Breaking News

ಜಿಲ್ಲೆ

ದೇವಸ್ಥಾನ ಬಂದ ಬಗ್ಗೆ ಸಾಮಾಜಿಕ ಜಾಲತಾಣದ ಸುಳ್ಳು ಸುದ್ದಿ ಶೇರ್ ಮಾಡಬೇಡಿ

ಉಗರಗೋಳ: ‘ಸವದತ್ತಿ ತಾಲ್ಲೂಕಿನ ಯಲ್ಲಮ್ಮನಗುಡ್ಡದಲ್ಲಿರುವ ಯಲ್ಲಮ್ಮ ದೇವಿ ದೇವಸ್ಥಾನ ಬಂದ್ ಆಗಿಲ್ಲ. ಭಕ್ತರು ಯಾವುದೇ ವದಂತಿಗೆ ಕಿವಿಗೊಡಬಾರದು ಎಂದು ಯಲ್ಲಮ್ಮ ದೇವಿ ದೇವಸ್ಥಾನ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ ದುಡಗುಂಟಿ ಹೇಳಿದ್ದಾರೆ. ಅಭಿವೃದ್ಧಿ ಕಾಮಗಾರಿ ಕೈಗೊಳ್ಳುತ್ತಿರುವ ಯಲ್ಲಮ್ಮ ದೇವಸ್ಥಾನವನ್ನು ಎರಡ್ಮೂರು ವರ್ಷದ ಅವಧಿಗೆ ಬಂದ್ ಮಾಡಲಾಗಿದೆ. ದೇವಿ ದರ್ಶನಕ್ಕೆ ಅವಕಾಶವಿಲ್ಲ ಎಂದು ಹಲವು ಭಕ್ತರು ವಿಚಾರಿಸುತ್ತಿದ್ದಾರೆ. ಅದು ಶುದ್ಧಸುಳ್ಳು ಎಂದು ಪ್ರತಿಕ್ರಿಯಿಸಿದ್ದಾರೆ. ಯಲ್ಲಮ್ಮ ದೇವಸ್ಥಾನದಲ್ಲಿ ಎಂದಿನಂತೆ, ದೇವಿಗೆ ವಿಶೇಷ ಪೂಜೆ ನೆರವೇರುತ್ತಿದೆ. …

Read More »

ರಸ್ತೆ ಮೇಲೆ ಹೋಗೆಯುಗಿಳಿದ ಸರ್ಕಾರಿ ಬಸ್;RTO ಅವರೆ ಇದು ರಸ್ತೆ ನಿಯಮ ಉಲ್ಲಂಘನೆ ಅಲ್ವಾ ;ನೆಟ್ಟಿಗರು ಪ್ರಶ್ನೆ

ಅಥಣಿ: ಕೆಎಸ್‌ಆರ್‌ಟಿಸಿ ಬಸ್ಸು ಹೊಗೆಯುಗುಳುವ ಪರಿ ನೋಡಿದರೆ ಅಬ್ಬಾ ಎನಿಸುತ್ತದೆ…! ವಾಯುಮಾಲಿನ್ಯ ತಪಾಸಣೆಯ ಅವಧಿ ಒಂದು ದಿನ ಮುಗಿದರೂ ದಂಡದ ಮೇಲೆ ದಂಡ ಬೀಳುತ್ತದೆ. ಆದ್ರೆ ಈ ಸರ್ಕಾರಿ ವಾಹನ ವಿಪರೀತ ಹೊಗೆ ಬಿಡುವುದಕ್ಕೆ ಏನು ದಂಡ..? ಅಂದರೆ ಹೊಗೆ ಬಿಡುವುದಕ್ಕೆ ಅಲ್ಲ ದಂಡ, ಹೊಗೆ ಇಲ್ಲದೇ ಇರುವುದಕ್ಕೆ ದಂಡವೇ ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ. ಇದು ಅಥಣಿ ಪಟ್ಟಣದಿಂದ-ಪಾಂಡೆಗಾವ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಕೆ ಎಸ್ ಆರ್ ಟಿ …

Read More »

‘I Am god’ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯ….ಯುವ ಪ್ರತಿಭೆ ರವಿ ಗೌಡ ಹೊಸ ಸಿನಿಮಾಗೆ ಸಾಥ್.

