Breaking News

ಜಿಲ್ಲೆ

ಕೊರೊನಾಕ್ಕಿಂತ ದೊಡ್ಡ ಗ್ರಹಣ ಹಿಡಿಯೋದಿಲ್ಲ: ಸಚಿವ ಬಿ.ಸಿ.ಪಾಟೀಲ್…………

ಹಾವೇರಿ: ಕೊರೊನಾಕ್ಕಿಂತ ದೊಡ್ಡ ಗ್ರಹಣ ಹಿಡಿಯೋದಿಲ್ಲ. ಗ್ರಹಣ ಎಂದು ಯಾರೂ ಉಸಿರಾಡೋದು ನಿಲ್ಲಿಸಿಲ್ಲ. ಗ್ರಹಣ ಎಂಬುದು ಪ್ರಕೃತಿಯಲ್ಲಿ ನಡೆಯೋ ಚಟುವಟಿಕೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದ್ದಾರೆ. ಜಿಲ್ಲೆಯ ಹಿರೇಕೆರೂರು ಪಟ್ಟಣದ ನಿವಾಸದಲ್ಲಿ ಮಾತನಾಡಿದ ಅವರು, ಗ್ರಹಣಕ್ಕೆ ಅಷ್ಟೊಂದು ಮಹತ್ವ ಕೊಟ್ಟು ಮೂಢನಂಬಿಕೆ ಬಿತ್ತೋದು ಸರಿಯಲ್ಲ. ಗ್ರಹಣ ಹಿಡಿದಿದೆ ಅಂತಾ ಎಲ್ಲರೂ ಒಂದು ಕ್ಷಣ ಉಸಿರು ನಿಲ್ಲಿಸಲಿ ನೋಡೋಣ. ಗ್ರಹಣಕ್ಕೆ ಅಷ್ಟು ಮಹತ್ವ ಕೊಡೋ ಅಗತ್ಯವಿಲ್ಲ. ನಮ್ಮ ಕೆಲಸವನ್ನ ನಾವು …

Read More »

ರಾಯಚೂರಿನಲ್ಲಿ ಸೂರ್ಯಗ್ರಹಣ ವೀಕ್ಷಣೆ: ಬಿಸ್ಕೆಟ್ ತಿಂದು ಮೌಢ್ಯಕ್ಕೆ ಬ್ರೇಕ್……..

ರಾಯಚೂರು: ನಗರದ ಅಂಬೇಡ್ಕರ್ ವೃತ್ತದಲ್ಲಿ ಸಾರ್ವಜನಿಕರಿಗಾಗಿ ಚೂಡಾಮಣಿ ಸೂರ್ಯಗ್ರಹಣ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಭಾರತ ಜ್ಞಾನ ವಿಜ್ಞಾನ ಸಮಿತಿ, ಶಿಕ್ಷಣ ಕಿರಣ ಸಂಸ್ಥೆ, ಸೂರ್ಯ ಕಿರಣ ಸಂಸ್ಥೆಯಿಂದ ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿದೆ. ಜೊತೆಗೆ ಸೂರ್ಯಗ್ರಹಣ ವೇಳೆ ಮೂಢನಂಬಿಕೆ ಹಾಗೂ ಮೂಢ ಆಚರಣೆಗಳ ಬಗ್ಗೆ ಅರಿವು ಮೂಡಿಸಲು ಸಾರ್ವಜನಿಕರಿಗೆ ಬಿಸ್ಕೆಟ್ ನೀಡಲಾಗಿದೆ. ಗ್ರಹಣ ಕುರಿತ ವೈಜ್ಞಾನಿಕ ವಿಚಾರಗಳ ಮಾಹಿತಿ ನೀಡಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು, ಸ್ಯಾನಿಟೈಸರ್ ನೀಡುವ ಮೂಲಕ ಸೂರ್ಯಗ್ರಹಣ …

Read More »

ಎಸ್‍ಎಸ್‍ಎಲ್‍ಸಿಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿನಿಗೆ ಕೋವಿಡ್-19 ತಗುಲಿರುವುದು ದೃಢ

