Breaking News

ಜಿಲ್ಲೆ

ಸಿಲಿಕಾನ್ ಸಿಟಿ ಬಿಟ್ಟು ಹೋಗುವವರಿಗೆ ಇದೀಗ ಅಷ್ಟದಿಗ್ಬಂಧನ

ಬೆಂಗಳೂರು: ಸಿಲಿಕಾನ್ ಸಿಟಿ ಬಿಟ್ಟು ಹೋಗುವವರಿಗೆ ಇದೀಗ ಅಷ್ಟದಿಗ್ಬಂಧನ ಹೇರಲಾಗಿದೆ. ಈ ಟೈಟ್ ನಿಯಮಗಳನ್ನು ಸರ್ಕಾರ ಕ್ಯಾಬಿನೆಟ್ ಸಭೆಯ ಬಳಿಕ ತರುವ ಸಾಧ್ಯತೆಗಳಿವೆ. ಬೆಂಗಳೂರಿಂದ ತಮ್ಮ ಊರಿಗೆ ಈಗ ಹೋಗೋರಿಗೆ ತರುವ ರೂಲ್ಸ್ ಗಳ ಇನ್ ಸೈಡ್ ಡೀಟೆಲ್ಸ್ ಲಭ್ಯವಾಗಿದೆ. ಹೌದು. ಸಾವಿರಾರು ಮಂದಿ ಶನಿವಾರ, ಸೋಮವಾರದಿಂದ ಬೆಂಗಳೂರು ಬಿಟ್ಟು ತಮ್ಮ ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಕೊರೊನಾ ಭಯ, ಬದುಕಿಗೆ ಬರೆ ಹಾಗೂ ಜೀವನ ಕುಂಟುವುದು ಖರೆ ಅಂತ ಜಾಗ …

Read More »

ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ- 2 ಗಂಟೆ ಅಂಬುಲೆನ್ಸ್‌ನಲ್ಲೇ ಸೋಂಕಿತ……..

ಹಾವೇರಿ: ಮಹಾಮಾರಿ ಕೊರೊನಾದಿಂದ ಅಂಬುಲೆನ್ಸ್, ಬೆಡ್ ಸಿಗುತ್ತಿಲ್ಲ ಎಂಬ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿವೆ. ಇದೀಗ ಜಿಲ್ಲಾ ಕೋವಿಡ್ 19 ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತನನ್ನು ಸೇರಿಸಿಕೊಳ್ಳದೆ ನಿರ್ಲಕ್ಷ್ಯ ತೋರಲಾಗಿದೆ. ಹಾವೇರಿ ಕೋವಿಡ್ ಆಸ್ಪತ್ರೆಯಲ್ಲಿ ಬೆಡ್ ಕೊರತೆ ಉಂಟಾಗಿದೆ. ಇದರಿಂದ ಸುಮಾರು ಎರಡು ಗಂಟೆ ಸಮಯ ಆಸ್ಪತ್ರೆ ಮುಂದೆ ನಿಂತಿದ್ದ ಅಂಬುಲೆನ್ಸ್‌ನಲ್ಲೇ ಕೊರೊನಾ ಸೋಂಕಿತ ಕುಳಿತಿದ್ದರು. ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇಲ್ಲ. ಹೀಗಾಗಿ ಬೆಡ್ ಖಾಲಿ ಆಗುವರೆಗೂ ಕಾಯಿರಿ ಎಂದು ಆಸ್ಪತ್ರೆ …

Read More »

ಶ್ರೀ ಬಿ. ಎಲ್. ಸಂತೋಷ್ ಅವರ ಸಮಾರೋಪಜನಸಂವಾದ ಕಾರ್ಯಕ್ರಮ………..

