Breaking News

ಬೆಳಗಾವಿ

ಜನರಿಗೆ ಕೆಲಸ ಇಲ್ಲದೆ ಬೇರೆ ಬೇರೆ ರಾಜ್ಯಗಳಿಗೆ ಗುಳೆ ಹೋಗುವುದಕ್ಕೆ ಕಾರಣ ಇಲ್ಲಿದೆ. ರಾಮದುರ್ಗ ತಾಲೂಕಿನ ಅಸಲಿ ಕಥೆ,

ಹೆಸರಿಗೆ ಮಾತ್ರ ಉದ್ಯೋಗ ಖಾತ್ರಿ…  ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಅಸಲಿ ಕಥೆ, ಜನರಿಗೆ ಕೆಲಸ ಇಲ್ಲದೆ ಬೇರೆ ಬೇರೆ ರಾಜ್ಯಗಳಿಗೆ ಗುಳೆ ಹೋಗುವುದಕ್ಕೆ ಕಾರಣ ಇಲ್ಲಿದೆ.   ರಾಮದುರ್ಗ:ಗ್ರಾಮ ಪಂಚಾಯ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸಕ್ಕೆ ಅಂತ ಕಾರ್ಮಿಕರು ಹೋಗುತ್ತಾರೆ, ಅವರ ಹತ್ತಿರದಿಂದ ಕೆಲಸವನ್ನು ಮಾಡಿಸಿಕೊಳ್ಳುತ್ತಾರೆ, ಅವರ ಕೆಲಸಕ್ಕೆ ಅಂತಾನೆ ಸರ್ಕಾರ ನೇರವಾಗಿ ಅವರವರ ಖಾತೆಗಳಿಗೆ ಹಣ ವರ್ಗಾವಣೆ ಮಾಡುತ್ತದೆ. ಅದೇನು ಸರಿ ಬಿಡಿ ನೇರವಾಗಿ ಉದ್ಯೋಗ ಚೀಟಿದಾರರಿಗೆ …

Read More »

ಉಚಿತ ಮಾಸ್ಕ್ ವಿತರಣೆ ಎನ್ ಎಸ್ ಎಫ್ ತಂಡದಿಂದ

ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದಲ್ಲಿ ಅರಭಾವಿ ಕ್ಷೇತ್ರದ ಜನಪ್ರಿಯ ಶಾಸಕರು ಮಾಜಿ ಸಚಿವರು, ಕೆಎಂಎಫ್ ಅಧ್ಯಕ್ಷರು ಶ್ರೀಬಾಲಚಂದ್ರಅಣ್ಣಾ ಜಾರಕಿಹೊಳಿ ಅವರ ಎನ್ ಎಸ್ ಎಫ್ ತಂಡದಿಂದ ಉಚಿತವಾಗಿ ಮಾಸ್ಕ್ ವಿತರಿಸಲಾಯಿತು… ಈ ಸಂದರ್ಭದಲ್ಲಿ ಶಾಸಕರ ಅನುಪಸ್ಥಿತಿಯಲ್ಲಿ ಆಪ್ತ ಸಹಾಯಕರಾದ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ್,ಕ್ಷೇತ್ರ ಶಿಕ್ಷಣ ಅಧಿಕಾರಿ ಅಜಿತ್ ಮನ್ನಿಕೇರಿ ಸರ್, ಸಿಪಿಐ ವೆಂಕಟೇಶ್ ಮುರನಾಳ ಸರ್, ಹಾಗೂ ಸಮಸ್ತ ಪಟಗುಂದಿ ಗ್ರಾಮದ ಹಿರಿಯರು, ಬಿಜೆಪಿ ಕಾರ್ಯಕರ್ತರು, …

Read More »

