ಮಡಿಕೇರಿ: ವಿರಾಜಪೇಟೆ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಹಲವರನ್ನು ಬಲಿ ಪಡೆದಿದ್ದ ನರಹಂತಕ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. 35 ವರ್ಷ ಪ್ರಾಯದ ಕಾಡಾನೆ ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ಉಪಟಳ ನೀಡುತ್ತಿತ್ತು. ಸಿದ್ದಾಪುರ ಸಮೀಪ ಕಾಫಿ ಬೆಳೆಗಾರರೊಬ್ಬರನ್ನು ಇತ್ತೀಚೆಗೆ ಬಲಿ ತೆಗೆದುಕೊಂಡಿತ್ತು. ಗ್ರಾಮಸ್ಥರು ಕಾಡಾನೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರು. ಬೆಳಗ್ಗೆಯಿಂದಲೇ 6 ಸಾಕಾನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಸಿದ್ದಾಪುರ, ಪಾಲಿಬೆಟ್ಟ, ಅಮ್ಮತ್ತಿ ಸುತ್ತಮುತ್ತಲ ಕಾಫಿ …
Read More »ರಕ್ತದಾನದ ಮನೋಭಾವ ಬೆಳಸಿಕೊಳ್ಳಿ: ಡಾ.ರವೀಂದ್ರ
ರಾಮದುರ್ಗ: ರಕ್ತದಾನ ಜೀವ ರಕ್ಷಣೆಗಿರುವ ಶ್ರೇಷ್ಠದಾನವಾಗಿದ್ದು ತುರ್ತು ಪರಿಸ್ಥಿ ಸಂದರ್ಭಗಳಲ್ಲಿ ಮುಕ್ತವಾಗಿ ರಕ್ತದಾನ ಮಾಡುವ ಮಾನವೀಯ ಮೌಲ್ಯಗಳನ್ನು ಬೆಳಸಿಕೊಳ್ಳಿ ಜೊತೆಗೆ ಸಾರ್ವಜನೀಕರಲ್ಲೂ ಅರಿವು ಮೂಡಿಸುವ ಕೆಲಸ ಮಾಡಿ ಎಂದು ಪ್ಯಾಥೋಲಾಜಿಸ್ಟ ಜನರಲ್ ಹಾಸ್ಪಿಟಲ್ ವೈದ್ಯರಾದ ಡಾ. ರವೀಂದ್ರ.ಜಿ. ಪಾಟೀಲ ಹೇಳಿದರು. ನಗರದ ಶ್ರೀಮತಿ ಐ. ಎಸ್ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ರೆಡಕ್ರಾಸ್ ಮತ್ತು ರಾಷ್ಟ್ರೀಯ ಸ್ವಯಂ ಸೇವಾ ಘಟಕಗಳ ಸಹಯೋಗದಲ್ಲಿ ಹಮ್ಮಿಕೊಂಡ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮುಖ್ಯ …
Read More »ಖಾನಾಪುರ: ಕೃಷ್ಣಾಪುರ ಗ್ರಾಮ ಸ್ಥಳಾಂತರಕ್ಕೆ ಚಿಂತನೆ, ಗ್ರಾಮಸ್ಥರ ಜತೆ ಚರ್ಚೆ
