ಬಿಜೆಪಿ ಮುಖಂಡನೊಬ್ಬನ ಕರ್ಮಕಾಂಡ ಬಯಲು. ಈತ ಖಾನಾಪುರದ ಬಿಜೆಪಿ ಮುಖಂಡ ಹಾಗೂ ಶಾಸಕರ ಆಪ್ತ ಆಕಾಶ ಅಥಣಿಕರ್. ಸಾರ್ವಜನಿಕರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ಖೊಟ್ಟಿ ನೌಕರಿ ಆದೇಶ ಪತ್ರಗಳನ್ನು ತಯಾರಿಸಿ ಕೊಟ್ಟು ಜನರನ್ನು ಯಾಮಾರಿಸುವುದೇ ಈ ಮಹಾನುಭಾವನ ಕಾಯಕ. ಖಾನಾಪುರ ತಾಲ್ಲೂಕಿನ ಶ್ರೀಮತಿ ಶೀತಲ ಪಾಟೀಲ ಎಂಬ ಮಹಿಳೆಗೆ ಅಂಗನವಾಡಿ ಕಾರ್ಯಕರ್ತೆಯ ನೌಕರಿ ಕೊಡಿಸುವುದಾಗಿ ನಂಬಿಸಿ ಆಕೆಯಿಂದ 30000/- ಹಣ ಪಡೆದುಕೊಂಡು ಖೊಟ್ಟಿ ಆದೇಶ ಪ್ರತಿಯನ್ನು …
Read More »ಕಲ್ಲು ತೂರಿದವರು ನಮ್ಮ ಸಮಾಜದವರಲ್ಲ, ಬಿಜೆಪಿ, ಆರ್ಎಸ್ಎಸ್ನವರು: ಕಾಶಪ್ಪನವರ್ ಹೊಸ ಬಾಂಬ್
ಬೆಳಗಾವಿ, ಡಿಸೆಂಬರ್ 12: 2ಎ ಮೀಸಲಾತಿಗಾಗಿ (Panchamasali reservation) ಹೋರಾಟ ಮಾಡುತ್ತಿದ್ದ ಪಂಚಮಸಾಲಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದು ಸದ್ಯ ಸದನದ ಒಳಗೂ ಮತ್ತು ಹೊರಗೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ವಿಪಕ್ಷ ಬಿಜೆಪಿ ನಾಯಕರು ಇದನ್ನೇ ಅಸ್ತ್ರವಾಗಿಸಿಕೊಂಡಿದ್ದು, ಆಡಳಿತಾರೂಢ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಮಧ್ಯೆ ಅದೇ ಸಮುದಾಯದ ಶಾಸಕ ವಿಜಯಾನಂದ ಕಾಶಪ್ಪನವರ್, ಕಲ್ಲು ತೂರಿದವರು ನಮ್ಮ ಸಮಾಜದವರಲ್ಲ. ಅವರು ಬಿಜೆಪಿ ಕಾರ್ಯಕರ್ತರು, ಆರ್ಎಸ್ಎಸ್ನವರು ಎಂದು ಹೊಸ ಬಾಂಬ್ ಹಾಕಿದ್ದಾರೆ. ಕಲ್ಲು ತೂರಲು …
Read More »ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ವೇಳೆ ಸ್ಥಳದಲ್ಲಿ ಮರಕಾಸ್ತ್ರ ಪತ್ತೆ
ಬೆಳಗಾವಿಯಲ್ಲಿ ಪಂಚಮಸಾಲಿ ಹೋರಾಟಗಾರರ ಪ್ರತಿಭಟನೆ ಮತ್ತೆ ತೀವ್ರಗೊಂಡಿದೆ. ಡಿ.10ರಂದು ಪಂಚಮಸಾಲಿ ಸಮುದಾಯದ ಹೋರಾಟಗಾರರ ಮೇಲೆ ಪೊಲೀಸರು ನಡೆಸಿರುವ ಲಾಠಿ ಚಾರ್ಜ್ ಕ್ರಮ ಖಂಡಿಸಿ ಹಾಗೂ 2ಎ ಮೀಸಲಾತಿಗೆ ಆಗ್ರಹಿಸಿ ಪ್ರತಿಭಟನಾಕಾರರು ಇಂದು ಹಳ್ಳಿ ಹಳ್ಳಿಗಳ ಮುಖ್ಯ ರಸ್ತೆಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಬೆಳಗಾವಿಯ ಹಿರೇಬಾಗೇವಾಡಿ ಟೋಲ್ ಬಳಿ ಪಂಚಮಸಾಲಿ ಸಮುದಾಯದವರು ನಡೆಸುತ್ತಿರುವ ಪ್ರತಿಭಟನೆ ವೇಳೆ ಸ್ಥಳದಲ್ಲಿ ಮರಕಾಸ್ತ್ರ ಪತ್ತೆಯಾಗಿದೆ. ಸ್ಕೂಟರ್ ಮೇಲೆ ಮಾರಕಾಸ್ತ್ರಗಳು ಇರುವುದು ಕಂಡು ಒಂದು …
Read More »4 ವರ್ಷದಿಂದ ಗೃಹಬಂಧನದಲ್ಲಿ ಗೃಹಿಣಿ!
