Breaking News

ಹಾಸನ

ಎರಡು ಗುಂಪುಗಳ ನಡುವೆ ಮಾರಾಮಾರಿ – ಮಹಿಳೆಯನ್ನ ಬೆತ್ತಲುಗೊಳಿಸಿ ಹಲ್ಲೆಗೆ ಯತ್ನ

ಹಾಸನ: ದಾರಿ ವಿಚಾರಕ್ಕೆ ಗ್ರಾಮದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಈ ವೇಳೆ ಮಹಿಳೆಯನ್ನ ಬೆತ್ತಲೆಗೊಳಿಸಿ ಹಲ್ಲೆಗೆ ಯತ್ನಿಸಿರುವ ಘಟನೆ ಹಾಸನ  ಜಿಲ್ಲೆಯ ಬೇಲೂರು  ತಾಲ್ಲೂಕಿನ ಹಂಚಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಾ.22ರಂದು ಬೆಳಿಗ್ಗೆ ಗ್ರಾಮದ ಗೋವಿಂದಪ್ಪ, ಕುಮಾರ್ ಹಾಗೂ ಇತರರ ಮನೆಗೆ ತೆರಳಲು ದಾರಿ ನಿರ್ಮಾಣ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ವೇಳೆ ಗೋವಿಂದಪ್ಪನ ಸಂಬಂಧಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆಗೆ ಮುಂದಾಗಿದ್ದು, ಘಟನೆ ಸಂಬಂಧ ಹಳೆಬೀಡು ಪೊಲೀಸ್ ಠಾಣೆಯಲ್ಲಿ …

Read More »

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ

ಹಾಸನ (ಮಾ.19): ಮಾಜಿ ಪ್ರಧಾನಮಂತ್ರಿ ಹಾಗೂ ಜೆಡಿಎಸ್ ವರಿಷ್ಠರಾದ ಎಚ್.ಡಿ. ದೇವೇಗೌಡರ ಕುಟುಂಬದಲ್ಲಿ ದುಃಖದ ಛಾಯೆ ಆವರಿಸಿದೆ. ದೇವೇಗೌಡರ ಪ್ರೀತಿಯ ತಂಗಿ ಜವರಮ್ಮ (88) ಅವರು ವಯೋಸಹಜ ಕಾಯಿಲೆಯಿಂದ ಶುಕ್ರವಾರ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಸಾವು: ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಜವರಮ್ಮ ಅವರನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಕೊನೆಯುಸಿರೆಳೆದಿದ್ದಾರೆ. …

Read More »

ಡಿಸಿ, ತಾ.ಪಂ. ಇಓ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಹೆಚ್.ಡಿ.ರೇವಣ್ಣ

ಹಾಸನ: ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಅವರ ವಿರುದ್ಧ ಮಾಜಿಸಚಿವ ಹೆಚ್.ಡಿ.ರೇವಣ್ಣ  ಅಧಿವೇಶನದಲ್ಲಿ ಹಕ್ಕುಚ್ಯುತಿ ಮಂಡಿಸಿದ್ದಾರೆ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ದೇವಾಲಯ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಶಿಷ್ಟಾಚಾರ ಪಾಲಿಸಿಲ್ಲ. ಕ್ಷೇತ್ರದ ಶಾಸಕನಾದ ನನ್ನ ಹಕ್ಕಿಗೆ ಚ್ಯುತಿ ತಂದಿದ್ದಾರೆ. ಇದು ನನಗೆ ಮಾಡಿದ ಅವಮಾನ ಅಲ್ಲ. ಇಡೀ ಕ್ಷೇತ್ರಕ್ಕೆ ಮಾಡಿದ ಅವಮಾನ ಆಗಿದೆ ಎಂದಿದ್ದಾರೆ. ಜಿಲ್ಲಾಧಿಕಾರಿ ಮಾತ್ರವಲ್ಲದೇ ಹೊಳೆನರಸೀಪುರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜು ವಿರುದ್ಧವೂ ಹಕ್ಕುಚ್ಯುತಿ ಮಂಡನೆ ಮಾಡಿದ್ದಾರೆ. ಇಬ್ಬರು ಅಧಿಕಾರಿಗಳ ವಿಚಾರವನ್ನು …

