Breaking News

ಜಿಲ್ಲೆ

ಒಂದೂರಿನ ಶವ ಮತ್ತೊಂದು ಊರಲ್ಲಿ ………

ಮಂಡ್ಯ: ಮಹಾಮಾರಿ ಕೊರೊನಾದಿಂದ ಜನರು ಈಗಾಗಲೇ ಭಯಭೀತರಾಗಿದ್ದಾರೆ. ಇದೀಗ ಜಿಲ್ಲೆಯ ಮಳವಳ್ಳಿ ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ಶವ ಕಂಡು ಗ್ರಾಮಸ್ಥರು ಗಾಬರಿಯಾಗಿದ್ದಾರೆ. ನಾಗರಾಜು (50) ಸಾವನ್ನಪ್ಪಿರುವ ವ್ಯಕ್ತಿ. ನಾಗರಾಜು ಮೂಲತಃ ಟಿ.ನರಸಿಪುರ ತಾಲೂಕಿನ ಮುಸುಕನಕೊಪ್ಪಲು ಗ್ರಾಮದವರು. ಅನೇಕ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ಆದರೆ ಬೆಂಗಳೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹಚ್ಚಾಗುತ್ತಿದೆ. ಇದರಿಂದ ಗಾಬರಿಗೊಂಡು ನಾಗರಾಜು ಮಂಗಳವಾರ ಬೆಂಗಳೂರಿನಿಂದ ಹೊರಟ್ಟಿದ್ದಾರೆ. ಆದರೆ ತಮ್ಮ ಗ್ರಾಮಕ್ಕೆ ಹೋಗುವಷ್ಟಲ್ಲಿ ಕತ್ತಲಾಗುತ್ತದೆ ಎಂದು …

Read More »

ಕಾರ್ಪೊರೇಟರ್ ಓರ್ವರಿಗೂ ಕೋವಿಡ್-19 ಪಾಸಿಟಿವ್ ದೃಢ……….

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇಂದು ಕಾರ್ಪೊರೇಟರ್ ಓರ್ವರಿಗೂ ಕೋವಿಡ್-19 ಪಾಸಿಟಿವ್ ದೃಢವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ಕುಂಜತ್ತಬೈಲ್ ದಕ್ಷಿಣ 15ನೇ ವಾರ್ಡಿನ ಕಾರ್ಪೊರೇಟರ್ ಸುಮಂಗಲಾ ರಾವ್ ಅವರಿಗೆ ಇಂದು ಪಾಸಿಟಿವ್ ಪತ್ತೆಯಾಗಿದೆ. ಈ ಬಗ್ಗೆ ಸ್ವತಃ ಸುಂಮಗಲಾ ರಾವ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಾಕಿದ್ದು, ತಮ್ಮ ಪತಿಗೂ ಪಾಸಿಟಿವ್ ಆಗಿದ್ದು ಗುಣಮುಖರಾಗುತ್ತಿದ್ದೇವೆ ಎಂದಿದ್ದಾರೆ. https://youtu.be/ZwocKpMtUVY ಕಳೆದ ಕೆಲ ದಿನದ …

Read More »

ಕೆಸಿಡಿ ಪ್ರಧ್ಯಾಪಕಿಗೆ ಕೊರೊನಾ- ಧಾರವಾಡ ವಿವಿಗೆ 8 ದಿನ ರಜೆ

ಧಾರವಾಡ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೂ ಈಗ ಕೊರೊನಾ ಆತಂಕ ಎದುರಾಗಿದೆ. ವಿಶ್ವವಿದ್ಯಾಲಯ ವ್ಯಾಪ್ತಿಯ ಕೆಸಿಡಿ ಕಾಲೇಜ್‍ನ ಪ್ರಾಧ್ಯಾಪಕಿಯೊಬ್ಬರಿಗೆ ಕರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲೇ ಆತಂಕ ಎದುರಾಗಿದ್ದು, ಇದರ ಬೆನ್ನಲ್ಲೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ 8 ದಿನಗಳ ರಜೆ ಘೋಷಿಸಲಾಗಿದೆ. ಕರ್ನಾಟಕ ವಿಶ್ವವಿದ್ಯಾಲಯದ ಅಧೀನದಲ್ಲಿ ನಡೆಯುವ ಕೆಸಿಡಿ ಕಾಲೇಜಿನ ಪ್ರಾಧ್ಯಾಪಕಿಯೊಬ್ಬರಿಗೆ ಎರಡು ದಿನಗಳ ಹಿಂದೆ ಸೋಂಕು ದೃಢಪಟ್ಟಿತ್ತು. ಇವರು ಸೋಂಕು ದೃಢವಾಗುವ ಮುಂಚೆ ವಿಶ್ವವಿದ್ಯಾಲಯದ ಮೂರು ವಿಭಾಗಗಳಿಗೆ ಭೇಟಿ ನೀಡಿದ್ದರು. ಈ ಹಿನ್ನೆಲೆಯಲ್ಲಿ …