ಚಿಕ್ಕಮಗಳೂರು: 20 ರೂಪಾಯಿಯಲ್ಲಿ ಆಕೆ ವಾರಪೂರ್ತಿ ಬದುಕಬೇಕು. ಅದು ಮನೆಯಿಂದ ಹೊರಬರದಂತೆ. ಮನೆಯಲ್ಲಿ ರೇಷನ್ ಇದ್ರೆ ಅನ್ನ-ಆಹಾರ. ಇಲ್ಲದಿದ್ರೆ ಮನೆಯಲ್ಲಿ ಉಪವಾಸ.. ಅತ್ತೆ-ಗಂಡ ಹೋದಾಗಲೇ ಹೋದ್ರು, ಬಂದಾಗಲೇ ಬಂದ್ರು. ಮನೆಯಿಂದ ಹೋಗುವಾಗ ಮನೆಯಲ್ಲಿ ರೇಷನ್ ಎಲ್ಲಾ ಖಾಲಿ-ಖಾಲಿ. 3-4 ದಿನ ನೀರು ಕುಡಿದುಕೊಂಡೇ ಇರಬೇಕು. ಅದೂ ನೀರಿನ ಸಂಪರ್ಕ ಕಟ್ ಮಾಡಿರದಿದ್ರೆ. ಮನೆ ಕೆಲಸವೆಲ್ಲಾ ಮಾಡಬೇಕು. ಅಡುಗೆ-ಊಟ ಮಾಡುವಂತಿಲ್ಲ. ಒಂದೇ ಚೇರ್. ಅಲ್ಲೇ ಕೂರಬೇಕು. ಮಹಡಿ ಮೇಲೆ ಮಲಗಬೇಕು. ಇದು …
Read More »30 ಗುಂಟೆಯಲ್ಲಿ ಬದನೆಕಾಯಿ ಬೆಳೆದು 15 ಲಕ್ಷ ರೂಪಾಯಿ ಲಾಭಗಳಿಸಿದ ಹಜಾರೆ ಸಹೋದರರ
ಚಿಕ್ಕೋಡಿ: ಭೂಮಿ ತಾಯಿಯನ್ನು ನಂಬಿದ ರೈತನಿಗೆ ಎಂದಿಗೂ ಮೋಸವಾಗಿಲ್ಲ ಎಂಬುದು ಹಿರಿಯರ ಮಾತಿನಂತೆ ಇಲ್ಲೋಬ್ಬ ಯುವ ರೈತ 30 ಗುಂಟೆಯಲ್ಲಿ ಕೇವಲ ಆರು ತಿಂಗಳಲ್ಲಿಯೇ ಬದನೆಕಾಯಿ ಬೆಳೆದು 15 ಲಕ್ಷ ರೂ ಬಂಪರ ಬೆಳೆ ತೆಗೆದು ಇತರ ರೈತನಿಗೆ ಮಾದರಿಯಾಗಿದ್ದಾನೆ. ಚಿಕ್ಕೋಡಿ ತಾಲೂಕಿನ ಕಾಡಾಪೂರ ಗ್ರಾಮದ ಯುವ ರೈತರಾದ ಅನಿಲ ಹಜಾರೆ ಮತ್ತು ಸುನೀಲ ಹಜಾರೆ ಅವರು ತಮ್ಮ ಅರ್ಧ ಎಕರೆಯಲ್ಲಿ 1093 ತಳಿಯ ಬದನೆಕಾಯಿ ಬೆಳೆ ನಾಟಿ …
Read More »ಸುವರ್ಣ ಸೌಧ, ಎಲ್ಲೆಡೆ ಪೊಲೀಸ್ ಸರ್ಪಗಾವಲು
ಬೆಳಗಾವಿ: ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಪಂಚಮಸಾಲಿ ಸಮುದಾಯವು 2ಎ ಮೀಸಲಾತಿಗಾಗಿ ನಡೆಸುತ್ತಿರುವ ಹೋರಾಟ ಉಗ್ರರೂಪ ಪಡೆದುಕೊಂಡಿದೆ ಮತ್ತು ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿದ್ದರಿಂದ ಹಲವಾರು ಜನರಿಗೆ ರಕ್ತದ ಗಾಯಗಳಾಗಿವೆ. ಇದೇ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಹೆಚ್ಚು ಉದ್ರಿಕ್ತರಾಗಿ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವ ಸಾಧ್ಯತೆ ಇರುವುದರಿಂದ ಪೊಲೀಸ್ ಬಲ ಮತ್ತು ಭದ್ರತೆಯನ್ನು ಹೆಚ್ಚಿಸಲಾಗಿದೆ. ಪ್ರತಿಭಟನಾಕಾರರು ಇಲ್ಲಿಂದ ಕೇವಲ ಒಂದು ಕಿಮೀ ದೂರದಲ್ಲಿ ಪ್ರತಿಭಟನೆ ನಡೆಸುತ್ತಿರುವುದರಿಂದ …
