ಗೋಕಾಕ ನಗರದ ಆದಿಜಾಂಬವ ನಗರದಲ್ಲಿರುವ ಅಂಬೇಡ್ಕರ ಭವನದಲ್ಲಿ ಭಾರತ ರತ್ನ ,ಸಂವಿಧಾನ ಶಿಲ್ಲಿ ಡಾ: ಬಾಬಾ ಸಾಹೇಬರ ಪುಣ್ಯಸ್ಮರಣೆಯ ಮಹಾ ಪರಿ ನಿರ್ವಾಣ ದಿನ ಆಚರಿಸಲಾಯಿತು. ಈ ಸಂದರ್ಭದಲ್ಲಿ ಗೋಕಾಕದಲ್ಲಿ ಬಿಜೆಪಿ ಎಸ್ಸಿ ಮೊರ್ಚಾ ನಗರ ಘಟಕದಿಂದ ಮಹಾ ಪರಿನಿರ್ವಾಣ ದಿನ ಆಚರಣೆ ಮಾಡಿ ಇವತ್ತಿನ ಯುವಕರು ಮೊಬೈಲಗೆ ಮೊರೆ ಹೊಗದೆ ಜೀವನದಲ್ಲಿ ಬಾಬಾ ಸಾಹೇಬರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಖಬೇಕಾಗಿದೆಎಂದು ಗೋಕಾಕ ಎಸ್ಸಿ ಮೊರ್ಚಾ ಅದ್ಯಕ್ಷರಾದ ಮಂಜು …
Read More »ಸಮಾನತೆಯ ಸಮಾಜ ನಿರ್ಮಾಣ ನಮ್ಮ ಗುರಿಯಾಗಲಿ: ಸತೀಶ್ ಜಾರಕಿಹೊಳಿ
ಗೋಕಾಕ: ಬುದ್ಧ, ಬಸವ, ಅಂಬೇಡ್ಕರ್ ರವರು ಕಂಡಿದ್ದ ಸಮಾನತೆಯ ಸಮಾಜವನ್ನು ನಾವು ಕಟ್ಟಬೇಕಿದೆ. ಇದಕ್ಕೆ ತಮ್ಮೆಲ್ಲರ ಸಹಕಾರ, ಒಗಟ್ಟು ನಮಗೆ ತುಂಬ ಮುಖ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ನಗರದ ಮರಾಠ ಸಮಾಜ ಭೂಮಿಯಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಪ್ರತಿವರ್ಷ ನಡೆಯುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಹಣ ದಿನದಂದು ಆಚರಿಸುವ ಮೌಢ್ಯ ವಿರೋಧಿ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅನ್ಯಾಯಕ್ಕೆ ಒಳಗಾಗಿರುವ ಜನರನ್ನು …
Read More »ಅಂಬೇಡ್ಕರ್ ಕನಸನ್ನು ನೆನೆಸು ಮಾಡುವುದು ಸತೀಶ್ ಜಾರಕಿಹೊಳಿ ಅವರ ಕನಸು: ಡಾ.ಯಲ್ಲಪ್ಪ ಹಿಮ್ಮಡಿ
ಗೋಕಾಕ: ಸಮಾಜದ ಒಳಿತಿಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕಂಡಿದ್ದ ಕನಸನ್ನು ನೆನೆಸು ಮಾಡಲು ಶ್ರಮಿಸುತ್ತಿರುವರು ಶಾಸಕ ಸತೀಶ್ ಜಾರಕಿಹೊಳಿ ಅವರು ಎಂದು ಬಂಡಾಯ ಸಾಹಿತ್ಯ ಸಂಘಟನೆಯ ಡಾ. ಯಲ್ಲಪ್ಪ ಹಿಮ್ಮಡಿ ಹೇಳಿದರು. ನಗರದ ಮರಾಠ ಸಮಾಜ ಭೂಮಿಯಲ್ಲಿ ಶಾಸಕ ಸತೀಶ್ ಜಾರಕಿಹೊಳಿ ನೇತ್ರತ್ವದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಪ್ರತಿವರ್ಷ ನಡೆಯುವ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಹಾಪರಿನಿರ್ವಾಹಣ ದಿನದಂದು ಆಚರಿಸುವ ಮೌಢ್ಯ ವಿರೋಧಿ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. …
