ಹುಬ್ಬಳ್ಳಿ: ಪವಿತ್ರ ರಂಜಾನ್ ಹಬ್ಬವನ್ನು ವಾಣಿಜ್ಯ ನಗರದಲ್ಲಿ ಮುಸ್ಲಿಂ ಬಾಂಧವರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ವಿವಾದಿತ ಈದ್ಗಾ ಮೈದಾನದಲ್ಲಿ ಲಕ್ಷಾಂತರ ಮುಸ್ಲಿಮರು ಏಕಕಾಲದಲ್ಲಿ ರಂಜಾನ್ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹುಬ್ಬಳ್ಳಿಯ ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಅಂಬೇಡ್ಕರ್, ಹೊಸೂರು, ಕಮರಿಪೇಟೆ ಸೇರಿದಂತೆ ಪ್ರಮುಖ ವೃತ್ತಿಗಳಲ್ಲಿ ಸಂಚಾರ ಬಂದ್ ಮಾಡಿ, ಪ್ರಾರ್ಥನೆಗೆ ಅನುವು ಮಾಡಿಕೊಡಲಾಗಿತ್ತು. ಪ್ರಾರ್ಥನೆ ಬಳಿಕ ಅಂಜುಮನ್ ಇಸ್ಲಾಮಿಕ್ ಸಂಸ್ಥೆಯ ಮುಖಂಡರು ಹಾಗೂ ಮುಸ್ಲಿಂ ಮುಖಂಡರು 3 ಸಾವಿರ ಮಠಕ್ಕೆ ತೆರಳಿ, …
Read More »ಕನ್ನಡಕ್ಕಾಗಿ ಕರವೇ ಪ್ರತಿಭಟನೆ – ರೈಲ್ವೇ ಪರೀಕ್ಷೆ ಮುಂದೂಡಿಕೆ
ಹುಬ್ಬಳ್ಳಿ: ರೈಲ್ವೆ ಇಲಾಖೆ ಪರೀಕ್ಷೆಗಳಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡದಿರುವ ಕುರಿತು ರಾಜ್ಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು ಇಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ. ಗೂಡ್ಸ್ ರೈಲ್ವೆ ಮ್ಯಾನೇಜರ್ ಹಾಗೂ ಎಲ್‌ಡಿಸಿಇ ಹುದ್ದೆಗಳಿಗೆ ನಡೆಯುವ ಮುಂಬಡ್ತಿ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶವಿಲ್ಲದ ಕಾರಣ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ನಡೆಸಿದರು. ಮೆಜೆಸ್ಟಿಕ್‌ನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ಕನ್ನಡ …
Read More »ಹುಬ್ಬಳ್ಳಿ | ಫ್ಲೈವುಡ್ ಕೆಲಸದ ವೇಳೆ ಕೆಮಿಕಲ್ ರಿಯಾಕ್ಷನ್ – ನಾಲ್ವರು ಕಾರ್ಮಿಕರು ಅಸ್ವಸ್ಥ
ಹುಬ್ಬಳ್ಳಿ: ಬಿಲ್ಡಿಂಗ್ ಒಂದರ ಫ್ಲೈವುಡ್ ಕೆಲಸದ ವೇಳೆ ಕೆಮಿಕಲ್ ರಿಯಾಕ್ಷನ್ ಆಗಿ ನಾಲ್ವರು ಕಾರ್ಮಿಕರು ಅಸ್ವಸ್ಥರಾದ ಘಟನೆ ಹುಬ್ಬಳ್ಳಿ ದೇಶಪಾಂಡೆ ನಗರದಲ್ಲಿ ನಡೆದಿದೆ. ಅಸ್ವಸ್ಥಗೊಂಡ ಕಾರ್ಮಿಕರನ್ನು ಬೆಂಗಳೂರು ಮೂಲದ ಜಾಫರ್, ಅಹ್ಮದ್, ಜಬಿ ಮತ್ತು ಹೈದರ್ ಎಂದು ಗುರುತಿಸಲಾಗಿದೆ. ಬಿಲ್ಡಿಂಗ್ ಒಂದರಲ್ಲಿ ಫ್ಲೈ ವುಡ್ ಕೆಲಸ ನಡೆಯುತ್ತಿತ್ತು. ಅಲ್ಲಿ ಸಾಕಷ್ಟು ಕೆಮಿಕಲ್ ಬಳಕೆ ಮಾಡಲಾಗಿತ್ತು. ಕೆಲಸ ಮುಗಿದ ಬಳಿಕ ಸುಸ್ತಾಗಿದ್ದ ಕಾರ್ಮಿಕರು, ತಡರಾತ್ರಿ ಸಂಪೂರ್ಣ ಬಾಗಿಲು, ಕಿಟಕಿ ಬಂದ್ ಮಾಡಿ …
Read More »ಸಿಎಂ, ಡಿಸಿಎಂ ಹಾಲು ಜೇನಲ್ಲ, ಅಲ್ಕೋಹಾಲ್ ಜೇನು: ಸಚಿವ ಜೋಶಿ
