Breaking News

ಬೆಳಗಾವಿ

ಪೀರಣವಾಡಿಯ ಅನಧಿಕೃತ ಲೇಔಟ ತೆರುವುಗೊಳಿಸಿದ ಬುಡಾ.

ಬೆಳಗಾವಿ:  ಪೀರಣವಾಡಿಯಲ್ಲಿ ತಲೆ ಎತ್ತುತ್ತಿದ್ದ ಅನಧಿಕೃತ ಲೇಔಟನ್ನು ಬುಡಾ ಅಧಿಕಾರಿಗಳು ಪೊಲೀಸರ ಭದ್ರತೆಯಲ್ಲಿ ತೆರುವುಗೊಳಿಸಿದರು. ಬೆಳಗಾವಿಯ ಪೀರಣವಾಡಿಯಲ್ಲಿ ಸರ್ವೆ ನಂ 38 ಮತ್ತು 113 ರಲ್ಲಿ ಅನಧಿಕೃತವಾಗಿ ಲೇಔಟ್ ನಿರ್ಮಾಣಗೊಂಡಿತ್ತು. ಇದನ್ನರಿತ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರವು ಆಯುಕ್ತರಾದ ಶಕೀಲ್ ಅಹ್ಮದ್, ಅಧಿಕಾರಿಗಳಾದ ಬಿ.ವ್ಹಿ. ಹಿರೇಮಠ, ಎಸ್.ಸಿ. ನಾಯ್ಕ್, ಶಿವಕುಮಾರ್, ಹನೀಫ್ ಅಥನಿ, ಬಾಳಿಗಡ್ಡಿ , ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಅನಧಿಕೃತ ಲೇಔಟನ್ನು ತೆರುವುಗೊಳಿಸಿದರು.

Read More »

ಕುಂಕುಮಾರ್ಚನೆಯು ಧರ್ಮ ಪಾಲನೆಯ ಒಂದು ಭಾಗ:ಅಲ್ಕಾತಾಯಿ ಇನಾಮದಾರ

ಚಿಕ್ಕೋಡಿ: ಧರ್ಮ ಅಂದರೆ ಕರ್ತವ್ಯ. ಧರ್ಮದ ಪರಂಪರೆಯನ್ನು ಎಲ್ಲರೂ ಕಾಪಾಡಿಕೊಂಡು ಹೋಗಬೇಕು ಹಾಗೂ ಕುಂಕುಮಾರ್ಚಣೆಯು ಧರ್ಮ ಪಾಲನೆಯ ಒಂದು ಭಾಗವಾಗಿದೆ ಎಂದು ರಾಷ್ಟ್ರೀಯ ಸೇವಿಕಾ ಸಮಿತಿಯ ಸಹ ಕಾರ್ಯವಾಹಿಕಿ ಅಲ್ಕಾತಾಯಿ ಇನಾಮದಾರ ಹೇಳಿದರು. ಅವರು ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದ ಬೀರೇಶ್ವರ ಭವನದ ಆವರಣದಲ್ಲಿ ಜೊಲ್ಲೆ ಗ್ರೂಪ್ ವತಿಯಿಂದ ಆಯೋಜಿಸಿದ ಕುಂಕುಮಾರ್ಚನೆ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು ತಾಯಂದಿರ ಒಳ್ಳೆಯ ಸಂಸ್ಕಾರದಿಂದ ಮಕ್ಕಳನ್ನು ಬೆಳೆಸಿದರೆ ಮಕ್ಕಳು ಸದೃಢವಾಗಿ ಬೆಳೆಯಲು …

Read More »

ಶಿಂದೋಳಿ ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಚಾಲನೆ ಮೃಣಾಲ ಹೆಬ್ಬಾಳಕರ್.

ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿಂದೋಳಿ ಗ್ರಾಮದಲ್ಲಿ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಶ್ರೀ ಮಹಾಲಕ್ಷ್ಮಿ ದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳಕರ್ ಗ್ರಾಮಸ್ಥರ ಸಮ್ಮುಖದಲ್ಲಿ ಚಾಲನೆ ನೀಡಿದರು. ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಅವರು ಈ ಹಿಂದೆ ಗ್ರಾಮದ ಒಳಾಂಗಣ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ್ದರು. ಸಚಿವೆ ಲಕ್ಷ್ಮೀ …

Read More »

ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಸಮಿತಿಯ ಸದಸ್ಯರುಗಳ ಸಭೆ.

ಬೆಳಗಾವಿ: ನಗರ ಹಾಗೂ ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾಂಗ್ರೆಸ್ ಭವನ ನಿರ್ಮಾಣ ಸಮಿತಿಯ ಸದಸ್ಯರುಗಳ ಸಭೆ ಬೆಳಗಾವಿ ದಿ 13/02/25 ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಿತ್ತೂರು ಕರ್ನಾಟಕ ವಿಭಾಗದ ಕಾಂಗ್ರೆಸ್ ಭವನ ನಿರ್ಮಾಣ ಸಮಿತಿಯ ಸದಸ್ಯರುಗಳ ಸಭೆ ದಿ 13 ರಂದು ಬೆಳಿಗ್ಗೆ 11:00 ಘಂಟೆಗೆ ಬೆಳಗಾವಿ ನಗರದಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಜರುಗಿತು, ಸಭೆಯ ಅಧ್ಯಕ್ಷತೆಯನ್ನು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಹಾಗೂ ಶಾಸಕ …

Read More »

ಹುಕ್ಕೇರಿ ಸರಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಆಫ್ರಿನಾ ಬಳ್ಳಾರಿ.