ಸರ್ಕಾರದ ಆದೇಶವನ್ನು ಪಾಲಿಸಿ:ಎನ್ ಎಸ್ ಎಫ್ ತಂಡದಿಂದ ಮನವಿ

ಮೂಡಲಗಿ: ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ಕೊರೊನಾ ಸೊಂಕು ಧೃಡಪಟ್ಟಿರುವ ಹಿನ್ನಲೆಯಲ್ಲಿ ಮೂಡಲಗಿ ತಾಲೂಕಿನ ಕೊನೆಯ ಭಾಗವಾಗಿರುವ ಯಾದವಾಡ ಜಿಲ್ಲಾ ಪಂಚಾಯತ ಕ್ಷೇತ್ರಗಳಲ್ಲಿ ತಾಲೂಕಾಡಳಿತ ಮತ್ತು ಟೀಮ್ ಎನ್‍ಎಸ್‍ಎಫ್ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಯಿತು. ಬುಧವಾರದಂದು ಮುಧೋಳದ ವ್ಯಕ್ತಿಯೊರ್ವನಿಗೆ ಕೊರೊನಾ ವೈರಸ್ ಕಂಡುಬಂದ ಹಿನ್ನಲೆಯಲ್ಲಿ ಅಧಿಕಾರಿಗಳು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಮುಧೋಳಕ್ಕೆ ಹೊಂದಿಕೊಂಡಿರುವ ಹಳ್ಳಿಗಳಿಗೆ ಭೇಟಿ ನೀಡಿ ಸಾರ್ವಜನಿಕರಿಗೆ ವಿಶೇಷ ಮನವಿಯನ್ನು ಅಧಿಕಾರಿಗಳ ತಂಡ ಮಾಡಿಕೊಂಡಿತ್ತು. ಕೊರೊನೊ ಹಿನ್ನಲೆಯಲ್ಲಿ …

Read More »

1461ಜನರ ಮೇಲೆ ಆರೋಗ್ಯ ಇಲಾಖೆ ನಿಗಾ,ಜಿಲ್ಲೆಯ ಹತ್ತು ಜನರಿಗೆ ಕೊರೋನಾ ಸೊಂಕು,44 ಜನರ ರಿಪೋರ್ಟ ನೆಗೆಟೀವ್

ಬೆಳಗಾವಿ – ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 1461ಜನರ ಮೇಲೆ ಆರೋಗ್ಯ ಇಲಾಖೆ ನಿಗಾ ಇಟ್ಟಿದ್ದು ಜಿಲ್ಲೆಯ ಹತ್ತು ಜನರಿಗೆ ಕೊರೋನಾ ಸೊಂಕು ಇರುವದು ದೃಡವಾಗಿದೆ.144 ಜನರ ರಿಪೋರ್ಟ ನೆಗೆಟೀವ್ ಬಂದಿದೆ. ಇಂದು ಗುರುವಾರ ಒಂದೇ ದಿನ ಮೂರು ಜನರ ರಿಪೋರ್ಟ್ ಪಾಸಿಟೀವ್ ಬಂದಿದ್ದು ಬೆಳಗಾವಿ ಜಿಲ್ಲೆಯಲ್ಲಿ ಕೊರೋನಾ ಸೊಂಕಿತರ ಸಂಖ್ಯೆ 10 ಕ್ಕೇರಿದೆ ಬೆಳಗಾವಿ ಜಿಲ್ಲೆಯ ಒಟ್ಟು 47 ಕೊರೋನಾ ಶಂಕಿತರ ರಿಪೋರ್ಟ್ ಬರಬೇಕಾಗಿದೆ. ಹಿರೇಬಾಗೇವಾಡಿಯಲ್ಲಿ ನಾಲ್ಕು ಜನ,ಬೆಳಗುಂದಿ ಒಂದು,ಬೆಳಗಾವಿ …

Read More »

ಚಿಕ್ಕೋಡಿ:ಗುಟ್ಕಾ ತಿಂದು ಉಗಿದವನ ಶರ್ಟ್ ಬಿಚ್ಚಿಸಿ ರಸ್ತೆ ಸ್ವಚ್ಛಗೊಳಿಸಿದ್ರು

ಚಿಕ್ಕೋಡಿ(ಬೆಳಗಾವಿ): ಗುಟ್ಕಾ ತಿಂದು ರಸ್ತೆಯಲ್ಲೇ ಉಗಿದಿದ್ದವನ ಶರ್ಟ್ ಬಿಚ್ಚಿಸಿ ಅದರಿಂದಲೇ ರಸ್ತೆ ಸ್ವಚ್ಛ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ನಗರದಲ್ಲಿ ನಡೆದಿದೆ. ಕೊರೊನಾ ಭೀತಿ ಹಿನ್ನೆಲೆಯಲ್ಲಿ ನಿಪ್ಪಾಣಿ ನಗರದ ರಸ್ತೆಗಳನ್ನ ಪೌರ ಕಾರ್ಮಿಕರು ಸ್ವಚ್ಛ ಮಾಡುತ್ತಿದ್ದ ಸಂದರ್ಭದಲ್ಲಿ ವಿಜಯಪುರ ಮೂಲದ ವ್ಯಕ್ತಿಯೊಬ್ಬ ಗುಟ್ಕಾ ಜಗಿದು ರಸ್ತೆಯಲ್ಲಿಯೇ ಉಗುಳಿದ್ದಾನೆ. ಈ ವೇಳೆ ಸ್ಥಳದಲ್ಲೇ ಇದ್ದ ನಿಪ್ಪಾಣಿ ನಗರ ಸಭೆಯ ಪೌರಾಯುಕ್ತ ಮಹಾವೀರ ಬೋರಣ್ಣವರ ಗುಟ್ಕಾ ತಿಂದು ಉಗಳುವುದನ್ನ ಗಮನಿಸಿ ವ್ಯಕ್ತಿಯನ್ನ …

