ಬೆಳಗಾವಿ:ಕೊರೋನಾ ಹರಡುವದಂತೆ ತಡೆಯಲು ಸಾಮಾಜಿಕ ಅಂತರ ಒಂದೇ ಪರಿಹಾರ ಆಗಿದ್ದು ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಜಾರಕಿಹೊಳಿ ಹೇಳಿದರು. ಇಂದು ನಗರದ ಗೃಹ ಕಚೇರಿಯಲ್ಲಿ ಮಾತನಾಡಿ ಪಡಿತರ ವಿತರಣೆಯಲ್ಲಿ ಜನರಿಗೆ ತೊಂದರೆಯಾಗುತ್ತಿರುವುದು ನಿಜವಾಗಿದೆ.ಬೇರೆ ಜಿಲ್ಲೆಗಳಿಂದ ವಲಸೆ ಬಂದವರಿಗೆ ರೇಷನ ನೀಡಲು ನಿರಾಕರಿಸಲಾಗುತ್ತಿದೆ. ಇದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದರು. ದುಡಿಯುವ ಕೂಲಿ ಕಾರ್ಮಿಕರಿಗೆ ಬಹಳಷ್ಟು ತೊಂದರೆಯಾಗಿದೆ. ಮತ್ತೆ ಹದಿನೈದು ದಿನ …
Read More »“ರೈತರ ಸಮಸ್ಯೆಗಳಿಗೆ ಸ್ಪಂದಿಸಿರುವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ”…….
ಬೆಳಗಾವಿ: ರೈತರ ಸಮಸ್ಯೆಗಳಿಗೆ ಸ್ಪಂದಿಸಿರುವ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಯೋಗ್ಯ ದರದಲ್ಲಿ ತರಕಾರಿಗಳನ್ನು ಖರೀದಿಸಿ ಬಡ ಜನರಿಗೆ ವಿತರಿಸಲು ಮುಂದಾಗಿದ್ದಾರೆ. ಕೊರೋನಾ ಸಂಕಷ್ಟದ ಸ್ಥತಿಯಲ್ಲಿರೈತರು ಬೆಳೆದ ತರಕಾರಿಗಳನ್ನು ಖರೀದಿಸಲು ಯಾರೂ ಮುಂದಾಗದೆ ಇರುವ ಕಾರಣ ಮತ್ತು ಬೇರೆ ರಾಜ್ಯಗಳಿಗೆ ಕಳುಹಿಸಲು ಕೂಡ ಅವಕಾಶ ಇಲ್ಲದ ಕಾರಣ ಶಾಸಕರು ಖುದ್ದಾಗಿ ರೈತರ ಸಂಕಷ್ಟಕ್ಕೆ ಸ್ಪಂದಿಸಿ ಯೋಗ್ಯ ಬೆಲೆಯಲ್ಲಿ ತರಕಾರಿ ಖರೀದಿಸಿ ಜನರಿಗೆ ವಿತರಿಸುವ ಕಾರ್ಯ ಮಾಡಿದ್ದು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. …
Read More »ಕೊರೋನಾ ತಡೆಯಲು ಕೆ,ಎಮ್,ಎಫ್,ನಿರ್ದೇಶಕರಿಂದ ಸುರಂಗ ಮಾರ್ಗ ಉದ್ಘಾಟನೆ.
