ಬೆಳಗಾವಿ: ಜೈಲಿನಿಂದಲೇ ಆರೋಪಿಯೊಬ್ಬರು ವಿಡಿಯೋ ಕಾಲ್ ಮೂಲಕ ಪುರಸಭೆ ಸಾಮಾನ್ಯ ಸಭೆಗೆ ಹಾಜರಾಗಿ ತನ್ನ ವಾರ್ಡ್ ಕುರಿತು ಸಭೆಯಲ್ಲಿ ಚರ್ಚೆ ನಡೆಸಿರುವ ಘಟನೆ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪುರಸಭೆಯ 14ನೇ ವಾರ್ಡ್ನ ಬಿಜೆಪಿ ಸದಸ್ಯ ಉಮೇಶ ಕಾಂಬಳೆ ಎಂಬ ಆರೋಪಿ ಸಾಮಾನ್ಯ ಸಭೆಯಲ್ಲಿ ವಿಡಿಯೋ ಕಾಲ್ ಮೂಲಕ ಭಾಗಿಯಾಗಿದ್ದಾರೆ. ಕಳೆದ ಎಂಟು ತಿಂಗಳ ಹಿಂದೆ ಕಂಟ್ರಿ ಪಿಸ್ತೂಲ್ ಬಳಸಿ ಗುಂಡಿಕ್ಕಿ ಮಹಿಳೆಯ ಕೊಲೆ ಆರೋಪದಲ್ಲಿ …
Read More »ಬೆಳಗಾವಿ- ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರ ಪ್ರತಿಭಟನೆ
ಬೆಳಗಾವಿ/ಹುಬ್ಬಳ್ಳಿ : ದೇಶದ ವಿವಿಧೆಡೆ ಪಿಎಫ್ಐ ಮುಖಂಡರ ಮನೆ ಮೇಲೆ ಎನ್ಐಎ ದಾಳಿ ನಡೆಸಿದ ಹಿನ್ನೆಲೆ ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿ ಪಿಎಫ್ಐ, ಎಸ್ಡಿಪಿಐ ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು. ನಗರದ ಹೊರವಲಯದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸಿದ ಪಿಎಫ್ಐ ಕಾರ್ಯಕರ್ತರು ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು. ಈ ವೇಳೆ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿದರು. ಆರ್‌ಎಸ್ಎಸ್ …
Read More »ಅನಾರೋಗ್ಯಕ್ಕೆ ತುತ್ತಾಗಿ ಚೆನ್ನೈಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಬೆಳಗಾವಿ: ಅನಾರೋಗ್ಯದ ಕಾರಣಕ್ಕೆ ಚೆನ್ನೈ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಹುಕ್ಕೇರಿ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿ ಹಾಗೂ ಶಾಸಕ ದುರ್ಯೋಧನ ಐಹೊಳೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಹುಕ್ಕೇರಿ ಶ್ರೀಗಳಿಂದ ಆನಂದ ಮಾಮನಿ ಆರೋಗ್ಯ ವಿಚಾರಣೆಈ ವೇಳೆ ಮಾತನಾಡಿದ ಚಂದ್ರಶೇಖರ ಸ್ವಾಮೀಜಿ, ಉಪಸಭಾಪತಿ ಆನಂದ ಮಾಮನಿ ಅವರ ಆರೋಗ್ಯ ಚೆನ್ನಾಗಿದೆ. ಯಾವುದೇ ಆತಂಕ …
Read More »ಅಥಣಿಯಲ್ಲಿ ಪೊಲೀಸರ ಕ್ಷಿಪ್ರ ಕಾರ್ಯಾಚರಣೆ.. ನವಜಾತ ಮಗು ಪತ್ತೆ.. ಸಿಕ್ಕಿ ಬಿದ್ದ ಕಳ್ಳಿ
ಅಥಣಿ: ಸಿನಿಮೀಯ ಮಾದರಿಯಲ್ಲಿ ಸರ್ಕಾರಿ ಆಸ್ಪತ್ರೆಯಿಂದ ನವಜಾತ ಶಿಶು ಕಳ್ಳತನ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಆದರೆ, ಎರಡೂವರೆ ಗಂಟೆಯಲ್ಲಿ ಮಗುವನ್ನು ಬೆಳಗಾವಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ನಿನ್ನೆಯಷ್ಟೇ ಜನಿಸಿದ್ದ ನವಜಾತ ಗಂಡು ಮಗು ಪತ್ತೆ ಹಚ್ಚಿ ತಾಯಿಗೆ ಹಸ್ತಾಂತರಿಸುವಲ್ಲಿ ಅಥಣಿ ಮತ್ತು ಕಾಗವಾಡ ಪೊಲೀಸರು ಯಶಸ್ವಿಯಾಗಿದ್ದು, ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಇಂದು ಬೆಳಗಿನ ಜಾವ 10.15 ಕ್ಕೆ ಸರ್ಕಾರಿ ಆಸ್ಪತ್ರೆಗೆ ನರ್ಸ್ …
