Breaking News

ಬೆಳಗಾವಿ

ಅತ್ಯಾಚಾರ ಕೇಸ್ : ಸಂತ್ರಸ್ತೆ ಮಹಿಳೆಯ ವಿರುದ್ಧ ಶಾಸಕ ವಿನಯ್ ಕುಲಕರ್ಣಿ ಆಪ್ತನಿಂದ ದೂರು ದಾಖಲು!

ಹುಬ್ಬಳ್ಳಿ : ಮಹಿಳಾ ರೈತ ಮುಖಂಡೆಯ ಮೇಲೆ ಶಾಸಕ ವಿನಯ ಕುಲಕರ್ಣಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಸಂತ್ರಸ್ತೆ ಮಹಿಳೆ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ದೂರು ದಾಖಲಿಸಿದ್ದರು.ಇದೀಗ ವಿನಯ್ ಕುಲಕರ್ಣಿ ಅವರ ಆಪ್ತ ಸಂತ್ರಸ್ತೆ ಮಹಿಳೆಯ ವಿರುದ್ಧವೇ ಪ್ರತಿ ದೂರು ದಾಖಲಿಸಿದ್ದಾರೆ. ಹೌದು ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಶಾಸಕ ವಿನಯ್ ಕುಲಕರ್ಣಿ ಹಾಗೂ ಆಪ್ತ ಅರ್ಜುನ್ ಗುಡ್ಡದ …

Read More »

ಹೆಸರಿಗಷ್ಟೇ ಹೆದ್ದಾರಿ: ಸವಾರರಿಗೆ ಕಿರಿಕಿರಿ

ಕಾಗವಾಡ: ಇಲ್ಲಿಂದ ಅಥಣಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಮುರಗುಂಡಿಯವರೆಗಿನ 40 ಕಿ.ಮೀ. ರಸ್ತೆ ಸಂಪೂರ್ಣ ಹದಗಟ್ಟಿದೆ. ರಾಷ್ಟ್ರೀಯ ಹೆದ್ದಾರಿಯಾಗಿ ಇದು ಮೇಲ್ದರ್ಜೆಗೆ ಏರಿದ್ದರೂ, ಕಿರಿದಾಗಿರುವ ಕಾರಣ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದುಕೊಂಡು ಸಂಚರಿಸುವಂತಾಗಿದೆ. ವಿಜಯಪುರದಿಂದ ಬೆಳಗಾವಿ, ಮಹಾರಾಷ್ಟ್ರದ ಮೀರಜ್‌, ಸಾಂಗ್ಲಿ, ಕೊಲ್ಹಾಪುರಕ್ಕೆ ಜನರು ಇದೇ ಮಾರ್ಗವಾಗಿ ಸಂಚರಿಸುತ್ತಾರೆ. ವಿಶೇಷವಾಗಿ ಆಸ್ಪತ್ರೆಗೆ ತೆರಳಲು ಮತ್ತು ವ್ಯಾಪಾರಕ್ಕೆ ಹೋಗಲು ಈ ರಸ್ತೆಯೇ ಆಸರೆ. ಆದರೆ, ಹಾಳಾದ ರಸ್ತೆ ಸುಧಾರಣೆಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು …

Read More »

‘2ಎ’ ಮೀಸಲಾತಿ ಅ.18ರಂದು ಬೆಂಗಳೂರಿನಲ್ಲಿ ಧರಣಿ

ಬೆಳಗಾವಿ: ‘ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ನಮ್ಮ ಸಮುದಾಯಕ್ಕೆ ‘2ಎ’ ಮೀಸಲಾತಿ ನೀಡುವ ವಿಚಾರವಾಗಿ ಯಾವ ಪ್ರಗತಿಯಾಗಲಿಲ್ಲ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗಾಗಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮುದಾಯದ ಎಲ್ಲ ಪದಾಧಿಕಾರಿಗಳು ಅ.18ರಂದು ಬೆಂಗಳೂರಿನಲ್ಲಿ ಧರಣಿ ನಡೆಸಲಿದ್ದೇವೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.   ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ …

Read More »

ಗೋಕಾಕನ ಮಾರ್ಕಂಡೇಯ ನದಿಯಲ್ಲಿ ಆಯತಪ್ಪಿ ಕಾಲು ಜಾರಿ ಬಿದ್ದ ಯುವಕ

ಗೋಕಾಕನ ಮಾರ್ಕಂಡೇಯ ನದಿಯಲ್ಲಿ ಆಯತಪ್ಪಿ ಕಾಲು ಜಾರಿ ಬಿದ್ದ ಯುವಕ ನದಿಯಲ್ಲಿ ಕಣ್ಮರೆಯಾದ ಯುವಕನಿಗಾಗಿ ಅಗ್ನಿಶಾಮಕ ಹಾಗೂ ಪೊಲೀಸರ ಹುಡುಕಾಟ. ಸಾಗರ ಮಾರುತಿ ಗೌಳಿ(೧೬) ನದಿಯಲ್ಲಿ ಕಣ್ಮರೆಯಾಗಿರೋ ಯುವಕ. ಗೋಕಾಕನ ಮಾರ್ಕಂಡೇಯ ನದಿಯಲ್ಲಿ ನಡೆದ ಘಟನೆ. ನಿನ್ನೆ ಮಧ್ಯಾಹ್ನ ನದಿಗೆ ಆಯತಪ್ಪಿ ಬಿದ್ದಿರುವ ಯುವಕ. ನಿನ್ನೆಯಿಂದ ಸತತವಾಗಿ ಯುವಕನಿಗಾಗಿ ಕುಡುಕಾಟ ನಡೆಸ್ತಿರೋ ಅಗ್ನಿಶಾಮಕ ಸಿಬ್ಬಂಧಿ. ಗೋಕಾಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

