Breaking News

ಬೆಳಗಾವಿ

, 8 ಬಾರಿ ಶಾಸಕನಾಗಿದ್ದೇನೆ. ಸಚಿವ ಸ್ಥಾನಕ್ಕಾಗಿ ಯಾರ ಹಿಂದೆಯೂ ಹೋಗುವುದಿಲ್ಲ.:ಉಮೇಶ ಕತ್ತಿ

ಬೆಳಗಾವಿ : ನಾನೊಬ್ಬ ನುರಿತ ರಾಜಕಾರಣಿಯಾಗಿದ್ದು, 8 ಬಾರಿ ಶಾಸಕನಾಗಿದ್ದೇನೆ. ಸಚಿವ ಸ್ಥಾನಕ್ಕಾಗಿ ಯಾರ ಹಿಂದೆಯೂ ಹೋಗುವುದಿಲ್ಲ. ಸಚಿವ ಸ್ಥಾನ ಸಿಕ್ಕರೆ ಕೆಲಸ ಮಾಡಿ ತೋರಿಸುತ್ತೇನೆ ಎಂದು ಶಾಸಕ  ಉಮೇಶ ಕತ್ತಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿ, ಅಧಿಕಾರ ಬೇಕು ಎಂಬ ಮನೋಭಾವ ನಮಗಿಲ್ಲ. ಮಂತ್ರಿಯಾದರೆ ಕೆಲಸ ಮಾಡುತ್ತೇನೆ. ಸಿಗದಿದ್ದರೆ ಶಾಸಕನಾಗಿಯೇ ಮುಂದುವರೆಯುತ್ತೇನೆ ಅಂತ ಹೇಳಿದ್ದಾರೆ. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮನಸು ಮಾಡಿದರೆ ಸಚಿವ ಸ್ಥಾನ ದೊರೆಯಲಿದೆ. ಅವರು …

Read More »

ಶಾಸಕ ಉಮೇಶ್ ಕತ್ತಿ ಡೈಮಂಡ್ ಇದ್ದಂತೆ.:ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ರಮೇಶ್ ಕತ್ತಿ

ಬೆಳಗಾವಿ: ಶಾಸಕ ಉಮೇಶ್ ಕತ್ತಿ ಡೈಮಂಡ್ ಇದ್ದಂತೆ. ಈ ಬಾರಿ ಸಚಿವ ಸಂಪುಟ ವಿಸ್ತರಣೆ ವೇಳೆ ಸಹೋದರ ಉಮೇಶ್ ಕತ್ತಿಗೆ ಮಂತ್ರಿ ಸ್ಥಾನ ನೀಡುವ ಆತ್ಮವಿಶ್ವಾಸ ನನಗಿದೆ ಎಂದು ಬೆಳಗಾವಿ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷ ರಮೇಶ್ ಕತ್ತಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಕತ್ತಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು 17 ಜನ ಶಾಸಕರು ಹೊರಗಿನಿಂದ ಬಂದವರು ಕಾರಣ. ಹಾಗಾಗಿ ಅವರೆಲ್ಲರಿಗೂ ಸ್ಥಾನಮಾನ ನೀಡುವ ನಿಟ್ಟಿನಲ್ಲಿ ಮೂಲ ಬಿಜೆಪಿಗರು …

Read More »

ಆದಷ್ಟು ಬೇಗ ಸಾರಿಗೆ ಇಲಾಖೆ ಸಿಬ್ಬಂದಿಯ ಸಂಬಳ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು:ಲಕ್ಷ್ಮಣ ಸವದಿ