Read More »

ಸೆಕೆಂಡ್‌ ಪಿಯು ಪರೀಕ್ಷೆಯಲ್ಲಿ ರಿಪೀಟರ್ಸ್‌ ಪ್ರಶ್ನೆಪತ್ರಿಕೆ ನೀಡಿ ಯಡವಟ್‌- ವಿದ್ಯಾರ್ಥಿಗಳಿಗೆ ಶಾಕ್‌

ಹಾಸನ: ರಿಪೀಟರ್ಸ್‌ಗೆ ಕೊಡಬೇಕಿದ್ದ ಪ್ರಶ್ನೆಪತ್ರಿಕೆ ಕೊಟ್ಟು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ  ಯಡವಟ್ಟು ಮಾಡಿರುವ ಘಟನೆ ಹಾಸನದ  ಬೇಲೂರು  ಪಟ್ಟಣದಲ್ಲಿ ನಡೆದಿದೆ. ಹೌದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇಂದು (ಮಾ.16) ಕಂಪ್ಯೂಟರ್ ಸೈನ್ಸ್ ಪರೀಕ್ಷೆ ನಡೆಯಿತು. ಹಾಸನದ ಬೇಲೂರು ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜ್‌ನಲ್ಲಿ ಪರೀಕ್ಷಾ ಕೇಂದ್ರದವರು ದೊಡ್ಡ ಯಡವಟ್ ಮಾಡಿದ್ದಾರೆ. ಈ ವರ್ಷದ ಪ್ರಶ್ನೆಪತ್ರಿಕೆ ಕೊಡುವ ಬದಲು ರಿಪೀಟರ್ಸ್‌ಗೆ ಕೊಡಬೇಕಿದ್ದ ಪ್ರಶ್ನೆಪತ್ರಿಕೆ ಕೊಟ್ಟುಬಿಟ್ಟಿದ್ದಾರೆ. ಬೇಲೂರು ಜ್ಯೂನಿಯರ್ ಕಾಲೇಜಿನ ಮೂವರು …

Read More »

ಪಾಠ ಮಾಡುತ್ತಿದ್ದಾಗಲೇ ಶಿಕ್ಷಕನಿಗೆ ಹೃದಯಾಘಾತ – ವಿದ್ಯಾರ್ಥಿಗಳ ಎದುರೇ ದುರ್ಮರಣ

ಹಾಸನ: ವಿದ್ಯಾರ್ಥಿಗಳಿಗೆ  ಪಾಠ ಮಾಡುತ್ತಿದ್ದಾಗಲೇ ಹೃದಯಾಘಾತದಿಂದ  ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ಮೃತಪಟ್ಟ ದುರ್ಘಟನೆ ಅರಕಲಗೂಡು ತಾಲೂಕಿನ ಕೆಬ್ಬೆಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಮೃತಪಟ್ಟ ಶಿಕ್ಷಕರನ್ನು ಕೇರಳಾಪುರ ಗ್ರಾಮದ ಸತೀಶ್ (53) ಎಂದು ಗುರುತಿಸಲಾಗಿದೆ. ಅವರು ಕೆಬ್ಬೆಕೊಪ್ಪಲು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದ ವೇಳೆ ಸತೀಶ್ ಏಕಾಏಕಿ ಅಸ್ವಸ್ಥಗೊಂಡು ಕೊಠಡಿಯಲ್ಲೇ ಕುಸಿದು ಬಿದ್ದಿದ್ದಾರೆ. ಇದನ್ನು ಗಮನಿಸಿದ ವಿದ್ಯಾರ್ಥಿಗಳು ಹಾಗೂ ಸಹ …

Read More »