Read More »

ಸರಕಾರದ ನಿಯಮಗಳನ್ನು ಕೋವಿಡ್ 19 ಬಗ್ಗೆ ಜನರಿಗೆ ತಲುಪಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದಾಗಿದೆ : ಡಾ.ಜಗದೀಶ ಜಿಂಗಿ

ಗೋಕಾಕ :ಕೊರೋನಾ ವೈರಸ್ ಹರಡದಂತೆ ತಡೆಗಟ್ಟಲು ಸರಕಾರದ ನಿಯಮಗಳನ್ನು ಜನರಿಗೆ ತಲುಪಿಸುವಲ್ಲಿ ಪತ್ರಕರ್ತರ ಪಾತ್ರ ಮಹತ್ವದಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ.ಜಗದೀಶ ಜಿಂಗಿ ಹೇಳಿದರು. ಬುಧವಾರದಂದು ನಗರದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಆಶಾ ಕಾರ್ಯಕರ್ತಯರಿಗೆ ಹಾಗೂ ಪತ್ರಕರ್ತರಿಗೆ ರೋಗ ನಿರೋಧ ಶಕ್ತಿ ಹೆಚ್ಚಿಸುವ ಚವನಪ್ರಾಶ್ ವಿತರಿಸಿ ಅವರು ಮಾತನಾಡಿದರು. ಆಶಾ ಕಾರ್ಯಕರ್ಯರು , ಪೊಲೀಸರಂತೆ ಜೀವದ ಹಂಗು ತೊರೆದು ಪತ್ರಕರ್ತರು ಸಹ ಕೊರೋನಾ ವೈರಸ್ ಹರದಂತೆ ಜನರಲ್ಲಿ ಜಾಗೃತಿ ಮೂಡಿಸಲು …

Read More »

ಗೋಕಾಕ ತಾಲೂಕಿನ ಜನತೆಯನ್ನು ಗೋಕಾಕ ಲಕ್ಷ್ಮಿ ದೇವಿಯೇ ಕಾಪಾಡಬೇಕು…

ಗೋಕಾಕ ತಾಲೂಕಿನ ಜನತೆಯನ್ನು ಗೋಕಾಕ ಲಕ್ಷ್ಮಿ ದೇವಿಯೇ ಕಾಪಾಡಬೇಕು… ಗೋಕಾಕ: ಮಹಾಮಾರಿ ಕ ರೋ ನಾ ವೈರಸ್ ಇಂದು ಗೋಕಾಕ ತಾಲೂಕಿನ ಐದು ಜನರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ , ಗೋಕಾಕ ತಾಲೂಕಿನ ಗ್ರಾಮ ಗಳಾದ ಗುಜನಾಳ, ಖನಗಾವ್, ಶಿಂದಿ ಕುರಬೆಟ್, ಹಾಗೂ ಗೋಕಾಕ ನಗರದಲ್ಲಿ ಕೂಡ ಇಂದು ಒಂದೇ ದಿನ ಐದು ಪಾಸಿಟಿವ್ ಕೆಸಗಳು ಬಂದಿವೆ . ಹಾಗೆ ಪಾಸಿಟಿವ್ ಬಂದಿರುವ ವ್ಯಕ್ತಿಗಳನ್ನು ಬೆಳಗಾವಿಯ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ, ಹಾಗೂ …

Read More »

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನನ್ನ ಕಾಲಿಗೆ ಬಿದ್ದಿದ್ದು ನಿಜ:ರಮೇಶ್ ಜಾರಕಿಹೊಳಿ

