ಬೆಂಗಳೂರು, ಸೆ.1: ರಾಜ್ಯದಲ್ಲಿ ಮಂಗಳವಾರದಂದು 9,058 ಹೊಸ ಕೊರೋನ ಪ್ರಕರಣಗಳು ದೃಢವಾಗಿವೆ. 135 ಜನರು ಸೋಂಕಿಗೆ ಬಲಿಯಾಗಿದ್ದು, 5,159 ಜನರು ಗುಣಮುಖರಾಗಿದ್ದಾರೆ. ಈಗಾಗಲೇ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 3,51,481ಕ್ಕೆ ತಲುಪಿದ್ದು, 762 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ ಒಟ್ಟು ಸಾವಿನ ಸಂಖ್ಯೆ 5,837ಕ್ಕೆ ತಲುಪಿದ್ದು, ಅನ್ಯಕಾರಣದಿಂದ 19 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಕೊರೋನ ಪ್ರಕರಣ ಸಂಖ್ಯೆ 90,999ಕ್ಕೆ ಏರಿಕೆಯಾಗಿದ್ದು, ಸೋಂಕಿತರು ಆಸ್ಪತ್ರೆ, ಕೊರೋನ ಕೇರ್ ಸೆಂಟರ್ …
Read More »331 ಮಂದಿ ಗುಣಮುಖ, ಬಿಡುಗಡೆ.
ಬೆಳಗಾವಿ: ‘ಜಿಲ್ಲೆಯಲ್ಲಿ ಹೊಸದಾಗಿ 154 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಜಿಲ್ಲಾಡಳಿತ ತಿಳಿಸಿದೆ. ‘331 ಗುಣಮುಖರಾಗಿದ್ದು, ಅವರನ್ನು ಬಿಡುಗಡೆ ಮಾಡಲಾಗಿದೆ. ಈ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬೆಳಗಾವಿ ತಾಲ್ಲೂಕಿನ ಮೂವರು ಹಾಗೂ ಬೈಲಹೊಂಲಗದ ಇಬ್ಬರು ಸೇರಿ ಐವರು ಮೃತಪಟ್ಟಿದ್ದಾರೆ. ಅವರಿಗೆ ಉಸಿರಾಟದ ತೊಂದರೆ ಇತ್ತು’ ಎಂದು ಮಾಹಿತಿ ನೀಡಿದೆ.
Read More »ಅಕ್ರಮ ಸಾಗಣೆ: 996 ಲೀಟರ್ ಗೋವಾ ಮದ್ಯ ವಶ
ಬೆಳಗಾವಿ: ಗೋವಾದಿಂದ ಅಕ್ರಮವಾಗಿ ಸಾಗಿಸುತ್ತಿದ್ದ 996 ಲೀಟರ್ ಮದ್ಯವನ್ನು ವಾಹನ ಸಮೇತ ಸೋಮವಾರ ವಶಪಡಿಸಿಕೊಂಡಿರುವ ಅಬಕಾರಿ ಪೊಲೀಸರು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ‘ಗುಜರಾತ್‌ನ ಜೋಠಾಣಾ ತಾಲ್ಲೂಕಿನ ಕಡವಾಜಿ ಗುಲಬಾಜಿ ಠಾಕೂರ (48) ಹಾಗೂ ರಾಜೂಜಿ ಮನಾಜಿ ಠಾಕೂರ (37) ಬಂಧಿತರು. ವಾಹನದ ಮಾಲೀಕರನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ. 4ನೇ ಆರೋಪಿ, ಗುಜರಾತ್‌ನಲ್ಲಿ ಅಕ್ರಮ ಮದ್ಯ ಪಡೆದು ಮಾರುತ್ತಿರುವ ವೀರಸಿಂಗ್ ಮಾನಾಜಿ ಠಾಕೂರ ಅವರನ್ನೂ ಬಂಧಿಸಬೇಕಾಗಿದೆ. ವಶಪಡಿಸಿಕೊಂಡ ವಾಹನ ಹಾಗೂ …
Read More »ಬೆಳಗಾವಿಯಲ್ಲಿ ಅಬ್ಬರವಿಲ್ಲದೆ ಗಣೇಶ ಮೂರ್ತಿಗಳಿಗೆ ವಿದಾಯ
ಬೆಳಗಾವಿ: ನಗರದ ವಿವಿಧೆಡೆ ಪ್ರತಿಷ್ಠಾಪಿಸಲಾಗಿದ್ದ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮವು ಸರಳ, ಸಾಂಪ್ರದಾಯಿಕ ಹಾಗೂ ಶ್ರದ್ಧಾ- ಭಕ್ತಿಯಿಂದ ಮಂಗಳವಾರ ನೆರವೇರಿತು. ಕೊರೊನಾ ಕಾರಣದಿಂದ ಅದ್ಧೂರಿ ಮೆರವಣಿಗೆ ಮತ್ತು ಸೌಂಡ್ ಸಿಸ್ಟಂಗಳ ಅಬ್ಬರವಿರಲಿಲ್ಲ. 300ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಮೊದಲ ದಿನವೇ ಕೆಲವು ಮಂಡಳದವರು ಮೂರ್ತಿಗಳನ್ನು ವಿಸರ್ಜನೆ ಮಾಡಿದ್ದರು. ಬಹುತೇಕ ಮೂರ್ತಿಗಳಿಗೆ ಮಂಗಳವಾರ ವಿದಾಯ ಹೇಳಲಾಯಿತು. ಗಣೇಶೋತ್ಸವ ಮಂಡಳದವರು, ಸ್ಥಳೀಯರು ಹಾಗೂ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೆಲವರು ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಗಳನ್ನು …
Read More »ನೀರಾವರಿ ಯೋಜನೆಗಳಿಗೆ 1699 ಕೋಟಿ
ರಾಯಬಾಗ: ಮತಕ್ಷೇತ್ರದ ರೈತರ ಬಹುದಿನಗಳ ಬೇಡಿಕೆಯ ನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜಲಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿಯವರು ರೂ.1699 ಕೋಟಿ ಹಣ ಮಂಜೂರು ಮಾಡಿದ್ದಾರೆ ಎಂದು ಶಾಸಕ ಡಿ.ಎಮ್.ಐಹೊಳೆ ಹೇಳಿದರು. ಸೋಮವಾರ ಪಟ್ಟಣದ ತಮ್ಮ ಗೃಹ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಯಬಾಗ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ, ಸತತ ಬರಗಾಲ ಅನುಭವಿಸುತ್ತಿರುವ ಗ್ರಾಮಗಳ ರೈತರ ಬೆಳೆಗಳಿಗೆ ಹಾಗೂ ಜನ-ಜಾನುವಾರುಗಳಿಗೆ ಕುಡಿಯಲು ಕಾಯಂ ನೀರಾವರಿ ಸೌಲಭ್ಯ ಕಲ್ಪಿಸುವ ಗುರಿ …
Read More »ಬುಡಕಟ್ಟು ವೇಷ ಧರಿಸಿ ಪ್ರತಿಭಟನೆ.
ವಿಜಯಪುರ: ತಮ್ಮ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಮಾನ್ಯತೆಯ ಜಾತಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ತಳವಾರ-ಪರಿವಾರ ಸಮುದಾಯದ ಜನರು ಬೇವು, ಲೆಕ್ಕಿಗಿಡದ ತಪ್ಪಲು ಸುತ್ತಿಕೊಂಡು ಬುಡಕಟ್ಟು ವೇಷಧರಿಸಿ ಅರೆಬೆತ್ತಲೆಯಾಗಿ ವಿನೂತನ ಪ್ರತಿಭಟನೆ ನಡೆಸಿದರು. ಸೋಮವಾರ ನಗರದ ಹೊರ ವಲದಯದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಿಂದ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು, ನಗರದ ದರಬಾರ್ ಮೈದಾನಕ್ಕೆ ಬಂದು ಸಮಾವೇಶಗೊಂಡರು. ಮುಖಕ್ಕೆ, ಮೈಗೆಲ್ಲ ಕಪ್ಪು ಬಣ್ಣದಿಂದ ಪಟ್ಟಿಗಳನ್ನು ಬರೆದುಕೊಂಡು, ಮೈಗೆ ಬೇವು ಹಾಗೂ ಲೆಕ್ಕಿ ಗಿಡದ ತಪ್ಪಲು ಸುತ್ತಿಕೊಂಡು, …
Read More »ರೌಡಿಸಂಗೆ ಹುಬ್ಬಳ್ಳಿ ಜನರ ತತ್ತರ
ಹುಬ್ಬಳ್ಳಿ- ಆಸ್ತಿ ವಿಷಯಕ್ಕೆ ಸಂಬಂಧಿಸಿದಂತೆ ಅರುಣ ಹಚಡದ ಎಂಬುವರ ಮೇಲೆ ರೌಡಿಗಳನ್ನು ಕರೆದುಕೊಂಡು ಮಾರಕಾಸ್ತ್ರಗಳಿಂದ ಮನೆಗೆ ಬಂದು ಆವಾಜ್ ಹಾಕುವ ದ್ರಶ್ಯಗಳು ಸಿಸಿ ಟಿವಿಯಲ್ಲಿ ದೃಶ್ಯಗಳು ಕಂಡು ಬಂದಿವೆ. ಇನ್ನು ಇದರ ಬಗ್ಗೆ ಸಂಬಂದಿಸಿದ ಹಾಗೆ ಕಮರಿಪೇಟ್ ಪೊಲೀಸ್ ಠಾಣೆಗೆ ದೂರನ್ನು ಕೊಡಲು ಹೋದ್ರು ಕೂಡಾ, ಪೊಲೀಸರು ಕ್ಯಾರೇ ಎನ್ನುತ್ತಿಲ್ಲ ಎಂದು ಸಂತ್ರಸ್ತ ಅರುಣ್ ಮಾಧ್ಯಮದವರ ಮುಂದೆ ತಮಗೆ ಆಗುವ ಅನ್ಯಾಯದ ಬಗ್ಗೆ ಹೇಳಿದರು. ಯಲ್ಲಪ್ಪ ಬದ್ದಿ ಹಾಗೂ ಅವನ ಸಹಚರರು …
