Breaking News

ಬೆಳಗಾವಿ

ನಂದಗಡದಲ್ಲಿ ಬಸ್ಸಿಗಾಗಿ ನರಕ ಯಾತನೆ… ವಿದ್ಯಾರ್ಥಿಗಳ-ಸಾರ್ವಜನಿಕರ ಗೋಳು ಕೇಳುವವರ್ಯಾರು?…

ಖಾನಾಪೂರ ತಾಲೂಕಿನ ನಂದಗಡದಲ್ಲಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಬಸ್ಸಿಗಾಗಿ ನರಕ ಯಾತನೆಯನ್ನು ಅನುಭವಿಸುತ್ತಿದ್ದು, ಇವರ ಕಷ್ಟ ಕೇಳುವವರ್ಯಾರು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಸಂಸ್ಥೆಯ ದುರ್ಲಕ್ಷ್ಯಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಖಾನಾಪೂರ ತಾಲೂಕಿನ ನಂದಗಡ ಗ್ರಾಮದಲ್ಲಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಪ್ರತಿದಿನವೂ ಬಸ್ ಸಮಸ್ಯೆಯಿಂದ ನರಕಯಾತನೆ ಅನುಭವಿಸುತ್ತಿರುವುದು ಈಗ ಸಾಮಾನ್ಯ ದೃಶ್ಯವಾಗಿದೆ. ತಮ್ಮ ವಿದ್ಯಾಭ್ಯಾಸಕ್ಕಾಗಿ ಖಾನಾಪೂರ, ಬೆಳಗಾವಿ ಹಾಗೂ ಹಳಿಯಾಳದತ್ತ ಪ್ರಯಾಣಿಸುವ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರೊಂದಿಗೆ ಅಪಾಯದ ಹಾದಿಯಲ್ಲಿ ಪ್ರಯಾಣಿಸುವಂತಾಗಿದೆ. …

Read More »

ಗೋಕಾಕ- ಮನ್ನಿಕೇರಿ ಗ್ರಾಮದ ಸಾರ್ವಜನಿಕರಿಗೆ ಅನುಕೂಲವಾಗಲು ಕೆರೆಗೆ ನೀರು ತುಂಬಿಸುವ ಯೋಜನೆ

ಗೋಕಾಕ- ಮನ್ನಿಕೇರಿ ಗ್ರಾಮದ ಸಾರ್ವಜನಿಕರಿಗೆ ಅನುಕೂಲವಾಗಲು ಕೆರೆಗೆ ನೀರು ತುಂಬಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಮುಂದಿನ‌ ದಿನಗಳಲ್ಲಿ ಈ ಯೋಜನೆಯಿಂದ ರೈತರಿಗೆ ಎಲ್ಲ ರೀತಿಯಿಂದ ಅನುಕೂಲವಾಗಲಿದೆ ಎಂದು ಅರಭಾವಿ ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಈಚೆಗೆ ಮನ್ನಿಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮೀದೇವಿ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದರು. ಈಗಾಗಲೇ ಈ ಭಾಗಕ್ಕೆ ಕಲ್ಮಡ್ಡಿ ಏತ ನೀರಾವರಿ ಯೋಜನೆಯನ್ನು ಜಾರಿ ಮಾಡಲಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರೈತರಿಗೆ ಅನುಕೂಲ …

Read More »

