Breaking News

ಜಿಲ್ಲೆ

ಕ್ರಿಕೆಟ್ ಆಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ*

*ಕ್ರಿಕೆಟ್ ಆಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ*   *ನಾಗನೂರ*- ನಾಗನೂರ ಪ್ರಿಮಿಯರ್ ಲೀಗ್ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕ್ರಿಕೆಟ್ ಆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೊದಲಿಂದಲೂ ಕ್ರಿಕೆಟ್ ಬಗ್ಗೆ ಅಪಾರ ಅಭಿಮಾನವನ್ನು ಜೊತೆಗೆ ಕ್ರಿಕೆಟ್ ಆಟಗಾರರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರು ಅಭಿಮಾನಿಗಳ ಒತ್ತಾಯದ ಮೇರೆಗೆ ಬ್ಯಾಟಿಂಗ್ ಮಾಡುವ ಮೂಲಕ ನೆರೆದ ಸಭಿಕರನ್ನು ರಂಜಿಸಿದರು. ಹಿರಿಯ ಸಹಕಾರಿ ಬಿ.ಆರ್. ಪಾಟೀಲ ಹಾಗೂ ಮಾಜಿ ಸಚಿವ ಆರ್. …

Read More »

ಖಾನಾಪುರ: ವೃದ್ಧೆಗೆ ನ್ಯುಮೋನಿಯಾ- ಜಿಲ್ಲಾಸ್ಪತ್ರೆಗೆ ದಾಖಲು

ಖಾನಾಪುರ  ತಾಲ್ಲೂಕಿನ ನಾವಗಾ ಹೊರವಲಯದ ಅರಣ್ಯದಲ್ಲಿ ಸೋಮವಾರ ಪತ್ತೆಯಾದ 90 ವರ್ಷದ ವೃದ್ಧೆ ನ್ಯುಮೋನಿಯಾದಿಂದ ಬಳಲುತ್ತಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ. ‘ತೀವ್ರ ನಿತ್ರಾಣಗೊಂಡ ಅಜ್ಜಿ ಸರಿಯಾಗಿ ಮಾತನಾಡುವಷ್ಟು ಚೇತರಿಸಿಕೊಂಡಿಲ್ಲ. ತನ್ನ ಹೆಸರು ಅಂಬವ್ವ ಕಾಟಗಾರಿ, ಊರಿನ ಹೆಸರು ಉಗರಖೋಡ ಎಂದಷ್ಟೇ ಹೇಳಿದ್ದಾರೆ. ಅವರ ಗುರುತು ಪತ್ತೆಗೆ ಯತ್ನ ನಡೆದಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ‘ನಾಲ್ಕೈದು ದಿನಗಳಿಂದ ಅನ್ನ-ನೀರು ಸೇವಿಸದೇ ಚಳಿಯಲ್ಲಿ ಬಿದ್ದಿದ್ದರಿಂದ ಅಜ್ಜಿ ದೇಹ …

Read More »

ಛತ್ರಪತಿ ಶಿವಾಜಿ, ಹಿಂದೂ ದೇವತೆಗಳ ಅಶ್ಲೀಲ ಚಿತ್ರಣ: ಜಾಲತಾಣದಲ್ಲಿ ಪೋಸ್ಟ್‌

ಬೆಳಗಾವಿ: ಛತ್ರಪತಿ ಶಿವಾಜಿ ಹಾಗೂ ಹಿಂದೂ ದೇವತೆಗಳ ಚಿತ್ರಗಳಿಗೆ ಅಶ್ಲೀಲ ಚಿತ್ರಗಳನ್ನು ಅಂಟಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಈ ಚಿತ್ರಗಳು ಮಂಗಳವಾರ ನಗರದ ಹಲವರ ಮೊಬೈಲ್‌ಗಳಿಗೂ ಬಂದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಇಸ್ಲಾಮ್‌ ಜಿಂದಾಬಾದ್‌ 786, ಕಿಂಗ್‌ ಕಿ ಜಾನ್, ಇಟ್ಸ್‌ ಅರ್ಮಾನ್‌ ಟೈಗರ್‌, ಆರ್‌.ಎಕ್ಸ್‌.ಇಮ್ರಾನ್, ಪ್ರಸಾದ್… ಎಂಬ ಹೆಸರಿನ ಖಾತೆಗಳಲ್ಲಿ ಈ ಪೋಸ್ಟರ್‌ಗಳು ಅಪ್ಲೋಡ್‌ ಆಗಿವೆ. ಕೆಲವು ಎರಡು ದಿನಗಳ ಹಿಂದೆ ಅಪ್ಲೋಡ್‌ ಮಾಡಿದ್ದು, ಇನ್ನು ಕೆಲವನ್ನು ಮಂಗಳವಾರವೇ ಹಾಕಲಾಗಿದೆ. ಈ …

Read More »

