Breaking News

ಜಿಲ್ಲೆ

ಯುವ ಬ್ರಿಗೇಡ್ ವತಿಯಿಂದ ಕಟ್ಟಿಸಿದ ‘ನಮ್ಮನೆ’ ಪ್ರವೇಶಿಸಿದ ಮೀರಮ್ಮ

ಹುಕ್ಕೇರಿ: ‘ನಂದು ಮನೆ ಪೂರಾ ಬಿದ್ದು ಹೋಗಿತ್ರಿ. ಮಲಗಾಕ ಬಹಳ ತೊಂದರೆ ಇತ್ತು. ಚಕ್ರವರ್ತಿ ಸೂಲಿಬೆಲೆ ಹಾಗೂ ಯುವ ಬ್ರಿಗೇಡ್ ಸದಸ್ಯರು ಹೊಸ ಮನೆ ಕಟ್ಟಿ ಕೊಟ್ಟಾರು. ನಾನು ಬಡುವಿ ಅದಿನಿ ಅಂತ. ವಾಸ್ತು ಅವ್ರ ಮಾಡ್ಯಾರು. ನಾನು ಆರಾಮ ಅದನ್ರಿ. ನನಗ ಎಲ್ಲ ವ್ಯವಸ್ಥ ಮಾಡ್ಯಾರು. ದೇವರು ಅವರನ್ನು ತಂಪಾಗಿ ಇಟ್ಟಿರಲಿ’ ಎಂದು ಮನ ಮಿಡಿಯುವ ಮಾತುಗಳು ಕೇಳಿ ಬಂದಿದ್ದು, ತಾಲ್ಲೂಕಿನ ಹೊಸೂರ ಗ್ರಾಮದ ಮೀರಮ್ಮ ಬಾಗವಾನ್ ಅವರಿಂದ. ಇದು …

Read More »

ಯುವಕರಿಗೆ ಪುಸ್ತಕ ಕೊಡಿಸಿದ ಪಿಎಸ್‌ಐ

ಕೌಜಲಗಿ: ಸಮೀಪದ ಕುಲಗೋಡ ಪೊಲೀಸ್ ಠಾಣೆಯ ಎಸ್‌ಐ ಎಚ್.ಕೆ. ನೇರಳೆ ಅವರು ಗ್ರಾಮದ ಯುವಕರಿಗೆ ವೈಯಕ್ತಿಕವಾಗಿ ₹ 10ಸಾವಿರ ಮೌಲ್ಯದ ಪುಸ್ತಕಗಳನ್ನು ಕೊಡಿಸಿ ನೆರವಾಗಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಗೆ ಪೂರಕವಾದ ಪುಸ್ತಕಗಳನ್ನು ಅವರು ನೀಡಿ ಗಮನಸೆಳೆದಿದ್ದಾರೆ. ಗ್ರಾಮದಲ್ಲಿ ಎಸ್‌ಡಿಎ, ಎಫ್‌ಡಿಎ, ಪಿಎಸ್‌ಐ, ಕೆಪಿಎಸ್‌ಸಿ ಹಾಗೂ ಯುಪಿಎಸ್‌ಸಿ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲು ನೆರವಾಗಿದ್ದಾರೆ. ಈ ಮೂಲಕ ಮೆಚ್ಚುಗೆಗೆ ಪಾತ್ರವಾಗಿದ್ದಾರೆ ಎಂದು ಯುವಕರು ತಿಳಿಸಿದರು.  

Read More »

KSRTCಯಿಂದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ : ವಿದ್ಯಾರ್ಥಿಗಳಿಗೆ ಹಳೇ ‘ಬಸ್ ಪಾಸ್’ ಬಳಸಿ ಪರೀಕ್ಷೆಗೆ ಹಾಜರಾಗಲು ಅನುಮತಿ

