Breaking News

ಜಿಲ್ಲೆ

ಅಕ್ರಮ ಗಾಂಜಾ ಗಿಡ ಬೆಳೆಸಿದ ಆರೋಪಿ ಅಂದರ್

ಕಿತ್ತೂರು ಪೊಲೀಸ್ ಸಬ್‌ಇನ್ಸಪೇಕ್ಟರ್ ಎಚ್‌ಎಲ್ ಧರ್ಮಟ್ಟಿ, ಬೈಲಹೊಂಗಲ ಡಿಎಸ್‌ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಖಾನಾಪೂರ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ, ಶಿವಾನಂದ ಶಿವನೆಪ್ಪ ಕಾದ್ರೋಳ್ಳಿಯನ್ನು ಬಂಧಿಸಿ ಸುಮಾರು ೬೦ ಸಾವಿರ ರೂಪಾಯಿ ಮೌಲ್ಯದ ೬ ಕಿಲೋ ಗಾಂಜಾ ಗಿಡಗಳನ್ನು ಮತ್ತು ಗಾಂಜಾ ಮಾರಾಟದಿಂದ ಬಂದ ೧ ಸಾವಿರ ರೂಪಾಯಿ ನಗದನ್ನು ಜಪ್ತಿ ಮಾಡಲಾಗಿದೆ. ಆರೋಪಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದೆ. ಕಿತ್ತೂರು ಮತ್ತು ಖಾನಾಪೂರ ಪೊಲೀಸರ ಕಾರ್ಯವನ್ನು ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ ಪ್ರಶಂಸಿಸಿದ್ದಾರೆ.

Read More »

ವೀರಶೈವ, ಲಿಂಗಾಯತ ಒಂದೇ ನಾಣ್ಯದ ಮುಖಗಳು: ಈಶ್ವರ ಖಂಡ್ರೆ

ತುಮಕೂರು: ಎಲ್ಲ ಧರ್ಮ, ಜಾತಿಗಳಿಗೂ ಪ್ರಪಂಚದ ಮೊದಲ ಸಂಸತ್ತು ಎನಿಸಿಕೊಂಡಿರುವ ಅನುಭವ ಮಂಟಪದಲ್ಲಿ ಅವಕಾಶ ಕಲ್ಪಿಸಿದವರು ಬಸವೇಶ್ವರರು. ಮೌಡ್ಯದಿಂದ ಸಮಾಜವನ್ನು ಹೊರತರಬೇಕೆಂಬುದು ಅವರ ಕನಸಾಗಿತ್ತು. ಇಂತಹ ಕನಸನ್ನು ನನಸು ಮಾಡಲು ನಾವೆಲ್ಲರೂ ಕಟಿಬದ್ಧರಾಗಬೇಕಿದೆ, ವೀರಶೈವ, ಲಿಂಗಾಯತ ಎಂಬುದು ಶರಣ ಸಮಾಜವೆಂಬ ಒಂದು ನಾಣ್ಯದ ಎರಡು ಮುಖಗಳು ಎಂದು ಅಖಿಲ ಭಾರತ ವೀರಶೈವ, ಲಿಂಗಾಯತ ಮಹಾಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಈಶ್ವರ ಖಂಡ್ರೆ ಹೇಳಿದರು.   ನಗರದ ಶ್ರೀ …

Read More »

ಬಿಜೆಪಿ ವಿರುದ್ಧ ಖಾನಾಪುರದಲ್ಲಿ ದಲಿತರ ಪ್ರತಿಭಟನೆ

ಖಾನಾಪೂರದಲ್ಲಿ ವಿವಿಧ ದಲಿತ ಸಂಘಟನೆಗಳ ಒಕ್ಕೂಟದಿಂದ ಸತೀಶ ಜಾರಕಿಹೊಳಿ ಅವರ ವಿರುದ್ಧ ಮಾಡಿದ ಪ್ರತಿಭಟನೆ ಖಂಡಿಸಿ ಕಾನೂನಾತ್ಮಕ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲಾಯಿತು. ದಿನಾಂಕ ೧೧ ರಂದು ಖಾನಾಪೂರ ತಾಲೂಕಿನ ಬಿಜೆಪಿ ಸಂಘ ಪರಿವಾರದವರು ಎಲ್ಲ ಹಿಂದೂ ಪರ ಸಂಘಟನೆಗಳು ಒಂದಾಗಿ ಖಾನಾಪೂರ ಪಟ್ಟಣದ ಶಿವಸ್ಮಾರಕದ ಎದುರು ಸತೀಶ್ ಅಣ್ಣಾ ಜಾರಕಿಹೊಳಿಯವರ ವಿರುದ್ಧ ಅವರ ಪ್ರತಿಕೃತಿಯನ್ನು ದಹಿಸಿ ಅವರ ಭಾವಚಿತ್ರಕ್ಕೆ ಅವಮಾನ ಮಾಡೋವ ಮೂಲಕ ಇಡೀ ದಲಿತ ಸಮಾಜಕ್ಕೆ ಧಕ್ಕೆ …