ಬೆಂಗಳೂರು:ರಾಜಕೀಯ ಜಂಜಾಟಗಳ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುವು ಮಾಡಿಕೊಂಡು ಸಿನಿಮಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾರೆ. ಅಂತೆಯೆ ಅವರು ತಮ್ಮ ಆತ್ಮೀಯ ಗೆಳೆಯ ಮುಡಾ ಮಾಜಿ ಅಧ್ಯಕ್ಷ ಸಿ.ಬಸವೇಗೌಡ ಅವರ ಮಗನ ಹೊಸ ಪಯಣಕ್ಕೆ ಶುಭಾಶಯ ಕೋರಿದ್ದಾರೆ. ಧ್ವಜ ಸಿನಿಮಾ ಮೂಲಕ ನಾಯಕನಾಗಿ ಮೊದಲ ಹೆಜ್ಜೆ ಇಟ್ಟಿದ್ದ ರವಿ ಗೌಡ I’m god ಸಿನಿಮಾ ಮೂಲಕ ಡೈರೆಕ್ಟರ್ ಕುರ್ಚಿ ಅಲಂಕರಿಸಿದ್ದಾರೆ. ಈ ಚಿತ್ರದಲ್ಲಿ ನಾಯಕನಾಗಿ, ನಿರ್ದೇಶಕನಾಗಿ ಹಾಗೂ ನಿರ್ಮಾಪಕನಾಗಿ ಅವರು ಜವಾಬ್ದಾರಿ ಹೊತ್ತುಕೊಂಡಿದ್ದಾರೆ. …

Read More »

ಕುಸ್ತಿಕಥೆಯಲ್ಲಿ ರಾಜವರ್ಧನ್..ಫೆ.7ಕ್ಕೆ ‘ಗಜರಾಮ’ ರಿಲೀಸ್.

ಬೆಂಗಳೂರು: ಟ್ರೇಲರ್ ಹಾಗೂ ಹಾಡಿನ ಮೂಲಕ ಸದ್ದು ಮಾಡುತ್ತಿರುವ ಗಜರಾಮ ಸಿನಿಮಾ ಫೆಬ್ರವರಿ 7ಕ್ಕೆ ತೆರೆಗೆ ಬರ್ತಿದೆ. ಕನ್ನಡ ಚಿತ್ರರಂಗದಲ್ಲಿ ತಮ್ಮದೇ ನಟನೆ ಮೂಲಕ ಗುರುತಿಸಿಕೊಂಡಿರುವ ಡಿಂಗ್ರಿ ನಾಗರಾಜ್ ಅವರ ಮಗ ರಾಜವರ್ಧನ್ ಹೀರೋ ಆಗಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರ ಬಿಡುಗಡೆಗೆ ಕೆಲ ದಿನಗಳಷ್ಟೇ ಬಾಕಿ ಉಳಿದಿದ್ದು, ಈ ಹಿನ್ನೆಲೆ ಚಿತ್ರತಂಡ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಆಯೋಜಿಸಿತ್ತು. ಈ ವೇಳೆ ನಟ ರಾಜವರ್ಧನ್ ಮಾತನಾಡಿ, …

Read More »

ಖಾನಾಪೂರ ಕೋ ಆಪ್ (ಅರ್ಬನ್ ಬ್ಯಾಂಕ್)ಬ್ಯಾಂಕಿನ ಮತ ಎಣಿಕೆ ಮಂಗಳವಾರ ನಡೆಯುವ ಸಾಧ್ಯತೆ.