ಬೆಳಗಾವಿ : ಆದಷ್ಟು ಬೇಗ ಸಾರಿಗೆ ಇಲಾಖೆ ಸಿಬ್ಬಂದಿಯ ಸಂಬಳ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಅಂತಾ ಡಿಸಿಎಂ, ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ. ನಗರದಲ್ಲಿ ಶನಿವಾರ  ಕೆೆಎಸ್ ಆರ್ ಟಿಸಿ, ಬಿಎಂಟಿಸಿ ಸಿಬ್ಬಂದಿ ವೇತನ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಕೊರೊನಾ ಸೋಂಕು, ಲಾಕ್ ಡೌನ್ ನಿಂದ ಸಾರಿಗೆ ಇಲಾಖೆ ಸಿಬ್ಬಂದಿ ಸಂಬಳ ನೀಡುವುದು ವಿಳಂಬವಾಗಿದೆ. ಆದರೆ ಆದಷ್ಟು ಬೇಗ ಸಾರಿಗೆ ಇಲಾಖೆ ಸಿಬ್ಬಂದಿಗಳಿಗೆ ಸಂಬಳ ಪಾವತಿಗೆ ಕ್ರಮ …

Read More »

ರಮೇಶ್ ಕತ್ತಿಗೆ ದೀಪಾವಳಿ ಉಡುಗೂರೆ : ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಮರು ಆಯ್ಕೆ

ಉಪಾಧ್ಯಕ್ಷರಾಗಿ ಸುಭಾಷ್ ಢವಳೇಶ್ವರ ಬೆಳಗಾವಿ: ಭಾರೀ ಕುತೂಹಲ ಮೂಡಿಸಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಗದ್ದುಗೆಯ ಹಗ್ಗ ಜಗ್ಗಾಟಕ್ಕೆ ಶನಿವಾರ ತೆರೆ ಬಿದ್ದಿದ್ದು, ಅಧ್ಯಕ್ಷ,ಉಪಾಧ್ಯಕ್ಷ ಹೆಸರುಗಳನ್ನು ಘೋಷಣೆ ಮಾಡಲಾಗಿದೆ.       ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಬೆಳಿಗ್ಗೆ ಘಟಾನುಘಟಿ ಬಿಜೆಪಿ ನಾಯಕರು ನಡೆಸಿದ ಸಭೆಯಲ್ಲಿ ಅವಿರೋಧ ಆಯ್ಕೆ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗಿದೆ. ಇದರಿಂದ ಅಧ್ಯಕ್ಷ ಸ್ಥಾನಕ್ಕೆ ರಮೇಶ ಕತ್ತಿಯಾಗಿದೆ ಮುಂದುವರೆಯಲಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಸುಭಾಷ್ …

Read More »

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಕಿಂಗ್ ಮೇಕರ್ ಆದ್ರಾ ಬಾಲಚಂದ್ರ ಜಾರಕಿಹೊಳಿ….?ಅಧ್ಯಕ್ಷ ಉಪಾಧ್ಯಕ್ಷ ಯಾರಿಗೆ ಗೊತ್ತಾ…?

ಬೆಳಗಾವಿ- ಬೆಳಗಾವಿಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಗದ್ದುಗೆ ಏರಲು ಕಳೆದ ಒಂದು ತಿಂಗಳಿನಿಂದ ನಡೆದಿರುವ ಗುದ್ದಾಟಕ್ಕೆ ಇಂದು ಹನ್ನೊಂದು ಗಂಟೆಗೆ ತೆರೆ ಬೀಳಲಿದೆ ನಿನ್ನೆ ರಾತ್ರಿ ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಎರಡು ಗಂಟೆಗಳ ಕಾಲ ಬಿಜೆಪಿ ನಾಯಕರು ಮೀಟೀಂಗ್ ಮಾಡಿ,ಕರಾರು ಒಪ್ಪಂದಗಳ ಮೂಲಕ ಒಮ್ಮತಕ್ಕೆ ಬಂದಿದ್ದು ಇಂದು 10-30 ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಬೆಳಗಾವಿ ಡಿಸಿಸಿ ಬ್ಯಾಂಕಿನ ಅದ್ಯಕ್ಚ ಉಪಾದ್ಯಕ್ಷರ ಹೆಸರುಗಳನ್ನು ಪ್ರಕಟಿಸಲು ನಿರ್ಧರಿಸಿದ್ದಾರೆ. …

Read More »