Read More »

ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಹೊಸ ಮುಖ್ಯಮಂತ್ರಿಯನ್ನು ಸ್ವಾಗತಿಸಲಾಗುವುದು’ ಎಂದ ವಿಜಯೇಂದ್ರ

ಬೆಳಗಾವಿ: ‘ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನಕ್ಕೆ ಹೊಸ ಮುಖ್ಯಮಂತ್ರಿಯನ್ನು ಸ್ವಾಗತಿಸಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ನಗರದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಮುಡಾ ಹಗರಣದ ಕಾರ್ಮೋಡ ಮುಖ್ಯಮಂತ್ರಿ ಕುರ್ಚಿ ಆವರಿಸಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣವನ್ನು ಅವರೇ ಒಪ್ಪಿಕೊಂಡಿದ್ದಾರೆ. ಇದರಿಂದ ಸಿದ್ದರಾಮಯ್ಯ ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ಅವರ ಸ್ಥಾನದ ಮೇಲೆ ಕಣ್ಣಿಟ್ಟಿರುವರು, ತಮಗೆ ಬೆಂಬಲ ಕೋರಿ ರಹಸ್ಯ ಸಭೆ ನಡೆಸುತ್ತಿದ್ದಾರೆ’ ಎಂದರು. ‘ವಿಜಯೇಂದ್ರ ಅವರನ್ನು ಬಿಜೆಪಿ …

Read More »

ಸಾಂಬ್ರಾ ವಿಮಾನ ನಿಲ್ದಾಣ ಪ್ರಾಧಿಕಾರ ₹3.69 ಕೋಟಿ ಆಸ್ತಿ ತೆರಿಗೆ ಬಾಕಿ

ಬೆಳಗಾವಿ: ತಾಲ್ಲೂಕಿನ ಸಾಂಬ್ರಾ ವಿಮಾನ ನಿಲ್ದಾಣ ಪ್ರಾಧಿಕಾರ ₹3.69 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಅದರ ವಸೂಲಾತಿಗಾಗಿ ಸಾಂಬ್ರಾ ಗ್ರಾಮ ಪಂಚಾಯಿತಿ ನೋಟಿಸ್‌ ಜಾರಿಗೊಳಿಸಿದೆ. ಸಾಂಬ್ರಾ ವಿಮಾನ ನಿಲ್ದಾಣವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಪ್ರಯತ್ನ ನಡದಿವೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನಿರಂತರವಾಗಿ ಸಭೆ ನಡೆಸಿ, ಇದಕ್ಕೆ ಪೂರಕವಾಗಿ ಮೂಲಸೌಕರ್ಯ ಸಿದ್ಧಪಡಿಸುತ್ತಿದ್ದಾರೆ. ಹೊಸ ಟರ್ಮಿನಲ್‌ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿ ಆರಂಭಗೊಂಡಿವೆ. ಆದರೆ, ವಿಮಾನ ನಿಲ್ದಾಣದವರು ಕಳೆದ ಏಳು …

Read More »

‘ಕೆರೆಗಳ ಅಭಿವೃದ್ಧಿ ಶ್ರೇಷ್ಠ ಕೆಲಸ’

ಬೆಳಗಾವಿ: ‘ಸಾಮಾಜಿಕ ಮತ್ತು ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕೊಡುವ ಮೂಲಕ ಧರ್ಮಸ್ಥಳದ ಧರ್ಮಾಧ್ಯಕ್ಷರಾದ ವೀರೇಂದ್ರ ಹೆಗ್ಗಡೆ ಅವರು ಮಾದರಿ ಕೆಲಸ ಮಾಡುತ್ತಿದ್ದಾರೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಿಲಜಿ ಗ್ರಾಮ ಪಂಚಾಯಿತಿ, ಶಿಂದೊಳ್ಳಿ ಕೆರೆ ಅಭಿವೃದ್ಧಿ ಸಮಿತಿ ಆಶ್ರಯದಲ್ಲಿ ಪುನಃಶ್ಚೇತನಗೊಳಿಸಿದ ಶಿಂದೊಳ್ಳಿ ಸರ್ಕಾರಿ ಕೆರೆ ಹಸ್ತಾಂತರ ಮತ್ತು ಬಾಗಿನ ಅರ್ಪಣೆ ಮಾಡಿ ಮಾತನಾಡಿದರು.   ‘ಧರ್ಮಸ್ಥಳ ಯೋಜನೆಯವರು ಜಿಲ್ಲೆಯಲ್ಲಿ ಸುಮಾರು 48 ಕೆರೆಗಳನ್ನು …