Read More »ಶಿಕ್ಷಕರ ಅಕ್ರಮ ನೇಮಕಾತಿ: ಮತ್ತೊಬ್ಬ ಶಿಕ್ಷಕನ ಬಂಧನ
ವಿಜಯಪುರ: ಶಿಕ್ಷಕರ ಅಕ್ರಮ ನೇಮಕ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಸಿಒಡಿ ಪೊಲೀಸರು ಅಕ್ರಮ ನೇಮಕಾತಿಯಲ್ಲಿ ಕೈಚಳಕ ತೋರಿದ ವಿಜಯಪುರ ಜಿಲ್ಲೆಯ ಶಿಕ್ಷಕರನ್ನು ಒಬ್ಬೊಬ್ಬರಾಗಿ ಬಲೆಗೆ ಕೆಡವುತ್ತಿದ್ದಾರೆ. ಇದೀಗ ಮತ್ತೂಬ್ಬ ಶಿಕ್ಷಕ ಅಶೋಕ ಚವ್ಹಾಣ ಎಂಬಾತನನ್ನು ಬಂಧಿ ಸಿ ವಿಚಾರಣೆ ನಡೆಸಿದ್ದಾರೆ. ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ನಂಟು ಗಾಢವಾಗಿರುವುದು ಶಿಕ್ಷಕರ ಸರಣಿ ಬಂಧನ ಇಂಬು ನೀಡುತ್ತಿದೆ. ವಿಜಯಪುರ ಜಿಲ್ಲೆ ಬಸವನಬಾಗೇಬಾಡಿ ತಾಲೂಕಿನ ಭೈರವಾಡಗಿ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕನಾಗಿ ಸೇವೆ …
Read More »ಸರ್ಕಾರದ ಗೋಮಾಳ, ಕಾಣೆ,ಬಾಣೆ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಸಿಹಿಸುದ್ದಿ!
ಬೆಂಗಳೂರು : ಸರ್ಕಾರಕ್ಕೆ ಸೇರಿದ ಗೋಮಾಳ ಜಮೀನಿನಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಕಂದಾಯ ಸಚಿವ ಆರ್. ಅಶೋಕ್ ಸಿಹಿಸುದ್ದಿನೀಡಿದ್ದು, ಶೀಘ್ರವೇ ಜಮೀನು ಸಕ್ರಮಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ವಿಧಾನಪರಿಷತ್ ನಲ್ಲಿ ಈ ಕುರಿತು ಮಾಹಿತಿ ನೀಡಿರುವ ಸಚಿವರು, ಸರ್ಕಾರಕ್ಕೆ ಸೇರಿದ ಗೋಮಾಳ, ಗಾಯರಾಣ, ಹುಲ್ಲು ಬನ್ನಿ, ಸೊಪ್ಪಿನ ಬೆಟ್ಟ ಸೇರಿದಂತೆ ಕಾಣೆ, ಬಾಣೆ, ಕಮ್ಮಿ ಜಾಗದಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ಜಮೀನುಗಳನ್ನು ಸಕ್ರಮ ಮಾಡುವ ಸಂಬಂಧ ನೀತಿ ರೂಪಿಸಲು …
Read More »ಮೂಡಲಗಿ, ಕುಲಗೋಡ, ಖಾನಟ್ಟಿ ಹಾಗೂ ಬೆಟಗೇರಿಗೆ ಹೊಸ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯಗಳು ಮಂಜೂರು : ಶಾಸಕ ಬಾಲಚಂದ್ರ ಜಾರಕಿಹೊಳಿ*
*ಮೂಡಲಗಿ*: ಅರಭಾವಿ ವಿಧಾನಸಭಾ ಕ್ಷೇತ್ರಕ್ಕೆ 2022-23 ನೇ ಸಾಲಿನಲ್ಲಿ 4 ಹೊಸ ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಮಂಜೂರು ಆಗಿವೆ ಎಂದು ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದ್ದಾರೆ. ಮೂಡಲಗಿ ತಾಲೂಕಿನ ಮೂಡಲಗಿ, ಕುಲಗೋಡ, ಖಾನಟ್ಟಿ ಮತ್ತು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮಗಳಿಗೆ ವಿದ್ಯಾರ್ಥಿಗಳ ಅನುಕೂಲಕ್ಕೋಸ್ಕರ ಹೊಸ ಪದವಿ ಪೂರ್ವ ಕಾಲೇಜುಗಳನ್ನು ಮಂಜೂರು ಮಾಡಿಸಲಾಗಿದೆ. ಇದರಿಂದ ಮೂಡಲಗಿ ವಲಯದಲ್ಲಿ ಕಾಲೇಜುಗಳ ಸಂಖ್ಯೆ 9ಕ್ಕೇರಿದೆ …
