Breaking News

ಜಿಲ್ಲೆ

ಯೋಗೇಶ್ ಗೌಡ ಹತ್ಯೆ ಕೇಸ್ – ಏ.9ಕ್ಕೆ ತೀರ್ಪು ಕಾಯ್ದಿರಿಸಿದ ಜನಪ್ರತಿನಿಧಿಗಳ ನ್ಯಾಯಾಲಯ

ಧಾರವಾಡ: ಜಿಲ್ಲಾ ಪಂಚಾಯಿತಿ ಮಾಜಿ ಜಿಲ್ಲಾ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದ ತೀರ್ಪನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಏ.9ಕ್ಕೆ ಕಾಯ್ದಿರಿಸಿದೆ. ಕಳೆದ 6 ತಿಂಗಳಿಂದ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಾಲಯ ಸಂಪೂರ್ಣ ವಾದ-ಪ್ರತಿವಾದ ಆಲಿಸಿತ್ತು. ಜೊತೆಗೆ ಮಾರ್ಚ್ ಕೊನೆಯ ವಾರದಲ್ಲಿ ಪ್ರಾಸಿಕ್ಯೂಷನ್ ಮತ್ತು ಆರೋಪಿಗಳ ಪರ ವಕೀಲರಿಗೆ ಹೆಚ್ಚುವರಿ ಲಿಖಿತ ವಾದ ಸಲ್ಲಿಕೆ ಮಾಡಲು ಅವಕಾಶ ನೀಡಿತ್ತು. ಇಂದು (ಏ.2) ಎಲ್ಲರೂ ಲಿಖಿತ ವಾದ ಸಲ್ಲಿಸಿದ ಬಳಿಕ ಏ.9ಕ್ಕೆ …

Read More »

ಉಪಚುನಾವಣಾ ಕಣದಲ್ಲಿ ಅಬ್ಬರದ ಪ್ರಚಾರ – ʻಕೈʼ, ಕಮಲ ನಾಯಕರಿಂದ ಮತಬೇಟೆ

ದಾವಣಗೆರೆ: ಇಲ್ಲಿನ ದಕ್ಷಿಣ  ಕ್ಷೇತ್ರದ ಉಪಚುನಾವಣಾ  ಕಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌  ನಾಯಕರ ಪ್ರಚಾರ ಅಬ್ಬರದಿಂದ ಸಾಗಿದೆ. ʻಕೈʼ ಕೋಟೆಯನ್ನು ಉಳಿಸಿಕೊಳ್ಳಲು ಸ್ವತಃ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅಖಾಡಕ್ಕಿಳಿದಿದ್ದರೆ, ಇತ್ತ ಕಮಲ ಅರಳಿಸಲೇಬೇಕು ಎಂದು ಕೇಸರಿ ಪಡೆ ಪಣ ತೊಟ್ಟಿದೆ. ಬಿಜೆಪಿ ಘಟಾನುಘಟಿ ನಾಯಕರುಗಳು ಸಹ ಬೀದಿಗಿಳಿದು ಮತಬೇಟೆ ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸ್ ಕರಿಯಪ್ಪ ಪರ ಮತಬೇಟೆಗೆ ಕೇಸರಿ ಪಡೆಯ ಘಟಾನಘಟಿ ನಾಯಕರು …

Read More »

ಪ್ರತಿ ಹಳ್ಳಿಗೆ 5-10 ಲಕ್ಷ ಹಣ ಹಂಚುತ್ತಿರುವ ಕಾಂಗ್ರೆಸ್: ಛಲವಾದಿ ಆರೋಪ

ಬೆಂಗಳೂರು: ಬಾಗಲಕೋಟೆಯ ಪ್ರತಿ ಹಳ್ಳಿಗೆ 5ರಿಂದ 10 ಲಕ್ಷ ರೂ.ಯನ್ನು ಕಾಂಗ್ರೆಸ್ ಪಕ್ಷ ಹಂಚುತ್ತಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ  ಅವರು ಆರೋಪಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆಯ  ಚುನಾವಣೆಯಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವು ಖಚಿತ. ಚರಂತಿಮಠರನ್ನು ಗೆಲ್ಲಿಸಲು ಜನರು ತೀರ್ಮಾನ ಮಾಡಿದ್ದಾರೆ. ಮುಸ್ಲಿಮರೂ ಕೂಡ ಬಿಜೆಪಿ ಬೆಂಬಲಕ್ಕೆ ನಿಂತಿದ್ದಾರೆ. ಹಳ್ಳಿಗಳಲ್ಲಿ ಸೋಲು ಖಚಿತವೆಂದು ಗೊತ್ತಾದ ಬಳಿಕ …