ಹಾವೇರಿ: ರಾಜ್ಯಾದ್ಯಂತ ಜೂನ್ 25ರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳು ಆರಂಭವಾಗಲಿವೆ. ಆದರೆ ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿನಿಗೆ ಕೋವಿಡ್-19 ತಗುಲಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಶನಿವಾರ ಹನ್ನೆರಡು ಜನರಿಗೆ ಹೆಮ್ಮಾರಿ ಕೊರೊನಾ ಪತ್ತೆಯಾಗಿದೆ. ಇತ್ತ ಶಿಗ್ಗಾಂವಿ ಪಟ್ಟಣದ ದೇಸಾಯಿ ಗಲ್ಲಿ ಮತ್ತು ಗೌಡರ ಓಣಿಯ ಒಟ್ಟು 12 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿ ಕೂಡ ಇದ್ದು, ಎಲ್ಲರನ್ನೂ ಜಿಲ್ಲೆಯ ಕೋವಿಡ್-19 ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. 62 ವರ್ಷದ …

Read More »

ಅವಧಿಗು ಮುನ್ನವೇ ಕಾಲುವೆ ಮುಖಾಂತರ ರೈತ ಜಮೀನಿಗೆ ನೀರು ಹರಿಸಿದ ಸಚಿವ ಶ್ರೀಮಂತ ಪಾಟೀಲ.

ಅವಧಿಗು ಮುನ್ನವೇ ಕಾಲುವೆ ಮುಖಾಂತರ ರೈತ ಜಮೀನಿಗೆ ನೀರು ಹರಿಸಿದ ಸಚಿವ ಶ್ರೀಮಂತ ಪಾಟೀಲ. ತಾಲೂಕಿನ ಮಂಗಸೂಳಿ ಗ್ರಾಮದ ಸಮೀಪ ಇರುವ ಜಾಕ್ ವೆಲ್ ನಿಂದ ಕಾಲುವೆ ಮುಖಾಂತರ 15 ರಿಂದ 20ಹಳ್ಳಿಗಳ ರೈತರ ಸಾವಿರಾರು ಎಕರೆ ಜಮೀನಿಗೆ ನೀರೂಣಿಸುವ ಕಾರ್ಯಕ್ಕೆ ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಸಚಿವ ಶ್ರೀಮಂತ ಪಾಟೀಲ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸಚಿವರು ಈ ವರ್ಷ ಮಹಾರಾಷ್ಟ್ರದಲ್ಲಿ ಮಾನ್ಸೂನ್ ಮಳೆ ಅವಧಿಗೂ …

Read More »

ಮಠದಲ್ಲಿ ಯಾರಿಗೂ ಕೊರೊನಾ ಪಾಸಿಟಿವ್ ಲಕ್ಷಣಗಳು ಇಲ್ಲ: ಸಿದ್ದಲಿಂಗ ಶ್ರೀ

ತುಮಕೂರು: ಸಿದ್ದಗಂಗಾ ಮಠದಲ್ಲಿ ಯಾರಿಗೂ ಕೊರೊನಾ ಪಾಸಿಟಿವ್ ಲಕ್ಷಣಗಳು ಇಲ್ಲ ಎಂದು ಸಿದ್ದಲಿಂಗ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ. ಮಠದಲ್ಲಿ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಇದೆ ಎಂದು ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಖುದ್ದು ಸ್ಪಷ್ಟನೆ ನೀಡಿದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು, ಆಂಧ್ರದಿಂದ ಬಂದ ವಿದ್ಯಾರ್ಥಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬುದಾಗಿ ಪ್ರಚಾರವಾಗಿತ್ತು. ಆ ವಿದ್ಯಾರ್ಥಿಯನ್ನ ಜಿಲ್ಲಾಡಳಿತ ಪರೀಕ್ಷೆ ನಡೆಸಿತು. ಆತನ ಪರೀಕ್ಷೆಯಲ್ಲಿ ಎಲ್ಲಾ ವರದಿಗಳು ನೆಗೆಟಿವ್ ಬಂದಿದೆ ಎಂದು …

Read More »

ದೊಡ್ಡ ವ್ಯಾಪಾರಿಗಳಿಗೆ ಫೋನ್ ಮಾಡಿ, ಬೇಡಿದಷ್ಟು ಹಣ ಕೊಡದಿದ್ದರೆ ಖಲ್ಲಾಸ್ ಮಾಡುತ್ತೇವೆ,ಎಂದು ಬೆದರಿಸುತ್ತಿದ್ದ,ಇಬ್ಬರು ರೌಡಿಗಳನ್ನು ಬೆಳಗಾವಿಯ ಖಡೇಬಝಾರ್ ಠಾಣೆಯ ಪೋಲೀಸರು ಬಂಧಿಸಿದ್ದಾರೆ.