Read More »ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ವಿಶ್ರಾಂತ ಆಶ್ರಮಕ್ಕೆ ಕೃಷಿ ಸಚಿವರಾದ ಚಲುವರಾಯಸ್ವಾಮಿಭೇಟಿ
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿಯ ವಿಜಯಪುರದ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ವಿಶ್ರಾಂತ ಆಶ್ರಮಕ್ಕೆ ಕೃಷಿ ಸಚಿವರಾದ ಚಲುವರಾಯಸ್ವಾಮಿ ಅವರೊಂದಿಗೆ ಭೇಟಿ ನೀಡಲಾಯಿತು. ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ಆಧ್ಯಾತ್ಮದ ಬಗ್ಗೆ ಬಹಳ ಆಳವಾಗಿ ಅಧ್ಯಯನ, ಚಿಂತನೆಗಳನ್ನು ನಡೆಸಿರುವ ಶ್ರೇಷ್ಠ ಅನುಭವಿಗಳಾಗಿದ್ದರು. ಪರಿಸರದ ಬಗ್ಗೆ ಅವರಿಗಿದ್ದ ಕಾಳಜಿ ಅಪಾರ ಮತ್ತು ಆಧ್ಯಾತ್ಮಿಕವಾಗಿ ಸಾಕಷ್ಟು ಜ್ಞಾನ ಹೊಂದಿದ್ದ ಶ್ರೀಗಳು ಜನಮಾನಸದಲ್ಲಿ ಅಜರಾಮರ. ಈ ವೇಳೆ ವಿಧಾನ ಪರಿಷತ್ ಸದಸ್ಯರಾದ ದಿನೇಶ್ ಗೂಳಿಗೌಡ, ಆಶ್ರಮದ ಸದಸ್ಯರು …
Read More »12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಸಂಸದೀಯ ಪ್ರಜಾಪ್ರಭುತ್ವದ ಬುನಾದಿ
ಬೆಳಗಾವಿಯ ಸುವರ್ಣ ಸೌಧದಲ್ಲಿ ಸೋಮವಾರ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ರವರು ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ಕಾರ್ಯಕ್ರಮದ ಲೋಗೋ ಹಾಗೂ ವಿಶ್ವದ ಮೊದಲ ಸಂಸತ್ತು ಖ್ಯಾತಿಯ ‘ಅನುಭವ ಮಂಟಪದ’ ಬೃಹತ್ ತೈಲವರ್ಣ ಚಿತ್ರವನ್ನು ಅನಾವರಣಗೊಳಿಸಿದರು. 12ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ಸಂಸದೀಯ ಪ್ರಜಾಪ್ರಭುತ್ವದ ಬುನಾದಿ ಎಂದು ಕರೆಯಲಾಗಿದೆ. ಸುವರ್ಣಸೌಧದಲ್ಲಿ ಅನುಭವ …