ಹಿರೇಬಾಗೇವಾಡಿ: ಟ್ರ್ಯಾಕ್ಟರ್‌ಗೆ ಟಿಪ್ಪರ್ ಡಿಕ್ಕಿ, ಚಾಲಕ ಸ್ಥಳದಲ್ಲೇ ಸಾವು

ಹಿರೇಬಾಗೇವಾಡಿ (ಬೆಳಗಾವಿ ತಾ): ಸಮೀಪದ ಸುವರ್ಣ ವಿಧಾನಸೌಧದ ಬಳಿ ಬುಧವಾರ ರಾಷ್ಟ್ರೀಯ ಹೆದ್ದಾರಿಯ ಪಕ್ಕದ ರಸ್ತೆಯಲ್ಲಿ ಟ್ರ್ಯಾಕ್ಟರಿಗೆ ಟಿಪ್ಪರ್ ಡಿಕ್ಕಿ ಹೊಡೆದು ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಾಲ್ಲೂಕಿನ ಹಲಗಾ ಗ್ರಾಮದ ಸಂತೋಷ ಮಹಾವೀರ ಹುಡೇದ (23) ಮೃತಪಟ್ಟವರು.   ಸುವರ್ಣ ವಿಧಾನಸೌಧದ ಎದುರಿನ ಕಮಕಾರಟ್ಟಿ ರಸ್ತೆಯಲ್ಲಿ ಖಡಿ ತರಲು ಟ್ರ್ಯಾಕ್ಟರ್ ಹೊರಟಿತ್ತು. ಖಡಿ ತುಂಬಿಕೊಂಡು ಬಂದ ಟಿಪ್ಪರ್ ವಾಹನ ಟ್ರ್ಯಾಕ್ಟರನ್ನು ಹಿಂದಿಕ್ಕುವ ಭರದಲ್ಲಿ ಎರಡೂ ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿತು. …

Read More »

ಕಮಲ” ಮತ್ತೊಮ್ಮೆ ಅರಳಲು ಕಾರ್ಯಕರ್ತರು ಶ್ರಮಿಸಿ : ಶಾಸಕ ಬಾಲಚಂದ್ರ ಜಾರಕಿಹೊಳಿ

  *ವಡೇರಹಟ್ಟಿ (ಮೂಡಲಗಿ)-* ತಮ್ಮೆಲ್ಲ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಪಕ್ಷ ವಹಿಸಿರುವ ಸಂಘಟನಾತ್ಮಕ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಲು ಶ್ರಮಿಸುವಂತೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯಕರ್ತರಿಗೆ ಕರೆ ನೀಡಿದರು. ತಾಲೂಕಿನ ವಡೇರಹಟ್ಟಿ ಗ್ರಾಮದಲ್ಲಿ ಸೋಮವಾರ ಸಂಜೆ ಅರಭಾವಿ ಬಿಜೆಪಿ ಮಂಡಲದಿಂದ ವಿಜಯ ಸಂಕಲ್ಪ ಅಭಿಯಾನದ ನಿಮಿತ್ಯ ಹಮ್ಮಿಕೊಂಡಿದ್ದ ಮತಗಟ್ಟೆ ಶಕ್ತಿಕೇಂದ್ರ, ಪೇಜ್ …

Read More »

ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ಗುಂಡಿನ ದಾಳಿ

ಬೆಳಗಾವಿ: ರಾಯಬಾಗ ತಾಲೂಕಿನ ಹಾರೂಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಸವಸುದ್ದಿ ಗ್ರಾಮದಲ್ಲಿ ಗುಂಡಿನ ದಾಳಿ ನಡೆದಿದೆ.   ಸಂಬಂಧಿಕರ ನಡುವಿನ ವ್ಯಾಜ್ಯದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ.  ಶ್ರೀಶೈಲ್ ಬಾಳಪ್ಪ ಪಾಟೀಲ್ ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ 2 ಸುತ್ತು ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಲ್ಲಿ ಯಾರಿಗೂ  ಅಪಾಯವಾಗಿಲ್ಗಾಲ. ಆದರೆ  ಈ ವೇಳೆ ನಡೆದ ಹೊಡೆದಾಟದಲ್ಲಿ, ಗುಂಡು ಹಾರಿಸಿದ ಆರೋಪಿ ಶ್ರೀಶೈಲ ಪಾಟೀಲ ಗಾಯಗೊಂಡಿದ್ದಾನೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು …

Read More »

ಸಂಕೇಶ್ವರ: ಅಪರಿಚಿತ ವಾಹನ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

ಸಂಕೇಶ್ವರ : ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸಂಕೇಶ್ವರ ನಗರದ ಹೊರವಲಯದ ಪೂನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಸೋಮವಾರ ರಾತ್ರಿ ನಡೆದಿದೆ.   ಮೃತಪಟ್ಟಿರುವ ವ್ಯಕ್ತಿಯ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ. ಈ ಅಪಘಾತದಲ್ಲಿ ಬೈಕ್ ಸವಾರನ ದೇಹವು ಮೂರು ಭಾಗವಾಗಿ ತುಂಡರಿಸಿದಂತಾಗಿದೆ. ಬೈಕ್ ಗೆ ಢಿಕ್ಕಿ ಹೊಡೆದು ಪರಾರಿಯಾಗಿರುವ ಅಪರಿಚಿತ ವಾಹನ ಪತ್ತೆ ಹಚ್ಚಲು ಸಂಕೇಶ್ವರ ಪೊಲೀಸರು …