Read More »

ಒಂದು ದಿನದ ಮಗುವನ್ನ ದೇವಸ್ಥಾನದಲ್ಲಿ ಬಿಟ್ಟು ಹೋದ ಪಾಪಿಗಳು

ಚಿಕ್ಕೋಡಿ/ಬೆಳಗಾವಿ: ಒಂದು ದಿನದ ನವಜಾತ ಗಂಡು ಮಗುವನ್ನು ದೇವಸ್ಥಾನದಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಹೊರವಲಯದ ಬಸವೇಶ್ವರ ದೇವಸ್ಥಾನದಲ್ಲಿ ಹೆರಿಗೆಯ ನಂತರ ಗಂಡು ಮಗುವನ್ನು ಕೈಚೀಲದಲ್ಲಿ ಇಟ್ಟು ಪರಾರಿಯಾಗಿದ್ದಾರೆ. ಇಂದು ಬೆಳಗಿನ ಜಾವ 5 ಗಂಟೆಗೆ ಮಗು ಅಳುವಿನ ಧ್ವನಿ ಕೇಳಿದ ಸ್ಥಳೀಯರು ಮಗುವನ್ನು ರಕ್ಷಿಸಿ, ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಆಶಾ ಕಾರ್ಯಕರ್ತೆಯರು ಹಾಗೂ …

Read More »

ಗಲ್ಲಿ- ಗಲ್ಲಿಗೆ ತೆರಳಿ ಜಾಗೃತಿ ಮೂಡಿಸಿದ ಸ್ಥಳಿಯ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು.

  ಗೋಕಾಕ: ತಾಲೂಕಿನ ಧುಪದಾಳ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ಸೇರಿದಂತೆ ಪೋಲಿಸ್ ಇಲಾಖೆ ಅಧಿಕಾರಿಗಳ ವತಿಯಿಂದ ಧುಪದಾಳ ಗ್ರಾಮದಲ್ಲಿ ಪ್ರತಿ ಗಲ್ಲಿ ಗಲ್ಲಿಗಳಿಗೆಯ ಮನೆ ಮನೆಗಳಿಗೆ ತೆರಳಿ ಮನೆ ಬಿಟ್ಟು ಹೊರಗೆ ಬರದಂತೆ ಅಂಗನವಾಡಿ ಕಾರ್ಯಕರ್ತೆ ಮನವಿ ಮಾಡಿಕೊಳ್ಳುವ ಮೂಲಕ ಕೊರೊನೋ ವೈರಸ್ ಬಗ್ಗೆ ಮುದ್ರಣ ಪತ್ರಿಕೆ ನೀಡಿ ಜಾಗೃತಿ ಮೂಡಿಸಲಾಗಿತ್ತು. ಇನ್ನು ಈ ಕೊರೊನೋ ಜಾಗೃತಿಯಲ್ಲಿ ಪೋಲಿಸ್ ಅಧಿಕಾರಿಗಳು , ಆರೋಗ್ಯ …

Read More »

ಸುದ್ದಿ ಮಾಡಲು ಹೋದ ವರದಿಗಾರನಿಗೆ ಮ್ಯಾನೆಜರನಿಂದ ದರ್ಪ

ಜಗತ್ತಿನ ತುಂಬ ಕರೊನಾ ವೈರಸ್ ತಡೆಯುವ ಬಗ್ಗೆ ಮುಂಜಾಗೃತೆಗಾಗಿ ಸರಕಾರ ಎಲ್ಲ ಇಲಾಖೆಗಳಿಗೆ ಸೂಚನೆ ಮಾಡಿದೆ ಆದರೆ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕಿನಲ್ಲಿರುವ ಕೆನರಾ ಬ್ಯಾಂಕ ಮ್ಯಾನೇಜರ್ ಕಲ್ಲಪ್ಪ ತೇಲಿ ಎಂಬ ಮ್ಯಾನೆಜರ ನಿಯಮ ಉಲ್ಲಂಘನೆ ಮಾಡಿ ಬ್ಯಾಂಕಿನ ಒಳಗಡೆ ಯಾರನ್ನು ತೆಗೆದುಕೊಳ್ಳದೆ ಹೊರಗಡೆ ಗ್ರಾಹಕರನ್ನು ನಿಲ್ಲಿಸಿ ಸತಾಯಿಸುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಸುದ್ದಿ ಮಾಡಲು ತೆರಳಿದ ವರದಿಗಾರನ ಮೇಲೆ ದರ್ಪ ತೊರಿದ್ದಲ್ಲದೆ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಲ್ಲದೆ ನೀವು …