Read More »ಸತೀಶ ಜಾರಕಿಹೊಳಿ ವೈಚಾರಿಕತೆ ಚಿಂತನೆ ಕರ್ನಾಟಕ ಅಷ್ಟೇ ಅಲ್ಲ ದೇಶದ ತುಂಬ ಹಬ್ಬಲಿ: ಅಶೋಕ ಪೂಜಾರಿ
ಗೋಕಾಕ: ಡಾ. ಬಾಬಾಸಾಹೇಬ್ ಅಂಬೇಡ್ಕರ್ ಜಗತ್ತಿನ ಶ್ರೇಷ್ಟ ನಾಯಕ ಎಂದು ಜೆಡಿಎಸ್ ಮುಖಂಡ ಅಶೋಕ ಪೂಜಾರಿ ಬಣ್ಣಿಸಿದರು. ನಗರದ ಮರಾಠಾ ರುದ್ರಭೂಮಿಯಲ್ಲಿ ನಡೆದ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಪರಿನಿರ್ವಾಣ ನಿಮಿತ್ತ ಮಾನವ ಬಂಧುತ್ವ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೌಡ್ಯ ವಿರೋಧಿ ಪರಿವರ್ತನಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮೂಢನಂಬಿಕೆ ವಿರುದ್ದ ಹೋರಾಡುತ್ತಿರುವ ಸತೀಶ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸಬೇಕಿದೆ. ಮಾನವ ಬಂಧುತ್ವ ವೇದಿಕೆ ವೈಚಾರಿಕತೆ ಹೋರಾಟ ಕರ್ನಾಟಕ ಅಷ್ಟೇ ಅಲ್ಲ. …
Read More »ಗ್ರಾಪಂ.ಚುನಾವಣೆಗೆ ಡಿ.7 ಮತ್ತು 11ರಂದು ಅಧಿಸೂಚನೆ : ಚುನಾವಣಾ ಅಕ್ರಮ ತಡೆಗೆ-ಬಿಗಿ ಬಂದೋಬಸ್ತ್
ಬೆಳಗಾವಿ: ಮೊದಲ ಹಂತದ ಗ್ರಾಮ ಪಂಚಾಯತಿ ಚುನಾವಣೆಗೆ ಸೋಮವಾರ (ಡಿ.7) ಮತ್ತು ಎರಡನೇ ಹಂತದ ಚುನಾವಣೆಗೆ ಶುಕ್ರವಾರ(ಡಿ.11) ಅಧಿಸೂಚನೆ ಹೊರಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಭಾನುವಾರ (ಡಿ.6) ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಅಧಿಸೂಚನೆ ಹೊರಡಿಸಿದ ಬಳಿಕ ನಾಮಪತ್ರಗಳನ್ನು ಸ್ವೀಕಾರ ಪ್ರಕ್ರಿಯೆ ಆರಂಭಗೊಳ್ಳಲಿದೆ. ನಾಮಪತ್ರ ಸಲ್ಲಿಸಲು ಮೊದಲನೇ ಹಂತಕ್ಕೆ ಡಿ.11; ಎರಡನೇ ಹಂತಕ್ಕೆ ಡಿ.16 ಕಡೆಯ ದಿನವಾಗಿರುತ್ತದೆ. ನಾಮಪತ್ರಗಳ ಪರಿಶೀಲನೆ ಮೊದಲನೇ ಹಂತಕ್ಕೆ ಡಿ.12; …
