Breaking News

ಬೆಳಗಾವಿ

ರಮೇಶ ಸಿಡಿ ಪ್ರಕರಣದಿಂದ ಮುಕ್ತರಾಗಲೆಂದು ಅಭಿಮಾನಿಗಳಿಂದ 30 ಕಿ.ಮೀ ದೀರ್ಘ ದಂಡ ನಮಸ್ಕಾರ

ಗೋಕಾಕ : ಮಾಜಿ ಸಚಿವ ರಮೇಶ ಜಾರಕಿಹೊಳಿ ಶೀಘ್ರ ಸಿಡಿ ಪ್ರಕರಣದಿಂದ ಮುಕ್ತವಾಗಲೆಂದು ಪ್ರಾರ್ಥಿಸಿ  ತವಗ ಗ್ರಾಮದ ಇಬ್ಬರು ಅಭಿಮಾನಿಗಳು  ದೀರ್ಘ ದಂಡ ನಮಸ್ಕಾರ ಹಾಕಿದ್ದರು. ತವಗ ಗ್ರಾಮದ ನಿವಾಸಿಗಳಾದ ಲಕ್ಕಪ್ಪ ಹತ್ತರಕಿ, ಶ್ರಿಕಾಂತ ದುಂಡರಗಿ ಎಂಬ ರಮೇಶ ಅಭಿಮಾನಿಗಳು  ತವಗ ಗ್ರಾಮದಿಂದ ಗೋಕಾಕ್ ವರೆಗೆ ಸುಮಾರು 30 ಕಿ.ಮೀ ದಿಡ್  ನಮಸ್ಕಾರ್ ಕೈಗೊಂಡಿದ್ದಾರೆ. ಇದೇ ವೇಳೆ ಲಕ್ಕಪ್ಪ ಮಾತನಾಡಿ, ರಮೇಶ ಜಾರಕಿಹೊಳಿ ಅವರಿಗೊಸ್ಕರ್ ಬೆಳಗಾವಿಯಿಂದ ಬೆಂಗಳೂರು, ದೆಹಲಿ ಅವರಿಗೆ ಹೋರಾಟ …

Read More »

ಸ್ವಾವಲಂಬನೆ ಮಹಿಳೆಯರ ಗುರಿಯಾಗಲಿ: ಸಚಿವೆ ಶಶಿಕಲಾ ಜೊಲ್ಲೆ

ಚಿಕ್ಕೋಡಿ: ನಿಪ್ಪಾಣಿಯಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಬೆಳಗಾವಿ ಜಿಲ್ಲೆಯ “ಉದ್ಯೋಗಿನಿ ಯೋಜನೆ”ಯ ಫಲಾನುಭವಿಗಳಿಗೆ, ಒಂದು ದಿನದ ತರಬೇತಿ ಕಾರ್ಯಗಾರಕ್ಕೆ ಸಚಿವೆ ಶಶಿಕಲಾ ಜೊಲ್ಲೆ ಚಾಲನೆ ನೀಡಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಫಲಾನುಭವಿಗಳಿಗೆ ಸಾಲ ಸೌಲಭ್ಯದ ಚೆಕ್ ವಿತರಣೆ ಮಾಡಿದರು. ಈ ವೇಳೆ ಮಾತನಾಡಿದ ಸಚಿವರು, ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ. ಈ ಸಲುವಾಗಿ ನಮ್ಮ ಇಲಾಖೆಯ ಹಾಗೂ ಬ್ಯಾಂಕ್ ಗಳ ಸಹಯೋಗದಲ್ಲಿ, …

Read More »

ಬೆಳಗಾವಿ – ಧಾರವಾಡ ರೈಲ್ವೆ: ಸಚಿವರ ಉತ್ತರ ಅಸಮರ್ಪಕ ಎಂದ ಕವಟಗಿಮಠ

ಧಾರವಾಡ -ಬೆಳಗಾವಿ ನಡುವೆ ಹೊಸ ರೈಲು ಮಾರ್ಗ ನಿರ್ಮಾಣ ಮಾಡುವ ಸಂಬಂಧ ಘೋಷಣೆಯಾದ ಯೋಜನೆಯು ಯಾವ ಹಂತದಲ್ಲಿದೆ ಎನ್ನುವ ತಮ್ಮ ಚುಕ್ಕೆ ಗುರುತಿನ ಪ್ರಶ್ನೆಯನ್ನು ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಸದನದಲ್ಲಿ ಪ್ರಶ್ನೋತ್ತರ ವೇಳೆ ಮೂಲಭೂತ ಸೌಕರ್ಯ ಸಚಿವರಿಗೆ ಕೇಳಿದ್ದರು. ಆದರೆ ಸಚಿವರು ಒದಗಿಸಿದ ಉತ್ತರ ಅಸಮರ್ಪಕವಾಗಿದೆಯೆಂದು ಕವಟಗಿಮಠ ಆಕ್ಷೇಪಿಸಿ, ತುರ್ತಾಗಿ ರಾಜ್ಯ ಸರಕಾರಿ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಧಾರವಾಡ -ಬೆಳಗಾವಿ ನಡುವೆ ಹೊಸ ರೈಲು ಮಾರ್ಗ …