ಖಾನಾಪುರ: ಇತ್ತೀಚೆಗೆ ನಡೆದ ಹುಲಿಗಳ ಗಣತಿಯಲ್ಲಿ ಭೀಮಗಡ ವನ್ಯಜೀವಿ ಅಭಯಾರಣ್ಯದಲ್ಲಿ ಹುಲಿಗಳ ಸಂತತಿ ವೃದ್ದಿಯಾಗಿರುವ ಮಾಹಿತಿ ಲಭ್ಯವಾಗಿದೆ. ಇದೇ ರೀತಿ ನೆರೆಯ ದಾಂಡೇಲಿ ಅರಣ್ಯ ಮತ್ತು ಕಾಳಿ ಹುಲಿ ಮೀಸಲು ಅರಣ್ಯ ಮತ್ತು ಅಣಶಿ ರಾಷ್ಟ್ರೀಯ ಉದ್ಯಾನವನದಲ್ಲೂ ಹುಲಿಗಳ ಸಂತತಿಯಲ್ಲಿ ಹೆಚ್ಚಳವಾಗಿರುವ ಬಗ್ಗೆ ದಾಖಲೆಗಳು ಸಿಕ್ಕಿವೆ. ಮುಂದಿನ ವರ್ಷಗಳಲ್ಲಿ ಹುಲಿಗಳ ಸಂರಕ್ಷಣೆಗಾಗಿ ಈ ಅರಣ್ಯ ಪ್ರದೇಶಗಳಲ್ಲಿ ಮಾನವ ಹಸ್ತಕ್ಷೇಪದಿಂದ ದೂರ ಇಡಲು ಕೇಂದ್ರ ಸರ್ಕಾರ ಸಿದ್ಧತೆ ಆರಂಭಿಸಲಿದೆ ಎಂದು ಜಿಲ್ಲಾಧಿಕಾರಿ …
Read More »ಆರೋಗ್ಯ ಉಚಿತ ತಪಾಸಣಾ ಶಿಬಿರ 16ರಂದು
ಗೋಕಾಕ: ಉಚಿತ ಕಣ್ಣಿನ ಪೊರೆ ತಪಾಸಣೆ ಬೃಹತ್ ಶಿಬಿರವನ್ನು ಮಾರ್ಚ್ 16ರಂದು ಮುಂಜಾನೆ 9ರಿಂದ ಮಧ್ಯಾಹ್ನ 1:30ರ ವರೆಗೆ ತಾಲ್ಲೂಕಿನ ಮಮದಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದೆ. ಶಿಬಿರದಲ್ಲಿ ವಿಶೇಷವಾಗಿ ಮಕ್ಕಳ ತಪಾಸಣೆ, ರಕ್ತದೊತ್ತಡ, ಹೃದಯ, ಚರ್ಮರೋಗ ತಪಾಸಣೆ ಸಹ ಉಚಿತವಾಗಿ ಮಾಡಲಾಗುತ್ತಿದೆ. ಡಾ.ಎಂ.ಎಸ್.ಕೊಪ್ಪದ, ಡಾ.ಅಶೋಕ ಮುರಗೋಡ, ಡಾ.ಸಿದ್ದಣ್ಣ ಕಮತ, ಕಣ್ಣಿನ ತಜ್ಞ ಡಾ. ಸಂದೀಪ್ ಕೋಲಕಾರ, ಡಾ. ಅಮರ ಮುರುಗೋಡ, ಡಾ.ಪ್ರಮಿತಾ ಮುರುಗೋಡ, ಡಾ.ಪ್ರೀತಿ ಚೌಧರಿ ಹಾಗೂ ನೇತ್ರಾಧಿಕಾರಿ …
Read More »ನಂದಗಡ ಪೊಲೀಸ್ ಠಾಣೆ ಅಧಿಕಾರಿಗಳ ವಿರುದ್ಧ ದೂರು
ಖಾನಾಪುರ: ತಾಲ್ಲೂಕಿನ ನಂದಗಡ ಪೊಲೀಸ್ ಠಾಣೆಯ ಅಧಿಕಾರಿಗಳು ಸರ್ಕಾರದ ಆದೇಶವಿದ್ದರೂ ಕಳೆದ 8 ತಿಂಗಳಿಂದ ಪ್ರತಿ ತಿಂಗಳು ದಲಿತರ ದಿನವನ್ನು ಆಚರಿಸದೇ ದಲಿತ ಸಮುದಾಯದವರ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಮತ್ತು ದಲಿತರ ಸಭೆ ಆಯೋಜಿಸದೇ ಮೇಲಧಿಕಾರಿಗಳಿಗೆ ಸಭೆ ನಡೆಸಿರುವ ಬಗ್ಗೆ ಖೊಟ್ಟಿ ನಡಾವಳಿ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಸಂತೋಷ ತಳವಾರ ದೂರು ನೀಡಿದ್ದಾರೆ. ದಲಿತ ವಿರೋಧಿ ನೀತಿ ಅನುಸರಿಸುತ್ತಿರುವ ನಂದಗಡ ಪೊಲೀಸ್ ಠಾಣೆಯ ಅಧಿಕಾರಿಗಳ …
Read More »ಹಿರೇಬಾಗೇವಾಡಿ: ಸರ್ಕಾರಿ ಬಸ್ ಹಾಯ್ದು ಬೈಕ್ ಸವಾರ ಸಾವು