ಬೆಳಗಾವಿ ದೇಸೂರು ಬಳಿ ಓವರ್‍ಟೆಕ್ ಮಾಡುವ ವೇಳೆ ಲಾರಿಗೆ ಬೈಕ್ ಡಿಕ್ಕಿ ಅಕ್ಕ, ತಮ್ಮ ಸ್ಥಳದಲ್ಲೇ ಸಾವ

ಬೆಳಗಾವಿ: ಲಾರಿ ಡಿಕ್ಕಿಯಾಕಿ ಬೈಕಿನಲ್ಲಿ ತೆರಳುತ್ತಿದ್ದ ಅಕ್ಕ, ತಮ್ಮ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಳಗಾವಿ ತಾಲೂಕಿನ ದೇಸೂರು ಬಳಿ ನಡೆದಿದೆ. ರೇಣುಕಾ ತೇಗೂರ್(25), ಕಲ್ಮೇಶ್ ಕೊಳವಿ(19) ಮೃತ ದುರ್ದೈವಿಗಳು. ದೇಸೂರ್‍ನಿಂದ ಕಮಲ್ ನಗರದತ್ತ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಓವರ್‍ಟೆಕ್ ಮಾಡುವ ವೇಳೆ ಲಾರಿಗೆ ಬೈಕ್ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಲಾರಿ ಚಕ್ರದಡಿ ಸಿಲುಕಿ ಅಕ್ಕ-ತಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮಟ್ಟಿತ್ತು. ಬೆಳಗಾವಿ ಗ್ರಾಮೀಣ …

Read More »

ರಮೇಶ್ ಕತ್ತಿ ನನ್ನ ಬಾಲ್ಯದ ಸ್ನೇಹಿತ ಅವರೇ ಅದ್ಯಕ್ಷ ರಾಗಬೇಕು:ರಮೇಶ್ ಜಾರಕಿಹೊಳಿ

ಬೆಳಗಾವಿ-ಡಿಸಿಸಿ ಬ್ಯಾಂಕ್ ಅದ್ಯಕ್ಷ ಉಪಾದ್ಯಕ್ಷರ ಚುನಾವಣೆ ನಾಳೆ ನಡೆಯಲಿದ್ದು ಈಗ ಬೆಳಗಾವಿಯ ಸರ್ಕ್ಯುಟ್ ಹೌಸ್ ನಲ್ಲಿ ಮಹತ್ವದ ಸಭೆ ನಡೆಯುತ್ತಿದೆ. ಕೆಲವು ನಿರ್ದೇಶಕರು ರಮೇಶ್ ಕತ್ತಿ ಅವರ ಪುನರಾಯ್ಕೆಗೆ ವಿರೋಧ ವ್ಯಕ್ತಪಡಿಸುತ್ತಿರುವ ಹಿನ್ನಲೆಯಲ್ಲಿ ಬೆಳಗಾವಿ ಜಿಲ್ಲೆಯ ಎಲ್ಲ ಹಿರಿಯ ನಾಯಕರು, ಬೆಳಗಾವಿಯಲ್ಲಿ ಸಭೆ ಸೇರಿದ್ದಾರೆ ಸಭೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ ಜಾರಕಿಹೊಳಿ‌, ಮಾಜಿ ಸಚಿವ ಉಮೇಶ ಕತ್ತಿ, ಬಾಲಚಂದ್ರ ಜಾರಕಿಹೊಳಿ‌, ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ, ಸಂಸದ …

Read More »

ಬಿಜೆಪಿಯಲ್ಲಿ ಯಾರೂ ಶಾಸಕರಾಗಬೇಕು. ಲೋಕಸಭಾ ಸದಸ್ಯರಾಗಬೇಕು ಪ್ರಕಾಶ ಹುಕ್ಕೇರಿ ಹೇಳಿಕೆಗೆ ವಿಧಾನ ಪರಿಷತ್ ಮುಖ್ಯಸಚೇತಕ  ಮಹಾಂತೇಶ ಕವಟಗಿಮಠ ತಿರುಗೇಟು