ಸಾರಿಗೆ ಇಲಾಖೆ ನೌಕರನ ಬರ್ಬರ ಹತ್ಯೆ ಕೇಸ್ – 10 ಮಂದಿ ವಿರುದ್ಧ ಎಫ್‌ಐಆರ್

ಹಾಸನ: ಆಸ್ತಿ ವಿಚಾರಕ್ಕಾಗಿ ಸಾರಿಗೆ ಇಲಾಖೆ ನೌಕರ ವೀರಪ್ಪ ಹತ್ಯೆ ಪ್ರಕರಣದಲ್ಲಿ ಹತ್ತು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಆಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವೀರಪ್ಪ ಅವರ ಪುತ್ರ ವಿವೇಕ್, ಪೊಲೀಸ್ ಠಾಣೆಗೆ ದೂರು ನೀಡಿದ್ದರು. ವಿವೇಕ್ ಬೆಂಗಳೂರಿನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದಾರೆ. ಮಲ್ಲಮ್ಮ, ಮಹದೇವಮ್ಮ, ಹರೀಶ, ಲೋಕೇಶ, ಮಹದೇವ, ಬಾಗಲಯ್ಯ, ಸತೀಶ, ಜಯರಾಮ, ಧರ್ಮ, ಸ್ವಾಮಿ ವಿರುದ್ಧ ಪ್ರಕರಣ ದಾಖಲಾಗಿದೆ. ವೀರಪ್ಪ ಅವರ ಮೃತದೇಹ ಸಂಪೂರ್ಣ ಸುಟ್ಟು …

Read More »

ಕುಟುಂಬದಲ್ಲಿ ಮಕ್ಕಳು ಬೇರೆ ಕಡೆ ಕೆಲಸ ಮಾಡಿಕೊಂಡು ಆದಾಯ ತೆರಿಗೆ ಪಾವತಿಸುತ್ತಿದ್ದರೆ ತಂದೆ-ತಾಯಿಗೆ ಬಿಪಿಎಲ್‌ ಕಾರ್ಡ್‌ ನೀಡಬಹುದು: ಸಚಿವ ಕೆಹೆಚ್. ಮುನಿಯಪ್ಪ

ಹಾಸನ:ಬಿ.ಪಿ.ಎಲ್ ಕಾರ್ಡ್ ಪರಿಷ್ಕರಣೆ ವೇಳೆ ಮನೆ ಸಾಲ, ಬೈಕ್ ಸಾಲಕ್ಕಾಗಿ ಆದಾಯ ತೆರಿಗೆ ಪಾವತಿಸುತ್ತಿರುವ ವಿನಾಯಿತಿ ನೀಡಬೇಕು, ದೀರ್ಘ ಕಾಲದಿಂದ ತೆರಿಗೆ ಪಾವತಿ ಮಾಡುತ್ತಿರುವರ ಕಾರ್ಡ್ ಗಳನ್ನು ಎ.ಪಿ.ಎಲ್ ಮಾತ್ರ ಪರಿವರ್ತಿಸಬೇಕು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್.ಮುನಿಯಪ್ಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಆಹಾರ ಮತ್ತು ನಾಗರಿಕ ಸರಬರಾಜು, ಕಾನೂನು ಮಾಪನ ಶಾಸ್ತ್ರ ಹಾಗೂ ಆಹಾರ ನಿಗಮದ ಇಲಾಖೆಗಳ …

Read More »