ಬೆಂಗಳೂರು : ಕೊರೋನಾ ಭೀತಿಯಿಂದಾಗಿ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ಆರಂಭವಾಗಿಲ್ಲ. ಆದ್ರೇ ಕೊರೋನಾ ಭೀತಿಯ ನಡುವೆಯೂ ಪದವಿ ಹಾಗೂ ಸ್ನಾತಕೋತ್ತರ ಪದವಿ, ವೃತ್ತಿಪರ ಪರೀಕ್ಷೆಗಳೂ ನಡೆಸೋದಕ್ಕೆ ನಿರ್ಧರಿಸಲಾಗಿದೆ. ಆದ್ರೆ ಕೆ ಎಸ್ ಆರ್ ಟಿ ಸಿ ವಿದ್ಯಾರ್ಥಿಗಳ ಬಸ್ ಪಾಸ್ ಅವದಿ ಮುಕ್ತಾಯಗೊಂಡಿತ್ತು. ಹೀಗಾಗಿ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಮನವಿ ಮಾಡಿದ್ದರ ಹಿನ್ನಲೆಯಲ್ಲಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಹಳೆಯ ವಿದ್ಯಾರ್ಥಿ ಬಸ್ ಪಾಸ್ ಬಳಸಿಕೊಂಡು ಒಡಾಟಕ್ಕೆ ಅನುಮತಿ …

Read More »

ಸುದೀಪ್ ಹುಟ್ಟುಹಬ್ಬ ಅಭಿಮಾನಿಗಳ ಹಿತಕ್ಕಾಗಿ ಸಾರ್ವಜನಿಕವಾಗಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ

ಬೆಂಗಳೂರು: ಸ್ಯಾಂಡಲ್‍ವುಡ್‍ನ ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ಅವರು ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟ ಕಿಚ್ಚ ಸುದೀಪ್ 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಆದರೆ ಕೊರೊನಾ ಹಿನ್ನೆಲೆ ಅಭಿಮಾನಿಗಳ ಹಿತಕ್ಕಾಗಿ ಸಾರ್ವಜನಿಕವಾಗಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುತ್ತಿಲ್ಲ. ಹುಟ್ಟುಹಬ್ಬಕ್ಕೂ ಮುನ್ನವೇ ಅಭಿಮಾನಿಗಳಿಗೆ ಮನೆಯ ಬಳಿ ಬಾರದಂತೆ ಮನವಿ ಮಾಡಿಕೊಂಡಿದ್ದರು. ಆದರೂ ಅಭಿಮಾನಿಗಳು ಅವರ ಮನೆಯ ಬಳಿ ಗುಂಪು ಸೇರಿದ್ದರು.ಮಂಗಳವಾರ ಮಧ್ಯರಾತ್ರಿ ಅಭಿಮಾನಿಗಳು ಕಿಚ್ಚನ ಪುಟ್ಟೇನಹಳ್ಳಿ ನಿವಾಸ ಬಳಿ ಗುಂಪು ಸೇರಿದ್ದರು. ಹೀಗಾಗಿ …

Read More »

ವೈಜನಾಥ ಪಾಟೀಲ ಸಂಸ್ಮರಣ ಗ್ರಂಥ ಪ್ರಕಟಿಸಲು ನಿರ್ಧಾರ

ಕಲಬುರ್ಗಿ: ‘371 (ಜೆ) ತಿದ್ದುಪಡಿ ಹೋರಾಟದ ರೂವಾರಿ, ಮಾಜಿ ಸಚಿವ ವೈಜನಾಥ ಪಾಟೀಲ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಸಂಸ್ಮರಣ ಗ್ರಂಥ ಹೊರತರಲು ನಿರ್ಧರಿಸಲಾಗಿದೆ. ಈ ಬಗ್ಗೆ ಸಂಪಾದಕೀಯ ಸಮಿತಿ ರಚನೆ ಮಾಡಲಾಗಿದೆ’ ಎಂದು ವೈಜನಾಥ ಪಾಟೀಲರ ಸಂಸ್ಮರಣಾ ಸಂಚಿಕೆ ಸಮಿತಿ ಸಂಚಾಲಕ ಎಂ.ಬಿ.ಅಂಬಲಗಿ ಮತ್ತು ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಗೌತಮ ಪಾಟೀಲ ತಿಳಿಸಿದರು. ನಗರದಲ್ಲಿ ಮಂಗಳವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ‘ವೈಜನಾಥ …

Read More »