ತುಂಬಿದ ಕೃಷ್ಣಾ ನದಿ: ಕುಡಚಿ ಉಗಾರ ಸೇತುವೆ ಮುಳುಗಡೆ, ಸಂಚಾರ ಬಂದ್

ಚಿಕ್ಕೋಡಿ (ಬೆಳಗಾವಿ): ಮಹಾರಾಷ್ಟ್ರ ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕೊಯ್ನಾ ಜಲಾಶಯದಿಂದ ನೀರು ಬಿಡುಗಡೆ ಮಾಡಿದ್ದರಿಂದ ಕೃಷ್ಣಾ ನದಿಯಲ್ಲಿ ಒಳಹರಿವು ಹೆಚ್ಚಳ ಆಗಿದೆ. ಪರಿಣಾಮ ಮಹಾರಾಷ್ಟ್ರ ಮತ್ತು ಕರ್ನಾಟಕ್ಕೆ ಸಂಪರ್ಕ ಕಲ್ಪಿಸುವ ಕುಡಚಿ ಉಗಾರ ಸೇತುವೆ ಮುಳುಗಡೆಯಾಗಿದ್ದು, ಗಡಿಭಾಗದ ಪ್ರಮುಖ ಸಂಪರ್ಕ ಸೇತುವೆ ಬಂದ್ ಆಗಿದೆ. ಕುಡಚಿ ಉಗಾರ ಸೇತುವೆ ಮುಳುಗಡೆ: ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಸಮೀಪದಲ್ಲಿರುವ ಕೃಷ್ಣಾ ನದಿಗೆ ಅಡ್ಡಲಾಗಿರುವ ಕುಡಚಿ – ಉಗಾರ ಸೇತುವೆ …

Read More »

ಆರ್ಡಿಪಿಆರ್ ಇಲಾಖೆಯಿಂದ ರಸ್ತೆ ಸುಧಾರಣಾ ಕಾಮಗಾರಿಗಳಿಗಾಗಿ ೧೦ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು

ಗೋಕಾಕ- ಆರ್ಡಿಪಿಆರ್ ಇಲಾಖೆಯಿಂದ ರಸ್ತೆ ಸುಧಾರಣಾ ಕಾಮಗಾರಿಗಳಿಗಾಗಿ ೧೦ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ಮಂಗಳವಾರದಂದು ೧.೨೦ ಕೋಟಿ ರೂಪಾಯಿ ವೆಚ್ಚದ ತಾಲ್ಲೂಕಿನ ಕೌಜಲಗಿ- ಹೊನಕುಪ್ಪಿ ರಸ್ತೆ ಸುಧಾರಣೆಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಯಾದವಾಡ ಮುಖ್ಯ ರಸ್ತೆಯಿಂದ ಕುಲಗೋಡ ಹಣಮಂತ ದೇವಸ್ಥಾನ ಹೊಸಟ್ಟಿ ಕೂಡು ರಸ್ತೆಗೆ ೬೦ ಲಕ್ಷ ರೂಪಾಯಿ, ಮುನ್ಯಾಳ ಲಕ್ಷ್ಮೀದೇವಿ ಗುಡಿಯಿಂದ ರಂಗಾಪೂರ …

Read More »

ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಬಿದ್ದ ಮರ.. ಚಾಲಕನಿಗೆ ಗಾಯ, ತಪ್ಪಿದ ಅನಾಹುತ

ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಬಿದ್ದ ಮರ.. ಚಾಲಕನಿಗೆ ಗಾಯ, ತಪ್ಪಿದ ಅನಾಹುತ ಚಲಿಸುತ್ತಿದ್ದ ಟ್ರ್ಯಾಕ್ಟರ್ ಮೇಲೆ ಮರ ಬಿದ್ದ ಪರಿಣಾಮ ಟ್ರ್ಯಾಕ್ಟರ್ ಚಾಲಕ ಗಾಯಗೊಂಡ ಘಟನೆ ಧಾರವಾಡದ ಎಸ್‌ಪಿ ಕಚೇರಿ ಬಳಿ ಸಂಭವಿಸಿದ್ದು, ಅನಾಹುತವೊಂದು ತಪ್ಪಿದೆ. ಎಸ್‌ಪಿ ಕಚೇರಿಯ ಮುಂಭಾಗದ ರಸ್ತೆ ಮೂಲಕ ಹಾದು ಹೊರಟಿದ್ದ ಟ್ರ್ಯಾಕ್ಟರ್ ಮೇಲೆ ರಸ್ತೆ ಬದಿ ಇದ್ದ ಮರ ಗಾಳಿಗೆ ಏಕಾಏಕಿ ಬಿದ್ದಿದೆ. ಇದರಿಂದ ಟ್ರ್ಯಾಕ್ಟರ್ ಚಾಲಕನಿಗೆ ಗಾಯವಾಗಿತ್ತು. ಆತನನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. …

Read More »