ಹಿರೇಬಾಗೇವಾಡಿ: ಸರ್ಕಾರಿ ಬಸ್ ಹಾಯ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಲ್ಲಿನ ಬಸವನಗರದ ಬಳಿ ಬೆಳಗಾವಿ- ಹಿರೇಬಾಗೇವಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಜರುಗಿದೆ. ಖಾನಾಪೂರ ತಾಲ್ಲೂಕಿನ ಅವರೊಳ್ಳಿ ಗ್ರಾಮದ ರಾಜಗೌಡ ಕಲ್ಲನಗೌಡ ಪಾಟೀಲ (45) ಮೃತರು. ಹಿಂಬದಿ ಕುಳಿತಿದ್ದ ಅವರ ಪತ್ನಿ ಸುನಿತಾ ಅವರು ಸಾಧಾರಣ ಗಾಯಗೊಂಡಿದ್ದಾರೆ. ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read More »ನನ್ನ ಕೊನೆ ಉಸಿರು ಇರೋವರೆಗೂ ರಾಜಕೀಯದಲ್ಲಿ ಇರುತ್ತೇನೆ: ಸಿದ್ದರಾಮಯ್ಯ
ಮೈಸೂರು: ನನ್ನ ಕೊನೆ ಉಸಿರು ಇರುವವರೆಗೂ ರಾಜಕೀಯದಲ್ಲಿ ಇದ್ದು, ಜನರ ಸೇವೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ವರಕೂಡು ಗ್ರಾಮದಲ್ಲಿ ಬೀರಶ್ವೇರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಅವರು ಮಾತನಾಡಿದರು. ಈ ವೇಳೆ, ನಾನು ರಾಜಕೀಯದಲ್ಲಿ ಸೋಲು – ಗೆಲವು ಕಂಡಿದ್ದೇನೆ. ಸೋತಾಗಲೂ ಜನ ಸೇವೆ ಬಿಟ್ಟಿಲ್ಲ. ಈಗೀಗ ಕ್ಷೇತ್ರಕ್ಕೆ ಹೆಚ್ಚು ಬರಲು ಆಗುತ್ತಿಲ್ಲ. ನನ್ನ ಮಗ ಯತೀಂದ್ರ ಬರುತ್ತಾರೆ. ನನ್ನನ್ನು ಬೆಳೆಸಿದಂತೆ ಯತೀಂದ್ರನನ್ನು ರಾಜಕೀಯವಾಗಿ ಬೆಳೆಸಿ …
Read More »ಶಾಲಾ ಮಕ್ಕಳ ಆತ್ಮಹತ್ಯೆ ತಡೆಗೆ ನೀತಿ ಜಾರಿ – ಮಹದೇವಪ್ಪ
ಬೆಂಗಳೂರು: ರಾಜ್ಯದ ಸರ್ಕಾರಿ ಶಾಲೆ, ವಸತಿ ಶಾಲೆ ಹಾಗೂ ವಸತಿ ನಿಲಯಗಳಲ್ಲಿ 27 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವಿಧಾನ ಪರಿಷತ್‌ನಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ ಮಾಹಿತಿ ನೀಡಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಕಾಂಗ್ರೆಸ್ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಪ್ರಶ್ನೆ ಕೇಳಿದರು. 3 ವರ್ಷಗಳಲ್ಲಿ ವಸತಿ ನಿಲಯಗಳಲ್ಲಿ ನೂರಾರು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮ ವೈಫಲ್ಯ, ವೈಯಕ್ತಿಕ ಕಾರಣ ಸೇರಿ ಹಲವು ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳುತ್ತಿದ್ದಾರೆ. 7-8ನೇ ತರಗತಿ …