ಬೆಳಗಾವಿ-ಬಿಲ್ಡರ್ ಗಳಿಗೆ,ದೊಡ್ಡ ದೊಡ್ಡ ವ್ಯಾಪಾರಿಗಳಿಗೆ ಫೋನ್ ಮಾಡಿ, ಬೇಡಿದಷ್ಟು ಹಣ ಕೊಡದಿದ್ದರೆ ಖಲ್ಲಾಸ್ ಮಾಡುತ್ತೇವೆ,ಎಂದು ಬೆದರಿಸುತ್ತಿದ್ದ,ಇಬ್ಬರು ರೌಡಿಗಳನ್ನು ಬೆಳಗಾವಿಯ ಖಡೇಬಝಾರ್ ಠಾಣೆಯ ಪೋಲೀಸರು ಬಂಧಿಸಿದ್ದಾರೆ. ಬೆಳಗಾವಿಯ ಕ್ಯಾಂಪ್ ಪೋಲೀಸ್ ಠಾಣೆ ಸೇರಿದಂತೆ ನಗರದ ಹಲವಾರು ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಅನೇಕ ಅಪರಾಧಗಳಲ್ಲಿ ಭಾಗಿಯಾಗಿದ್ದ ಇಬ್ಬರು ರೌಡಿಗಳು ಫೋನ್ ಮುಖಾಂತರವೇ ಹಣವಂತರನ್ನು ಬೆದರಿಸುತ್ತ,ತಲೆಮರೆಸಿಕೊಂಡಿದ್ದರು. ಖಡೇಬಝಾರ್ ಪೋಲೀಸರು ಹಿರಿಯ ಪೋಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬಲೆ ಬೀಸಿ ಇಬ್ಬರು ಆರೋಪಿಗಳನ್ನು ಬಂಧಿಸಿ,ಒಂದು ಕಾರು,ಮಾರಕಾಸ್ತ್ರಗಳು,ಮತ್ತು ಒಂದು …

Read More »

ಯೋಗದಿಂದ ಜೀವನದಲ್ಲಿ ಯೋಗ್ಯತೆ ಹೆಚ್ಚುತ್ತೆ: ಪ್ರಧಾನಿ ಮೋದಿ………..

ನವದೆಹಲಿ: ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕವಾಗಿ ಯೋಗ ದಿನಾಚರಣೆ ಆಚರಿಸದಿರಲು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಜನರಿಗೆ ತಮ್ಮ ತಮ್ಮ ಮನೆಯಲ್ಲೇ ಕುಟುಂಬಸ್ಥರ ಜೊತೆ ಯೋಗ ಮಾಡುವಂತೆ ಮೋದಿ ಕರೆ ನೀಡಿದ್ದಾರೆ.   ದೇಶದ್ಯಾಂತ ಬೆಳಗ್ಗೆ ಏಳು ಗಂಟೆಗೆ ಮನೆಯಲ್ಲಿ ಯೋಗ ದಿನ ಆಚರಿಸಲು ಕರೆ ನೀಡಿರುವ ಪ್ರಧಾನಿ ಮೋದಿ ಸ್ವತಃ ತಾವು ಮನೆಯಲ್ಲಿ ಯೋಗ ಮಾಡುತ್ತಿದ್ದಾರೆ. ದೆಹಲಿಯ ಲೋಕ …

Read More »

ಜೂನ್ 21 ರಿಂದ 25ರವರೆಗೆ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.