Read More »

ಬೆಳಗಾವಿ: ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜಸ್ತಂಭ ತೆರವಿಗೆ ಆಗ್ರಹಿಸಿ ಮಾರ್ಚ್​​​ 8ರಂದು ಎಂ.ಇ.ಎಸ್​ ಪ್ರತಿಭಟನೆ ಹಮ್ಮಿಕೊಂಡಿದೆ.

ಬೆಳಗಾವಿ: ಮಹಾನಗರ ಪಾಲಿಕೆ ಎದುರಿನ ಕನ್ನಡ ಧ್ವಜಸ್ತಂಭ ತೆರವಿಗೆ ಆಗ್ರಹಿಸಿ ಮಾರ್ಚ್​​​ 8ರಂದು ಎಂ.ಇ.ಎಸ್​ ಪ್ರತಿಭಟನೆ ಹಮ್ಮಿಕೊಂಡಿದೆ. ಎಂ.ಇ.ಎಸ್ ಪ್ರತಿಭಟನೆಯಲ್ಲಿ ಸಂಘದ ಮುಖಂಡರು ಪ್ರಚೋದನಕಾರಿ ಭಾಷಣ ಮತ್ತು ಹೇಳಿಕೆಗಳನ್ನು ನೀಡುವ ಸಾಧ್ಯತೆ ಸಹ ಇದೆ. ಇವುಗಳಿಂದ ಶಾಂತಿ ‌ಭಂಗವಾಗುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ 2 ದಿನಗಳ ಕಾಲ ಮಹಾರಾಷ್ಟ್ರ ನಾಯಕರ ಪ್ರವೇಶವನ್ನು ನಿಷೇಧಿಸಲಾಗಿದೆ. ನಾಳೆ ಬೆಳಗ್ಗೆ 6ರಿಂದ ಮಾ.9ರವರೆಗೂ ಗಡಿ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ದೃಷ್ಟಿಯಿಂದ …

Read More »

ಸಚಿವ ಉಮೇಶ್ ಕತ್ತಿ ಯಡಿಯೂರಪ್ಪ ಮಟ್ಟದಲ್ಲಿ ವರ್ಕೌಟ್ ಮಾಡುತ್ತಿದ್ದರೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿ ಮಟ್ಟದಲ್ಲಿ ಲಾಬಿ ನಡೆಸುತ್ತಿದ್ದಾರೆ.

ಬೆಳಗಾವಿ: ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ‌ ರಾಜೀನಾಮೆ ನೀಡಿದ ಬೆನ್ನಲ್ಲೇ ಬೆಳಗಾವಿ ಜಿಲ್ಲಾ ಉಸ್ತುವಾರಿ ಪಟ್ಟಕ್ಕಾಗಿ ಜಟಾಪಟಿ ಶುರುವಾಗಿದೆ. ಬೆಳಗಾವಿಯ ಇಬ್ಬರು ಸಚಿವರಿಂದ ಉಸ್ತುವಾರಿ ಸಚಿವ ಸ್ಥಾನಕ್ಕಾಗಿ ದೊಡ್ಡ ಮಟ್ಟದಲ್ಲಿ ಲಾಬಿ ನಡೆದಿದ್ದು, ಬೆಳಗಾವಿ ಜಿಲ್ಲೆಯನ್ನು ತಮ್ಮ ಕಂಟ್ರೋಲ್​ಗೆ ತೆಗೆದುಕೊಳ್ಳಲು ಡಿಸಿಎಂ ಲಕ್ಷ್ಮಣ ಸವದಿ, ಸಚಿವ ಉಮೇಶ್ ಕತ್ತಿಯಿಂದ ದೆಹಲಿ ಮಟ್ಟದಲ್ಲೂ ಲಾಬಿ ನಡೆದಿದೆ. ಸಚಿವ ಉಮೇಶ್ ಕತ್ತಿ ಯಡಿಯೂರಪ್ಪ ಮಟ್ಟದಲ್ಲಿ ವರ್ಕೌಟ್ ಮಾಡುತ್ತಿದ್ದರೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ದೆಹಲಿ …