Read More »ನಿಯಮ ಉಲ್ಲಂಘಿಸಿದರೆ ದಂಡ, ಶಿಕ್ಷೆ: ತಂಬಾಕು ಮಾರಾಟಗಾರರಿಗೆ ಎಚ್ಚರಿಕೆ
ಬೆಳಗಾವಿ: ತಂಬಾಕು ಹಾಗೂ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ ಮತ್ತು ಕೋಟ್ಟಾ-2003 ರ ಕಾಯ್ದೆ ಕುರಿತ ತರಬೇತಿ ಕಾರ್ಯಾಗಾರವನ್ನು ರಾಮದುರ್ಗ ತಾಲ್ಲೂಕಾ ಆರೋಗ್ಯಾಧಿಕಾರಿಗಳ ಕಚೇರಿ ಮತ್ತು ಪೊಲೀಸ್ ಇಲಾಖೆಯ ಸಹಯೋಗದಲ್ಲಿ ಗುರುವಾರ(ಮಾ.12) ರಾಮದುರ್ಗದಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿಪಿಐ ವಿನಾಯಕ ಬಡಿಗೇರ ಅವರು, ತಂಬಾಕು ಮಾರಾಟ ಮಾಡುತ್ತಿರುವ ಅಂಗಡಿ ಮಾಲೀಕರಿಗೆ ಕೋಟ್ಟಾ ಕಾಯ್ದೆ ಕುರಿತು ತಿಳಿಸಿದರು. ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಡಾ. ಶ್ವೇತಾ ಪಾಟೀಲ್, ತಂಬಾಕು …
Read More »ಯಲ್ಲಮ್ಮ ದೇವಸ್ಥಾನದ ಹುಂಡಿ ಏಣಿಕೆ: 3.07 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹ
ಬೆಳಗಾವಿ: ಸವದತ್ತಿಯ ಯಲ್ಲಮ್ಮನಗುಡ್ಡದ ಯಲ್ಲಮ್ಮ ದೇವಸ್ಥಾನದ ಹುಂಡಿಗಳ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, 3.07 ಕೋಟಿ ರೂ. ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ. ಈ ಬಾರಿ ಮಾರ್ಚ್ 9ರಿಂದ 12ರ ಅವಧಿಯಲ್ಲಿ ನಡೆದ ಎಣಿಕೆಯಲ್ಲಿ ದಾಖಲೆ ಕಾಣಿಕೆ ಸಂಗ್ರಹವಾಗಿದ್ದು, 2.78 ರೂ. ಕೋಟಿ ನಗದು, 16.16 ಲಕ್ಷ ಮೌಲ್ಯದ ಮೌಲ್ಯದ 100 ಗ್ರಾಂ ಚಿನ್ನಾಭರಣ, 12.35 ಲಕ್ಷ ಮೌಲ್ಯದ 4.547 ಕೆ.ಜಿ ಬೆಳ್ಳಿ ಆಭರಣ ಸಂಗ್ರಹವಾಗಿದೆ. ದೇವಸ್ಥಾನದ ಅಭಿವೃದ್ಧಿಗೆ ಹಣ ಬಳಸುವುದಾಗಿ ಅಧಿಕಾರಿಗಳು …
Read More »
Laxmi News 24×7