ಖಾನಾಪೂರ :-ಖಾನಾಪೂರ ಕೋ ಆಪ್ ಬ್ಯಾಂಕ್ (ಅರ್ಬನ್ ಬ್ಯಾಂಕ್) ನ ಚುನಾವಣೆ ನಡೆದು ಹದಿನೈದರಿಂದ ಇಪ್ಪತ್ತು ದಿನಗಳು ಕಳೆದಿವೆ, ಆದರೆ ಹೊಸ ಮತದಾರರ ಪಟ್ಟಿಯ ಗೊಂದಲದ ಮೇಲೆ ಚುನಾವಣಾ ಫಲಿತಾಂಶಗಳು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಮತ ಎಣಿಕೆ ನಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಬಲ ಮಾಹಿತಿ ಪ್ರಕಾರ ಚುನಾವಣೆಯ ಮತ ಎಣಿಕೆಯು ಫೆಬ್ರವರಿ 4, 2025 ರ ಮಂಗಳವಾರ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಮತ ಎಣಿಕೆಗೆ ಸಂಬಂಧಿಸಿದಂತೆ ಚುನಾವಣಾ ಅಧಿಕಾರಿ ರವೀಂದ್ರ …

Read More »

ಕಾಗವಾಡ ಸದಸ್ಯರು ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ.

 ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮ ಪಂಚಾಯಿತಿಯ ಸದಸ್ಯರು ಪಿಡಿಒ ಇವರನ್ನು ವರ್ಗಾಯಿಸಲು ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ಕೈಗೊಂಡಿದ್ದಾರೆ. ಉಗಾರ ಬುದ್ರುಕ ಗ್ರಾಮ ಪಂಚಾಯತಿಯ ಸದಸ್ಯರು ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಪಂಚಾಯಿತಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ಈ ಘಟನೆ ಸಂಬAಧ ಸ್ಥಳಕ್ಕೆ ತಲುಪಿದ ತಾಲೂಕಾ ಪಂಚಾಯತಿ ಅಧಿಕಾರಿಗಳು ಸದಸ್ಯರೊಂದಿಗೆ ಚರ್ಚೆ ನಡೆಸಿ ನಿಯಂತ್ರಿಸಲು ಪ್ರಯತ್ನಿಸಿದರೂ, ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದರು. ಶನಿವಾರ ರಂದು ಉಗಾರ …

Read More »

‘ವೇದಾಂತ ಎಕ್ಸ್‌ಲೆನ್ಸ್‌ ಅವಾರ್ಡ್‌’ ಪಡೆದ 9 ಸಾಧಕರು;‘ಪುರಸ್ಕಾರದಿಂದ ಕ್ರಿಯಾಶೀಲತೆ ಹೆಚ್ಚಳ’

ಬೆಳಗಾವಿ: ‘ವಿವಿಧ ರಂಗಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸಿದವರಿಗೆ ಪುರಸ್ಕಾರ ನೀಡಿರುವ ಕಾರ್ಯ ಶ್ಲಾಘನೀಯ. ಇದರಿಂದ ತಮ್ಮ ಜವಾಬ್ದಾರಿ ಹೆಚ್ಚಿದ್ದು, ಇನ್ನಷ್ಟು ಕ್ರಿಯಾಶೀಲ, ಪ್ರಾಮಾಣಿಕವಾಗಿ ತಾವು ಸೇವೆ ಸಲ್ಲಿಸಲು ಉತ್ಸಾಹ ಬರುತ್ತದೆ’ ಎಂದು ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಜೆ.ಭಜಂತ್ರಿ ಹೇಳಿದರು. ಇಲ್ಲಿನ ಮಹಿಳಾ ವಿದ್ಯಾಲಯದಲ್ಲಿ ವೇದಾಂತ ಫೌಂಡೇಷನ್ ಶನಿವಾರ ಹಮ್ಮಿಕೊಂಡಿದ್ದ ವಿವಿಧ ಕ್ಷೇತ್ರಗಳ ಸಾಧಕರಿಗೆ 2025ನೇ ಸಾಲಿನ ‘ವೇದಾಂತ ಎಕ್ಸ್‌ಲೆನ್ಸ್‌ ಅವಾರ್ಡ್‌’ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. …

Read More »

ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆ ಮುಂದೂಡಿಕೆ: ಬಿಜೆಪಿ ಪ್ರತಿಭಟನೆ