Read More »

ಶಾಲಾ ವಾಹನ ಪಲ್ಟಿ-12 ವಿದ್ಯಾರ್ಥಿಗಳಿಗೆ ಗಾಯ

ನಿಯಂತ್ರಣ ತಪ್ಪಿ ಶಾಲಾ ವಾಹನ ಪಲ್ಟಿಯಾದ ಪರಿಣಾಮ ೧೨ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಕರಿಕಟ್ಟಿ ರಸ್ತೆಯಲ್ಲಿ ನಡೆದಿದೆ. ಸವದತ್ತಿಯ ಕುಮಾರೇಶ್ವರ ಶಾಲೆಗೆ ಬರುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಾಹನ ರಸ್ತೆ ಬದಿಗೆ ಪಲ್ಟಿಯಾಗಿದೆ. ಕರಿಕಟ್ಟಿ-ಅಸುಂಡಿ ಗ್ರಾಮದಿಂದ ಸವದತ್ತಿ ಕುಮಾರೇಶ್ವರ ಶಾಲೆಗೆ ಬರುತ್ತಿದ್ದ ವಾಹನದಲ್ಲಿ ೩೮ ಮಕ್ಕಳು ಪ್ರಯಾಣಿಸುತ್ತಿದ್ದರು. ಇದರಲ್ಲಿ ೧೨ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟಗಾಯಗಳಾಗಿವೆ. ಸವದತ್ತಿ ಸರ್ಕಾರಿ ಆಸ್ಪತ್ರೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸೆ …

Read More »

ಶ್ರೀ ಸಂತೋಷ್ ಜಾರಕಿಹೊಳಿ ಅವರ ಶ್ರೇಷ್ಠ ಫೌಂಡೇಶನ್ ವತಿಯಿಂದ ಈ ವಾರದ ಅನ್ನ ಸಂತರ್ಪಣೆ ಕಾರ್ಯಕ್ರಮ ರಮದುರ್ಗದಲ್ಲಿ

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯ ರಾಮದುರ್ಗ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ರಾಮದುರ್ಗ ತಾಲೂಕಿನ ಕೆ ಚಂದರಗಿ ಗ್ರಾಮದಲ್ಲಿ ಹುನುಮಂತ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮಿ …

Read More »

ಗೋಕಾಕ ಶಿಂಗಳಾಪುರ ಬ್ರಿಡ್ಜ್ ಕಮ್ ಬ್ಯಾರೇಜ್ ಬಳಿ ಶವ ಪತ್ತೆ,

ಗೋಕಾಕ ಶಿಂಗಳಾಪುರ ಬ್ರಿಡ್ಜ್ ಕಮ್ ಬ್ಯಾರೇಜ್ ಬಳಿ ಶವ ಪತ್ತೆ, ನದಿಯಲ್ಲಿ ತೇಲಿ ಬಂದಿರುವ ಪುರುಷನ ಶವ, ‌ಗೋಕಾಕ ತಾಲೂಕಿನ ಶಿಂಗಳಾಪುರ ಬ್ರಿಡ್ಜ್, ಘಟಪ್ರಭಾ ನದಿಯಲ್ಲಿ ತೇಲಿ ಬಂದಿರುವ ಪುರುಷನ ಶವ, ಸ್ಥಳಕ್ಕೆ ಗೋಕಾಕ ನಗರ ಠಾಣೆ ಪೊಲೀಸರ ಭೇಟಿ ಪರಿಶೀಲನೆ, ಗೋಕಾಕ ನಗರ ಠಾಣೆಯಲ್ಲಿ ಪ್ರಕರಣ ದಾಖಲು,

Read More »

ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆ: ಡಿಸೆಂಬರ್‌ವರೆಗೆ ಗಡುವು‌ ನೀಡಿದ ರಾಜ್ಯ ಸರ್ಕಾರ

ದಾವಣಗೆರೆ: ನೌಕರರು ಡಿಸೆಂಬರ್‌ ಅಂತ್ಯದೊಳಗೆ ಕಂಪ್ಯೂಟರ್‌ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಎಂದು ರಾಜ್ಯ ಸರ್ಕಾರ ಗಡುವು ನೀಡಿದೆ. ಈ ಸಂಬಂಧ ಆದೇಶ ಹೊರಡಿಸಿರುವ ಸರ್ಕಾರ, ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ ಸೇವಾ ಬಡ್ತಿ, ವೇತನ ಬಡ್ತಿಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. 50 ವರ್ಷ ದಾಟಿದ ನೌಕರರಿಗೆ ಈ ಪರೀಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ‘ಇತ್ತೀಚೆಗೆ ನೌಕರಿಗೆ ಸೇರಿದವರು ಕಂಪ್ಯೂಟರ್‌ ಜ್ಞಾನ ಹೊಂದಿದ್ದಾರೆ. ಆದರೆ, 20-25 ವರ್ಷಗಳ ಸೇವಾವಧಿ ಪೂರೈಸಿರುವ ಅನೇಕರು ಮೂರ್ನಾಲ್ಕು ಬಾರಿ ಪರೀಕ್ಷೆ …