Read More »

ಬಾಲಕಿ ಮೇಲೆ ಅತ್ಯಾಚಾರ: 20 ವರ್ಷ ಕಠಿಣ ಶಿಕ್ಷೆ

ಬೆಳಗಾವಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಯುವಕನಿಗೆ ಇಲ್ಲಿನ ಪೋಕ್ಸೊ ನ್ಯಾಯಾಲಯ 20 ವರ್ಷ ಕಠಿಣ ಶಿಕ್ಷೆ ಮತ್ತು ₹10 ಸಾವಿರ ದಂಡ ವಿಧಿಸಿ ಬುಧವಾರ ತೀರ್ಪು ನೀಡಿದೆ. ಇಲ್ಲಿನ ರುಕ್ಮಿಣಿ ನಗರದ ನಿವಾಸಿ ಚಂದ್ರು ಮೋಹನ ಹರಿಜನ (26) ಶಿಕ್ಷೆಗೆ ಒಳಗಾದವ. ಮದುವೆ ಆಗುವುದಾಗಿ ನಂಬಿಸಿ, 2019ರ ಜನವರಿ 14ರಂದು ಬಾಲಕಿ ಒಡವೆಗಳನ್ನು ಬ್ಯಾಂಕಿನಲ್ಲಿ ಒತ್ತೆ ಇರಿಸಿ ಹಣ ಪಡೆದಿದ್ದ. ನಂತರ ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಅಪಹರಿಸಿಕೊಂಡು ಹೋಗಿ, ನಿರಂತರವಾಗಿ …

Read More »

ಆಟೊದವರ ಸಮಸ್ಯೆಗಳೇನು?

ಆಟೊದವರ ಸಮಸ್ಯೆಗಳೇನು? * ನಗರದಲ್ಲಿ ಎಲ್ಲ ಕಡೆಯೂ ‘ಶೇರಿಂಗ್‌’ ವ್ಯವಸ್ಥೆಗೆ ಜನ ಮುಗಿಬೀಳುತ್ತಾರೆ. ಮೀಟರ್‌ ಅಳವಡಿಸುವ ಮುನ್ನ ಶೇರಿಂಗ್‌ ವ್ಯವಸ್ಥೆ ಬಂದ್ ಮಾಡಿಸಬೇಕು. * ಗ್ರಾಮೀಣ ಪ್ರದೇಶಕ್ಕೆ ಪರವಾನಗಿ ‍ಪಡೆದವರೂ ನಗರದಲ್ಲಿ ಓಡಿಸುತ್ತಾರೆ. ನಗರದ ‍ಪರವಾನಗಿ ಇದ್ದವರು ಏನು ಮಾಡಬೇಕು? * ಕನಿಷ್ಠ ದೂರದ ದರವನ್ನು ₹30 ಮಾಡಲಾಗಿದೆ. ಇದು ಏಳು ವರ್ಷಗಳ ಹಿಂದಿನ ದರ. ಕನಿಷ್ಠ ದರವನ್ನೂ ಹೆಚ್ಚಿಸಬೇಕು. * ಮೀಟರ್‌ಗಳ ದುರಸ್ತಿ ಮಾಡುವವರು ಒಬ್ಬರೂ ಬೆಳಗಾವಿಯಲ್ಲಿ ಇಲ್ಲ. …

Read More »

ಬಾಲಕಿ ಮೇಲೆ ಅತ್ಯಾಚಾರ: 20 ವರ್ಷ ಜೈಲು ಶಿಕ್ಷೆ

ಬೆಳಗಾವಿ: ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಗ್ರಾಮವೊಂದರದಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಅ‍‍‍‍ಪರಾಧಿಗೆ ಇಲ್ಲಿನ ವಿಶೇಷ ಶೀಘ್ರಗತಿ ಪೋಕ್ಸೊ ನ್ಯಾಯಾಲಯವು 20 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿದೆ. ತಿಗಡೊಳ್ಳಿ ಗ್ರಾಮದ ಗಂಗಪ್ಪ ಕಲ್ಲಪ್ಪ ಕೋಲಕಾರ ಶಿಕ್ಷೆಗೆ ಒಳಗಾದವ. ಬಾಲಕಿಯನ್ನು ಪುಸಲಾಯಿಸಿ, ಪ್ರೀತಿಸುತ್ತೆನೆ- ಮದುವೆಯಾಗುತ್ತೇನೆ ಎಂದು ನಂಬಿಸಿದ್ದ. 2017ರ ಸೆಪ್ಟೆಂಬರ್‌ನಲ್ಲಿ ಬೈಕ್‌ ಮೇಲೆ ಅಪಹರಿಸಿಕೊಂಡು ಮಹಾರಾಷ್ಟ್ರದ ತಾಸಗಾಂವ ಎಂಬಲ್ಲಿ ಬಿಲ್ಡಿಂಗ್‌ವೊಂದರಲ್ಲಿ ಇರಿಸಿದ್ದ. ಅಲ್ಲಿಯೇ …

Read More »