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ. ಎಲ್. ಸಂತೋಷ್ ಅವರು ಇಂದು ಕರ್ನಾಟಕ ಜನಸಂವಾದ ಸಮಾರೋಪ ಕಾರ್ಯಕ್ರಮದಲ್ಲಿ ರಾಜ್ಯವನ್ನು ಉದ್ದೇಶಿಸಿ ಮಾತನಾಡಲಿದ್ದರು. ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ವಾರ್ಡ್ ನಂಬರ್ 47 ಬಿಜೆಪಿ ಪದಾಧಿಕಾರಿಗಳು ವೀಕ್ಷಣೆ ಮಾಡಿದರು . ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಯುವಮೋರ್ಚ ಉಪಾಧ್ಯಕ್ಷ ಮಹೇಂದ್ರ ಕೌತಾಳ , ಬಗರ್ ಹುಕುಂ ಸದಸ್ಯರಾದ ರಾಮು ಯಾದಗಿರಿ , ಸೀಳನ್ ಜೆವಿರ್ , ಧಾರವಾಡ ಜಿಲ್ಲಾ ಎಸ್ಸಿ …

Read More »

ಕಾರ್ಯಕರ್ತರು ಪಕ್ಷ ಸಂಘಟನೆಗೆ ಹೆಚ್ಚು ಶ್ರಮವಹಿಸಬೇಕು.:ಸತೀಶ ಜಾರಕಿಹೊಳಿ

ಚಿಕ್ಕೋಡಿ : ಕಾಂಗ್ರೆಸ್ ಪಕ್ಷವೂ ಹಿಂದಿನಿಗಿಂತಲ್ಲೂ ವಿಭಿನ್ನವಾಗಿ  ಮುನ್ನಡೆಯಲಿದೆ. ಕಾರ್ಯಕರ್ತರು ಪಕ್ಷ ಸಂಘಟನೆಗೆ ಹೆಚ್ಚು ಶ್ರಮವಹಿಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸೋಮವಾರ ಭೇಟಿ ನೀಡಿ  ಅವರು ಮಾತನಾಡಿ, ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ತುಂಬಾ ಉತ್ಸಾಹಿ ಇದ್ದಾರೆ. ಪಕ್ಷವನ್ನು ಕಟ್ಟುವ ಛಲ ಅವರಲ್ಲಿದೆ. ಆದ ಕಾರಣ ಅವರೊಂದಿಗೆ ಮುನ್ನಡೆದರೆ ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದೆ ಬರುತ್ತದೆ ಎಂದು …

Read More »

ಬಾಗಲಕೋಟೆಯಲ್ಲಿ ರಿಜಿಸ್ಟರ ಮ್ಯಾರೇಜಗೆ ಮಾತ್ರ ಅವಕಾಶ, ಮದುವೆ, ಸೀಮಂತ ಕಾರ್ಯಗಳಿಗೆ ಅನುಮತಿ ನಿಷೇಧ

ಬಾಗಲಕೋಟೆ : ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ನಡೆಯುವ ಮದುವೆ, ಸೀಮಂತ ಕಾರ್ಯಕ್ರಮಗಳನ್ನು ಮುಂದಿನ ಆದೇಶದ ವರೆಗೆ ನಿಷೇಧಿಸಲಾಗಿದ್ದು, ರಿಜಿಸ್ಟರ ಮದುವೆಗೆ ಮಾತ್ರ ಅವಕಾಶವಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದರು. ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಸೋಮವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ನಡೆಯುತಿರುವ ಮದುವೆ ಸಮಾರಂಭಗಳಲ್ಲಿ ಹೆಚ್ಚು ಜನ ಭಾಗವಹಿಸುತ್ತಿದ್ದು, ಇದರ ಪರಿಣಾಮ ಕಾರ್ಯಕ್ರಮದಲ್ಲಿ ಭಾಗವಹಿಸಿದರಿಗೂ ಕೊರೊನಾ ಸೋಂಕು ಹರಡುತ್ತಿರುವುದನ್ನು ಗಮನಿಸಿದ ಜಿಲ್ಲಾ ಉಸ್ತುವಾರಿ …

Read More »

ಅತಿ ಕಡಿಮೆ ‘ಆಕ್ಟಿವ್ ಕೇಸ್’ ಹೊಂದಿರುವ ಕರ್ನಾಟಕದ ಐದು ಜಿಲ್ಲೆಗಳು..