ಹುಕ್ಕೇರಿ: ಸಾರ್ವಜನಿಕ ಆಸ್ಪತ್ರೆಗೆ ಬೆಳಗಾವಿ ಸ್ಮಾರ್ಟ್ ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಹುಕ್ಕೇರಿ ತಾಲೂಕಾ ನೋಡಲ್ ಅಧಿಕಾರಿ ಶ್ರೀಮತಿ ಅಫ್ರೀನಾ ಬಾನು ಬಳ್ಳಾರಿ ದಿಢೀರ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ರಾಜ್ಯ ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲನಿ ರಜನೀಶ ಇವರ ವಿಷೇಶ ಆದೇಶದ ಮೇರೆಗೆ ಇಂದು ಹುಕ್ಕೇರಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ತಾಲೂಕಾ ವೈದ್ಯಾಧಿಕಾರಿ ಡಾ, ಉದಯ ಕುಡಚಿ ಮತ್ತು ಮುಖ್ಯ ವೈದ್ಯಾಧಿಕಾರಿ ಮಹಾಂತೇಶ ನರಸನ್ನವರ ಜೋತೆಗೆ ಆರೋಗ್ಯ …

Read More »

ಸಣ್ಣಹೊಸೂರ -ಭಂಡರಗಾಳಿ ಗ್ರಾಮದ ಶ್ರೀ ಲಕ್ಷ್ಮೀ ಜಾತ್ರೆಯು ಆರಂಭ.

ಖಾನಾಪೂರ: ತಾಲೂಕಿನ ಸಣ್ಣಹೊಸೂರ -ಭಂಡರಗಾಳಿ ಗ್ರಾಮದ ಶ್ರೀ ಲಕ್ಷ್ಮೀ ಜಾತ್ರೆಯು ಬೆಳ್ಳಿಗೆ ಉತ್ಸಾಹದಿಂದ ಆರಂಭಗೊಂಡಿತು.ಇಂದು ಖಾನಾಪೂರ ತಾಲೂಕಿನಲ್ಲಿ ಎರಡು ಗ್ರಾಮಗಳ ಶ್ರೀ ಮಹಾ ಲಕ್ಷ್ಮೀ ಜಾತ್ರೆಯು ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ಖಾನಾಪೂರ ತಾಲೂಕಿನ ಜನತೆ ಬೆಳ್ಳಿಗೆಯಿಂದಲ್ಲೇ ಉತ್ಸಾಹದ ವಾತಾವರಣದಲ್ಲಿದರು.

Read More »

ಬೆಳಗಾವಿಯಲ್ಲಿ ಎಂ ಫಾರ್ ಸೇವಾ ಸಂಸ್ಥೆಯ 25ನೇ ವಾರ್ಷಿಕೋತ್ಸವ ಸಮಾರಂಭ.

ಬೆಳಗಾವಿ:ಎಮ ಫಾರ್ ಸೇವಾ ಸಂಸ್ಥೆಯ 25ನೇ ವಾರ್ಷಿಕೋತ್ಸವ ಸಮಾರಂಭದ ಕ್ರಾಂತಿ ಮಹಿಳಾ ಮಂಡಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಅದ್ಭುತವಾದ ರಾಮ ಸಂಗೀತ ಕಾರ್ಯಕ್ರಮವನ್ನು ಗೋಗಟೆ ಕಾಲೇಜಿನ ವೇಣುಗೋಪಾಲ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು ಈ ಕಾರ್ಯಕ್ರಮವನ್ನು ಸುಪ್ರಸಿದ್ಧ ಸಂಗೀತ ಗಾಯಕಿ ಕುಮಾರಿ ಸೂರ್ಯ ಗಾಯತ್ರಿ ನಡೆಸಿಕೊಟ್ಟರು ಪರಮಪೂಜ್ಯ ಶ್ರೀ ಗುರುಸಿದ್ಧ ಸ್ವಾಮೀಜಿ ಕಾರಂಜಿ ಮಠ. ಎಮ ಫಾರ್ ಸೇವಾ ಸಂಸ್ಥೆಯ ಆಯೋಜಕರಾದ ಶ್ರೀ ಚಿತ್ ಪ್ರಕಾಶ ಆನಂದ ಸ್ವಾಮೀಜಿ. ಶ್ರೀ …

Read More »

ದಂಡು ಮಂಡಳಿಗೆ ಕಾಣಿಸುತ್ತಿಲ್ಲವೇ ಧೂಳಿನ ಸಾಮ್ರಾಜ್ಯ; ಬೆಳಗಾವಿಯ ಅಂಚೆ ಸರ್ಕಲ್ ರಸ್ತೆ ಅಭಿವೃದ್ಧಿ ಯಾವಾಗ?