ಹಲಕರ್ಣಿ ಗ್ರಾಮದಲ್ಲಿ ಪಿಡಿಒ ವಿರುದ್ಧ ಆಕ್ರೋಶ

ಹಲಕರ್ಣಿ ಗ್ರಾಮದಲ್ಲಿ ಪಿಡಿಒ ವಿರುದ್ಧ ಆಕ್ರೋಶ ಮೂಲಭೂತ ಸೌಲಭ್ಯಗಳಿಗೆ ಸ್ಪಂದಿಸಿದ ಅಧಿಕಾರಿಯ ವರ್ಗಾವಣೆ!!! ಖಾನಾಪೂರ ತಾಲೂಕಿನ ಹಲಕರ್ಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅವ್ಯವಸ್ಥಿತ ಆಡಳಿತ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಡಿಒ ರೇಷ್ಮಾ ಪಾನಿವಾಲೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗ್ರಾಮಸ್ಥರು ಇಂದು ಬೃಹತ್ ಮೆರವಣಿಗೆ ಮೂಲಕ ಗ್ರಾಮ ಪಂಚಾಯಿತಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿದರು. “ಗ್ರಾಮದ ಚರಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿಲ್ಲ. ಎಲ್ಲೆಡೆ ಕೆಸರು ನೀರು ನಿಂತಿದೆ. …

Read More »

ನಂದಗಡದ ಸರ್ಕಾರಿ ಶಾಲೆಗಳ ದುರಾವಸ್ಥೆ !!! ಅಸ್ವಚ್ಛತೆಯ ಆಗರವಾದ ಶಾಲೆಗಳು…

ಖಾನಾಪೂರ ತಾಲೂಕಿನ ಐತಿಹಾಸಿಕ ನಂದಗಡ ಗ್ರಾಮದಲ್ಲಿರುವ ಜೆ ಸಿಎಸ್ ಆವರಣದಲ್ಲಿ ಉರ್ದು, ಕನ್ನಡ ಮತ್ತು ಮರಾಠಿ ಭಾಷೆಗಳ ಸರ್ಕಾರಿ ಶಾಲೆಗಳಿಗೆ ಅನಾಥಪ್ರಜ್ಞೆ ಕಾಡುತ್ತಿದೆ. ಖಾನಾಪೂರ ತಾಲೂಕಿನ ಐತಿಹಾಸಿಕ ನಂದಗಡ ಗ್ರಾಮದಲ್ಲಿರುವ ಜೆ ಸಿಎಸ್ ಆವರಣದಲ್ಲಿ ಉರ್ದು, ಕನ್ನಡ ಮತ್ತು ಮರಾಠಿ ಭಾಷೆಗಳ ಸರ್ಕಾರಿ ಶಾಲೆಗಳಿವೆ. ಈ ಶಾಲೆಗಳ ಪ್ರಸ್ತುತ ಸ್ಥಿತಿಯನ್ನು ನೋಡಿದರೆ, ಯಾವುದೇ ಜವಾಬ್ದಾರಿ ಯುತ ವ್ಯವಸ್ಥೆ ಇಲ್ಲದಂತಾಗಿದೆ. ಶಾಲಾ ಆವರಣ ಅಸ್ವಚ್ಛತೆಯಿಂದ ಕೂಡಿದ್ದು , ಗಿಡ ಗಂಟೆಗಳು ಗಗನಕ್ಕೇರಿದಂತೆ …

Read More »

ಡಿಸಿಸಿ ಬ್ಯಾಂಕ್ ನಲ್ಲಿ ಜಾರಕಿಹೊಳಿ ಕುಟುಂಬದ 7 ಸದಸ್ಯರಿದ್ದರು ನಮಗೆ ಅನ್ಯಾಯ ಆಗಿದೆ ಡಿಸಿಸಿ ಬ್ಯಾಂಕ್ ಚುನಾವಣೆ ಹತ್ತಿರ ಬರ್ತಿದ್ದಂತೆ ಆಕ್ಟಿವ್ ಆದ ರಮೇಶ ಜಾರಕಿಹೊಳಿ