Read More »ಅಂಬೇಡ್ಕರ ಬರೀ ವ್ಯಕ್ತಿಯಲ್ಲ. ಅವರೊಬ್ಬ ದೊಡ್ಡ ಶಕ್ತಿ : ಕುದರಿ
ಘಟಪ್ರಭಾ : ಅಂಬೇಡ್ಕರ ಬರೀ ವ್ಯಕ್ತಿಯಲ್ಲ. ಅವರೊಬ್ಬ ದೊಡ್ಡ ಶಕ್ತಿ. ದೇಶಕ್ಕೆ ವಿಶ್ವದಲ್ಲಿಯೇ ದೊಡ್ಡ ಸಂವಿಧಾನ ನೀಡಿರುವ ಅಂಬೇಡ್ಕರ ಅವರನ್ನು ಗೌರವಿಸಿ ಪೂಜಿಸಬೇಕಾದ ಅಗತ್ಯವಿದೆ ಎಂದು ಅರಭಾವಿ ಮಂಡಲ ಎಸ್ಸಿ ಮೋರ್ಚಾ ಅಧ್ಯಕ್ಷ ನಾಗಪ್ಪ ಕುದರಿ ಹೇಳಿದರು. ಭಾನುವಾರದಂದು ಇಲ್ಲಿಗೆ ಸಮೀಪದ ಅರಭಾವಿ ಪಟ್ಟಣದಲ್ಲಿ ವಾಲ್ಮೀಕಿ ಸಮುದಾಯ ಭವನದಲ್ಲಿ ಜರುಗಿದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ ಅವರ ಪರಿನಿರ್ವಾಣ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಂಬೇಡ್ಕರ ಅವರನ್ನು ಕೇವಲ …
Read More »ಕಾಂಗ್ರೆಸ್ ಜೊತೆ ಕೈ ಜೋಡಿಸೋದು ಬೇಡ ಅಂತಾ ನಾವು ಹೆಚ್ಡಿಕೆಗೆ ಮೊದಲೇ ಹೇಳಿದ್ದೆವು.: ಹೊರಟ್ಟಿ
ಧಾರವಾಡ: ಕಾಂಗ್ರೆಸ್ ಜೊತೆ ಕೈ ಜೋಡಿಸೋದು ಬೇಡ ಅಂತಾ ನಾವು ಹೆಚ್ಡಿಕೆಗೆ ಮೊದಲೇ ಹೇಳಿದ್ದೆವು. ಕೊಂಚ ತಡೆದುಕೊಳ್ಳಿ ಅಂದಿದ್ದೆವು ಎಂದು ಮಾಜಿ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು. ಧಾರವಾಡದಲ್ಲಿ ಮಾತನಾಡಿದ ಹೊರಟ್ಟಿ, ದೋಸ್ತಿ ಸರ್ಕಾರದಲ್ಲಿ ಸಿದ್ದರಾಮಯ್ಯ ಜೆಡಿಎಸ್ ಮುಗಿಸೋದು ನನ್ನ ಕೆಲಸ ಅಂದಿದ್ದರು. ಸಿದ್ದರಾಮಯ್ಯ ಹೆಚ್ಡಿಕೆ ಜೊತೆಯಾಗಿ ಕೂತು ಮಾತಾಡೋ ಸ್ಥಿತಿ ನಿರ್ಮಾಣವಾಗಲಿಲ್ಲ. ಇಬ್ಬರೂ ಕುಳಿತು ಮಾತನಾಡಬಹುದಿತ್ತು. ಸಮನ್ವಯತೆಯಿಂದ ಹೋಗಬೇಕಿತ್ತು ಆದರೆ ಇದು ಒತ್ತಾಯದ ಮದುವೆ ಆದಂತಾಯಿತು ಎಂದು ಹೇಳಿದರು. …
Read More »ಗೋಹತ್ಯೆ ನಿಷೇಧ, ಲವ್ ಜಿಹಾದ್ ಕಾಯ್ದೆ ಜಾರಿಗೆ ತರಲು ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ತಗೆದುಕೊಳ್ಳಲಾಗಿದೆ:ಕಟೀಲ್
