Breaking News

ಜಿಲ್ಲೆ

ಮಾರ್ವಲಸ್ ಬೆಳಗಾಂ ಅಡ್ಮಿನ್ ರಾಖೇಶ್ ನಂದಗಡಕರ್&ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ವಿಶಾಲ ಕಂಟ್ರಿ ಸೈಡ್ ಹೊಟೆಲ್ ಸಿಬ್ಬಂದಿ

ಬೆಳಗಾವಿ: ಊಟ ಮಾಡಲು ಹೋದ ತಮ್ಮ ತಂಡದ ಮೇಲೆ ಹೊಟೆಲ್ ಸಿಬ್ಬಂದಿ ತೀವ್ರತರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಬೆಳಗಾವಿಯ ಸೋಶಿಯಲ್ ಮೀಡಿಯಾ ಮಾರ್ವಲಸ್ ಬೆಳಗಾಂ ಅಡ್ಮಿನ್ ರಾಖೇಶ್ ನಂದಗಡಕರ್ ಪೊಲೀಸ್ ದೂರು ದಾಖಲಿಸಿದ್ದಾರೆ. ಸುಳಗಾದ ವಿಶಾಲ ಕಂಟ್ರಿ ಸೈಡ್ ಎನ್ನುವ ಹೊಟೆಲ್ ಗೆ ಮಾರ್ಚ್ 9ರ ರಾತ್ರಿ ತಾವು ಸುಮಾರು 25 ಜನರು ಊಟಕ್ಕೆ ತೆರಳಿದ್ದಾಗಿಯೂ, ಆ ವೇಳೆ ಅಲ್ಲಿನ ಸಿಬ್ಬಂದಿ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದ್ದಲ್ಲದೆ, ಜಗಳ ಮಾಡಿ ಹೊಟೆಲ್ ಪಾತ್ರೆಗಳಿಂದ …

Read More »

ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.‌ ಧ್ರುವ ನಾರಾಯಣ (60) ಹೃದಯಾಘಾತದಿಂದನಿಧನ

ಮೈಸೂರು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.‌ ಧ್ರುವ ನಾರಾಯಣ (60) ಹೃದಯಾಘಾತದಿಂದ ಶನಿವಾರ ನಿಧನರಾಗಿದ್ದಾರೆ. ನಗದಲ್ಲಿನ ಅವರ ಮನೆಯಲ್ಲಿ ಶುಕ್ರವಾರ ತಡರಾತ್ರಿಯಲ್ಲಿ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು ಎಂದು ಮೂಲಗಳು ತಿಳಿಸಿವೆ.   1983 ರಲ್ಲಿ ಕಾಂಗ್ರೆಸ್‌ ಸೇರುವ ಮೂಲಕ ರಾಜಕೀಯ ರಂಗಕ್ಕೆ ಪ್ರವೇಶಿಸಿದ್ದ ಅವರು, ಸಂತೇಮರಹಳ್ಳಿ ಕ್ಷೇತ್ರದಿಂದ ಒಂದು ಶಾಸಕರಾಗಿ ಆಯ್ಕೆಯಾಗಿದ್ದರು. 2004 ರಲ್ಲಿ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 1 ಮತದ ಅಂತರದಿಂದ ಗೆದ್ದಿದ್ದರು. 2008 ರಲ್ಲಿ ಎರಡನೇ ಬಾರಿ ಕೊಳ್ಳೇಗಾಲ …

Read More »

ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಸವದತ್ತಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.     ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಸವದತ್ತಿ ತಾಲೂಕಿನ ಹಿರೇಬೂದನೂರ ಗ್ರಾಮದಲ್ಲಿ ಶ್ರೀ ಡೆಂಗಿ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ …

Read More »

3 ಪಟ್ಟು ಅಧಿಕ ದರಕ್ಕೆ ಕಸ ಗುಡಿಸುವ ಯಂತ್ರ ಖರೀದಿ!