ಬೆಳಗಾವಿ: ಬುಡಾ ಮೆಂಬರ್ ಮಾಡುವಂತೆ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನನ್ನ ಕಾಲಿಗೆ ಬಿದ್ದಿದ್ದು ನಿಜ. ಲಿಂಗಾಯತ ಸಮಾಜದ ಮಹಿಳೆ ಬೆಳೆಯಲಿ ಅಂತಾ ನಾನೇ ಸಹಾಯ ಮಾಡಿದ್ದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವ್ಯಕ್ತಿತ್ವ ಏನು ಎಂಬುವುದು ಬೆಳಗಾವಿಯ ಮೂಲೆ ಮೂಲೆಗೂ ಗೊತ್ತಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡಲು ಹೋಗಲ್ಲ. ಮುಂದಿನ ಚುನಾವಣೆಯಲ್ಲಿ ಎಲ್ಲದಕ್ಕೂ ಉತ್ತರ ಕೊಡಲಿದ್ದೇವೆ. ಕುಕ್ಕರ್ ವಿಷಯದಲ್ಲಿ ನನ್ನಿಂದ ಸಹಾಯ ಪಡೆದಿಲ್ಲ …

Read More »

ರಾಜ್ಯದ ಗ್ರೀನ್​ಜೋನ್​ಗಳಲ್ಲಿ ಶಾಲೆ ಪುನರಾರಂಭ?; ಸರ್ಕಾರಕ್ಕೆ ತಜ್ಞರ ಸಮಿತಿ ಮಾಡಿದ ಶಿಫಾರಸಿನ ವಿವರ ಇಲ್ಲಿದೆ

ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಅಟ್ಟಹಾಸ ಮಿತಿಮೀರುತ್ತಿದೆ. ಇದರಿಂದಾಗಿ ಹಳ್ಳಿಹಳ್ಳಿಗಳಲ್ಲೂ ಜನರು ಮನೆಯಿಂದ ಹೊರಗೆ ಬರಲು ಆತಂಕ ಪಡುವಂತಾಗಿದೆ. ಈ ಆತಂಕದ ನಡುವೆಯೇ ರಾಜ್ಯ ಸರ್ಕಾರ ಎಸ್​ಎಸ್​ಎಲ್​ಸಿ ಮತ್ತು ಪಿಯುಸಿ ಪರೀಕ್ಷೆಗಳನ್ನು ಮಾಡಿ ಮುಗಿಸಿದೆ. ಇದೀಗ ಹಸಿರು ವಲಯಗಳಲ್ಲಿ ಮೊದಲು ಶಾಲೆ ಆರಂಭಿಸಿ, ನಂತರ ಕಂಟೋನ್ಮೆಂಟ್​ ವಲಯವನ್ನು ಹೊರತುಪಡಿಸಿ, ಉಳಿದೆಡೆ ಶಾಲೆಗಳನ್ನು ತೆರೆಯಬಹುದು ಎಂದು ತಜ್ಞರ ತಂಡ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಶಾಲೆಗಳನ್ನು ಪುನರಾರಂಭಿಸುವ ಬಗ್ಗೆ ರಾಜ್ಯ ಸರ್ಕಾರ ತಜ್ಞರ …

Read More »

ಸುಮಲತಾ ಅವರು ಮಾಸ್ಕ್‌ ಧರಿಸದೇ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಕಂಡುಬಂದಿದೆ.ಜನಪ್ರತಿನಿಧಿಗಳು, ಬೆಂಬಲಿಗರು ಸೇರಿದಂತೆ ಸಾರ್ವಜನಿಕರಿಗೂ ಆತಂಕ

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್‌ ಅವರು ತಮಗೆ ಕರೊನಾ ಸೋಂಕು ತಗುಲಿರುವ ಬಗ್ಗೆ ನಿನ್ನೆಯಷ್ಟೇ ದೃಢಪಡಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದ ಅವರು, ತಾವು ಶೀಘ್ರದಲ್ಲಿ ಗುಣಮುಖರಾಗಿ ಬರುವ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದರು. ಆದರೆ ಇದೀಗ ಅನೇಕ ಸಚಿವರು, ಶಾಸಕರು ಸೇರಿದಂತೆ ಅನೇಕ ಗಣ್ಯರಿಗೆ ಆತಂಕ ಎದುರಾಗಿದೆ. ಇದಕ್ಕೆ ಕಾರಣ ಇಷ್ಟೇ. ಇದೇ 4ರಂದು ಮಂಡ್ಯದ ರೈತ ಸಭಾಂಗಣದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಸುಮಲತಾ ಭಾಗವಹಿಸಿದ್ದರು. ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹ ಧನದ …

Read More »

ಬಯಲು ಸೀಮೆ ಕೋಲಾರದಲ್ಲಿ ನೀರಿನ ಜೊತೆಗೆ ರಕ್ತಕ್ಕೂ ಬರ..