ಮುಂದಿನ ಪ್ರಧಾನಿ, ಮುಖ್ಯಮಂತ್ರಿ ಹಾಸನದಿಂದಲೇ ಬರುವ ಸಾಧ್ಯತೆ ಇದೆ: ಶಿವಯೋಗಿ ಸ್ವಾಮೀಜಿ ಭವಿಷ್ಯ

ಹಾಸನ: ಮುಂಬರುವ ದಿನಮಾನಗಳಲ್ಲಿ ಕರ್ನಾಟಕ ಮಾತ್ರವಲ್ಲದೇ ದೇಶದ ರಾಜಕೀಯದಲ್ಲಿಯೇ ದೊಡ್ಡ ಪರಿವರ್ತನೆಗಳು ನಡೆಯಲಿದ್ದು, ಹಾಸನ  ಜಿಲ್ಲೆಯೇ ಮತ್ತೆ ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುವ ದಿನಗಳು ದೂರವಿಲ್ಲ. ಪ್ರಧಾನಿಯಾಗಲಿ ಅಥವಾ ಮುಖ್ಯಮಂತ್ರಿಯಾಗಲಿ ಹಾಸನದೊಳಗಿಂದಲೇ ಹೊರಬರುವ ಸಾಧ್ಯತೆ ಇದೆ ಎಂದು ಗಜೇಂದ್ರಗಡದ‌ ತಳ್ಳಿಹಾಳ ಸಂಸ್ಥಾನ, ಕೋಡಿಮಠದ ಕಾಲಜ್ಞಾನ ಬ್ರಹ್ಮ ಸದ್ಗುರು ವಿಶ್ವಕಾಲಜ್ಞಾನ ಶಿವಯೋಗಿ  ಭವಿಷ್ಯ ನುಡಿದಿದ್ದಾರೆ. ಹಾಸನ ನಗರದ ಶ್ರೀ ಹಾಸನಾಂಬ ದೇವಾಲಯದಲ್ಲಿ ನಡೆದ ಸಾಮೂಹಿಕ 108 ಶ್ರೀ …

Read More »

ಮನೆ ಸೀಜ್‌ ಮಾಡೋದಾಗಿ ಫೈನಾನ್ಸ್ ಸಿಬ್ಬಂದಿ ಬೆದರಿಕೆ – ವಿಷ ಕುಡಿದು ರೈತ ಆತ್ಮಹತ್ಯೆ

ಹಾಸನ: ಮನೆ ಸೀಜ್‌ ಮಾಡೋದಾಗಿ ಫೈನಾನ್ಸ್  ಸಿಬ್ಬಂದಿ ಬೆದರಿಕೆ ಹಾಕಿದ್ದಕ್ಕೆ ಮನನೊಂದು ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಶ್ರವಣಬೆಳಗೊಳ ಬಳಿಯ ಕೊತ್ತನಘಟ್ಟ ಗ್ರಾಮದಲ್ಲಿ ನಡೆದಿದೆ. ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ರೈತನನ್ನು ಯೋಗೇಶ್ (50) ಎಂದು ಗುರುತಿಸಲಾಗಿದೆ. ಚನ್ನರಾಯಪಟ್ಟಣದ  ಫೈನಾನ್ಸ್‌ ಒಂದರಲ್ಲಿ 7 ಲಕ್ಷ ರೂ. ಸಾಲ ಪಡೆದಿದ್ದರು. ಪ್ರತಿ ತಿಂಗಳು ಸರಿಯಾಗಿ ಕಂತು ಕಟ್ಟುತ್ತಿದ್ದ ಅವರು, ವೈಯಕ್ತಿಕ ಸಮಸ್ಯೆಯಿಂದ ಕಳೆದ 2 ತಿಂಗಳ ಕಂತನ್ನು ಬಾಕಿ …

Read More »

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಗೃಹಿಣಿ ಆತ್ಮಹತ್ಯೆಗೆ ಶರಣು

ಹಾಸನ: ವರದಕ್ಷಿಣೆಗಾಗಿ ನೀಡುತ್ತಿದ್ದ ಕಿರುಕುಳ ಹಾಗೂ ಸಂದೇಹ ಸಹಿಸಲಾಗದೇ ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ ಜಿಲ್ಲೆಯ ಹೆಚ್. ಮೈಲಳ್ಳಿ ಗ್ರಾಮದಲ್ಲಿ ನಡೆದಿದೆ. ಬೇಲೂರು ತಾಲ್ಲೂಕಿನ ಐ. ಹುಣಸೆಕೆರೆ ಗ್ರಾಮದ ಹೆಚ್.ಎಲ್. ಇಂದ್ರ (24) ಮೃತ ಗೃಹಿಣಿ. ಕಳೆದ ನಾಲ್ಕು ವರ್ಷಗಳ ಹಿಂದೆ ಹೆಚ್. ಮೈಲಳ್ಳಿ ಗ್ರಾಮದ ಎಂ.ಹೆಚ್. ಸ್ವಾಮಿ ಜೊತೆ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ. ಮದುವೆ ವೇಳೆ ವರದಕ್ಷಿಣೆ ರೂಪದಲ್ಲಿ 60 ಗ್ರಾಂ ಚಿನ್ನ …

Read More »