ಬೆಂಗಳೂರು, ಜುಲೈ 6: ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 23 ಸಾವಿರ ಗಡಿ ದಾಟಿದೆ. ದೇಶದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪೈಕಿ ಟಾಪ್ ಹತ್ತರೊಳಗೆ ಕರ್ನಾಟಕ ಗುರುತಿಸಿಕೊಂಡಿದೆ. ಒಂದು ಹಂತದಲ್ಲಿ ಇತರೆ ರಾಜ್ಯಗಳಿಗೆ ಮಾದರಿ ಎನಿಸಿಕೊಂಡಿದ್ದ ಕರ್ನಾಟಕ ಈಗ ಗಂಭೀರ ಸ್ಥಿತಿ ತಲುಪಿತ್ತಿದೆ. ಈವರೆಗೂ ರಾಜ್ಯದಲ್ಲಿ 23,474 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಅದರಲ್ಲಿ 9847 ಜನರು ಗುಣಮುಖರಾಗಿದ್ದು, 13,251 ಕೇಸ್‌ಗಳು ಸಕ್ರಿಯವಾಗಿದೆ. ಈ ಪೈಕಿ ಬೆಂಗಳೂರು …

Read More »

ಬೆಂಗಳೂರಿನಿಂದ ಬರುವವರಿಗೆ5 ಸಾವಿರ ದಂಡ

ಮಂಡ್ಯ: ರಾಜ್ಯದಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಅನೇಕ ಗ್ರಾಮಗಳು, ಜಿಲ್ಲೆ ಸ್ವಯಂ ಲಾಕ್‍ಡೌನ್ ಘೋಷಿಸಿಕೊಂಡಿವೆ. ಇದೀಗ ಜಿಲ್ಲೆಯ ಗ್ರಾಮವೊಂದರಲ್ಲಿ ಬೆಂಗಳೂರಿನಿಂದ ಬರುವವರಿಗೆ ದಂಡ ವಿಧಿಸುವುದಾಗಿ ಡಂಗೂರದ ಮೂಲಕ ಸಾರಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ ಬೆಂಗಳೂರಿಗರ ಭಯ ಶುರುವಾಗಿದೆ. ಹೀಗಾಗಿ ಮಂಡ್ಯ ಜಿಲ್ಲೆಯ ಗ್ರಾಮವೊಂದರಲ್ಲಿ ಊರಿನ ಒಳಗೆ ಬೆಂಗಳೂರಿನವರು ಬರುವಾಗಿಲ್ಲ ಎಂದು ಡಂಗೂರದ ಮೂಲಕ ಸಾರಿಸಿದ್ದಾರೆ. ಇದೀಗ ಡಂಗೂರ ಸಾರಿಸಿರುವ ವಿಡಿಯೋ ವೈರಲ್ ಆಗಿದೆ. …

Read More »

ಇಂದು ಜಿಲ್ಲೆಯಲ್ಲಿ ಮತ್ತೊಂದು ಜೀವ ತೆಗೆದುಕೊಂಡ ಕೊರೋನಾ

ಬೆಳಗಾವಿ: ಮಾರಣಾಂತಿಕ ವೈರಸ್ ಕೊರೋನಾ ಇಂದು ಜಿಲ್ಲೆಯಲ್ಲಿ ಮತ್ತೊಂದು ಜೀವ ತೆಗೆದುಕೊಂಡಿದ್ದು ಒಟ್ಟು ಮೃತರ ಸಂಖ್ಯೆ 7 ಕ್ಕೇರಿದೆ. ಅಥಣಿ ತಾಲ್ಲೂಕಿನ ಗ್ರಾಮವೊಂದರ 60 ವರ್ಷದ ಸೊಂಕಿತ ಮಹಿಳೆ ಇಂದು ಬಲಿಯಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಮೃತರ ಸಂಖ್ಯೆ ತೀವ್ರತೆ ಪಡೆದುಕೊಳ್ಳುತ್ತಿದ್ದು ಜನರು ಆತಂಕಕ್ಕೆ ಒಳಗಾಗಿದ್ದಾರೆ.  ಜಿಲ್ಲೆಯಾದ್ಯಾಂತ  ಕೊರೋನಾ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದೆ. ಸಮುದಾಯ ಮಟ್ಟಕ್ಕೂ ಹರಡಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಜನರು ಮಾಸ್ಕ್ ಬಳಸಿ ಅಗತ್ಯವಿದ್ದರೆ ಮಾತ್ರ ಹೊರಗೆ …