ಹುಬ್ಬಳ್ಳಿ: ನಾನು ಮತ್ತು ಡಿ.ಕೆ. ಶಿವಕುಮಾರ್ ಇಬ್ಬರೂ ಹಾಲು ಜೇನು ಇದ್ದಂತೆ ಎಂದು ಸಿಎಂ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ ಇವರದ್ದು ಹಾಲು ಜೇನಲ್ಲ, ಅಲ್ಕೋಹಾಲ್ ಮತ್ತು ಲಿಂಬೆಹಣ್ಣಿನ ಸಂಬಂಧ. ಇವರಿಬ್ಬರ ನಡುವೆ ಅಧಿಕಾರಕ್ಕಾಗಿ ನಡೆದಿರುವ ಆಂತರಿಕ ಕಚ್ಚಾಟದಿಂದ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲ್ ರಾಜ್ಯಕ್ಕೆ ಬರುತ್ತಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲೇವಡಿ ಮಾಡಿದರು. ಸುದ್ದಿಗಾರರ ಜತೆ ಮಾತನಾಡಿ, ಬಿಜೆಪಿ ಪ್ರಜಾಪ್ರಭುತ್ವ ವಿರೋಧಿ ಎಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಇವರಿಗೆ ರಾಹುಲ್ …
Read More »ಹುಬ್ಬಳ್ಳಿಯಲ್ಲಿ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಅವರಿಗೆ ಗೌರವ ಸನ್ಮಾನ
ಹುಬ್ಬಳ್ಳಿ ನಗರದ ಶತಮಾನೋತ್ಸವದ ಸ್ಮರಣಾರ್ಥ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದಲ್ಲಿ ಭಾರತ ತಂಡದ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಅವರಿಗೆ ‘ಶತಮಾನೋತ್ಸವದ ನೆನಪಿನ ನೀಡಿ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸುನಿಲ್ ಜೋಶಿ ಅವರು ಭಾರತೀಯ ಕ್ರಿಕೆಟ್‌ಗೆ ನೀಡಿದ ಅಮೂಲ್ಯ ಕೊಡುಗೆಯನ್ನು ಸ್ಮರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖರಾದ ಅವಿನಾಶ್ ವೈದ್ಯ, ವೀರಣ್ಣ ಸವಡಿ, ಅಲ್ತಾಫ್ ಕಿತ್ತೂರು, ದಯಾನಂದ ಶೆಟ್ಟಿ ಹಾಗೂ ವಸಂತ ಮುರ್ಡೇಶ್ವರ ಉಪಸ್ಥಿತರಿದ್ದು, ಜೋಶಿ ಅವರ ಸಾಧನೆಯನ್ನು ಶ್ಲಾಘಿಸಿದರು. ಸ್ಥಳೀಯ …
Read More »ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆ ಕೇಸ್: ಹಂತಕ ಫಯಾಜ್ಗೆ ಮತ್ತೆ ಜೈಲೇ ಗತಿ
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ, ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಸದ್ಯ ಪ್ರಕರಣದ ಆರೋಪಿ ಫಯಾಜ್ ಜಾಮೀನು ಅರ್ಜಿಯನ್ನು 3ನೇ ಬಾರಿಗೆ ಧಾರವಾಡ ಹೈಕೋರ್ಟ್ ಪೀಠ ತಿರಸ್ಕರಿಸಿ ಇಂದು ಆದೇಶ ಹೊರಡಿಸಿದೆ. ಆ ಮೂಲಕ ಫಯಾಕ್ಗೆ ಮತ್ತೆ ಜೈಲೇ ಗತಿ ಆಗಿದೆ. 2024 ಏಪ್ರಿಲ್ 18ರಂದು ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜು ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿ ನೇಹಾ ಹಿರೇಮಠ …
Read More »ಶ್ರೀ ಸಿದ್ಧಾರೂಢಸ್ವಾಮಿ ರಥೋತ್ಸವ 16ರಂದು
ಹುಬ್ಬಳ್ಳಿ: ಶಿವನ ಅವತಾರಿಯಾದ ಸದ್ಗುರು ಶ್ರೀ ಸಿದ್ಧಾರೂಢಸ್ವಾಮಿಗಳು ಪ್ರಾರಂಭಿಸಿದ ಶಿವರಾತ್ರಿ ಉತ್ಸವ 123 ವರ್ಷ ಪೂರೈಸಿದ್ದು, 124ನೇ ಶಿವರಾತ್ರಿ ಉತ್ಸವ ಫೆ. 10ರಿಂದ ಆರಂಭಗೊಂಡು ಫೆ. 18ರಂದು ಸಂಪನ್ನಗೊಳ್ಳಲಿದೆ ಎಂದು ಶ್ರೀ ಸಿದ್ಧಾರೂಢಮಠ ಟ್ರಸ್ಟ್ ಕಮಿಟಿ ಚೇರಮನ್ ಚನ್ನವೀರ ಮುಂಗುರವಾಡಿ ಹೇಳಿದರು. ಶ್ರೀ ಸಿದ್ಧಾರೂಢಮಠದ ಸಭಾಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಫೆ. 15ರಂದು ಶ್ರೀಗಳವರ ಪಾಲಕಿ ನಗರದಲ್ಲಿ ಸಂಚರಿಸಿ ರಾತ್ರಿ ಶ್ರೀಮಠಕ್ಕೆ ಬಂದ ನಂತರ ಅಹೋರಾತ್ರಿ ಜಾಗರಣೆ ನಡೆಯಲಿದೆ. 16ರಂದು …