Read More »

ಸಪ್ತಾಹ ನಿಮಿತ್ಯ ಸಾಂಸ್ಕøತಿಕ ಕಾರ್ಯಕ್ರಮ

ಸಪ್ತಾಹ ನಿಮಿತ್ಯ ಸಾಂಸ್ಕøತಿಕ ಕಾರ್ಯಕ್ರಮ ಘಟಪ್ರಭಾ: ಸಮೀಪದ ಶಿಂದಿಕುರಬೇಟ ಗ್ರಾಮದ ಶ್ರೀ ಶಿವಶರಣ ಹರಳಯ್ಯನವರ ಹಾಗೂ ಬುದ್ಧ,ಬಸವ,ಅಂಬೇಡಕರರ 79 ನೇ ವಾರ್ಷಿಕೋತ್ಸವದ ಸಪ್ತಾಹ ಸಮಾರಂಭವು ದಿ.7 ಮತ್ತು 8 ರಂದು ನಡೆಯಲಿದೆ. ದಿ.7ರಂದು ಅಭಿಷೇಕ ಕಾರ್ಯಕ್ರಮವು ಸಿದ್ದಯ್ಯಸ್ವಾಮಿ ಹಿರೇಮಠ ಇವರಿಂದ ಜರುಗಲಿದೆ. ಸಂಜೆ 5 ಗಂಟೆಗೆ ಸಾಧಕರಿಗೆ ಮತ್ತು ಗ್ರಾಮ ಪಂಚಾಯತ ನೂತನ ಸದಸ್ಯರುಗಳಿಗೆ ಸನ್ಮಾನ ಕಾರ್ಯಕ್ರಮ ಹಾಗೂ ಶಿಂದಿಕುರಬೇಟ ಐಡಿಯಲ್ ಅರ್ಪಿಸುವ ಎಸ್.ಬಿ.ಇವೆಂಟ್ಸ್ ಮುರಗೋಡ ಇವರಿಂದ ಸಾಂಸ್ಕøತಿಕ ಕಾರ್ಯಕ್ರಮ …

Read More »

ಮಹದಾಯಿ ವಿವಾದ: ಸುಪ್ರೀಂ ಸೂಚನೆಯಂತೆ ಜಂಟಿ ಪರಿಶೀಲನಾ ಸಮಿತಿಗೆ ಕರ್ನಾಟಕ, ಗೋವಾ ಪ್ರತಿನಿಧಿಗಳ ನೇಮಕ

ಬೆಳಗಾವಿ: ಕಳಸಾ, ಬಂಡೂರಿ ನಾಲೆ ನೀರನ್ನು ಮಲಪ್ರಭೆಗೆ ಹರಿಸಬೇಕು ಎಂಬುದು ಉತ್ತರ ಕರ್ನಾಟಕ ಜನರ ಅನೇಕ ವರ್ಷಗಳ ನಿರಂತರ ಪ್ರಯತ್ನವಾಗಿದೆ. ಇದಕ್ಕಾಗಿ ಅನೇಕ ಹೋರಾಟ, ಚಳುವಳಿಗಳು ನಡೆದಿದ್ದು, ನ್ಯಾಯಾಧೀಕರಣದಲ್ಲಿ ಸಹ ನೀರಿನ ಹಂಚಿಕೆಯಾಗಿದೆ. ಆದರೆ ಮೂರು ವರ್ಷ ಕಳೆದರೂ ಇನ್ನೂ ಯಾವುದೇ ಕಾಮಗಾರಿ ಆರಂಭವಾಗಿಲ್ಲ. ಇದಕ್ಕೆ ಪ್ರಮುಖ ಕಾರಣ ಗೋವಾ ಸರ್ಕಾರ ಪದೇ ಪದೇ ಆಕ್ಷೇಪ ತೆಗೆಯುತ್ತಿರುವುದು. ಕಳಸಾ ನಾಲೆ ನೀರನ್ನು ಕರ್ನಾಟಕ ಸರ್ಕಾರ ಯಾವುದೇ ಅನುಮತಿ ಇಲ್ಲದೇ ತಿರುವು …

Read More »

ಗೋಕಾಕ: ವಿವಾದಿತ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಮೆಳವಂಕಿ ಗ್ರಾಮದ ಗೌಡನ ಕ್ರಾಸ್‍ದಲ್ಲಿ ಪ್ರತಿಭಟನೆ ನಡೆಸುತ್ತಿರುವುದು.

