Breaking News

ಜಿಲ್ಲೆ

ರಮೇಶ ಜಾರಕಿಹೊಳಿಯವರ ಪ್ರವಾಸದ ವಿವರ…….ಮೇ.27ರಿಂದ ಬೆಳಗಾವಿ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ

ಬೆಳಗಾವಿ: ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಮೇ.27ರಿಂದ ಬೆಳಗಾವಿ, ಮೈಸೂರು, ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಮೇ.27ರಂದು ಬೆಳಿಗ್ಗೆ9.30ಕ್ಕೆ ಗೋಕಾಕ್ ನಿರ್ಗಮನ, 10.30ಕ್ಕೆ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಆಹ್ವಾಲ ಸ್ವೀಕಾರ, ಮಧ್ಯಾಹ್ನ 2 ಗಂಟೆಗೆ ಬೆಳಗಾವಿಯಿಂದ ಮೈಸೂರಿಗೆ ತೆರಳಿ ವಾಸವ್ಯ. ಮೇ .28ರಂದು ಬೆಳಿಗ್ಗೆ 8ಗಂಟೆಗೆ ಸುತ್ತೂರು ಮಹಾಸಂಸ್ಥಾನದ ಸ್ವಾಮಿಜೀಯೊಂದಿಗೆ ಮಾತುಕತೆ, 9 ಗಂಟಗೆ ಗಣಪತಿ ಸಚ್ಛಿದಾನಂದ ಆಶ್ರಮಕ್ಕೆ ಭೇಟಿ, 11.30ಕ್ಕೆ ಮೈಸೂರಿಂದ …

Read More »

ಷರತ್ತು ವಿಧಿಸಿ ಜೂನ್ 1 ರಿಂದ ಮಾಲ್, ಹೋಟೆಲ್‍ಗಳಿಗೆ ಅನುಮತಿ ಸಾಧ್ಯತೆ

ಬೆಂಗಳೂರು: ಲಾಕ್‍ಡೌನ್‍ನಿಂದಾಗಿ ಮುಚ್ಚಲ್ಪಟ್ಟಿದ್ದ ಮಾಲ್, ಹೋಟೆಲ್‍ಗಳು ಜೂನ್ ಒಂದರಿಂದ ತೆರೆಯುವ ಸಾಧ್ಯತೆ ಹೆಚ್ಚಾಗಿದೆ. ಇಂದು ಸಿಎಂ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಮುಜರಾಯಿ ಇಲಾಖೆಯ ದೇವಾಲಯಗಳಿಗೆ ಅನುಮತಿ ನೀಡಿದ ಬೆನ್ನಲ್ಲೇ ಮಾಲ್ ಮತ್ತು ಹೋಟೆಲ್ ಗಳು ಎಂದಿನಂತೆ ವ್ಯಾಪಾರ ನಡೆಸಲು ಷರತ್ತು ವಿಧಿಸಿ ಅನುಮತಿ ನೀಡುವ ಸಾಧ್ಯತೆ ಹೆಚ್ಚಿದೆ. ಮಾಲ್ `ಫ್ರೀ’ ಆಗಲು ಷರತ್ತು ಅನ್ವಯ: ಜೂನ್ ಒಂದರಿಂದ ಶಾಪಿಂಗ್ ಮಾಲ್ ತೆರೆಯಲು ಅನುಮತಿ ಸಿಕ್ಕಿದರೂ ಮಧ್ಯಾಹ್ನ 12ರಿಂದ ರಾತ್ರಿ 9ರವರೆಗೆ …

Read More »