Read More »

ಶಾಹೂ ನಗರದ ವಿನಾಯಕ ಕಾಲನಿಯಲ್ಲಿ ಹನುಮ ಜನ್ಮೋತ್ಸವ ಅನಿಲ್ ಬೆನಕೆ ಭೇಟಿ

ಬೆಳಗಾವಿಯ ಶಾಹೂ ನಗರದ ವಿನಾಯಕ ಕಾಲನಿಯಲ್ಲಿ ಹನುಮ ಜಯಂತಿಯನ್ನು ಅತ್ಯಂತ ಭಕ್ತಿ-ಭಾವದಿಂದ ಆಚರಿಸಲಾಯಿತು. ಮಾಜಿ ಶಾಸಕ ಅನಿಲ್ ಬೆನಕೆ ಹಾಗೂ ಮಾಜಿ ಉಪಮಹಾಪೌರರಾದ ರೇಷ್ಮಾ ಪ್ರವೀಣ್ ಪಾಟೀಲ್ ಸೇರಿದಂತೆ ಹಲವು ಗಣ್ಯರು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾರುತಿಯ ದರ್ಶನ ಪಡೆದರು. ಬೆಳಗಾವಿಯ ಶಾಹೂ ನಗರದ ವಿನಾಯಕ ಕಾಲನಿಯಲ್ಲಿ ಹನುಮ ಜಯಂತಿಯ ಅಂಗವಾಗಿ ಆಂಜನೇಯ ಮೂರ್ತಿಗೆ ವಿಶೇಷ ಅಭಿಷೇಕ, ಅಲಂಕಾರ ಹಾಗೂ ಮಹಾ ಆರತಿಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸುಮಂಗಲಿಯರು …

Read More »

ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಿರೀಕ್ಷೆ ಮೀರಿ ಜನಬೆಂಬಲ

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯುತ್ತಿದ್ದು, ಅಭಿವೃದ್ಧಿ ಮಾಡದ ಬಿಜೆಪಿಯ ಸತ್ಯವನ್ನು ಜನರು ಅರಿತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ದಾವಣಗೆರೆಯ ಎಂ.ಬಿ.ಎ ಕಾಲೇಜು ಆವರಣ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಜನಸ್ಪಂದನೆ ದೊರೆಯುತ್ತಿದೆ. ಬಿಜೆಪಿಯವರು ನಾಲ್ಕು ವರ್ಷದಲ್ಲಿ ಯಾವ ಅಭಿವೃದ್ಧಿಯನ್ನು ಮಾಡದೇ, ರಾಜ್ಯವನ್ನು ಲೂಟಿ ಮಾಡಿದ್ದಾರೆ ಎಂಬ ಸತ್ಯವನ್ನು ಜನರು …

Read More »

ತಿಗಡಿ ಗ್ರಾಮದಲ್ಲಿ ಮಾರುತಿ ಜಾತ್ರಾ ಸಂಭ್ರಮ: ಭಕ್ತಿಪರವಶತೆಯಿಂದ ಜರುಗಿದ ಭವ್ಯ ರಥೋತ್ಸವ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದಲ್ಲಿ ಶ್ರೀ ಮಾರುತಿ ಜಾತ್ರಾ ಮಹೋತ್ಸವವು ಸಡಗರ-ಸಂಭ್ರಮದಿಂದ ಜರುಗಿದೆ. ಎರಡು ದಿನಗಳ ಕಾಲ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಮಾರುತಿ ರಾಯನ ಕೃಪೆಗೆ ಪಾತ್ರರಾದರು. ತಿಗಡಿ ಗ್ರಾಮದ ಆರಾಧ್ಯ ದೈವ ಶ್ರೀ ಮಾರುತಿ ದೇವರ ಜಾತ್ರಾ ಮಹೋತ್ಸವವು ಪ್ರತಿ ವರ್ಷದಂತೆ ಈ ಬಾರಿಯೂ ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಜಾತ್ರೆಯ ಮೊದಲ ದಿನದಂದು ದೇವಸ್ಥಾನದಲ್ಲಿ ಮಾರುತಿ ದೇವರಿಗೆ ವಿಶೇಷ ಅಭಿಷೇಕ …