Read More »

ಸಿದ್ದರಾಮಯ್ಯ ಕ್ಷೇತ್ರದ ಸ್ಫೋಟಕ ಭವಿಷ್ಯ ನುಡಿದ BSY

ಬೆಳಗಾವಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಸ್ಪರ್ಧೆ ಕ್ಷೇತ್ರದ ಬಗ್ಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಕೋಲಾರದಿಂದ ಸ್ಪರ್ಧೆ ಮಾಡುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.   ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸುವುದಿಲ್ಲ. ಕೋಲಾರದಿಂದ ಸ್ಪರ್ಧಿಸಿದರೆ ಅವರಿಗೆ ಸೋಲು ನಿಶ್ಚಿತ. ಇದು ಸಿದ್ದರಾಮಯ್ಯನವರಿಗೂ ಗೊತ್ತು. ಕೋಲಾರದಿಂದ ಸ್ಪರ್ಧಿಸುವುದಾಗಿ ಡ್ರಾಮಾ ಮಾಡ್ತಿದ್ದಾರೆ. ಇದೆಲ್ಲ ರಾಜಕೀಯ ದೊಂಬರಾಟ ಎಂದು ಹೇಳಿದರು. ಅಂತಿಮವಾಗಿ ಸಿದ್ದರಾಮಯ್ಯ ಮೈಸೂರಿಗೆ …

Read More »

ಭರವಸೆ ಈಡೇರಿಸದಿದ್ದರೆ ರಾಜಕೀಯ ನಿವೃತ್ತಿ: ಸಿದ್ದರಾಮಯ್ಯ

ಹಾಸನ: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 200 ಯೂನಿಟ್ ಉಚಿತ ವಿದ್ಯುತ್, ಕುಟುಂಬದ ಯಜಮಾನಿಗೆ ₹2 ಸಾವಿರ ಸಹಾಯಧನ, 10 ಕೆ.ಜಿ. ಅಕ್ಕಿಯನ್ನು ಕೊಡುವುದಾಗಿ ಭರವಸೆ ನೀಡಿದ್ದೇವೆ.‌ ಅದನ್ನು‌ ಈಡೇರಿಸುತ್ತೇವೆ. ಒಂದು‌ ವೇಳೆ‌ ಈಡೇರಿಸದೇ ಹೋದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇವೆ’ ಎಂದು ವಿಧಾನಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ‌ ಹೇಳಿದರು.   ಇಲ್ಲಿ ಶನಿವಾರ ನಡೆದ ‘ಪ್ರಜಾಧ್ವನಿ‌’ ಯಾತ್ರೆಯಲ್ಲಿ‌ ಮಾತನಾಡಿರುವ ಅವರು, ‘ಈ ಬಗ್ಗೆ ಜಿಲ್ಲೆಯ ಪ್ರತಿಯೊಬ್ಬರಿಗೆ ಪಕ್ಷದ ಕಾರ್ಯಕರ್ತರೂ ಮನವರಿಕೆ ಮಾಡಿಕೊಡಬೇಕು. ಜಿಲ್ಲೆಯಲ್ಲಿ …

Read More »

ಬೆಳಗಾವಿ: ಗೋ ಶಾಲೆಗೆ ಭೂಮಿಪೂಜೆ

ಬೆಳಗಾವಿ: ‘ಗೋಗಳ‎ ರಕ್ಷಣೆ ಹಾಗೂ ಪಾಲನೆ ಮಾಡುವುದು‎ ಪುಣ್ಯದ‎ ಕೆಲಸ. ಇದಕ್ಕಾಗ ಗೋ ಶಾಲೆ ತೆರೆದ ಆಸರೆ ಫೌಂಡೇಷನ್ ಕಾರ್ಯ‎ ಶ್ಲಾಘನೀಯ ಈ‎ ಕಾರ್ಯಕ್ಕೆ ಬೇಕಾದ‎ ಸಹಾಯ, ಸಹಕಾರ ಒದಗಿಸಲು ಸದಾ‎ ಸಿದ್ಧ’ ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು.   ಇಲ್ಲಿನ ಆಸರೆ ಫೌಂಡೇಷನ್ ವತಿಯಿಂದ ತಾಲ್ಲೂಕಿನ ಕೆ.ಕೆ.ಕೊಪ್ಪ ಗ್ರಾಮದಲ್ಲಿ ತೆರೆದ ಗೋಶಾಲೆಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಚಲನ‎ಚಿತ್ರ ನಟ‎, ನಿರ್ಮಾಪಕ ಅಕ್ಷಯ್ ಚಂದ್ರಶೇಖರ್‎ ಮಾತನಾಡಿದರು. ಫೌಂಡೇಷನ್‌ …

Read More »