ಬೆಳಗಾವಿ: ರಸ್ತೆಯ ಟಾರು ಕಿತ್ತು ಹೋಗಿ, ಧೂಳಿನ ಸಾಮ್ರಾಜ್ಯ ನಿರ್ಮಾಣವಾಗಿದ್ದು, ಬೆಳಗಾವಿಯ ಪ್ರಧಾನ ಅಂಚೆ ಕಾರ್ಯಾಲಯ ಪ್ರದೇಶದ ಜನರು ರೋಸಿ ಹೋಗಿದ್ದಾರೆ. ರಸ್ತೆ ಅಭಿವೃದ್ಧಿ ಕಾಣದೇ ಇಲ್ಲಿನ ಜನರು ಪರಿತಪಿಸುತ್ತಿದ್ದಾರೆ. ಈ ಕುರಿತು ಇಲ್ಲಿದೆ ಒಂದು ರಿಪೋರ್ಟ್ ಬೆಳಗಾವಿಯ ದಂಡು ಮಂಡಳಿಯ ಅಸ್ತಿತ್ವಕ್ಕೆ ಬರುವ ಪ್ರಧಾನ ಅಂಚೆ ಕಾರ್ಯಾಲಯದ ಪ್ರದೇಶದಲ್ಲಿರುವ ರಸ್ತೆಗೆ ದುರಾವಸ್ಥೆ ಪ್ರಾಪ್ತವಾಗಿದೆ. ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಲು ಮಳೆಗಾಲದ ಮೊದಲೂ ಮಣ್ಣು ಹಾಕಲಾಗಿತ್ತು. ಮಳೆಗಾಲದ ನಂತರ ರಸ್ತೆ ನಿರ್ಮಿಸುವುದಾಗಿ …

Read More »

ಕ್ವಿನ್ ಸಿಟಿ ಆಗಲಿದೆ ಹೆಲ್ತ್ ಸಿಟಿ: ಶರಣ್ ಪ್ರಕಾಶ್ ಪಾಟೀಲ್.

ಬೆಂಗಳೂರು : ನಮ್ಮ ರಾಜಧಾನಿ ಬೆಂಗಳೂರು ಈಗ ಜಾಗತಿಕ ಮಟ್ಟದಲ್ಲಿ ಮುಂಚೂಣಿಯಲ್ಲಿದೆ. ಈಗ ಇಲ್ಲಿ ತಲೆ ಎತ್ತುತ್ತಿರುವ ಕ್ವಿನ್ ಸಿಟಿ ವಿಶ್ವದರ್ಜೆಯ ಮಟ್ಟದ್ದಾಗಿದ್ದು, ಇಲ್ಲಿ ವೈದ್ಯಕೀಯ ಹಾಗೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡುವ ಯೋಜನೆಗಳು ಅನುಷ್ಠಾನಕ್ಕೆ ಬರಲಿದೆ. ಇದರಿಂದ ಜನರಿಗೆ ಉತ್ತಮ ಸೇವೆ ಸಿಗುವುದಲ್ಲದೇ, ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಮತ್ತಷ್ಟು ಗರಿಗೆದರಲಿವೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು …

Read More »

ಬೆಳಗಾವಿಯಲ್ಲಿ “ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವ-2025 ಪೂರ್ವಭಾವಿ ಸಭೆ

 ಬೆಳಗಾವಿ: “ವೀರರಾಣಿ ಬೆಳವಡಿ ಮಲ್ಲಮ್ಮನ ಉತ್ಸವ-2025” ರ ಕುರಿತು ಮಾನ್ಯ ಬೈಲಹೊಂಗಲ ಮತಕ್ಷೇತ್ರದ ಶಾಸಕರಾದ ಶ್ರೀ ಮಹಾಂತೇಶ ಕೌಜಲಗಿ ರವರ ಘನ ಉಪಸ್ಥಿತಿಯಲ್ಲಿ ಇಂದು ಅಪರಾಹ್ನ ಬೆಳಗಾವಿ ಜಿಲ್ಲೆಯ ಬೆಳವಡಿಯಲ್ಲಿರುವ ರಾಣಿ ಮಲ್ಲಮ್ಮ ಸ್ಮಾರಕ ಭವನದಲ್ಲಿ ಬೆಳವಡಿ ಮಲ್ಲಮ್ಮನ ಉತ್ಸವ ಆಚರಣೆ ನಿಮಿತ್ತ ಪೂರ್ವಭಾವಿ ಸಭೆಯನ್ನು ಜಿಲ್ಲಾಧಿಕಾರಿ ಶ್ರೀ ಮೊಹಮ್ಮದ ರೋಷನ್ ರವರ ಅಧ್ಯಕ್ಷತೆಯಲ್ಲಿ ಜರುಗಿಸಲಾಯಿತು. ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಭೀಮಾಶಂಕರ ಗುಳೇದ, ಬೆಳಗಾವಿ …

Read More »