Read More »ಮುಂದಿನ ತಿಂಗಳು ಗ್ರಾಮ ಪಂಚಾಯತಿ ಚುನಾವಣೆ
ಬೆಂಗಳೂರು: ಅವಧಿ ಮುಗಿದರೂ ಕೊರೋನಾ ಕಾರಣದಿಂದ ಮುಂದೂಡಲ್ಪಟ್ಟಿರುವ ಗ್ರಾಮ ಪಂಚಾಯಿತಿ ಚುನಾವಣೆಗೆ ಕಾಲ ಕೂಡಿ ಬಂದಿದೆ. ಅಕ್ಟೋಬರ್ ಮೊದಲ ವಾರ ಇಲ್ಲವೇ ಎರಡನೇ ವಾರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆಯಬಹುದು. ಸಾರ್ವತ್ರಿಕವಾಗಿ ಏಕಕಾಲಕ್ಕೆ ಚುನಾವಣೆ ನಡೆಸುವ ಬದಲು ಬಹುಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಚುನಾವಣಾ ಆಯೋಗಕ್ಕೆ ಜಿಲ್ಲಾಧಿಕಾರಿಗಳು ಈ ಕುರಿತಾಗಿ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಕೊರೋನಾ ನಿಯಮಗಳನ್ನು ಪಾಲಿಸುವ ಮೂಲಕ ಚುನಾವಣೆ ನಡೆಸಲು ಚುನಾವಣಾ ಆಯೋಗ ಕ್ರಮಕೈಗೊಂಡಿದೆ. …
Read More »ಸಚಿವ ಕೆಎಸ್ ಈಶ್ವರಪ್ಪಗೂ ಕೊರೋನಾ ಪಾಸಿಟಿವ್
ಬೆಂಗಳೂರು : ಕಳೆದ ನಿನ್ನೆಷ್ಟೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆಯವರಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿತ್ತು. ಈ ಬಳಿಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಕುರಿತಂತೆ ಫೇಸ್ ಬುಕ್ ಹಾಗೂ ಟ್ವಿಟರ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ನನಗೆ ಇಂದು ಕರೊನಾ ಸೋಂಕು ದೃಡ ಪಟ್ಟಿದ್ದು, ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇಲ್ಲ …
Read More »ಪ್ರಥಮ ದರ್ಜೆ ಕಾಲೇಜ್ 2ನೇ ಹಂತದ ಕಟ್ಟಡ ಕಾಮಗಾರಿಗೆ ಕುಲಪತಿ ಪ್ರೋ.ಎಂ ರಾಮಚಂದ್ರಗೌಡ ಸೋಮವಾರ ಚಾಲನೆ
ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜ್ 2ನೇ ಹಂತದ ಕಟ್ಟಡ ಕಾಮಗಾರಿಗೆ ಕುಲಪತಿ ಪ್ರೋ.ಎಂ ರಾಮಚಂದ್ರಗೌಡ ಸೋಮವಾರ ಚಾಲನೆ ನೀಡಿದರು. ಇದೇ ವೇಳೆ ಮಾತನಾಡಿ, ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಕಾಲೇಜ್ ಸುಸಜ್ಜಿತವಾದ ಮೂಲ ಸೌಕರ್ಯದೊಂದಿಗೆ ಗ್ರಾಮೀಣ ಪ್ರತಿಭೆಗಳ ಉನ್ನತ ವ್ಯಾಸಂಗದ ಕನಸನ್ನು ನನಸು ಮಾಡುವ ಉದ್ದೇಶ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹೊಂದಿದೆ. ಸುಮಾರು 9.8 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ ಎಂದು ಹೇಳಿದರು. …
Read More »
Laxmi News 24×7