ಚಿಕ್ಕೋಡಿ : ಸುರೇಶ ಅಂಗಡಿ ಕುಟುಂಬದವರಿಗೆ ಬೆಳಗಾವಿ ಲೋಕಸಭಾ ಟಿಕೆಟ್ ನೀಡಿದ್ರೆ , ನಾನು ಗೆಲ್ಲಿಸಲು ಪ್ರಯತ್ನಿಸುತ್ತೇನೆ ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹೇಳಿಕೆಗೆ ವಿಧಾನ ಪರಿಷತ್ ಮುಖ್ಯಸಚೇತಕ  ಮಹಾಂತೇಶ ಕವಟಗಿಮಠ ತಿರುಗೇಟು ನೀಡಿದ್ದಾರೆ. ತಾಲ್ಲೂಕಿನ ನವಲಿಹಾಳ ಗ್ರಾಮದಲ್ಲಿ ಶುಕ್ರವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಮಾಜಿ ಸಂಸದ ಪ್ರಕಾಶ ಹುಕ್ಕೇರಿ ಹಿರಿಯರು. ಅವರು ತಮ್ಮ ಪಕ್ಷದಲ್ಲಿ ಯಾರು  ಅಭ್ಯರ್ಥಿಯಾಗಬೇಕು. ಯಾರನ್ನು ಲೋಕಸಭಾ ಸದಸ್ಯರಾಗಬೇಕೆಂದು ಹೇಳಿದ್ದರೇ ಅದನ್ನು ಸ್ವಾಗತಿಸುತ್ತಿದ್ದೇ. ಆದರೆ ಬಿಜೆಪಿಯಲ್ಲಿ …

Read More »

1 ಲಕ್ಷ ಲೀಟರ್ ನೀರಿನ ಸಂಗ್ರಹಣೆಯ ಸಾಮರ್ಥ್ಯವಿರುವ ಜಲಸಂಗ್ರಹಾಲಯ ಉದ್ಘಾಟನೆ: ಶಶಿಕಲಾ ಜೊಲ್ಲೆ

ಚಿಕ್ಕೋಡಿ: ಗ್ರಾಮದ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಒದಗಿಸುವುದು ನಮ್ಮ ಸರ್ಕಾರದ ಆದ್ಯತೆಯಾಗಿದೆ. ಕ್ಷೇತ್ರದ ಪ್ರಜೆಗಳ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಲಭ್ಯವಾಗಬೇಕು ಎಂಬುದು ನನ್ನ ಗುರಿಯಾಗಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ನಿಪ್ಪಾಣಿ ಮತಕ್ಷೇತ್ರದ ಸುಳಗಾಂವ, ಆಡಿ, ಮತ್ತಿವಾಡೆ ಗ್ರಾಮದಲ್ಲಿ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯಿಂದ ಮಂಜೂರಾದ ಸುಮಾರು 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ, 1 ಲಕ್ಷ ಲೀಟರ್ …

Read More »

ಅಕ್ಷರ ಮಾಂತ್ರಿಕ”ನ ಅಗಲಿಕೆ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸಂತಾಪ

ಗೋಕಾಕ : ಖ್ಯಾತ ಪತ್ರಕರ್ತ, ಸಾಹಿತಿ, ಲೇಖಕ, ಅಕ್ಷರ ಮಾಂತ್ರಿಕ ರವಿ ಬೆಳೆಗೆರೆ ಅವರ ನಿಧನಕ್ಕೆ ಕರ್ನಾಟಕ ಹಾಲು ಮಹಾಮಂಡಳಿ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಕನ್ನಡ ಪತ್ರಿಕೋದ್ಯಮದಲ್ಲಿ ತಮ್ಮದೇಯಾದ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದ ಬೆಳೆಗೆರೆ ಅವರ ನಿಧನದಿಂದ ನಾಡಿಗೆ ಅಪಾರ ನಷ್ಟವಾಗಿದೆ. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ದುಡಿದು ನಂತರ ವಾರ ಪತ್ರಿಕೆಯ ಮೂಲಕ ದಿಟ್ಟ ಪತ್ರಕರ್ತರಾಗಿ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದ ಅವರ …

Read More »