Breaking News

ಜಿಲ್ಲೆ

ಬೆಂಗಳೂರು ಪ್ರೆಸ್​ ಕ್ಲಬ್​​ 2024ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿಗೆ ಸಚಿವ ಎಂ. ಬಿ ಪಾಟೀಲ್ ಅವರನ್ನ ಆಯ್ಕೆ ಮಾಡಲಾಗಿದೆ.

ಬೆಂಗಳೂರು : ಪ್ರತಿ ವರ್ಷ ಕೊಡಮಾಡುವಂತ ಬೆಂಗಳೂರು ಪ್ರೆಸ್ ಕ್ಲಬ್ 2024ನೇ ಸಾಲಿನ ವರ್ಷದ ವ್ಯಕ್ತಿ ಪ್ರಶಸ್ತಿಗೆ ಸಚಿವ ಎಂ. ಬಿ ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ. ಜನವರಿ 12ರಂದು ನಡೆಯುವಂತಹ ಕಾರ್ಯಕ್ರಮದಲ್ಲಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ. ಕೆ ಶಿವಕುಮಾರ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಈ ಕುರಿತಂತೆ ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್. ಶ್ರೀಧರ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪತ್ರಿಕೋದ್ಯಮದಲ್ಲಿ ಅಪ್ರತಿಮ ಸೇವೆ ಸಲ್ಲಿಸಿದ ಪತ್ರಕರ್ತರು …

Read More »

ಬೆಳಗಾವಿಯಲ್ಲಿ ಸಂಭಾಜಿ ಮೂರ್ತಿ ಉದ್ಘಾಟನೆ ವಿಚಾರವು ವಿವಾದಕ್ಕೆ ಕಾರಣವಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣ

ಬೆಳಗಾವಿ: ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ವಿಚಾರ ಈಗ ಬೆಳಗಾವಿಯಲ್ಲಿ ವಿವಾದದ ಸ್ವರೂಪ ಪಡೆದಿದೆ. ಶಾಸಕ ಅಭಯ್ ಪಾಟೀಲ್ ಮತ್ತು ಶ್ರೀರಾಮ ಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ್ ಬೆಂಬಲಿಗರ ಮಧ್ಯೆ ಜಟಾಪಟಿ ಏರ್ಪಟ್ಟಿದೆ. ನಗರದ ಅನಗೋಳದ ಧರ್ಮವೀರ ಸಂಭಾಜಿ ವೃತ್ತದಲ್ಲಿ 21 ಅಡಿ ಎತ್ತರದ ಪ್ರತಿಮೆಯನ್ನು ಜನವರಿ 5ರಂದು ಲೋಕಾರ್ಪಣೆ ಮಾಡುವ ಕುರಿತು ಮೇಯರ್ ಸವಿತಾ ಕಾಂಬಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಅದಕ್ಕೂ ಮೊದಲೇ …

Read More »

ಅನಕ್ಷರಸ್ಥ ಮಹಿಳೆಯರ ಹೆಸರಲ್ಲಿ ಹಣ ಪಡೆದು ಮೋಸ..! ಫೈನಾನ್ಸನ ಕಿರುಕುಳವನ್ನು ತಪ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ.

ಗೋಕಾಕ : ತಾಲೂಕಿನ ಅನಕ್ಷರಸ್ಥ ಮಹಿಳೆಯರ ಹೆಸರಿನ ಮೇಲೆ ಫೈನಾನ್ಸನವರು ಮೋಸ ಮಾಡಿದ್ದು, ಕಿರುಕುಳ ನೀಡುತ್ತಿದ್ದಾರೆ. ಇಂತಹ ಫೈನಾನ್ಸಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಇಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಇಂದು ಬೆಳಗಾವಿ ಜಿಲ್ಲಾದಿಕಾರಿಗಳ ಕಾರ್ಯಾಲಯಕ್ಕೆ ಆಗಮಿಸಿದ ಗೋಕಾಕ ತಾಲೂಕಿನ ಅನಕ್ಷರಸ್ಥ ಮಹಿಳೆಯರು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು. ಕರ್ನಾಟಕ …

Read More »

