ಮೂಡಲಗಿ: ರಾಜ್ಯದಲ್ಲಿ ಒಟ್ಟು 1,27,00,451 ಪಡಿತರ ಕಾರ್ಡ್‌ಗಳು ಇದ್ದು ಇವುಗಳಲ್ಲಿ 63,922 ಕಾರ್ಡ್‌ಗಳನ್ನು ಅನರ್ಹ ಪಡಿತರ ಕಾರ್ಡ್‌ಗಳೆಂದು ಗುರುತಿಸಿ ರದ್ದು ಪಡಿಸಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು, 43,138 ಕಾರ್ಡ್‌ಗಳನ್ನು ಬಿಪಿಎಲ್‌ದಿಂದ ಎಪಿಎಲ್‌ಗೆ ಪರಿವರ್ತಿಸಲಾಗಿದೆ ಮತ್ತು ಅಕ್ರಮ ಬಿಪಿಎಲ್ ಕಾರ್ಡ್‌ಗಳನ್ನು ವಾಪಸ್ ಪಡೆಯುವಾಗ ಕಾರ್ಡ್‌ದಾರರಿಂದ ದಂಡದ ರೂಪದಲ್ಲಿ ಒಟ್ಟು 96,27,961 ರೂ. ಖಜಾನೆಗೆ ಪಾವತಿಸಿಕೊಳ್ಳಲಾಗಿರುವ ಅಂಶವು ಮಾಹಿತಿ ಹಕ್ಕಿನಿಂದ ಬೆಳಕಿಗೆ …
Read More »ಚಿಕ್ಕೋಡಿಯ ಗಣ್ಯ ವ್ಯಕ್ತಿರೋರ್ವರಿಗೆ ಕೋವಿಡ್ ಪಾಸಿಟಿವ್: ಬೆಚ್ಚಿಬೀಳಿಸಿದ ಟ್ರಾವೆಲ್ ಹಿಸ್ಟರಿ
ಚಿಕ್ಕೋಡಿ: ನಗರದಲ್ಲಿ ಸಕ್ರಿಯವಾಗಿದ್ದ ಗಣ್ಯ ವ್ಯಕ್ತಿಯೋರ್ವರಿಗೆ ಕೋವಿಡ್-19 ಸೋಂಕು ತಗುಲಿದ್ದು, ಚಿಕ್ಕೋಡಿ ನಗರದ ಜನರನ್ನು ಬೆಚ್ಚಿ ಬೀಳಿಸಿದೆ. ಚಿಕ್ಕೋಡಿ ನಗರದ ಸಾಯಿ ಮಂದಿರ ಹತ್ತಿರ ಇರುವ ಓರ್ವ ಗಣ್ಯ ವ್ಯಕ್ತಿಗೆ ಶುಕ್ರವಾರ ಕೋವಿಡ್ ಪಾಸಿಟಿವ್ ಆಗಿರುವುದು ದೃಢವಾಗಿದೆ. ಪಾಸಿಟಿವ್ ಬಂದಿರುವ ಈ ವ್ಯಕ್ತಿ ಕಳೆದ ಎರಡು ದಿನಗಳ ಹಿಂದೆ ಪುರಸಭೆ ಆವರಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಹೀಗಾಗಿ ನಗರದ ಜನ ಮತ್ತಷ್ಟು ಭೀತಿಗೆ ಒಳಗಾಗಿದ್ದಾರೆ. ಹಾಲಿ ಪುರಸಭೆ ಸದಸ್ಯರು, ಪುರಸಭೆ ಅಧಿಕಾರಿಗಳು …
Read More »30 ವರ್ಷಗಳ ಕಾಲ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿರುವ ಕಡಾಡಿ ಅವರಿಗೆ ರಾಜ್ಯಸಭಾ ಜೊತೆಗೆ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಪಟ್ಟ
ಮೂಡಲಗಿ: ಕರ್ನಾಟಕ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರನ್ನಾಗಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನಕುಮಾರ ಕಟೀಲು ಅವರು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕಳೆದ 30 ವರ್ಷಗಳ ಕಾಲ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ, ಮುಖಂಡರಾಗಿ ಪಕ್ಷದ ಸಂಘಟನೆಗೆ ನಿರಂತರ ಶ್ರಮಿಸುತ್ತಾ ಬಂದಿರುವ ನೂತನ ರಾಜ್ಯಸಭಾ ಸದಸ್ಯರಾಗಿ ಆಯ್ಕೆಗೊಂಡ ಈರಣ್ಣ ಕಡಾಡಿ ಅವರು, ಈ ಮೊದಲು ಬಿಜೆಪಿ ರಾಜ್ಯ ಕಾರ್ಯದರ್ಶಿಯಾಗಿ, 2 ಸಲ ಬೆಳಗಾವಿ …
Read More »ಟಿಪ್ಪು ಸುಲ್ತಾನ್ ಕುರಿತ ಅಧ್ಯಾಯವನ್ನು ಪಠ್ಯಪುಸ್ತಕಗಳಿಂದ ಕೈಬಿಡುವ ನಿರ್ಧಾರ ಬದಲಿಸಿದ ಸರ್ಕಾರ
ಬೆಂಗಳೂರು: ಶೇಕಡಾ 30ರಷ್ಟು ಪಠ್ಯವನ್ನು ಕಡಿತಗೊಳಿಸುವ ನಿರ್ಧಾರವನ್ನು ಸರ್ಕಾರ ಬದಲಿಸಿದ್ದು ಟಿಪ್ಪು ಸುಲ್ತಾನ್ (Tippu Sultan) ಮತ್ತು ಸಂವಿಧಾನದ ಬಗ್ಗೆ ಪಠ್ಯ ಕಡಿತ ಮಾಡಿದ ವಿವಾದ ಹಿನ್ನೆಲೆಯಲ್ಲಿ ಪರಿಷ್ಕೃತ ಪಠ್ಯ ಹಿಂಪಡೆಯಲು ಸರ್ಕಾರ ಸೂಚನೆ ನೀಡಿದೆ ಎಂದು ಹೇಳಲಾಗಿದೆ. ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್, ಹೈದರ್ ಅಲಿಗೆ ಸಂಬಂಧಿಸಿದ ಹಲವಾರು ಅಧ್ಯಾಯಗಳನ್ನು 7 ನೇ ತರಗತಿಯ ಪಠ್ಯಪುಸ್ತಕದಿಂದ ಕೈಬಿಟ್ಟಿದ್ದಕ್ಕಾಗಿ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಸದ್ಯಕ್ಕೆ ಪಠ್ಯ ಕಡಿತ …
Read More »ನವೆಂಬರ್ ವರೆಗೂ ಅಕ್ಕಿ ವಿತರಣೆಗೆ ಕೇಂದ್ರಕ್ಕೆ ರಾಜ್ಯ ಸರ್ಕಾರ ಪತ್ರ
ಬೆಂಗಳೂರು,ಜು.31-ಬಿಪಿಎಲ್ ಕಾರ್ಡ್ ಇಲ್ಲದವರು ಹಾಗೂ ಎಪಿಎಲ್ ಕಾರ್ಡ್ ಹೊಂದಿರುವವರಿಗೆ, ಮುಖ್ಯವಾಗಿ ವಲಸಿಗರಿಗೆ ನವೆಂಬರ್‍ವರೆಗೆ ಅಕ್ಕಿ ಮತ್ತು ಧಾನ್ಯಗಳನ್ನು ವಿತರಿಸಬೇಕೆಂದು ರಾಜ್ಯ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದೆ. ರಾಜ್ಯ ಸರ್ಕಾರವು ತನ್ನ ಗೋದಾಮಿನಲ್ಲಿ 28 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಹೊಂದಿದ್ದು, ಇದು ಎರಡು ತಿಂಗಳವರೆಗೆ ಮಾತ್ರ ಸಾಕಾಗಲಿದೆ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಈ ಸಂಬಂಧ ಕೇಂದ್ರದ ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ …
Read More »ಮೃತ ದೇಹದಿಂದ ಕೊರೋನಾ ವೈರಸ್ ಹರಡುತ್ತದೆಯೇ?;
ಹಾವೇರಿ: ಕೊರೋನಾ ಸೋಂಕಿನಿಂದ ಮೃತಪಟ್ಟ ವ್ಯಕ್ತಿಯಿಂದ ಅಥವಾ ಮೃತದೇಹದಿಂದ ಕೊರೋನಾ ವೈರಸ್ ಹರಡುತ್ತಿದೆಯಾ? ಎಂಬ ಪ್ರಶ್ನೆ ಹಲವರಲ್ಲಿ ಮೂಡಿರುವುದು ಸಹಜ. ಈ ಅನುಮಾನ ಅಥವಾ ಗೊಂದಲಕ್ಕೆ ಇಲ್ಲಿದೆ ಉತ್ತರ. ಕೊರೋನಾ ಸೋಂಕಿನಿಂದ ಮೃತರಾದ ವ್ಯಕ್ತಿಯ ದೇಹದಲ್ಲಿ ಜೀವಹೋದ ನಾಲ್ಕು ತಾಸಿನವರೆಗೆ ಕೊರೋನಾ ವೈರಸ್ ಜೀವಂತವಾಗಿರುತ್ತದೆ. ನಂತರ ವೈರಸ್ ನಾಶವಾಗುತ್ತದೆ. ಕೊರೋನಾ ವೈರಸ್ ಪರಾವಲಂಬಿ ಜೀವಿಯಾಗಿರುವುದರಿಂದ ಸ್ವಂತವಾಗಿ ಬೆಳೆಯಲು ಅಥವಾ ಜೀವಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಸೋಂಕಿನಿಂದ ಸತ್ತ ವ್ಯಕ್ತಿಯ ಶವವನ್ನು …
Read More »ಸಿ.ಪಿ ಯೋಗೇಶ್ವರ್‌ಗೆ ಸಿಎಂ ಬಿಎಸ್‍ವೈ ಖಡಕ್ ವಾರ್ನಿಂಗ್…………
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಿರುದ್ಧ ಅಡ್ಜೆಸ್ಟ್ ಮೆಂಟ್ ಪಾಲಿಟಿಕ್ಸ್ ಆರೋಪ ಮಾಡಿರುವ ಸಿಪಿ ಯೋಗೇಶ್ವರ್‌ಗೆ ಸಿಎಂ ಯಡಿಯೂರಪ್ಪ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಪಕ್ಷ, ಸರ್ಕಾರಕ್ಕೆ ಮುಜುಗರ ಆಗುವಂಥ ಹೇಳಿಕೆ ಕೊಡಬೇಡಿ. ಕೊರೊನಾ ಸಮಯದಲ್ಲಿ ಅನಗತ್ಯ ಹೇಳಿಕೆ ಕೊಡಬೇಡಿ. ನಿಮ್ಮ ಕಿತ್ತಾಟ ಕ್ಷೇತ್ರದ ಮಟ್ಟಿಗೆ ಇಟ್ಕೊಳ್ಳಿ. ಸುಮ್ನೆ ನಿಮ್ ಜಂಜಾಟದಲ್ಲಿ ನಮ್ಮನ್ನ್ಯಾಕೆ ಎಳೀತೀರಾ ಅಂದಿದ್ದಾರೆ ಅಂತ ತಿಳಿದುಬಂದಿದೆ. ಸಚಿವ ಸಂಪುಟ ವಿಸ್ತರಣೆ ಚರ್ಚೆ ಬೆನ್ನಲ್ಲೇ …
Read More »ವರಮಹಾಲಕ್ಷ್ಮಿ ಸರಳ ಆಚರಣೆ
ದಾವಣಗೆರೆ: ಕೊರೊನಾ ನಡುವೆಯೂ ಜಿಲ್ಲೆಯಲ್ಲಿ ವರಮಹಾಲಕ್ಷ್ಮಿ ಹಬ್ಬ ಸರಳ, ಸಂಭ್ರಮದಿಂದ ನಡೆಯಿತು. ಮನೆಮನೆಗಳಲ್ಲಿ ಹಬ್ಬದ ಸಡಗರ ನೆಲೆಸಿತ್ತು. ಮುತ್ತೈದೆಯರು ಕೊರೊನಾ ಪರಿಣಾಮ ಸರಳತೆಯ ಆಚರಣೆಗೆ ಮೊರೆಹೋಗಿದ್ದರು. ಪ್ರತಿ ವರ್ಷವೂ ಅಕ್ಕಪಕ್ಕದ ಮನೆಯವರು, ಸ್ನೇಹಿತರು ಹಾಗೂ ಸಂಬಂಧಿಕರನ್ನು ಕರೆದು ಮಹಿಳೆಯರು ಸಡಗರ, ಸಂಭ್ರಮದಿಂದ ಈ ಹಬ್ಬವನ್ನು