮೇತ ತಾಯಿ ಯಲ್ಲಮ್ಮನ ಗುಡ್ಡಕ್ಕೆ ಪ್ರಯಾಣ ಬೆಳೆಸಿದ್ದರು. ಇಂದು 75ನೆಯ ಸ್ವತಂತ್ರ ಮಹೋತ್ಸವ ಅಂಗವಾಗಿ ಸವದತ್ತಿ ಕ್ಷೇತ್ರಕ್ಕೆ ಸಂತೋಷ್ ಜಾರಕಿಹೊಳಿ ಹಾಗೂ ಅವರ್ ಪತ್ನಿ ಹಾಗೂ ಮಗ ಸೂರ್ಯ ಶ್ರೇಷ್ಠ ಅವರ್ ಜೊತೆ ಭೇಟಿ ನೀಡಿ ತಾಯಿಯ ಆಶೀರ್ವಾದ ಪಡೆದರು. ಶ್ರಾವಣ ಮಾಸದಲ್ಲಿ …

Read More »

ಸಿಎಂ ಇತಿಹಾಸದ ಸತ್ಯ ಎತ್ತಿ ಹಿಡಿಯಲಿ: ಡಿಕೆ ಶಿವಕುಮಾರ್‌

ಬೆಂಗಳೂರು: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸರ್ಕಾರ ಪ್ರತಿಕೆಗಳಿಗೆ ನೀಡಿರುವ ಜಾಹೀರಾತಿನಲ್ಲಿ ದೇಶದ ಪ್ರಥಮ ಪ್ರಧಾನಿ ನೆಹರೂ ಅವರನ್ನು ಕಡೆಗಣಿಸಿದ್ದು, ಆಗಿರುವ ಪ್ರಮಾದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕ್ಷಮೆಯಾಚಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಒತ್ತಾಯಿಸಿದ್ದಾರೆ.   ಈ ಬಗ್ಗೆ ಭಾನುವಾರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ದೇಶ ಸ್ವಾತಂತ್ರ್ಯ ಹೋರಾಟ ಮತ್ತು ನವಭಾರತ ನಿರ್ಮಾಣದಲ್ಲಿ ನೆಹರು ಅವರ ಪಾತ್ರ ಬಹಳ ಹಿರಿದು. ಇದು ನಿಮಗೂ ಗೊತ್ತಿದೆ. ಈ ಇತಿಹಾಸ ಓದಿಯೇ …

Read More »

ಒತ್ತಾಯಪೂರಕವಾಗಿ ಧರ್ಮಾಚರಣೆ ಮಾಡಿಸುವುದು ಸರಿಯಲ್ಲ.

ರಾಯಚೂರು: ಒಬ್ಬರಿಂದ ಒತ್ತಾಯಪೂರಕವಾಗಿ ಧರ್ಮಾಚರಣೆ ಮಾಡಿಸುವುದು ಸರಿಯಲ್ಲ. ಇನ್ನೊಬ್ಬರ ಧರ್ಮದ ಬಗ್ಗೆ ಅಗೌರವ ತೋರಿಸದೇ ನಮ್ಮ ಧರ್ಮ ಆಚರಿಸಬೇಕು. ಇದನ್ನು ಎಲ್ಲರೂ ಅರ್ಥೈಸಿಕೊಂಡು ಸೌಹಾರ್ದವಾಗಿ ಬಾಳಬೇಕು ಎಂದು ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ತಿಳಿಸಿದರು.   ಮಂತ್ರಾಲಯದಲ್ಲಿ ಭಾನುವಾರ ಶ್ರೀ ರಾಘವೇಂದ್ರ ಸ್ವಾಮಿಗಳವರ 351ನೇ ಉತ್ತರಾರಾಧನೆ ನಿಮಿತ್ತ ಶ್ರೀ ಪ್ರಹ್ಲಾದರಾಜರ ಮಹಾರಥೋತ್ಸವಕ್ಕೆ ಚಾಲನೆ ನೀಡಿ ಅನುಗ್ರಹ ಸಂದೇಶ ನೀಡಿದ ಶ್ರೀಗಳು, ನಾವೆಲ್ಲ ಹಿಂದೂಗಳು. ಸನಾತನ ಭಾರತೀಯ ಹಿಂದೂ …

Read More »