Read More »ಚಾಕೊಲೇಟ್ ಕೊಡುವ ನೆಪದಲ್ಲಿ ಹೇಯ ಕೃತ್ಯ: 8 ವರ್ಷದ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ
ಹುಬ್ಬಳ್ಳಿ: ಕ್ಯಾನ್ಸರ್ ಪೀಡಿತ 75 ವರ್ಷದ ವೃದ್ಧನಿಂದ 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವಂತಹ ಘಟನೆ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ 29ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚಾಕೊಲೇಟ್ ಕೊಡುವುದಾಗಿ ಹೇಳಿ ಪಕ್ಕದ ಮನೆಯ ಬಾಲಕಿಯನ್ನ ಮನೆಗೆ ಕರೆಸಿಕೊಂಡು ವೃದ್ಧ ಕೃತ್ಯವೆಸಗಿದ್ದಾನೆ. ಹುಬ್ಬಳ್ಳಿಯ ಅಶೋಕನಗರ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದ್ದು, ಸದ್ಯ ಆರೋಪಿ ವೃದ್ಧನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಪತಿ ಕೊಲೆಗೈದಿರುವಂತಹ …
Read More »ಕ್ರೂಸರ್ ಹಾಗೂ ಫಾರ್ಚ್ಯೂನರ್ ನಡುವೆ ಅಪಘಾತ,
ಕ್ರೂಸರ್ ಹಾಗೂ ಫಾರ್ಚ್ಯೂನರ್ ನಡುವೆ ಅಪಘಾತ, ಕೆಲವರಿಗೆ ಸಣ್ಣಪುಟ್ಟ ಗಾಯ..ಸ್ಥಳಕ್ಕೆ ಧಾರವಾಡ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ. ಕ್ರೂಸರ್ ವಾಹನ ಹಾಗೂ ಫಾರ್ಚ್ಯೂನರ್ ನಡುವೆ ಡಿಕ್ಕಿಯಾಗಿ ಎರಡು ವಾಹನಗಳಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯವಾಗಿರೋ ಘಟನೆ ಧಾರವಾಡ ಎನ್‌ಟಿಟಿಎಫ್ ಹುಬ್ಬಳ್ಳಿ ಧಾರವಾಡ ಮುಖ್ಯ ರಸ್ತೆಯಲ್ಲಿ ಮಧ್ಯ ರಾತ್ರಿ ನಡೆದಿದೆ. – ಹುಬ್ಬಳ್ಳಿ ಧಾರವಾಡ ಮಾರ್ಗವಾಗಿ ಫಾರ್ಚ್ಯೂನರ್ ಕಾರ ನಗರದ ಒಳಗೆ ಪ್ರವೇಶ ಮಾಡುತ್ತಿದ್ದು ಎದುರು ರಸ್ತೆಯ ಮಾರ್ಗವಾಗಿ ಬಂದ್ …
Read More »ಮಹಿಳೆಯರ ತಾಳಿ ಕಿತ್ತುಕೊಳ್ಳುತ್ತಿರುವ ಮೈಕ್ರೋ ಫೈನಾನ್ಸ್ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲ: ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿ: ರಾಜ್ಯದಲ್ಲಿ ಹೆಣ್ಣು ಮಕ್ಕಳ ತಾಳಿ ಕಿತ್ತುಕೊಳ್ಳುತ್ತಿರುವ ಮೈಕ್ರೋ ಫೈನಾನ್ಸ್ ಮೇಲೆ ಸರ್ಕಾರದ ನಿಯಂತ್ರಣ ತಪ್ಪಿದೆ. ಬಹಳಷ್ಟು ಕುಟುಂಬಗಳು ಮನೆ ಬಿಟ್ಟು ಹೋಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಇದ್ದರೂ ಕೂಡ ಸರ್ಕಾರ ಕಾನೂನಿನ ಪ್ರಯೋಗ ಮಾಡುತ್ತಿಲ್ಲ. ಯಾರಿಗೂ ಭಯ ಇಲ್ಲ. ವಸೂಲಿಗೆ ರೌಡಿಗಳನ್ನು ಬಿಟ್ಟಿದ್ದಾರೆ. ಸರ್ಕಾರ ಒಂದು ಕಡೆ …
Read More »
Laxmi News 24×7