ಆಚರಿಸುತ್ತಿದ್ದರು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಮನೆಗಷ್ಟೇ ಸೀಮಿತಗೊಂಡಿತು. ನೆರೆಹೊರೆಯ ಮುತ್ತೈದೆಯರನ್ನು ಮನೆಗೆ ಆಹ್ವಾನಿಸಿ ಉಡಿ ತುಂಬುವುದು ಸಂಪ್ರದಾಯ. ಆದರೆ ಕೊರೊನಾ ಹಿನ್ನೆಲೆಯಲ್ಲಿ ಮನೆಗೆ ಕರೆಯಲು ಹಿಂಜರಿಯುವಂತಾಯಿತು. …
Read More »ಚನ್ನರಾಯಪಟ್ಟಣ ನಗರ ಠಾಣೆ ಪಿಎಸ್‌ಐ ಆತ್ಮಹತ್ಯೆ; ತನಿಖೆಗೆ ಮಾಜಿ ಪ್ರಧಾನಿ ಒತ್ತಾಯ
ಹಾಸನ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ನಗರ ಠಾಣೆಯ ಸಬ್ ಇನ್ಸ್ ಪೆಕ್ಟರ್ -ಪಿಎಸ್ ಐ ಕಿರಣ್ ಕುಮಾರ್ ಅವರು ಇಂದು ಬೆಳಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಲೆ ಪ್ರಕರಣವೊಂದನ್ನು ನಿನ್ನೆ ಮಧ್ಯ ರಾತ್ರಿಯಷ್ಟೇ ಭೇದಿಸಿದ್ದ ಅವರು, ಆರೋಪಿ ಬಂಧನ ಸಂಬಂಧ ಕಾರ್ಯಪ್ರವೃತ್ತರಾಗಿದ್ದರು. ಕೊಲೆ ಸಂಬಂಧ ಕಾನೂನು ಪ್ರಕ್ರಿಯೆಯನ್ನು ಮುಗಿಸಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿರಣ್ ಕುಮಾರ್ ಅರಸಿಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ …
Read More »ಬಸ್‌ನಲ್ಲಿ ಕಲ್ಲು ತುಂಬಿ ಸಾಗಿಸಿದರು!
ಹುಬ್ಬಳ್ಳಿ: ಕುಂದಗೋಳ-ಹುಬ್ಬಳ್ಳಿ ನಡುವೆ ಸಂಚರಿಸುವ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ನಲ್ಲಿ, ಸಿಬ್ಬಂದಿ ಗುರುವಾರ ಕಲ್ಲು ಸಾಗಿಸಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೊಸೂರು ರಸ್ತೆ ಬಳಿ ರಸ್ತೆ ವಿಭಜಕ ಕಾಮಗಾರಿ ನಡೆಯುತ್ತಿದ್ದು, ಮೊದಲು ರಸ್ತೆಗೆ ಹಾಕಲಾಗಿದ್ದ ಕಲ್ಲುಗಳನ್ನು ತೆಗೆಯಲಾಗಿದೆ. ಗೋಕುಲ ರಸ್ತೆಯ ಬಸ್ ಡಿಪೊದಲ್ಲಿ ಉದ್ಯಾನ ಕಾಮಗಾರಿ ನಡೆಯುತ್ತಿರುವುದರಿಂದ, ಅಲ್ಲಿಗೆ ಈ ಕಲ್ಲುಗಳನ್ನು ಸಾಗಿಸಲು ಸಿಬ್ಬಂದಿ ಬಸ್ ಬಳಕೆ ಮಾಡಿಕೊಂಡಿದ್ದಾರೆ. ರಸ್ತೆ ಮೇಲಿದ್ದ ಕಲ್ಲುಗಳನ್ನು ಐದಾರು ಸಿಬ್ಬಂದಿ ಸೇರಿ ಬಸ್‌ಗೆ ತುಂಬಿದ್ದಾರೆ. 50ಕ್ಕಿಂತಲೂ …
Read More »
Laxmi News 24×7