ಖೋಟಾನೋಟು ಚಲಾವಣೆ: ನಾಲ್ವರ ಬಂಧನ

ಖೋಟಾನೋಟು ಚಲಾವಣೆ: ನಾಲ್ವರ ಬಂಧನ : ವಿಜಯಪುರ ನಗರದಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದ ನಾಲ್ಕು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ. ಲಿಂಗಸೂರಿನ ದುರಗಪ್ಪ ಶಿವಣಪ್ಪ ರಾಮರಟ್ಟಿ (44), ಮಹಾಲಿಂಗಪೂರದ ಕಿರಣ ಉರ್ಫ್ ಭೀಮಪ್ಪ ರಾಮಪ್ಪ ಹರಿಜನ (25), ಕೊಲ್ಲಾರ ಹತ್ತಿರದ ಹೊಳೆಹಂಗರಗಿ ಗ್ರಾಮದ ರಮೇಶ ಹಣಮಂತ ಸವಳತೋಟ (44) ಹಾಗೂ ವಿಜಯಪುರ ವಜ್ರ ಹನುಮಾನ ನಗರದ ರಿಯಾಜ್ ಕಾಶಿಮಸಾಬ ವಾಲಿಕಾರ (44) ಬಂಧಿತ ಆರೋಪಿಗಳು. ಕೆಎಸ್‌ಆರ್‌ಟಿಸಿ …

Read More »

ಚಿಂಚಣಿ, ಶಿರಗಾಂವ, ಇಂಗಳಿ ಪಿಕೆಪಿಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮೇಲುಗೈ ಎಂಎಲ್ಸಿ ಪ್ರಕಾಶ ಹುಕ್ಕೇರಿಯವರಿಂದ ಸನ್ಮಾನ

ಚಿಕ್ಕೋಡಿ:ಚಿಕ್ಕೋಡಿ ತಾಲ್ಲೂಕಿನ ಇಂಗಳಿ, ಶಿರಗಾಂವ, ಚಿಂಚಣಿ ಗ್ರಾಮದ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರನ್ನು ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ 2 ಪ್ರಕಾಶ ಹುಕ್ಕೇರಿ ಸತ್ಕರಿಸಿ ,ಅಭಿನಂದಿಸಿದರು. ಚಿಕ್ಕೋಡಿ-ತಾಲ್ಲೂಕಿನ ಚಿಂಚಣಿ, ಶಿರಗಾಂವ ಹಾಗೂ ಇಂಗಳಿ ಗ್ರಾಮದ ವಿವಿದೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದಾರೆ. ಮೂರೂ ಪಿಕೆಪಿಎಸ್ …

Read More »

ನೈಟ್ ಸಿಟಿ ರೌಂಡ್ಸ್ ಮೂಲಕ, ಪುಡಾರಿಗಳಿಗೆ ಬಿಸಿ ಮುಟ್ಟಿಸಿದ ಧಾರವಾಡ ಎಸಿಪಿ,ಇನ್ಸ್ಪೆಕ್ಟರ್ ; ಪುಂಡರ ಕಿರಿಕಿರಿ ಇದ್ದಲ್ಲಿ ದೂರು ನೀಡಲು ಕರೆ

ಧಾರವಾಡ:  ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಧಾರವಾಡ ಎಸಿಪಿ ಹಾಗೂ ಉಪನಗರ ಠಾಣೆಯ ಪಿಐ ಅವರು ಠಾಣೆ ವ್ಯಾಪ್ತಿಯಲ್ಲಿ ನೈಟ್ ಸಿಟಿ ರೌಂಡ್ಸ್ ಮಾಡುವ ಮೂಲಕ, ಪುಡಾರಿಗಳಿಗೆ ಬಿಸಿ ಮುಟ್ಟಿಸಿ ಸಾರ್ವಜನಿಕರ ಸಮಸ್ಯೆಗಳ ಆಲಿಸಿ ಪುಂಡರ ಕಿರಿಕಿರಿ ಇದ್ದಲ್ಲಿ ದೂರು ನೀಡಲು ಕರೆ ನೀಡಲಾಯಿತು. ನಗರದ ಸಪ್ತಾಪುರ ಸೇರಿ ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜನ ನಿಬಿಡ ಪ್ರದೇಶದಲ್ಲಿ ಎಸಿಪಿ ಪ್ರಶಾಂತ ಸಿದ್ಧನಗೌಡರ ನೇತೃತ್ವದಲ್ಲಿ ನೈಟ್ ಸಿಟಿ ರೌಂಡ್ಸ್ ಮಾಡುವ …

Read More »

ಬಸ್ ಪ್ರಯಾಣ ದರ ಹೆಚ್ಚಳ;ಹೊಸ ವರ್ಷದ ಮರು ದಿನವೇ ಶಾಕಿಂಗ್ ನ್ಯೂಸ್‌.