ಕೋಲಾರ: ಮಹಾಮಾರಿ ಕೊರೊನಾ ತಡೆಗಟ್ಟಲು ಸರ್ಕಾರ ಮುನ್ನಚ್ಚರಿಕೆ ಕ್ರಮವಾಗಿ ಮಾಡಿದ ಲಾಕ್‍ಡೌನ್ ಎಫೆಕ್ಟ್ ಸಾಕಷ್ಟು ಕ್ಷೇತಗಳಿಗೆ ಹೊಡೆತ ಬಿದ್ದಿದೆ. ಬರದನಾಡು ಕೋಲಾರ ಜಿಲ್ಲೆಯಲ್ಲಿ ಲಾಕ್‍ಡೌನ್ ಎಫೆಕ್ಟ್ ನಿಂದ ರಕ್ತಕ್ಕೂ ಬರ ಬಂದಿದೆ. ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಲಾಕ್‍ಡೌನ್ ಜಾರಿಗೊಳಿಸಿದ್ದ ಪರಿಣಾಮ ರಾಜ್ಯದ ಜನರು ಆರ್ಥಿಕತೆ, ನಿರುದ್ಯೋಗ, ಆಹಾರ ಸಮಸ್ಯೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಕಾಣಬೇಕಾಯಿತು. ಇದರೊಂದಿಗೆ ರಕ್ತದ ಕೊರತೆಯೂ ಎದುರಾಗಿದೆ. ರಾಜ್ಯ ಸರ್ಕಾರ ಮಾ.23 ರಿಂದ ಲಾಕ್‍ಡೌನ್ …

Read More »

ಶಿವಮೊಗ್ಗ ಜೈಲಿನಲ್ಲಿ ಸ್ಯಾನಿಟೈಸರ್ ಟನಲ್ ಅಳವಡಿಕೆ

ಶಿವಮೊಗ್ಗ: ಇಡೀ ರಾಜ್ಯದಲ್ಲಿಯೇ ಹಲವಾರು ಬಂಧೀಖಾನೆಗಳು ಕೊರೊನಾ ಪಾಸಿಟಿವ್ ಗಳಿಂದ ನಲುಗಿ ಹೋಗಿದ್ದರೂ, ಶಿವಮೊಗ್ಗದ ಜೈಲು ಮಾತ್ರ ಕೊರೊನಾ ಮುಕ್ತವಾಗಿದೆ. ಅಲ್ಲದೇ ಇದೀಗ ಈ ಜೈಲಿನಲ್ಲಿ ಸ್ಯಾನಿಟೈಸರ್ ಟನಲ್ ಅಳವಡಿಸಲಾಗಿದ್ದು, ಇದು ಕೂಡ ರಾಜ್ಯದಲ್ಲೇ ಪ್ರಪ್ರಥಮವಾಗಿದೆ. ರಾಜ್ಯದಲ್ಲಿ ಅಷ್ಟೇ ಅಲ್ಲ ಭಾರತದಲ್ಲಿಯೇ ಅತ್ಯಂತ ವಿಶೇಷತೆ ಹೊಂದಿರುವ ಇಲ್ಲಿ ಬಂದು ನಿಂತ್ರೆ ಸಾಕು ಸ್ವಚ್ಛಂದ ಗಾಳಿ, ಉತ್ತಮ ಪರಿಸರ, ಸ್ವಚ್ಛತೆ, ಸುಂದರ ಪಾರ್ಕ್, ನಮ್ಮ ಕಣ್ಮನ ಸೆಳೆಯುತ್ತೆ. ಇಂತಹ ಸುಸಜ್ಜಿತವಾದ ಜೈಲು …

Read More »