Read More »ಚಿಕ್ಕೋಡಿ ಜಿಲ್ಲೆ ಆಗದಿದ್ದರೆ, ಪ್ರತ್ಯೇಕ ರಾಜ್ಯದ ಕೂಗು ಶ್ರೀ ಸಂಪಾದನಾ ಮಹಾಸ್ವಾಮಿಜೀ ಹೇಳಿಕೆ
:ಬೆಳಗಾವಿಯಲ್ಲಿ ಸೋಮವಾರದಿಂದ ನಡೆಯುವ ಚಳಿಗಾಲದ ಅಧಿವೇಶನವನ್ನು ಗಮನಸೆಳೆಯುವ ನಿಟ್ಟಿನಲ್ಲಿ, ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ ಆಗ್ರಹಿಸಿ ಡಿಸೆಂಬರ್ 9 ರಿಂದ ಅಧಿವೇಶನ ಮುಗಿಯುವವರೆಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ಚರಮೂರ್ತಿ ಮಠದ ಸಂಪಾದನಾ ಮಹಾಸ್ವಾಮಿಜಿಯವರು ಹೇಳಿದರು. ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಐದು ದಶಕಗಳಿಂದ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಹೋರಾಟಗಳನ್ನು, ಸತ್ಯಾಗ್ರಹಗಳನ್ನು, ಧರಣಿಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದೇವೆ. ಆದ್ರೂ ಸಹ ಚಿಕ್ಕೋಡಿ ಪ್ರತ್ಯೇಕ ಜಿಲ್ಲೆ …
Read More »ವನ್ಯಜೀವಿ ಸಂರಕ್ಷಣೆಗಾಗಿ ಜನಜಾಗ್ರತಿ ಹೆಚ್ಚೆಚ್ಚು ಮೂಡಲಿ ವನ್ಯಜೀವಿ ಸಂರಕ್ಷಣೆಗಾಗಿ ಜನಜಾಗ್ರತಿ ಹೆಚ್ಚೆಚ್ಚು ಮೂಡಲಿ. ಜಿಲ್ಲಾ ಕಾಂಗ್ರೇಸ್ ಅದ್ಯಕ್ಷ, ವಿನಯ ನಾವಲಗಟ್ಟಿ ಅಭಿಮತ.
ಬೆಳಗಾವಿ. ೦೬- ವನ್ಯಜೀವಿಯೇ ಅರಣ್ಯದ ನಿಜವಾದ ಸಂಪತ್ತು. ವನ್ಯಜೀವಿ ಇದ್ದರೆ ಅರಣ್ಯ. ಅರಣ್ಯ ಇದ್ದರೆ ನಮ್ಮ ಉಸಿರು. ವನ್ಯಜೀವಿ ಬದುಕಿಗೆ ಬೆಳಕು ಚೆಲ್ಲುವ ಕಾರ್ಯಗಳು ನಿರಂತರವಾಗಿರಬೇಕಲ್ಲದೆ, ಹೆಚ್ಚೆಚ್ಚು ಮೂಡಿ ಬರಬೇಕು ಎಂದು ಬೆಳಗಾವಿ ಜಿಲ್ಲಾ ಕಾಂಗ್ರೇಸ್ ಕಮಿಟಿ ಅಧ್ಯಕ್ಷರಾದ ವಿನಯ ನಾವಲಗಟ್ಟಿ ಹೇಳಿದರು. ಅವರು ಗುರುವಾರ ಸಂಜೆ ರಾಮತೀರ್ಥನಗರ ದ ಸ್ನೇಹ ಸಮಾಜ ಸೇವಾ ಸಂಘದ ಶ್ರೀ ಕಾರ್ಯಸಿದ್ಧಿ ಆಂಜನೇಯ ದೇವಸ್ಥಾನ ದ ಗ್ರಂಥಾಲಯದಲ್ಲಿ ಬೆಳಗಾವಿ ವನ್ಯಜೀವಿ ಪರಿಸರ ವೇದಿಕೆ …
Read More »