Read More »

ಚಿತ್ರದುರ್ಗದಲ್ಲಿ ನ್ಯಾಯಾಲಯದ ಟೈಪಿಸ್ಟ್​​ಗೆ ಕೊರೋನಾ; 23 ಜನರೊಂದಿಗೆ ಪ್ರಾಥಮಿಕ ಸಂಪರ್ಕ; ಜಿಲ್ಲೆಯ ಜನರಲ್ಲಿ ಆತಂಕ

ಚಿತ್ರದುರ್ಗ(ಜು.06): ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೋನಾ ಮಹಾಮಾರಿ ಸೋಂಕು ದಿನೇ ದಿನೇ ಹೆಚ್ಚುತ್ತಲೇ ಇದೆ. ಜಿಲ್ಲೆಯ ಆರೂ ತಾಲ್ಲೂಕುಗಳಲ್ಲಿ ಒಬ್ಬೊಬ್ಬರಿಗೆ ಹರಡಿದ ಕೊರೋನಾ ಸೋಂಕು ಈಗ ಚಿತ್ರದುರ್ಗ ಜಿಲ್ಲಾ ಸೀನಿಯರ್ ಡಿವಿಷನ್ ನ್ಯಾಯಾಲಯಕ್ಕೆ ಕಾಲಿಟ್ಟಿದೆ. ನಿನ್ನೆ ಚಿತ್ರದುರ್ಗದ ಸಿಜೆಎಂ ನ್ಯಾಯಾಲಯದ ಟೈಪಿಸ್ಟ್ ಗೆ ಕೊರೋನಾ ಪಾಸಿಟಿವ್ ಬಂದಿದು ಜಿಲ್ಲೆಯ ಜನರನ್ನ ಬೆಚ್ಚಿ ಬೀಳುವಂತೆ ಮಾಡಿದೆ. ಚಿತ್ರದುರ್ಗ ನ್ಯಾಯಾಲಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹಿರಿಯೂರು ಮೂಲದ 33 ವರ್ಷದ ವ್ಯಕ್ತಿಗೆ ಕೊರೋ‌ನಾ ಪಾಸಿಟಿವ್ …

Read More »

60 ವರ್ಷ ಮೇಲ್ಪಟ್ಟವರು ಹೊರಬರದಂತೆ ರಾಜ್ಯದಲ್ಲಿ ಕಾನೂನು

ಬೆಂಗಳೂರು(ಜು.06): ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಬರುವವರೆಗೂ ಕಿಡ್ನಿ, ಲಿವರ್‌, ಹೃದಯ ಸಂಬಂಧಿ ಸಮಸ್ಯೆ ಸೇರಿದಂತೆ ಪೂರ್ವ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ 60 ವರ್ಷ ಮೇಲ್ಪಟ್ಟವರು ಮನೆಯಿಂದ ಹೊರಬರಬಾರದೆಂಬ ಕಾನೂನು ರೂಪಿಸುವ ಚಿಂತನೆ ನಡೆಸುತ್ತಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಈವರೆಗೆ ಕೋವಿಡ್‌ನಿಂದ ಮೃತಪಟ್ಟವರ ಪೈಕಿ ಬಹುತೇಕ ಮಂದಿ 60 ವರ್ಷ ಮೇಲ್ಪಟ್ಟವರು ಹಾಗೂ ಈಗಾಗಲೇ ಪೂರ್ವ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದವರಾಗಿದ್ದಾರೆ. …

Read More »