Read More »

ನನಗೆ ಇನ್ನು 75 ವರ್ಷ ಆಗಿಲ್ಲ ,25 ವರ್ಷ ಶುರುವಾಗಿದೆ: ಪ್ರಭಾಕರ್ ಕೋರೆ

ನನಗೆ ಇನ್ನು 75 ವರ್ಷ ಆಗಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಯಾಕೆಂದರೆ ಇಷ್ಟೇಲ್ಲಾ ಆಶೀರ್ವಾದ ಇದ್ದ ಮೇಲೆ ಈಗ ನನಗೆ 25 ವರ್ಷ ಶುರುವಾಗಿದೆ ಎಂದು ಕೆಎಲ್‍ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ್ ಕೋರೆ ಅವರು ಹರ್ಷ ವ್ಯಕ್ತಪಡಿಸಿದರು. ಬೆಳಗಾವಿಯ ಶಿವಬಸವ ನಗರದಲ್ಲಿರುವ ನಾಗನೂರು ರುದ್ರಾಕ್ಷಿಮಠದ ಆರ್.ಎನ್.ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಆವರಣದಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಮಠಾಧಿಪತಿಗಳು ವಿಷಯ ಮೇಲೆ ಮಠಾಧೀಶರ ಬೃಹತ್ ಚಿಂತನಾ ಸಮಾವೇಶ ಮತ್ತು ಡಾ.ಪ್ರಭಾಕರ್ ಕೋರೆಯವರ ಅಮೃತ ಮಹೋತ್ಸವದ …

Read More »

ಮುರುಘಾ ಶ್ರೀ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ: ಸ್ಪೋಟಕ ಸಂಗತಿಗಳು ಬಹಿರಂಗ

ಚಿತ್ರದುರ್ಗದ ಮುರುಘಾ ಶ್ರೀ ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದೆ. ಡಿವೈಎಸ್ಪಿ ಅನಿಲ್‌ ನೇತೃತ್ವದಲ್ಲಿ ಪ್ರಕರಣದ ತನಿಖೆ ನಡೆಯುತ್ತಿದ್ದು, 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. 347 ಪುಟಗಳ 2ಸೆಟ್ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ. A1ಮುರುಘಾ ಸ್ವಾಮಿ, A2 ಲೇಡಿ ವಾರ್ಡನ್ (ರಶ್ಮಿ), A 4 ಕಾರ್ಯದರ್ಶಿ ಪರಮಶಿವಯ್ಯ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದ್ದು, A 3 ಮಠದ ಉತ್ತರಾಧಿಕಾರಿ, A 5 ವಕೀಲ …

Read More »

ಕಬ್ಬು ಹೋರಾಟವನ್ನು ಕಡೆಗಣಿಸದಿರಿ: ರೈತರ ಕಟ್ಟಕಡೆಯ ಎಚ್ಚರಿಕೆ!

ಬಾಗಲಕೋಟೆ: ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಇಂದು ಮುಧೋಳ ನಗರದಲ್ಲಿ ರೈತ ಮುಖಂಡರ ಜತೆ ಸಭೆ ನಡೆಸಿದರು. ಸಭೆಯಲ್ಲಿ ಬಾಗಲಕೋಟೆ ಎಸ್​​​ಪಿ ಜಯಪ್ರಕಾಶ್ ಕೂಡ ಹಾಜರಿದ್ದರು. ಈ ವೇಳೆ ‘ಕಬ್ಬು ಬೆಳೆಗಾರರು ಶಾಂತ ರೀತಿಯಲ್ಲಿ ಹೋರಾಟ ಮಾಡಬೇಕು, ಎಂತಹ ಸಂದರ್ಭದಲ್ಲೂ ರೈತರು ಕಾನೂನು ಕೈಗೆ ತೆಗೆದುಕೊಳ್ಳಬಾರದು’ ಎಂಬ ಕಿವಿಮಾತನ್ನು ಹೇಳಿದರು. ಇದೇ ವೇಳೆ ಮಾತನಾಡಿದ ರೈತರು, ‘ಕಬ್ಬಿನ ಹಂಗಾಮು ಪ್ರಾರಂಭವಾಗಿ …

Read More »