ರಾಜ್ಯದಲ್ಲಿ ಇನ್ನೂ ಒಂದು ವಾರ ಉತ್ತಮ ಮಳೆ ಸಾಧ್ಯತೆ

ಬೆಂಗಳೂರು, ಮೇ 26- ರಾಜ್ಯದ ಒಳನಾಡಿನಲ್ಲಿ ಇನ್ನೊಂದು ವಾರದವರೆಗೂ ಉತ್ತಮ ಮಳೆಯಾಗುವ ಮುನ್ಸೂಚನೆ ಗಳಿವೆ. ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆಗಳಿವೆ. ನೈರುತ್ಯ ಮುಂಗಾರು ಆರಂಭಕ್ಕೂ ಮುನ್ನ ರಾಜ್ಯದಲ್ಲಿ ಒಂದು ವಾರ ಉತ್ತಮ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ಈ ಸಂಜೆಗೆ ತಿಳಿಸಿದರು. ರಾಜ್ಯದಲ್ಲಿ ಚದುರಿದಂತೆ ಕೆಲವು …

Read More »

ಅಥಣಿ ಭಾಗದ ನೀರಾವರಿ ಯೋಜನೆ 2500 ಕೋಟಿ ಅನುದಾನ ಬಿಡುಗಡೆ

ಅಥಣಿ: ಅಥಣಿ ಭಾಗದ ನೀರಾವರಿ ಯೋಜನೆ 2500 ಕೋಟಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಭರವಸೆ ನೀಡಿದರು. ಅಥಣಿ ತಾಲೂಕಿನ ನೀರಾವರಿ ಯೋಜನೆ ವಿಚಾರವಾಗಿ ಕಳೆದ ಎರಡು ದಿನದಿಂದ ಪ್ರವಾಸ ನಡೆಸುತ್ತಿರುವ ಸಚಿವರು ಇಂದು ಕೊಟ್ಟಲಗಿ ಗ್ರಾಮದ ನೀರಾವರಿ ಯೋಜನೆ ಕಾಮಗಾರಿ ಪರಿಶೀಲಿಸಿ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊಟ್ಟಲಗಿ-ಝುಂಜರವಾಡ ಏತ ನೀರಾವರಿ ಯೋಜನೆ ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ರು. ಬೆಳಗಾವಿ …

Read More »

ಗ್ರಾಮೀಣ ಕ್ಷೇತ್ರದ ಹಲಗಾ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ಹಾಗೂ ಪಿಕೆಪಿಸ್ ಮೂಲಕ ಗ್ರಾಮದ ರೈತರಿಗೆ ಸೋಯಾಬಿನ್ ಬೀಜಗಳನ್ನು ವಿತರಿಸಲಾಯಿತು.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಲಗಾ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ಹಾಗೂ ಪಿಕೆಪಿಸ್ ಮೂಲಕ ಗ್ರಾಮದ ರೈತರಿಗೆ ಸೋಯಾಬಿನ್ ಬೀಜಗಳನ್ನು ವಿತರಿಸಲಾಯಿತು. ಹೀಗಾಗಲೇ ಮುಂಗಾರು ಕೃಷಿ ಚಟುವಟಿಕೆಗಳು ಆರಂಭಗೊಂಡಿದ್ದು, ಕೃಷಿ ಇಲಾಖೆಯು ರೈತರಿಗೆ ಸಮಯಕ್ಕನುಸಾರವಾಗಿ ಸ್ಪಂದಿಸುವ ಮೂಲಕ ನಕಲಿ ಬೀಜಗಳ ಹಾಗೂ ಗೊಬ್ಬರದ ಬಗ್ಗೆ ಯಾವಾಗಲೂ ನಿಗಾ ವಹಿಸಬೇಕು, ರೈತ ಜೀವಗಳು ಚನ್ನಾಗಿದ್ದರೆ ಮಾತ್ರ ನಾವೆಲ್ಲರೂ ಚೆನ್ನಾಗಿರಲು ಸಾಧ್ಯ “ಅನ್ನಧಾತ ಸುಖಿಭವ” ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು, ಅಡಿವೇಶ …

Read More »