ಬೆಂಗಳೂರು: ಈಗಾಗಲೇ ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಿದೆ. ಹೀಗಾಗಿಯೇ ಕಳೆದ ಮೂರು ವಾರಗಳಿಂದ ಜೋರು ಮಳೆಯಾಗುತ್ತಿದೆ. ಇತ್ತೀಚೆಗಂತೂ ಸುರಿದ ಭಾರೀ ಮಳೆಗೆ ಶಿವಮೊಗ್ಗದ ಗಾಜನೂರು ಸೇರಿದಂತೆ ಇತರ ಜಲಾಶಯಗಳು ಭರ್ತಿಯಾಗಿವೆ. ಇದರ ಪರಿಣಾಮ ನೀರಿನ ಪ್ರಮಾಣವೂ ಹೆಚ್ಚಾಗಿದೆ. ಹೀಗಿರುವಾಗಲೇ ರಾಜ್ಯ ಹವಾಮಾನ ಇಲಾಖೆ ಮಳೆ ಕುರಿತಾದ ಮತ್ತೊಂದು ಮಹತ್ತರ ಮಾಹಿತಿ ನೀಡಿದೆ.ಹೌದು, ಇಂದಿನಿಂದ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 21 ರಿಂದ 25ರವರೆಗೆ …

Read More »

ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮೂರು ಕಡೆ ಕೋವಿಡ್ ಕೇರ್ ಸೆಂಟರ್ ತೆರೆಯಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮೂರು ಕಡೆ ಕೋವಿಡ್ ಕೇರ್ ಸೆಂಟರ್ ತೆರೆಯಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಕೋವಿಡ್ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ರವಿಶಂಕರ್ ಆಶ್ರಮ, ಕಂಠೀರವ ಒಳಾಂಗಣ ಕ್ರೀಡಾಂಗಣ ಹಾಗೂ ಕೋರಮಂಗಲ ಒಳಾಂಗಣ ಕ್ರೀಡಾಂಗಣಗಳನ್ನು ರೋಗ ಲಕ್ಷಣವಿಲ್ಲದ ಕೊರೊನಾ ಸೋಂಕಿತರ ಚಿಕಿತ್ಸಾ ಕೇಂದ್ರಗಳಾಗಿ ಕಾರ್ಯ ನಿರ್ವಹಿಸಲಿವೆ. ಖಾಸಗಿ ಆಸ್ಪತ್ರೆಯಲ್ಲೂ ಕೊರೊನಾ ಚಿಕಿತ್ಸೆ ನೀಡಲು ನಿರ್ಧಾರ ಮಾಡಲಾಗಿದೆ. ಖಾಸಗಿ …

Read More »

ಮಠದಲ್ಲಿ ಯಾರಿಗೂ ಕೊರೊನಾ ಪಾಸಿಟಿವ್ ಲಕ್ಷಣಗಳು ಇಲ್ಲ: ಸಿದ್ದಲಿಂಗ ಶ್ರೀ………

ತುಮಕೂರು: ಸಿದ್ದಗಂಗಾ ಮಠದಲ್ಲಿ ಯಾರಿಗೂ ಕೊರೊನಾ ಪಾಸಿಟಿವ್ ಲಕ್ಷಣಗಳು ಇಲ್ಲ ಎಂದು ಸಿದ್ದಲಿಂಗ ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.   ಮಠದಲ್ಲಿ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ಇದೆ ಎಂದು ವದಂತಿ ಹಬ್ಬಿತ್ತು. ಈ ಹಿನ್ನೆಲೆಯಲ್ಲಿ ಖುದ್ದು ಸ್ಪಷ್ಟನೆ ನೀಡಿದ ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳು, ಆಂಧ್ರದಿಂದ ಬಂದ ವಿದ್ಯಾರ್ಥಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬುದಾಗಿ ಪ್ರಚಾರವಾಗಿತ್ತು. ಆ ವಿದ್ಯಾರ್ಥಿಯನ್ನ ಜಿಲ್ಲಾಡಳಿತ ಪರೀಕ್ಷೆ ನಡೆಸಿತು. ಆತನ ಪರೀಕ್ಷೆಯಲ್ಲಿ ಎಲ್ಲಾ ವರದಿಗಳು ನೆಗೆಟಿವ್ ಬಂದಿದೆ ಎಂದು …

Read More »