ವಿಜಯಪುರ:ತೀವ್ರ ಕುತೂಹಲ ಕೆರಳಿಸಿರುವ ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಉಪಮೇಯರ್ ಚುನಾವಣೆ ನಡೆಯುತ್ತಿದ್ದ ವೇಳೆಯೇ ಟ್ವಿಸ್ಟ್ ಪಡೆದುಕೊಂಡಿದೆ. ಮೇಯರ್, ಉಪ ಮೇಯರ್ ಆಯ್ಕೆ ಪ್ರಕ್ರಿಯೆ ವೇಳೆ ಚುನಾವಣೆಯೆ ರದ್ದಾಗಿದೆ ಎನ್ನಲಾಗುತ್ತಿದೆ. ವಿಜಯಪುರ ಮಹಾನಗರ ಪಾಲಿಕೆ ಮೇಯರ್ ಉಪ ಮೇಯರ್ ಎಲೆಕ್ಷನ್ ಮುಂದೂಡಲಾಗಿದೆ. ಇನ ಪಾಲಿಕೆ ಎದುರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಚುನಾವಣೆ ಪ್ರಕ್ರಿಯೆ ವೇಳೆ ಸದಸ್ಯರ ಸದಸ್ಯತ್ವ ರದ್ದು ಕೋರಿ ಪ್ರಾದೇಶಿಕ ಆಯುಕ್ತರಿಗೆ ಉಪ ಮೇಯರ್ ದಿನೇಶ ಹಳ್ಳಿ …

Read More »

ಡಾ. ಅಂಬಾಜಿ ವೆಂಕಪ್ಪ ಸುಗುತೇಕರ ಅವರಿಗೆ 2025ರ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ.

ಬಾಗಲಕೋಟೆ : “ತಾಯಿ ನಿನ್ನ ಭಜನೆ ನಾನು ಮರೆಯಲಾರೆನು” ಎಂದು ಮನೆ, ಮನೆಗೂ ತೆರಳಿ ಹಾಡುತ್ತಿದ್ದ ಗೋಂಧಳಿ ವೆಂಕಪ್ಪನನ್ನು ದೇವರೂ ಮರೆತಿಲ್ಲ. ಶಾಲೆಯ ಮೆಟ್ಟಿಲನ್ನೇ ಹತ್ತದ ವೆಂಕಪ್ಪ ಗೌರವ ಡಾಕ್ಟರೇಟ್ ಪಡೆದಿದ್ದರಲ್ಲದೇ ಈಗ ಪದ್ಮಶ್ರೀ ಪ್ರಶಸ್ತಿ ಪಡೆಯುವುದರ ಮೂಲಕ ದೇಶವೇ ಬಾಗಲಕೋಟೆಯತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಅಂಬಾಜಿ ನಡೆದು ಬಂದ ಹಾದಿಯೇ ರೋಚಕ: ಹೌದು, ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿರುವ ಡಾ. ಅಂಬಾಜಿ ವೆಂಕಪ್ಪ ಸುಗುತೇಕರ ನಡೆದು ಬಂದ ಹಾದಿಯೇ ರೋಚಕ. …

Read More »

ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ – ಮಂಜುಳಾ ನಾಯಿಕ.

ಹುಕ್ಕೇರಿ : ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಿ – ಮಂಜುಳಾ ನಾಯಿಕ. ಜನೇವರಿ 26 ರಂದು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರಕಾರಿ ಅಧಿಕಾರಿಗಳು ಕಡ್ಡಾಯವಾಗಿ ಭಾಗ ವಹಿಸಬೇಕು ಎಂದು ಹುಕ್ಕೇರಿ ತಹಸಿಲ್ದಾರ ಮಂಜುಳಾ ನಾಯಿಕ ಹೇಳಿದರು. ಅವರು ಇಂದು ಗಣರಾಜ್ಯೋತ್ಸವ ಆಚರಣೆಯ ಪೂರ್ವ ಭಾವಿ ಸಭೆಯಲ್ಲಿ ಮಾತನಾಡುತ್ತಾ ಆರ್ ಟಿ ಆಯ್ ಕಾರ್ಯಕರ್ತ ರಾಜು ಕುರಂದವಾಡೆ ಯವರು ರಾಷ್ಟ್ರೀಯ ಹಬ್ಬಗಳಲ್ಲಿ ತಾಲೂಕಿನ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸುವದಿಲ್ಲಾ ಈ ಕುರಿತು …

Read More »