ಗೋಕಾಕ: ಕೊಣ್ಣೂರ ಪಟ್ಟಣದ ವಾಲ್ಮೀಕಿ ವೃತ್ತದ ವಾರ್ಡ ನಂ 10 ರಲ್ಲಿ ದಾನಿಗಳಾದ ಆಶಾ ಟೆಕ್ಸ್ ಟೈಲ್ , ಶ್ರೀ ಐಶ್ವರ್ಯ ಸ್ಟೀಲ್ಸ ಆ್ಯಂಡ್ ಹಾರ್ಡವೆರ್ಸ ಮತ್ತು ವಿನೋದ ಕರನಿಂಗ ಇವರ ನೇತೃತ್ವದಲ್ಲಿ ಮತ್ತು ಸಾರ್ವಜನಿಕರಿಗಾಗಿ ಪದ್ಮಾವತಿ ಪೆಟ್ರೋಲಿಯಂ ಮಾಲೀಕರಾದ ಅಕ್ಷಯ ಬೆಡಕಿಹಾಳ ಇವರು ನೀಡಿದ ಸಾನಿಟೈಸರ್ ಸುರಂಗವನ್ನು ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ ಅವರು ಸುಪುತ್ರ ಹಾಗೂ ಕೆ,ಎಮ್,ಎಪ್,ನಿರ್ದೇಶಕರಾದ ಅಮರನಾಥ ಜಾರಕಿಹೋಳಿಯವರು ಉದ್ಘಾಟಿಸಿದರು ಇದೆ ಸಂದರ್ಭದಲ್ಲಿ …
Read More »ಬೆಳಗಾವಿ –ಅಬಕಾರಿ ನಾಕಾ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಲಾ 5 ಸೋಲಾರ್ ಲೈಟ್
ಬೆಳಗಾವಿ – ಗೋವಾ ಮತ್ತು ಕರ್ನಾಟಕದ ಗಡಿ ಖಾನಾಪುರ ತಾಲೂಕಿನ ಸುರಾಲ್ ಕ್ರಾಸ್ ನ ಅಬಕಾರಿ ನಾಕಾದಲ್ಲಿ ದಿನದ ಇಪ್ಪತ್ನಾಲ್ಕು ಘಂಟೆಯೂ ಅಬಕಾರಿ ಪೊಲೀಸರು ಮತ್ತು ಕಣಕುಂಬಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಾರ್ಯಕರ್ತರು ಗೋವಾದಿಂದ ಕರ್ನಾಟಕಕ್ಕೆ ಆಗಮಿಸುತ್ತಿರುವ ಎಲ್ಲ ಕಾರ್ಮಿಕ ಪಾದಚಾರಿಗಳ ಪ್ರಾಥಮಿಕ ಚಿಕಿತ್ಸೆ ನಡೆಸುತ್ತಿದ್ದಾರೆ. ಎಲ್ಲರ ಮೇಲೆ ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾತ್ರಿ ವಿದ್ಯುತ್ತಿನ ತೀವ್ರ ಅಭಾವದಿಂದಾಗಿ ದಟ್ಟ ಅರಣ್ಯದ ಈ ಭಾಗದಲ್ಲಿ ಕೆಲಸ ನಿರ್ವಹಣೆ …
Read More »ಬೆಳಗಾವಿಯಲ್ಲಿ ಒಬ್ಬನಿಂದಲೇ ಮೂವರಿಗೆ ಕೊರೊನಾ ಸೋಂಕು ಹರಡಿದ್ದು, ಇಂದು ಒಟ್ಟು ನಾಲ್ಕು ಪ್ರಕರಣಗಳು ಪತ್ತೆಯಾಗಿವೆ
ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚುತ್ತಿದ್ದು, ಇಂದು ಒಂದೇ ದಿನದಲ್ಲಿ 11 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಅವರಲ್ಲಿ ಬೆಳಗಾವಿಯಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗಿದೆ. ಬೆಳಗಾವಿಯಲ್ಲಿ ಒಬ್ಬನಿಂದಲೇ ಮೂವರಿಗೆ ಕೊರೊನಾ ಸೋಂಕು ಹರಡಿದ್ದು, ಇಂದು ಒಟ್ಟು ನಾಲ್ಕು ಪ್ರಕರಣಗಳು ಪತ್ತೆಯಾಗಿವೆ. ಬೆಳಗಾವಿ ಜಿಲ್ಲೆಯ ರಾಯಭಾಗದ ಮೂವರಿಗೆ ಮತ್ತು ಹೀರೇಬಾಗೆವಾಡಿಯ ಒಬ್ಬರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ವಿಜಯಪುರದಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿದ್ದು, ಜನತೆಯಲ್ಲಿ ಆತಂಕ ಮನೆ ಮಾಡಿದೆ. …