ಬೆಂಗಳೂರು: ಶುಭ್ರ ಬೆಂಗಳೂರು ಯೋಜನೆ ಅಡಿಯಲ್ಲಿ ಬಿಬಿಎಂಪಿ ತಲಾ 2 ಕೋಟಿ ರೂ. ಮೊತ್ತದ 30 ಮೆಕ್ಯಾನಿಕಲ್‌ ಸ್ವೀಪಿಂಗ್‌ ವಾಹನ ಖರೀದಿಗೆ ಮುಂದಾಗಿದೆ. ಆದರೆ, ಯಂತ್ರಗಳಿಗೆ ನಿಗದಿ ಮಾಡಿರುವ ಮೊತ್ತದ ಬಗ್ಗೆ ಇದೀಗ ಅಪಸ್ವರ ಎದ್ದಿದೆ. ನಗರದಲ್ಲಿ 587.58 ಕಿ.ಮೀ. ಉದ್ದದ 156 ಮುಖ್ಯ ರಸ್ತೆಗಳು ಹಾಗೂ 735.50 ಕಿ.ಮೀ. ಉದ್ದದ 316 ಉಪಮುಖ್ಯ ರಸ್ತೆಗಳಿವೆ. ಅವುಗಳಲ್ಲಿ ಶೇಖರಣೆಯಾಗುವ ದೂಳನ್ನು ಗುಡಿಸಿ ಸ್ವತ್ಛಗೊಳಿಸುವ ಸಲುವಾಗಿ ಮೆಕ್ಯಾನಿಕಲ್‌ ಸ್ವೀಪಿಂಗ್‌ ಯಂತ್ರಗಳನ್ನು ಖರೀದಿಸಲಾಗುತ್ತಿದೆ. ಕಳೆದ …

Read More »

ಲೋಕಾರ್ಪಣೆಗೆ ಸಿದ್ಧಗೊಂಡ ಎಂ.ಬಿ.ಪಾಟೀಲ್ ಕಂಚಿನ ಪ್ರತಿಮೆ

ವಿಜಯಪುರ : ಜಿಲ್ಲೆಯ ಬಬಲೇಶ್ವರ ಕ್ಷೇತ್ರದ ಶಾಸಕರೂ ಆಗಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಅವರ ಕಂಚಿನ ಪುತ್ಥಳಿ ಲೋರ್ಕಾಪಣೆಗೆ ಸಿದ್ಧಗೊಂಡಿದೆ. ಜಲಸಂಪನ್ಮೂಲ ಸಚಿವರಾಗಿ ತಾವು ಪ್ರತಿನಿಧಿಸುವ ಬಬಲೇಶ್ವರ ಕ್ಷೇತ್ರದಲ್ಲಿ ಸಮಗ್ರ ನೀರಾವರಿ ಸೌಲಭ್ಯ ಕಲ್ಪಿಸಿರುವ ಕೃತಜ್ಞತೆಗಾಗಿ ಬಬಲೇಶ್ವರ ತಾಲೂಕಿನ ಸಂಗಾಗಪುರ ಎಸ್.ಎಚ್.ಗ್ರಾಮದ ಜನರು ಎಂ.ಬಿ.ಪಾಟೀಲ ಅವರ ಪುತ್ಥಳಿ ನಿರ್ಮಿಸಲು ಮುಂದಾಗಿದ್ದಾರೆ.   ಈಗಾಗಲೇ ಎಂ.ಬಿ.ಪಾಟೀಲ ಅವರ ಕಂಚಿನ ಪ್ರತಿಮೆ ಪೂರ್ಣಗೊಂಡಿದ್ದು, ಮಾ.17 ರಂದು ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಪುತ್ಥಳಿ ಅನಾವರಣ …

Read More »