ರಾಯಚೂರು ಮಾರುಕಟ್ಟೆಗೆ ದಾಖಲೆ ಪ್ರಮಾಣದಲ್ಲಿ ಬಂದ ಈರುಳ್ಳಿ; ದರ ಕುಸಿತಕ್ಕೆ ಕಂಗಾಲಾದ ರೈತ

ರಾಯಚೂರು : ರೈತನಿಗೆ ಒಂದಿಲ್ಲ ಒಂದು ಸಂಕಷ್ಟ ತಪ್ಪಿದ್ದಲ್ಲ, ಕಳೆದ ಬಾರಿ ದುಬಾರಿ ದರದಲ್ಲಿ ಮಾರಾಟವಾಗಿದ್ದ ಈರುಳ್ಳಿ ಈ ಬಾರಿ ಆರಂಭದಲ್ಲಿಯೇ ಪಾತಾಳಕ್ಕಿಳಿದಿದೆ. ಈರುಳ್ಳಿ ಬೆಳೆದ ರೈತ ಈಗ ದರ ಇಲ್ಲದೆ ಕಂಗಾಲಾಗಿದ್ದಾನೆ. ಒಂದು ಕಡೆ ಈರುಳ್ಳಿ ಇಟ್ಟುಕೊಳ್ಳಲು ಆಗದೆ ಮಾರಾಟ ಮಾಡಲು ಆಗದೆ ದಿಕ್ಕು ತೋಚದಂತಾಗಿದ್ದಾನೆ. ಒಂದು ಕೊರೋನಾದಿಂದ ಉದ್ಯೋಗವಿಲ್ಲದೇ ಕೃಷಿಯತ್ತ ಮುಖ ಮಾಡಿದ ರೈತರ, ಕಷ್ಟ ಪಟ್ಟು ಈರುಳ್ಳಿಯನ್ನು ಬೆಳೆದು ಮಾರುಕಟ್ಟೆಗೆ ತಂದರೆ ಈರುಳ್ಳಿ ದರ ಪಾತಾಳಕ್ಕಿಳಿದಿದೆ. …

Read More »

ಮಗನ ನಾಮಕರಣ ಮಾಡಿದ ರಾಕಿಂಗ್ ಸ್ಟಾರ್ ಯಶ್ – ರಾಧಿಕಾ ದಂಪತಿ : ಹೆಸರೇನು ಗೊತ್ತಾ?

ಬೆಂಗಳೂರು : ಸ್ಯಾಂಡಲ್ ವುಡ್ ನ ಜನಪ್ರಿಯ ತಾರಾ ಜೋಡಿಗಳಾದ ‘ರಾಕಿಂಗ್ ಸ್ಟಾರ್‌’ ಯಶ್ ಮತ್ತು ರಾಧಿಕಾ ಪಂಡಿತ್‌ ದಂಪತಿ ಎರಡನೇ ಮಗು ಹುಟ್ಟಿ ಹತ್ತು ತಿಂಗಳ ಬಳಿಕ ಇದೀಗ ಸರಳವಾಗಿ ನಾಮಕರಣವನ್ನು ಮಾಡಿ ಯಥರ್ವ್ ಯಶ್ ಎಂದು ಹೆಸರನ್ನಿಟ್ಟಿದ್ದಾರೆ. ಕೆಲ ದಿನಗಳ ಹಿಂದಷ್ಟೇ, ಶೀಘ್ರದಲ್ಲೇ ಮಗನ ಹೆಸರನ್ನು ಬಹಿರಂಗಪಡಿಸಲಾಗುವುದು’ ಎಂದು ರಾಧಿಕಾ ತಿಳಿಸಿದ್ದರು. ಇದೀಗ ಅಧಿಕೃತವಾಗಿ ‘ಯಥರ್ವ್ ಯಶ್’ ಎಂಬ ಹೆಸರನ್ನು ಘೋಷಣೆ ಮಾಡಿದ್ದಾರೆ. ಸರಳ ಸಮಾರಂಭದಲ್ಲಿ ಶಾಸ್ತ್ರೋಕ್ತವಾಗಿ …

Read More »

ಕೊಡಗಿನಲ್ಲಿ ಬೈಕ್​​ಗೆ ಟಿಪ್ಪರ್​​ ಡಿಕ್ಕಿ: ಭೀಕರ ಅಪಘಾತದಲ್ಲಿ ಇಬ್ಬರು ಸವಾರರು ದುರ್ಮರಣ

ಕೊಡಗು : ಟಿಪ್ಪರ್ ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ. ವಿರಾಜಪೇಟೆಯ ನಿವಾಸಿ ಭರತ್ ಮತ್ತು ಕುಶಾಲನಗರದ ನಿವಾಸಿ ಕುಟ್ಟನ್ ಮೃತಪ್ಪವರು ಎಂದು ಗುರುತಿಸಲಾಗಿದೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ರಾಮನಗರದಲ್ಲಿ ಟಿಪ್ಪರ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಬೆಕ್ ಚಾಲಕ ಭರತ್ ಎಂಬುವರ ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನು, ಗಂಭೀರವಾಗಿ …

Read More »

ಆಗಸ್ಟ್‌ನಲ್ಲಿ ಕೊರೋನಾ ಅಬ್ಬರ : ದಾಖಲಾದ ಕೇಸ್‌ಗಳೆಷ್ಟು..?