Read More »ನೀಲಮಾಣಿಕ ಬಂಡಿಗಣಿ ಮಠದ ರತ್ನ ಶ್ರೀ ಚಕ್ರವರ್ತಿ ದಾನೇಶ್ವರ ಸ್ವಾಮೀಜಿಗಳಿಂದ ಅನ್ನ ದಾಸೋಹ ಮಾಡಲಾಯಿತು
ಗೋಕಾಕ: ಏ12 -ದೇಶದಲ್ಲಿ ದಿನದಿನಕ್ಕೆ ಅಟ್ಟಹಾಸ ಮೇರೆಯುವ ಮಹಾಮಾರಿ ಕೋರೊನಾ ವೈರಸ್ ಹರಡುವಿಕೆಯಿಂದ ದೇಶವ್ಯಾಪ್ತಿ ಲಾಕ್ ಡೌನ್ ಆಗಿದ್ದು ಗೋಕಾಕ ನಗರ ಪ್ರದೇಶದಲ್ಲಿ ಸಿಂದೋಳ್ಳಿಮಠ ದವಾಖಾನೆಯ ಹಿಂದುಗಡೆ ಅಲೆಮಾರಿ ಜನಾಂಗದವರು ಕೂಲಿ ಕಾರ್ಮಿಕರು ಇದ್ದಾರೆ ಅವರಿಗೆಲ್ಲ ಊಟದ ಸಮಸ್ಯೆ ಇತ್ತು ಊಟವಿಲ್ಲದೆ ಇದ್ದ ಸುಮಾರು 60 ರಿಂದ್ 70 ಕುಟುಂಬಗಳು. ಸರಿ ಸುಮಾರು 300 ಮೇಲ್ಪಟ್ಟು ಜನರು ವಾಸವಿದ್ದರು ಅವರಿಗೆ ಬಹಳ ಊಟದ ಕೊರತೆ ಇತ್ತು ಹಂತಹ ಸಂದರ್ಭದಲ್ಲಿ ಅವರಿಗೆ …
Read More »ಅಗ್ನಿಶಾಮಕ ದಳ ಸಿಬ್ಬಂದಿಗೆ ಲಕ್ಷ್ಮಿ ತಾಯಿ ಫೌಂಡೇಶನ್ ಸನ್ಮಾನ,ಮಾಸ್ಕ್, ಸೆನಿಟೈಸರ್ ವಿತರಣೆ
ಬೆಳಗಾವಿ – ಮಾರಕ ರೋಗ ಕೊರೋನಾ ವೈರಸ್ ತೀವ್ರವಾಗಿ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯ ಲಕ್ಷ್ಮಿ ತಾಯಿ ಫೌಂಡೇಶನ್ ನಿರಂತರವಾಗಿ ಹೋರಾಟ ನಡೆಸುತ್ತಿದೆ. ಜನಜಾಗ್ರತಿ ಅಭಿಯಾನ, ದಿನಸಿ ಸಾಮಗ್ರಿಗಳ ವಿತರಣೆ, ಔಷಧಗಳ ಸಿಂಪರಣೆ, ಮಾಸ್ಕ್, ಸೆನಿಟೈಸರ್ ವಿತರಣೆ ಮೊದಲಾದ ಚಟುವಟಿಕೆಗಳನ್ನು ನಡೆಸುತ್ತಿದೆ. ಇದೀಗ ಇದರ ಜೊತೆಗೆ, ಕೊರೋನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ಅಗ್ನಿ ಶಾಮಕದಳದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಧಿಕಾರಿಗಳು ತಮ್ಮ ಪ್ರಾಣದ …
Read More »ಬಚ್ಚಿಟ್ಟ ಯುವಕ ಹಾಗೂ ಆತನಿಗೆ ಸಹಕರಿಸಿದ 6 ಜನರ ವಿರುದ್ಧ ಹಿರೇಬಾಗೆವಾಡಿ ಠಾಣೆಯಲ್ಲಿ ಕಾನೂನು ಕ್ರಮ