ಬೆಳಗಾವಿ: ಗೋಹತ್ಯೆ ನಿಷೇಧ, ಲವ್ ಜಿಹಾದ್ ಕಾಯ್ದೆ ಜಾರಿಗೆ ತರಲು ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ ತಗೆದುಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ಚುನಾವಣೆ ದೃಷ್ಠಿಯಿಂದ ಗ್ರಾಮಗಳನ್ನು ಅಭಿವೃದಿಗೊಳಿಸುವ ನಿಟ್ಟಿನಲ್ಲಿ ಗ್ರಾಮ ಸ್ವರಾಜ್ಯ ಪರಿಕಲ್ಪನೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಲು ಅಪೇಕ್ಷಿಸುವ ಕಾರ್ಯಕರ್ತರಿಗೆ ಬೆಂಬಲ ನೀಡಲಾಗುವುದು ಎಂದು ಹೇಳಿದರು. …
Read More »ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್ .ಡಿ .ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ಶಾಸಕ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿ : ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್ .ಡಿ .ಕುಮಾರಸ್ವಾಮಿ ಮಾಡಿದ ಆರೋಪಕ್ಕೆ ಶಾಸಕ ಸತೀಶ್ ಜಾರಕಿಹೊಳಿ ಶನಿವಾರ ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಕಾಂಗ್ರೆಸ್ ನವರ ಸಹವಾಸ ಮಾಡಿ ನಾವಿಂದು ಸರ್ವನಾಶವಾಗಿದ್ದೇವೆ. ಸಿದ್ದರಾಮಯ್ಯ ಅವರ ಪ್ರೀ ಪ್ಲ್ಯಾನ್ ಟ್ರ್ಯಾಪ್ ನಲ್ಲಿ ಸಿಲುಕಿ ಅಧಿಕಾರ ಕಳೆದುಕೊಂಡೆ ಎಂದು ಕುಮಾರಸ್ವಾಮಿ ಆರೋಪ ಮಾಡಿದ್ದರು. ಈ ವಿಚಾರವಾಗಿ ಮಾತನಾಡಿ, ಈ ವಿಚಾರದ ಬಗ್ಗೆ ಅವರನ್ನೇ ಕೇಳಬೇಕು. ಅದೆಲ್ಲ ಮುಗಿದ ಹೋದ …
Read More »ಉತ್ತರ ಕರ್ನಾಟಕ ಜನರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕಾಳಜಿಯೇ ಇಲ್ಲ :ಡಿ.ಕೆ. ಶಿ
ಬೆಳಗಾವಿ: ಉತ್ತರ ಕರ್ನಾಟಕ ಜನರ ಬಗ್ಗೆ ಬಿಜೆಪಿ ಸರ್ಕಾರಕ್ಕೆ ಕಾಳಜಿಯೇ ಇಲ್ಲ ಅಂತಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭೀಕರ ಪ್ರವಾಹದಿಂದ ಈ ಭಾಗದ ಜನ ಮನೆ, ಆಸ್ತಿ ಪಾಸ್ತಿ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಪರಿಹಾರ, ಮನೆ ಕೊಡಲು ಸಾಧ್ಯವಾಗಲಿಲ್ಲ. ಜನರ ಸಮಸ್ಯೆ ಆಲಿಸಲು ಸುವರ್ಣಸೌಧ ನಿರ್ಮಿಸಲಾಗಿದೆ. ಆದ್ರೆ ಅಧಿವೇಶನದಲ್ಲಿ ಕರೆಯದೇ ಬಿಜೆಪಿ ಕಾರ್ಯ ಕಾರಣಿ ಸಭೆ ಬೆಳಗಾವಿಯಲ್ಲಿ …
Read More »