ಅಂತರ್ಜಲ ಚೈತನ್ಯ ಹೆಚ್ಚಿಸಲು ಬೆಳಗಾವಿ ಜಿಲ್ಲೆಯನ್ನು ಇಡೀ ರಾಜ್ಯಕ್ಕೆ ಮಾದರಿ ಮಾಡಬಹುದು

ಬೆಳಗಾವಿ: ಅಂತರ್ಜಲ ಚೈತನ್ಯ ಹೆಚ್ಚಿಸಲು ಬೆಳಗಾವಿ ಜಿಲ್ಲೆಯನ್ನು ಇಡೀ ರಾಜ್ಯಕ್ಕೆ ಮಾದರಿ ಮಾಡಬಹುದು. ಆದ್ದರಿಂದ ಜಿಲ್ಲಾ ಪಂಚಾಯತ ಅಧಿಕಾರಿಗಳು ಆರ್ಟ್ ಆಫ್ ಲಿವಿಂಗ್ ಜತೆ ಸೇರಿಕೊಂಡು ಈ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಸಚಿವ ಈಶ್ವರಪ್ಪ ತಿಳಿಸಿದರು. ನಗರದ ಪ್ರವಾಸಿಮಂದಿರದಲ್ಲಿ ಮಂಗಳವಾರ(ಮೇ 26) ನಡೆದ ಅಂತರ್ಜಲ ಚೈತನ್ಯ ಹಾಗೂ ನರೇಗಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರ ಮಾತನಾಡಿದರು. ಜಿಲ್ಲೆಯಲ್ಲಿ ನೀರಾವರಿ ಹಾಗೂ ಕಬ್ಬು ಬೆಳೆ ಹೆಚ್ಚಾಗಿರುವ ತಾಲ್ಲೂಕು …

Read More »

ಬೆಂಗಳೂರು: ಸದ್ಯಕ್ಕೆ ಜಿಮ್‍ಗಳು ಆರಂಭವಾಗುವುದಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಿಸುವಲ್ಲಿ ಬೆಂಗಳೂರು ನಗರ ಸಕ್ಸಸ್ ಆಗಿದೆ. ಕೇಂದ್ರ ಸರ್ಕಾರ ಪ್ರಶಂಸೆ ಮಾಡಿದ್ದು ಖುಷಿ ತಂದಿದೆ. ಇದಕ್ಕೆ ನಮ್ಮ ವೈದ್ಯ ಸಿಬ್ಬಂದಿ, ಅಧಿಕಾರಿ ವರ್ಗ ಸೇರಿ ಎಲ್ಲ ಇಲಾಖೆಗಳ ಶ್ರಮವೂ ಕಾರಣ ಎಂದು ತಿಳಿಸಿದರು. ಸದ್ಯ ಜಿಮ್‍ಗಳು ಆರಂಭವಾಗಲ್ಲ. ಲಾಕ್‍ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಮುದಾಯಗಳಿಗೆ ಈಗಾಗಲೇ ಸಹಾಯಧನ ಘೋಷಣೆ ಮಾಡಿದ್ದೇವೆ. ನೇಕಾರರು, ಕ್ಷೌರಿಕ ವೃತ್ತಿ ಅವರಿಗೂ ಸಂಕಷ್ಟ ಇತ್ತು ಆ ಸಮುದಾಯಗಳನ್ನು …

Read More »

ತಂದೆ ಸತ್ತಾಗ ಅವರ ಮುಖವನ್ನು ಕೊನೆಯದಾಗಿ ನೋಡಲು ಸಾಧ್ಯವಾಗಿಲ್ಲ

ಉಡುಪಿ: ತಂದೆ ಸತ್ತಾಗ ಅವರ ಮುಖವನ್ನು ಕೊನೆಯದಾಗಿ ನೋಡಲು ಸಾಧ್ಯವಾಗಿಲ್ಲ. ಈಗ ಅವರ ಅಪರ ಕರ್ಮಾಧಿಗಳನ್ನಾದರೂ ಮಾಡಲು ಬಿಡಿ ಎಂದು ಉಡುಪಿಯ ವ್ಯಕ್ತಿ ಪೊಲೀಸರ ಮುಂದೆ ಅಲವತ್ತುಕೊಂಡಿದ್ದಾನೆ. ನಾನು ಉಡುಪಿಗೆ ಬಂದದ್ದೇ ವೇಸ್ಟ್ ಆಯ್ತು. ಯಾವ ಧಾರ್ಮಿಕ ಪ್ರಕ್ರಿಯೆಗಳನ್ನು ಮಾಡಲು ಸಾಧ್ಯವಾಗಿಲ್ಲ. ನನ್ನ ಟೆಸ್ಟ್ ರಿಪೋರ್ಟ್ ಇನ್ನೂ ಬಂದಿಲ್ಲ ಎಂದು ತಂದೆಯ ತಿಥಿ ಮಾಡಲು ಮುಂಬೈನಿಂದ ಬಂದಾತ ತನ್ನ ನೋವು ತೋಡಿಕೊಂಡಿದ್ದಾನೆ. ಉಡುಪಿಯ ಇಂದಿರಾ ನಗರ ಕ್ವಾರಂಟೈನ್ ಸೆಂಟರ್ ಗೆ …