ಬೆಳಗಾವಿ – ದೆಹಲಿ ಮರ್ಕಜ ಜಮಾತನಲ್ಲಿ ಭಾಗವಹಿಸಿ, ವೈದ್ಯಕೀಯ ತಪಾಸಣೆಗೂ ಹೋಗದೇ ನೈಜ್ಯತೆಯನ್ನು ಬಚ್ಚಿಟ್ಟ ಯುವಕ ಹಾಗೂ ಆತನಿಗೆ ಸಹಕರಿಸಿದ 6 ಜನರ ವಿರುದ್ಧ ಹಿರೇಬಾಗೆವಾಡಿ ಠಾಣೆಯಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ. ಮಾರ್ಚ್ -೨೦೨೦ ರಲ್ಲಿ ದೆಹಲಿಯ ನಿಜಾಮುದ್ದೀನ್ ಮರ್ಕಟ್ ಮಸೀದಿಯಲ್ಲಿ ಜರುಗಿದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಹಿರೇಬಾಗೇವಾಡಿ ಗ್ರಾಮದ ಯುವಕನೊಬ್ಬ ತಾನು ವೈದ್ಯಕೀಯ ತಪಾಸಣೆಗೂ ಒಳಗಾಗದೇ, ದೆಹಲಿಯ ಜಮಾತನಲ್ಲಿ ಭಾಗವಹಿಸಿದ ಸತ್ಯ ಸಂಗತಿಯನ್ನು ಟಾಸ್ಕ್ ಪೋರ್ಸನವರಗೂ ಬಚ್ಚಿಟ್ಟಿದ್ದ. ಇವನೊಂದಿಗೆ …
Read More »ದ್ರಾಕ್ಷಿ ಹಣ್ಣು ವಿತರಿಸಿ ಕೊರೋನಾ ಜಾಗೃತಿ ಮೂಡಿಸಿದ ಕರುನಾಡು ಸೈನಿಕರು
ಮೂಡಲಗಿ: ಮಹಾ ಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಟ್ಟಣದ ಸರಕಾರಿ ಆಸ್ಪತ್ರೆಯ ಸೇವಾ ಸಿಬ್ಬಂದಿಗಳಿಗೆ, ಪೋಲಿಸ್ ಠಾಣೆಯ ಸಿಬ್ಬಂದಿಗಳಿಗೆ ಮತ್ತು ಶಿವಾಪೂರ, ಹಳ್ಳೂರ ಗ್ರಾಮದ ಬಡ ಕುಟುಂಬ ಮತ್ತು ಜನತಾ ಪ್ಲಾಟದ ಗುಡಿಸಲು ನಿವಾಸಿಗಳಿಗೆ ಇಲ್ಲಿಯ ಕರುನಾಡು ಸೈನಿಕ ತರಬೇತಿ ಕೇಂದ್ರದ ಸಂಚಾಲಕ ಶಂಕರ ತುಕ್ಕನ್ನವರ ಮತ್ತು ಅದ್ಯಕ್ಷರಾದ ಸವಿತಾ ತುಕ್ಕನ್ನವರ ಅವರು ಮನೆ ಮನೆಗೆ ತೆರಳಿ 4ಕ್ವಿಂಟಲ್ ದ್ರಾಕ್ಷಿ ಹಣ್ಣು ಉಚಿತವಾಗಿ ವಿತರಿಸಿ ಮಾನವೀಯತೆ …
Read More »ಕೋರೊನಾ ವಿರುದ್ಧ ಹೋರಾಟಕ್ಕೆ ಜೀವದ ಹಂಗು ತೊರೆದ ಪೊಲೀಸರು, ಪತ್ರಕರ್ತರಿಗೂ ವಿಮೆ ಮಾಡಿಸಿ: ಸತೀಶ ಜಾರಕಿಹೊಳಿ
ಗೋಕಾಕ: ಕೇಂದ್ರ ಸರ್ಕಾರ ವೈದ್ಯಕೀಯ ಕ್ಷೇತ್ರ,ಪ್ಯಾರಾಮೆಡಿಕಲ್ ಆಶಾ ಕಾರ್ಯಕರ್ತೆಯರಿಗೆ ಐವತ್ತು ಲಕ್ಷ ರೂ ಗಳ ಜೀವ ವಿಮೆ ಮಾಡಿಸಿದಂತೆ,ಪತ್ರಕರ್ತರಿಗೆ, ಪೋಲೀಸರಿಗೆ ವಿಮೆ ಮಾಡಿಸಬೇಕೆಂದು ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದಾರೆ. ನಗರದ ಹಿಲ್ ಗಾರ್ಡನ್ ನಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು ಕೊರೋನಾ ಸೊಂಕು ಹರಡದಂತೆ ಪತ್ರಕರ್ತರು ಸಾಮಾಜಿಕವಾಗಿ ಜನಜಾಗೃತಿ ಮೂಡಿಸುತ್ತಿದ್ದು ಪೋಲೀಸರು ಜೀವದ ಹಂಗು ತೊರೆದು,ಅಹೋರಾತ್ರಿ ಶ್ರಮಿಸುತ್ತಿದ್ದು ಈ ಎರಡೂ ಕ್ಷೇತ್ರಗಳನ್ನು ವಿಮೆಗೆ ಒಳಪಡಿಸಬೇಕೆಂದು ಸತೀಶ್ ಜಾರಕಿಹೊಳಿ ಕೇಂದ್ರ …
Read More »