ದೇವಲತ್ತಿ ಲೋಕೋಳಿ- ಲಕ್ಕೇಬೈಲ್ ಮಾರ್ಗದಿಂದ ವಿದ್ಯುತ್ ಸರಬರಾಜು:ಡಾ. ಸೋನಾಲಿ

ಬೆಳಗಾವಿ: ಖಾನಾಪುರ ತಾಲ್ಲೂಕಿನ ದೇವಲತ್ತಿ ಗ್ರಾಮದ ಜನರ ಬಹುದಿನಗಳ ಬೇಡಿಕೆಯನ್ನು ಕೊನೆಗೂ ಈಡೇರಿಸಿ ಕೊಡುವಲ್ಲಿ ಬಿಜೆಪಿ ಗ್ರಾಮೀಣ ಉಪಾಧ್ಯಕ್ಷೆ ಡಾ. ಸೋನಾಲಿ ಸರ್ನೋಬತ್ ಯಶಸ್ವಿಯಾಗಿದ್ದಾರೆ. ಖಾನಾಪುರ ತಾಲ್ಲೂಕಿನ ದೇವಲತ್ತಿ ಗ್ರಾಮಕ್ಕೆ ವಿದ್ಯುತ್ ಸರಬರಾಜು ಆಗುತ್ತಿದ್ದರೂ ಈ ಮಾರ್ಗ ಪದೇ ಪದೇ ದುರಸ್ತಿಗೆ ಈಡಾಗುತ್ತಿರುವುದರಿಂದ ದೇವಲತ್ತಿ ಗ್ರಾಮದವರು ತೀವ್ರ ಸಮಸ್ಯೆ ಅನುಭವಿಸುವಂತಾಗಿತ್ತು. ಈ ಭಾಗದ ವಿದ್ಯಾರ್ಥಿಗಳು ವ್ಯಾಸಂಗಕ್ಕೆ ಪಡಿಪಾಟಲು ಪಡುವಂತಾಗಿತ್ತು. ಹಾಗಾಗಿ ಈ ಜನರ ಸಮಸ್ಯೆ ಬಗ್ಗೆ ತಿಳಿದು ಜನರ ನೋವಿಗೆ ಸ್ಪಂದಿಸಿದ …

Read More »

5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ಹೈಕೋರ್ಟ್ ಏಕಸದಸ್ಯಪೀಠ ರದ್ದುಗೊಳಿಸಿ ಆದೇಶ

ಬೆಂಗಳೂರು: 5 ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆಯನ್ನು ಹೈಕೋರ್ಟ್ ಏಕಸದಸ್ಯಪೀಠ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಮಾರ್ಚ್ 13ರಿಂದ 5 ಹಾಗೂ 8ನೇ ತರಗತಿಗಳಿಗೆ ಪರೀಕ್ಷೆಗಳು ಆರಂಭವಾಗಬೇಕಿತ್ತು. ಆದರೆ ಪಬ್ಲಿಕ್ ಪರೀಕ್ಷೆ ನಡೆಸದಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶ ನೀಡಿದೆ. 5 ಹಾಗೂ 8ನೇ ತರಗತಿಯ ವಾರ್ಷಿಕ ಪರೀಕ್ಷೆ ವಿರೋಧಿಸಿ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯಪೀಠ ಪರೀಕ್ಷೆಗೆ ತಡೆ ನೀಡಿದೆ. ನಿಯಮಗಳಿಗೆ ಅನುಸಾರವಾಗಿ …

Read More »