Read More »

ಲಾಕ್ ಡೌನ್ ಅವಧಿ ಮತ್ತೆ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ನವದೆಹಲಿ: ಲಾಕ್ ಡೌನ್ 4.0 ಜಾರಿಯಲ್ಲಿದ್ದರೂ ಕೂಡ ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ಬದಲಾಗಿ ಸೋಂಕಿನ ವೇಗ ವೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಲಾಕ್ ಡೌನ್ ಅವಧಿ ಮತ್ತೆ ವಿಸ್ತರಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಮೇ 31ಕ್ಕೆ ನಾಲ್ಕನೇ ಹಂತದ ಲಾಕ್ ಡೌನ್ ಅವಧಿ ಅಂತ್ಯವಾಗುತ್ತಿದೆ. ಆದರೆ, ಕೊರೋನಾ ವೈರಸ್ ಹೆಚ್ಚುತ್ತಲೇ ಇರುವುದರಿಂದ ಲಾಕ್ ಡೌನ್ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಕೆಂದ್ರ ಸರ್ಕಾರ ಇನ್ನೂ 2 ವಾರ …

Read More »

ಬಾಗಲಕೋಟ ನಗರದಲ್ಲಿ ಇಂದಿನಿಂದ ಬೆಳ್ಳಗೆ ೯ ಗಂಟೆಯಿಂದ ಸಾಯಂಕಾಲ ೬ ಗಂಟೆ ಮಾರುಕಟ್ಟೆಗೆ ಅವಕಾಶ

ಬಾಗಲಕೋಟ ನಗರದಲ್ಲಿ ಇಂದಿನಿಂದ ಬೆಳ್ಳಗೆ ೯ ಗಂಟೆಯಿಂದ ಸಾಯಂಕಾಲ ೬ ಗಂಟೆ ಮಾರುಕಟ್ಟೆಗೆ ಅವಕಾಶ. ಲಾಕ್ ಡೌನ್ ಸಡಿಲಿಕೆ ಬಳಿಕ ಮದ್ಹ್ಯಾನ ೧ ಗಂಟೆವರೆಗೆ ಮಾತ್ರ ಮಾರುಕಟ್ಟೆಗೆ ಕಾಲವಕಾಶ ನೀಡಲಾಗಿತ್ತು. ಜಿಲ್ಲಾಡಳಿತದ ಆದೇಶದ ಮೇರೆಗೆ ಇಂದಿನಿಂದ ಸಂಜೆ ೬ ರ ವರೆಗೆ ಮಾರುಕಟ್ಟೆ ಓಪನ್.. ಮದ್ಯಾಹ ೧ ಗಂಟೆ ಮಾತ್ರ ಮಾರುಕಟ್ಟೆ ಅವಕಾಶ ನೀಡಿದ ಹಿನ್ನಲೆ ವ್ಯಾಪಾರಸ್ಥರು ತೊಂದರೆ ಅನುಭವಿಸುವಂತಾಗಿತು. ಲಾಕ್ ಡೌನ ಸಡಿಲಿಕೆಯಿಂದ ನಗರದ ಪ್ರಮುಖ ರಸ್ತೆ ಮಾರುಕಟ್ಟೆಯಲ್ಲಿ …

Read More »