Read More »

ಶ್ರೀ ಹನುಮಂತನು ಸಾಟಿಯಿಲ್ಲದ ದೈಹಿಕ ಶಕ್ತಿ: ಸುರೇಶ ಯಾದವ್

ಬೆಳಗಾವಿ: ರಾಮತೀರ್ಥ ನಗರ ರಹವಾಸಿಗಳಿಂದ ಕಣಬರ್ಗಿಯ ಕೆರೆ ರಸ್ತೆಯ ಶ್ರೀ ಹನುಮಾನ ಮಂದಿರದಲ್ಲಿ ಶ್ರೀ ಹನುಮಾನ ಜಯಂತಿಯನ್ನು ಸಂಭ್ರಮ ದಿಂದ ಆಚರಿಸಲಾಯಿತು. ಬಳಿಕ, ಹನುಮಾನ ಜಯಂತಿ ಪ್ರಯುಕ್ತ ಮುತೈದೆಯರಿಂದ ತೋಟಿಲೋತ್ಸವವನ್ನು, ಕುಂಭ ಮೇಳ ಮೂಲಕ ಶ್ರೀ ಗಣೇಶ ಮಂದಿರ ಸರ್ಕಲದಿಂದ ಮೆರವಣಿಗೆ ನಡೆಸಲಾಯಿತು. ಮಂದಿರದಲ್ಲಿ ಗಣ ಹೋಮ , ನವಗ್ರಹ ಹೋಮ ಮಾಡಲಾಯಿತು. ಸುರೇಶ ಯಾದವ ಫೌಂಡೇಶನ್ ಅಧ್ಯಕ್ಷರಾದ ಸುರೇಶ ಯಾದವ ಅವರು ಮಾತನಾಡಿ, ಹನುಮಂತನು ಸಾಟಿಯಿಲ್ಲದ ದೈಹಿಕ ಶಕ್ತಿ, …

Read More »

ಬೆಳಗಾವಿಯಲ್ಲಿ ಅಂಬೇಡ್ಕರ್ ಜಯಂತಿ ಸಂಭ್ರಮ ಮಹಾನಗರ ಪಾಲಿಕೆಯಿಂದ ಐತಿಹಾಸಿಕ ಆಚರಣೆಗೆ ಬೃಹತ್ ಪ್ಲಾನ್!

ಬೆಳಗಾವಿಯಲ್ಲಿ ಈ ಬಾರಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜಯಂತಿಯನ್ನು ಅತ್ಯಂತ ಸ್ಮರಣೀಯವಾಗಿ ಆಚರಿಸಲು ಮಹಾನಗರ ಪಾಲಿಕೆ ಸಜ್ಜಾಗಿದೆ. ಕೇವಲ ಮೆರವಣಿಗೆಯಷ್ಟೇ ಅಲ್ಲದೆ, ಶೈಕ್ಷಣಿಕ ಕ್ರಾಂತಿಯ ಹೊಸ ಮೈಲಿಗಲ್ಲಿಗೆ ಈ ಬಾರಿ ಮಹಾನಗರ ಪಾಲಿಕೆ ಮುನ್ನುಡಿ ಬರೆಯುತ್ತಿದೆ. ಇಂದು ಮಹಾಪೌರರ ಅಧ್ಯಕ್ಷತೆಯಲ್ಲಿ ಡಾ. ಅಂಬೇಡ್ಕರ್ ಜಯಂತಿಗೆ ಸಂಬಂಧಿಸಿದಂತೆ ಇಂದು ಪೂರ್ವಭಾವಿ ಸಭೆ ನಡೆಯಿತು. ಬೆಳಗಾವಿ ಮಹಾನಗರ ಪಾಲಿಕೆಯ ಮಹಾಪೌರ ಪ್ರೀತಿ ಕಾಮಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ …

Read More »

ಜಿಲ್ಲೆಯ ರೈತರು ಹಾಗೂ ಗ್ರಾಹಕರು ನಮ್ಮ ಮೇಲೆ ಹೆಚ್ಚಿನ ವಿಶ್ವಾಸವನ್ನಿಟ್ಟು ಅಧಿಕ ಪ್ರಮಾಣದಲ್ಲಿ ಠೇವು ಇಟ್ಟಿದ್ದಾರೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಠೇವು ಬ್ಯಾಂಕಿಗೆ ಬಂದಿದೆ.

ಬೆಳಗಾವಿ:ಜಿಲ್ಲೆಯ ರೈತರು ಹಾಗೂ ಗ್ರಾಹಕರು ನಮ್ಮ ಮೇಲೆ ಹೆಚ್ಚಿನ ವಿಶ್ವಾಸವನ್ನಿಟ್ಟು ಅಧಿಕ ಪ್ರಮಾಣದಲ್ಲಿ ಠೇವು ಇಟ್ಟಿದ್ದಾರೆ. ಕಳೆದ ವರ್ಷಕ್ಕಿಂತಲೂ ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಠೇವು ಬ್ಯಾಂಕಿಗೆ ಬಂದಿದೆ. ನಮ್ಮ ಹೊಸ ಆಡಳಿತವನ್ನು ಒಪ್ಪಿಕೊಂಡು ಗ್ರಾಹಕರು ವಿಶ್ವಾಸದಿಂದ ವ್ಯವಹಾರ ನಡೆಸುತ್ತಿದ್ದಾರೆ. ಯಾವುದೇ ಊಹಾಪೋಹಗಳಿಗೆ ಕಿವಿಗೊಡದೇ ಬ್ಯಾಂಕಿನೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಪ್ರಸ್ತುತ ವರ್ಷದಲ್ಲಿ ಬ್ಯಾಂಕ್ 56.25 ಕೋಟಿ ರೂ. ಲಾಭ ಗಳಿಸಿದೆ ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮತ್ತು …

Read More »

ವಿದೇಶಿಗರ ಪಾರ್ಟಿ,ಅಕ್ರಮ ಕಲ್ಲು ಗಣಿಗಾರಿಕೆ, ಅನ್ನ ಭಾಗ್ಯ ಅಕ್ಕಿ ಮಾರಾಟ – ಮುನಿರಾಬಾದ್ ಪೊಲೀಸ್ ಠಾಣೆ PSI ಸುನೀಲ್ ತಲೆದಂಡ..!!

ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯ ಪಿಎಸ್‌ಐ ಸುನೀಲ್ ಅವರನ್ನ ಅಮಾನತು ಮಾಡಿ ಕೊಪ್ಪಳ ಎಸ್‌ಪಿ ರಾಮ್ ಅರಸಿದ್ದಿ ಆದೇಶಿಸಿದ್ದಾರೆ. ಆಡಳಿತಾತ್ಮಕ ವಿಚಾರದಲ್ಲಿ ಸರಿಯಾಗಿ ನಿರ್ವಹಣೆ ಮಾಡದ ಹಿನ್ನಲೆ ಅಮಾನತು ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದಲೂ ಮುನಿರಾಬಾದ್ ಠಾಣೆಯ PSI ಆಗಿ ಸುನೀಲ್ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗೆ ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ಕೆಲ ಅನಧಿಕೃತ ಚಟುವಟಿಕೆಗಳು ನಡೆದಿದ್ವು. ವಿದೇಶಿಗರ ಪಾರ್ಟಿ,ಅಕ್ರಮ ಕಲ್ಲು ಗಣಿಗಾರಿಕೆ,ಅನ್ನ ಭಾಗ್ಯ ಅಕ್ಕಿ ಮಾರಾಟದಂತಹ ಪ್ರಕರಣಗಳು ಬೆಳಕಿಗೆ …

Read More »