Read More »

ಸಾಮಾಜಿಕ ಜಾಲತಾಣದಲ್ಲಿ ನಿಶ್ಚಿತಾರ್ಥ – ಸಮಾಜಕ್ಕೆ ಮಾದರಿಯಾದ ಕುಟುಂಬ

ಚಿಕ್ಕೋಡಿ (ಬೆಳಗಾವಿ): ಕೊರೊನಾ ಸೋಂಕು ಹರಡದಂತೆ ದೇಶಾದ್ಯಂತ ಏಪ್ರಿಲ್ 14ರವರೆಗೆ ಲಾಕ್‍ಡೌನ್ ಘೋಷಿಸಲಾಗಿದ್ದು, ಸಭೆ ಸಮಾರಂಭ ಮತ್ತು ಮದುವೆಗಳು ರದ್ದಾಗಿವೆ. ಆದರೆ ಬೆಳಗಾವಿಯ ಜೋಡಿಯೊಂದು ಸಾಮಾಜಿಕ ಜಾಲತಾಣದ ಮೂಲಕ ಮದುವೆಯ ನಿಶ್ಚಿತಾರ್ಥ ನೆರವೇರಿಸಿಕೊಂಡು ಸಮಾಜಕ್ಕೆ ಮಾದರಿಯಾಗಿದೆ. ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ನಿವಾಸಿ ಹಾಗೂ ಶಿಕ್ಷಕರಾಗಿರುವ ಪ್ರಕಾಶ್ ಪಾಟೀಲ್ ಅವರು ತಮ್ಮ ಪುತ್ರಿ ಆಶಾ ಪಾಟೀಲ್ ಅವರ ನಿಶ್ಚಿತಾರ್ಥವನ್ನು ಬಾಗಲಕೋಟೆಯ ಮಹಾಂತೇಶ್ ಜೊತೆಗೆ ನೆರವೇರಿಸಿದರು. ಅತಿ ಸರಳವಾಗಿ ಸಾಮಾಜಿಕ ಜಾಲತಾಣದ …

Read More »

ಚಿಕ್ಕೋಡಿ ಪಟ್ಟಣದಲ್ಲಿ ಬುಧುವಾರ 52 ದ್ವಿಚಕ್ರವಾಹಗಳನ್ನು ಸೀಜ್ ಮಾಡಿದ್ದಾರೆ.

ಚಿಕ್ಕೋಡಿ : ಲಾಕ್‍ಡೌನ್ ಇದ್ದರೂ ಮನೆಯಿಂದ ಹೊರಗೆ ಬರಬೇಡಿ ಎಂದು ಪೊಲೀಸರು ಮನವಿ ಮಾಡಿಕೊಂಡರೂ ಕೇಳದೇ ಅನಾವಶ್ಯಕವಾಗಿ ರಸ್ತೆಯಲ್ಲಿ ಅಡ್ಡಾಡಿ ಲಾಕ್‍ಡೌನ್ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಚಿಕ್ಕೋಡಿ ಪಟ್ಟಣದಲ್ಲಿ ಬುಧುವಾರ 52 ದ್ವಿಚಕ್ರವಾಹಗಳನ್ನು ಸೀಜ್ ಮಾಡಿದ್ದಾರೆ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೊನಾ ತೊಲಗಿಸುವ ನಿಟ್ಟಿನಲ್ಲಿ ಲಾಕ್‍ಡೌನ್ ಹೇರಲಾಗಿದೆ. ಸಾರ್ವಜನಿಕರು ಮನೆಯಲ್ಲಿಯೇ ಇರುವ ಮೂಲಕ ಲಾಕ್‍ಡೌನ್ ಪಾಲಿಸಿ ಎಂದು ಪೊಲೀಸರು ಮನವಿ ಮಾಡಿದರೂ ಕೇಳದ ಹಿನ್ನೆಲೆಯಲ್ಲಿ ಬುಧೂವಾರ ಡಿವೈಎಸ್ಪಿ ಮನೋಜ ನಾಯಿಕ …

Read More »