Read More »ಬೆಳಗಾವಿಯಲ್ಲಿ ಮಕ್ಕಳ ಸುರಕ್ಷತೆ ಅರಿವು ಕಾರ್ಯಕ್ರಮ 2022 ಆಯೋಜನೆ
ಬೆಳಗಾವಿಯಲ್ಲಿ ನಗರ ಪೊಲೀಸ್ ಸೇರಿದಂತೆ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಕ್ಕಳ ಸುರಕ್ಷತೆ ಅರಿವು ಕಾರ್ಯಕ್ರಮ 2022ನ್ನು ಆಯೋಜಿಸಲಾಗಿತ್ತು. ಹೌದು ಇಂದು ಬುಧವರಾ ಬೆಳಗಾವಿ ನಗರದ ಜೀರಗೆ ಸಭಾ ಭವನದಲ್ಲಿ ಬೆಳಗಾವಿ ನಗರಪೊಲೀಸ್ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಮಲ್ಲ ಸುರಕ್ಷತೆ ಅರಿವು ಕಾರ್ಯಕ್ರಮ 2022ನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತರಾದ ಡಾ. ಎಂ.ಬಿ ಬೋರಲಿಂಗಯ್ಯ, ಡಿಡಿಪಿಐ ಬಸವರಾಜ್ ನಲವತ್‌ವಾಡ್, ಆರ್‌ಟಿಓ ಶಿವಾನಂದ ಮಗದುಮ್, ಪಾಲಿಕೆ ಆಯುಕ್ತರಾದ …
Read More »ಖಾನಾಪುರ ತಾಲೂಕಿನಲ್ಲಿ ಕಳ್ಳರ ಪತ್ತೆ ಹಚ್ಚಿ: ಎಸ್‍ಪಿಗೆ ಮನವಿ
ಖಾನಾಪೂರ ತಾಲೂಕಿನಲ್ಲಿ ಕಳ್ಳತನದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಹೀಗಾಗಿ ಕಳ್ಳರನ್ನು ಪತ್ತೆ ಹಚ್ಚಿ ಸೂಕ್ತ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಮುಖಂಡೆ ಧನಶ್ರೀ ಸರ್‍ದೇಸಾಯಿ ಹೌದು ಖಾನಾಪೂರ ತಾಲೂಕಿನಲ್ಲಿ ಕಳೆದ ಆರು ತಿಂಗಳಿನಿಂದ ಕಳ್ಳತನದ ಪ್ರಕರಣಗಳು ಹೆಚ್ಚುಗಿವೆ. ಇದರಲ್ಲಿ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗಿವೆ. ಇನ್ನು ಅನರಕ್ಷಸ್ಥರ ಜನರು, ರೈತರು ತಮ್ಮ ಮನೆಗಳಲ್ಲಿ ನಡೆದ ಕಳ್ಳತನಕ್ಕೆ ಸಂಬಂಧ ಪ್ರಕರಣಗಳನ್ನು ದಾಖಲಿಸಿಲ್ಲ. ಹೀಗಾಗಿ ತಕ್ಷಣ ಇದರ ಬಗ್ಗೆ ಸೂಕ್ತ ಕ್ರಮ …
Read More »ಬಾಲಕನ ಕಿಡ್ನ್ಯಾಪ್ ಗೆ ಯತ್ನ
ರಾಜ್ಯದಲ್ಲಿ ಮಕ್ಕಳ ಕಳ್ಳರ ಹಾವಳಿ ಇದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರದಾಡುತ್ತಿರುವಾಗಲೇ ವಿಜಯಪುರ ನಗರದಲ್ಲಿ ಅಪ್ರಾಪ್ತ ಬಾಲಕನ ಕಿಡ್ಯಾಪ್ ಆಥವಾ ಕಳ್ಳತನ ಯತ್ನಿಸಿರುವ ಘಟನೆ ನಡೆದಿದೆ. ಅಂಗಡಿಗೆ ಪೆನ್ ತರಲು ಹೋಗಿದ್ದ ವೇಳೆ ಅಪ್ರಾಪ್ತ ಬಾಲಕನನ್ನು ಬೈಕ್ ನಲ್ಲಿ ಇಬ್ಬರು ಯಾರೋ ಅಪರಿಚಿತರು ಎತ್ತೊಯ್ಯಿದ್ದಿದ್ದಾರೆ. ಭಾಸ್ಕರ್ ಶಿರನಾಳ (11) ಅಪಹರಣ ಅಥವಾ ಕಳ್ಳತನ ಮಾಡಲು ಯತ್ನಕ್ಕೋಳಗಾದ ಬಾಲಕನಾಗಿದ್ದು ಈ ಬಾಲಕನನ್ನು ಬೈಕ್ ನಲ್ಲಿ ಕರೆದೊಯ್ಯುವ ವೇಳೆ ಅವರಿಚಿತ ವ್ಯಕ್ತಿಗಳಿಂದ …
Read More »
Laxmi News 24×7