ಬೆಂಗಳೂರು: ಹೊಸ ವರ್ಷದ ಮರು ದಿನವೇ ರಾಜ್ಯದ ಜನರಿಗೆ ಸರ್ಕಾರ ಶಾಕಿಂಗ್ ನ್ಯೂಸ್‌ ಕೊಟ್ಟಿದೆ. ಬಸ್ ಪ್ರಯಾಣ ದರ ಶೇಕಡಾ 15ರಷ್ಟು ಹೆಚ್ಚಳ ಮಾಡುವ ನಿರ್ಧಾರಕ್ಕೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ನಡೆಯಿತು. ಈ ಸಭೆಯಲ್ಲಿ ಬಸ್ ಟಿಕೆಟ್ ದರ ಏರಿಕೆಗೆ ಸಂಪುಟ ಅನುಮೋದನೆ ನೀಡಿದೆ. ಸಾರಿಗೆ ದರ ಏರಿಕೆಗೆ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

Read More »

ಬೆಳಗಾವಿಗೆ ಬಂತು ಹುಬ್ಬಳ್ಳಿ-ಪುಣೆ ನಡುವಿನ “ವಂದೇ ಭಾರತ್” ರೈಲು.

 ಬೆಳಗಾವಿ:  ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಬಹಳ ಬೇಡಿಕೆ ಇದೆ. ಕರ್ನಾಟಕದ ವಿವಿಧ ನಗರಗಳಿಗೆ ಈ ರೈಲು ಸಂಪರ್ಕ ಬೇಕು ಎಂದು ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಲಾಗುತ್ತಿದೆ. ಸದ್ಯ ರಾಜ್ಯದಲ್ಲಿ ಮತ್ತೊಂದು ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ನಿರೀಕ್ಷೆ ಇದೆ. ಈಗಾಗಲೇ ರೈಲ್ವೆ ಇಲಾಖೆ ಇದಕ್ಕೆ ಒಪ್ಪಿಗೆ ನೀಡಿದ್ದು, 2025ರಲ್ಲಿ ಈ ರೈಲು ಸಂಚಾರ ಆರಂಭವಾಗುವ ಸಾಧ್ಯತೆ ಇದೆ. ಹೊಸ ವಂದೇ ಭಾರತ್ …

Read More »

ಯುವನಿಧಿ ಯೋಜನೆಯ 2024ರ ನೋಂದಣಿ ಪ್ರಕ್ರಿಯೆ ಪ್ರಾರಂಭ:

ಬೆಳಗಾವಿ:  ನಗರದ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ಇಂದು ನಡೆದ ಸಭೆಯಲ್ಲಿ, ಮೈಕ್ರೋ ಫೈನಾನ್ಸ್ ಸಂಬಂಧಿತ ಪ್ರಕರಣಗಳನ್ನು ಶೀಘ್ರದಲ್ಲೇ ಇತ್ಯರ್ಥಗೊಳಿಸಿ, ಜನರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಯಿತು. ಈ ವೇಳೆ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಯೋಜನೆಯ 2024ರ ನೋಂದಣಿ ಪ್ರಕ್ರಿಯೆ ಪ್ರಾರಂಭ ಪೋಸ್ಟರ್ ಹಾಗೂ ಬ್ಯಾನರನ್ನು ಅನಾವರಣಗೊಳಿಸಿದ ನಂತರ ಪೌರಕಾರ್ಮಿಕರಿಗೆ ನೇಮಕಾತಿ ಆದೇಶಗಳನ್ನು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಶಾಸಕ ಆಸೀಫ್‌ (ರಾಜು ) …

Read More »

ಫೋನ್ ನಲ್ಲಿ ಮಾತನಾಡುವ ನೆಪ ಮಾಡಿ ಹಣ ದೊಚಿದ ಖದೀಮ.

ಮುನವಳ್ಳಿ: ಫೋನ್ ನಲ್ಲಿ ಮಾತನಾಡುವ ನೆಪ ಮಾಡಿ ವ್ಯಕ್ತಿಯೊರ್ವ ಹಣ ಕಳ್ಳತನ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಪಟ್ಟಣದಲ್ಲಿ ಹೋಟೆಲ್ ಒಂದರಲ್ಲಿ ಈ ಕಳ್ಳತನ ನಡೆದಿದೆ . ಹೋಟೆಲ್ ಡ್ರಾ ನಲ್ಲಿ ಇದ್ದ 4 ಸಾವಿರ ರೂಪಾಯಿಯನ್ನು ಯಾರಿಗೂ ಗೊತ್ತಿಲ್ಲದ ಹಾಗೆ ಪೋನ್ ನಲ್ಲಿ ಮಾತನಾಡುವ ರೀತಿ ನಟಿಸಿ  ಕಳ್ಳತನ ಮಾಡಲಾಗಿದೆ.. ಹೋಟೆಲ್ ನಲ್ಲಿ ಕಳ್ಳತನ ಮಾಡಿದ  ದೃಶ್ಯ ಸಿಸಿ ಟಿವಿಯಲ್ಲಿ ಸಂಪೂರ್ಣವಾಗಿ …

Read More »