ಬೆಂಗಳೂರು  : ರಾಜ್ಯದಲ್ಲಿ ಸೋಮವಾರ 6495 ಮಂದಿ ಹೊಸದಾಗಿ ಕೊರೋನಾ ಸೋಂಕು ಅಂಟಿಸಿಕೊಂಡಿದ್ದು 7,238 ಮಂದಿ ಗುಣಮುಖರಾಗಿದ್ದಾರೆ.113 ಮಂದಿ ಮೃತಪಟ್ಟಿದ್ದಾರೆ.747 ಮಂದಿ ರಾಜ್ಯದ ವಿವಿಧ ಕೊವೀಡ್‌ ಅಸ್ಪತ್ರೆಗಳಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಇಲಾಖೆಯ ಸೋಮವಾರದ ವರದಿಯ ಪ್ರಕಾರ 43,132 ಮಂದಿಗೆ ಮಾತ್ರ ಕೊರೋನಾ ಪರೀಕ್ಷೆ ನಡೆಸಲಾಗಿದೆ. ಕಳೆದ ಕೆಲ ದಿನಗಳಲ್ಲಿ 60 ಸಾವಿರಕ್ಕೂ ಮಿಕ್ಕು ಕೊರೋನಾ ಪರೀಕ್ಷೆಗಳು ನಡೆಯುತ್ತಿದ್ದವು. ಬೆಂಗಳೂರಲ್ಲಿ ಅಧಿಕ: ಬೆಂಗಳೂರು ನಗರದಲ್ಲಿ ಸೋಮವಾರ ಕೊರೋನಾದಿಂದ …

Read More »

ಕೊರೊನಾ ನಿಯಂತ್ರಣ: ಮಹಾಲಕ್ಷ್ಮಿಗೆ ಪ್ರಾರ್ಥನೆ

ಬೆಳಗಾವಿ: ಕೊರೊನಾ ನಿಯಂತ್ರಣಕ್ಕಾಗಿ ತಾಲ್ಲೂಕಿನ ಸುಳೇಭಾವಿ ಗ್ರಾಮದಲ್ಲಿ ಮಹಾಲಕ್ಷ್ಮೀದೇವಿ ಸೇರಿ ಎಲ್ಲ ದೇವರಿಗೆ ಮಂಗಳವಾರ ವಿಶೇಷ ಪೂಜೆ, ಅಭಿಷೇಕ ನೆರವೇರಿಸಿ ಮಂಗಳವಾರ ಪ್ರಾರ್ಥಿಸಲಾಯಿತು. ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಸಮಿತಿ ನೇತೃತ್ವದಲ್ಲಿ ಪ್ರಮುಖರು ಮತ್ತು ಪೂಜಾರಿಗಳು ಪೂಜೆ ಸಲ್ಲಿಸಿದರು. ಕಲ್ಮೇಶ್ವರ, ವೀರಭದ್ರೇಶ್ವರ, ಯಲ್ಲಮ್ಮ ದೇವಿ, ಶಾಖಾಂಬರಿ ದೇವಿ, ಬನಶಂಕರಿ ದೇವಿ, ಮಹಾರಾಣಿ ದೇವಿ, ದುರ್ಗಾದೇವಿ, ಗಣೇಶ, ಮಾರುತಿ, ಬ್ರಹ್ಮ, ವಿಠ್ಠಲ-ರುಕ್ಮಿಣಿ ದೇವರನ್ನು ಪೂಜಿಸಿದರು. ಹಿರಿಯರಾದ ಬಸನಗೌಡ ಪಾಟೀಲ ಮಾತನಾಡಿ, ‘ಕೊರೊನಾದಿಂದಾಗಿ ಜನರ ನೆಮ್ಮದಿ …

Read More »