ಸಾರಿಗೆ ನೌಕರರ ವೇತನ ಶೇ10 ರಷ್ಟು ಹೆಚ್ಚಿಸಲು ಕ್ರಮ: ಸಚಿವ ಬಿ.ಶ್ರೀರಾಮುಲು

ರಾಯಚೂರು: ಆರ್ಥಿಕ ಇಲಾಖೆ ಮತ್ತು ಮುಖ್ಯಮಂತ್ರಿಯೊಂದಿಗೆ ಸಮಾಲೋಚಿಸಿ ಸಾರಿಗೆ ನೌಕರರ ವೇತನವನ್ನು ಶೇ 10 ರಷ್ಟು ಹೆಚ್ಚಿಸಲು ಕ್ರಮ ವಹಿಸಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದರು. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವೇತನ ಪರಿಷ್ಕರಣೆಗೆ ಸಂಬಂಧಿಸಿದಂತೆ ನೌಕರರ ಸಂಘದೊಂದಿಗೆ ಮಾತುಕತೆ ನಡೆಸಿದ್ದು, ಶೀಘ್ರದಲ್ಲೆ ಸಿಹಿ ಸುದ್ದಿ ನೀಡಲಾಗುವುದು ಎಂದರು.   ಬೆಂಗಳೂರಿನಲ್ಲಿ ಸಜೀವವಾಗಿ ದಹನವಾಗಿರುವ ಬಸ್‌ ಚಾಲಕನ ಕುಟುಂಬಕ್ಕೆ ತಕ್ಷಣ ₹5 ಲಕ್ಷ ಪರಿಹಾರ ನೀಡಬೇಕು, ವಿಮಾ ಪರಿಹಾರ …

Read More »

ಬೆಳಗಾವಿ: ಮೂರು ಹೆಣ್ಣುಮಕ್ಕಳ ಹೆತ್ತಿದ್ದೇ ತಪ್ಪಾಯಿತೇ…

ಬೆಳಗಾವಿ: ‘ಗಂಡ ಸಾಲ ಮಾಡಿ ಓಡಿಹೋದ. ಸಾಲ ಕೊಟ್ಟವರು ದಿನವೂ ಕಾಡತೊಡಗಿದರು. ಎಳೆಯ ಮಕ್ಕಳು ಹಸಿವಿನಿಂದ ಅಳುತ್ತಿದ್ದವು. ಹೆಣ್ಣು ಹೆತ್ತಿದ್ದೇನೆ ಎಂಬ ಕಾರಣಕ್ಕೆ ಅತ್ತೆ-ಮಾವನೂ ದೂರ ಮಾಡಿದ್ದಾರೆ. ತವರಿನಲ್ಲೂ ಕಷ್ಟವಿದೆ. ಬದುಕು ಬೀದಿಗೆ ಬಿತ್ತು. ಈ ಜೀವ ಇಟ್ಟು ಇನ್ನೇನು ಮಾಡುವುದು ಎಂದು ಸಾಯಲು ಹೊರಟೆ. ನಾನು ಹೋದ ಮೇಲೆ ಮಕ್ಕಳು ಹಸಿವಿನಿಂದ ಸಾಯಬಾರದು ಎಂದು ಅವರಿಗೂ ಫಿನೈಲ್‌ ಕುಡಿಸಿದೆ…’ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿರುವ ಸರಸ್ವತಿ ಅದೃಶ್ಯಪ್ಪ ಹಂಪಣ್ಣವರ (40) ತಮ್ಮ …

Read More »

ಹಿಂಡಲಗಾ: ಸ್ಮಾರ್ಟ್‌ಕ್ಲಾಸ್ ಉದ್ಘಾಟನೆ

ಬೆಳಗಾವಿ: ‘ಜಗತ್ತು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದಂತೆ ಅದಕ್ಕೆ ಪೂರಕವಾಗಿ ನಾವೂ ನಮ್ಮನ್ನು ಹೊಂದಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೂ ಸ್ಮಾರ್ಟ್ ಕ್ಲಾಸ್‌ ವ್ಯವಸ್ಥೆ ಮೂಲಕ ಶಿಕ್ಷಣ ಒದಗಿಸಲು ಎಲ್ಲ ಸೌಲಭ್ಯಗಳನ್ನು ನೀಡಲಾಗುತ್ತಿದೆ’ ಎಂದು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.   ಹಿಂಡಲಗಾ ಗ್ರಾಮದ ಸರ್ಕಾರಿ ಹಿರಿಯ ಮರಾಠಿ ಪ್ರಾಥಮಿಕ ಶಾಲೆಗೆ ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೊರೇಷನ್ ಲಿಮಿಟೆಡ್ ವತಿಯಿಂದ ಹಣ ಮಂಜೂರು ಮಾಡಿಸಿದ ಅನುದಾನದಲ್ಲಿ ನಿರ್ಮಿಸಲಾದ ನೂತನ ಸ್ಮಾರ್ಟ್ ಕ್ಲಾಸ್ …

Read More »