ಗೋಕಾಕ: ರಮೇಶ ಜಾರಕಿಹೊಳಿ ಅವರ ಮೆಳವಂಕಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಡಿಬಟ್ಟಿ, ಚಿಗಡೊಳ್ಳಿ ಮತ್ತು ಮೆಳವಂಕಿ ಗ್ರಾಮದ ಅಭಿಮಾನಿ ಬಳಗ ಹಾಗೂ ಬೆಂಬಲಿಗರು ಶನಿವಾರದಂದು ವಿವಾದಿತ ಸಿಡಿ ಪ್ರಕರಣದ ತನಿಖೆಯನ್ನು ಸಿಬಿಐ ಅಥವಾ ಸಿಐಡಿಗೆ ವಹಿಸಬೇಕೆಂದು ಆಗ್ರಹಿಸಿ ಕಂದಾಯ ನಿರೀಕ್ಷಕ ಎಮ್.ಆಯ್.ಹಿರೇಮಠ ಅವರ ಮುಖಾಂತರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು. ಮೆಳವಂಕಿ ಗ್ರಾಮದ ಗೌಡನ ಕ್ರಾಸದಲ್ಲಿ ಸೇರಿದ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಮಾನವ ಸರಪಳಿ ನಿರ್ಮಿಸಿ …

Read More »

ಅಣ್ಣನ ಸಿಡಿ ಬಗ್ಗೆ ಮೌನ ಮುರಿದ ಸಹೋದರ ಲಖನ್ ಜಾರಕಿಹೊಳಿ ಹೇಳಿದ್ದೇನು?

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೋರ್ಟ್​ ಆಚೆಗೆ ಸರಿ -ತಪ್ಪುಗಳ ವಾದ ಪ್ರತಿವಾದ ನಡೆದಿದ್ದು, ವಿರೋಧ ಪಕ್ಷಗಳಿಂದ ಸಿಡಿ ಪ್ರಕರಣಕ್ಕೆ ವಿರೋಧ ವ್ಯಕ್ತವಾದರೆ, ರಮೇಶ್ ಬೆಂಬಲಿಗರು ಇದು ನಕಲಿ ಎಂದು ರಸ್ತೆಗಿಳಿದಿದ್ದಾರೆ. ಇದೆಲ್ಲಾ ಒಂದು ತೂಕವಾದರೆ ರಮೇಶ್ ಜಾರಕಿಹೊಳಿ ಸಹೋದರರು ರಮೇಶ್ ಬೆನ್ನಿಗೆ ನಿಂತಿದ್ದಾರೆ ಎನ್ನುವುದು ವಿಶೇಷ. ರಮೇಶಣ್ಣ ಇದರಿಂದ ಗೆದ್ದು ಬರುತ್ತಾರೆ ಇದು ರಾಜಕೀಯ ಷಡ್ಯಂತ್ರ. ರಮೇಶ್​ರನ್ನು ರಾಜಕೀಯವಾಗಿ ಮುಗಿಸಲು ಈ …

Read More »

ರಮೇಶ್ ಜಾರಕಿಹೊಳಿ ಪರ ಪ್ರತಿಭಟನೆ : ಬೆಂಕಿಯಲ್ಲಿ ಬಿದ್ದ ಅಭಿಮಾನಿ

ಬೆಳಗಾವಿ : ರಾಮೇಶ್ ಜಾರಕಿಹೊಳಿ ಪರವಾಗಿ ಅಭಿಮಾನಿಗಳು ಟೈರ್ ಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ವ್ಯಕ್ತಿಯೋರ್ವ ಬೆಂಕಿಯಲ್ಲಿ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಲ್ಲಿನ ಬಸವೇಶ್ವರ ವೃತ್ತದಲ್ಲಿ ನಡೆದಿದೆ. ಗೋಕಾಕ್ ನಗರದ ಬಸವೇಶ್ವರ ವೃತ್ತದಲ್ಲಿ ರಮೇಶ ಜಾರಕಿಹೊಳಿ‌ ಬೆಂಬಲಿಸಿ ಪ್ರತಿಭಟನೆ ನಡೆಸಲಾಯಿತು.‌ ಈ ವೇಳೆ ರಾಮೇಶ್ ಪರ ಅಭಿಮಾನಿಗಳು ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ಪ್ರತಿಭಟನಾಕಾರನೋರ್ವ ಬೆಂಕಿಯಲ್ಲಿಯೇ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. …

Read More »