ಡಿಸಿಸಿ ಬ್ಯಾಂಕ್ ನಲ್ಲಿ ಜಾರಕಿಹೊಳಿ ಕುಟುಂಬದ 7 ಸದಸ್ಯರಿದ್ದರು ನಮಗೆ ಅನ್ಯಾಯ ಆಗಿದೆ ಡಿಸಿಸಿ ಬ್ಯಾಂಕ್ ಚುನಾವಣೆ ಹತ್ತಿರ ಬರ್ತಿದ್ದಂತೆ ಆಕ್ಟಿವ್ ಆದ ರಮೇಶ ಜಾರಕಿಹೊಳಿ ಗೋಕಾಕನಲ್ಲಿ ಪಿಕೆಪಿಎಸ್ ಅಧ್ಯಕ್ಷ ಸದಸ್ಯರ ಸಭೆ ನಡೆಸಿದ ರಮೇಶ ಜಾರಕಿಹೊಳಿ ಸಭೆಯಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಭಾಷಣ ಡಿಸಿಸಿ ಬ್ಯಾಂಕ್ ನಲ್ಲಿ ಜಾರಕಿಹೊಳಿ ಕುಟುಂಬದ 7 ಸದಸ್ಯರಿದ್ದರು ನಮಗೆ ಅನ್ಯಾಯ ಆಗಿದೆ 24 ಸೊಸೈಟಿ ಅರಭಾವಿ ಭಾಗದಲ್ಲಿ ಬರುತ್ತೆ 36ರಿಂದ 38 ಸೊಸೈಟಿಗಳು …

Read More »

ಶಿರೂರು ಗ್ರಾಮದಲ್ಲಿ ಹುಕ್ಕೇರಿ ವಿದ್ಯುತ್ ಸಂಘದ ವತಿಯಿಂದ ರೈತರಿಗೆ ಅನುಕೂಲವಾಗುವಂತೆ ಅಳವಡಿಸಲಾದ ವಿದ್ಯುತ್ ಟಿಸಿಯನ್ನು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಿದರು.

ಶಿರೂರು ಗ್ರಾಮದಲ್ಲಿ ಹುಕ್ಕೇರಿ ವಿದ್ಯುತ್ ಸಂಘದ ವತಿಯಿಂದ ರೈತರಿಗೆ ಅನುಕೂಲವಾಗುವಂತೆ ಅಳವಡಿಸಲಾದ ವಿದ್ಯುತ್ ಟಿಸಿಯನ್ನು ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕರಾದ ಪಾಂಡು ಮನ್ನಿಕೇರಿ, ಹಿರಿಯ ರಾಜಕೀಯ ಮುಖಂಡರಾದ ಶಂಕರ ಗಿಡ್ಡನ್ನವರ, ಕಿರಣ ರಜಪೂತ ಹಾಗೂ ವಿದ್ಯುತ್ ಸಂಘದ ಅಧ್ಯಕ್ಷರು, ಸದಸ್ಯರು ಹಾಗೂ ಊರಿನ ಮುಖಂಡರು ಉಪಸ್ಥಿತರಿದ್ದರು

Read More »

ಶೀಘ್ರದಲ್ಲಿ ಯಡೂರ ಫ್ರೌಢ ಶಾಲೆ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ:ಶಾಸಕ ಗಣೇಶ ಹುಕ್ಕೇರಿ

ಚಿಕ್ಕೋಡಿ: ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶೀಘ್ರದಲ್ಲಿ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಸರ್ಕಾರಿ ಪ್ರೌಢ ಹಾಗೂ ಪ್ರಾಥಮಿಕ ಶಾಲೆ ಆವರಣದಲ್ಲಿ ಶುದ್ಧ ನೀರಿನ ಘಟಕ ಹಾಗೂ ಆಟದ ಮೈದಾನ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ಗಣೇಶ ಹುಕ್ಕೇರಿ ಹೇಳಿದರು. ಅವರು ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ಗಣೇಶ ಮಂದಿರದ ಸಭಾಭವನದಲ್ಲಿ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ಸುರಕ್ಷಾ ಸಪ್ತಾಹ ಮಕ್ಕಳ ಸುರಕ್ಷಾ ಕ್ರಮಗಳು ಕಾರ್ಯಕ್ರಮದ ಅಧ್ಯಕ್ಷತೆಯನ್ನು …

Read More »