Breaking News

ಬೆಳಗಾವಿ

ಸಿಎಮ್. ಹಾಗೂ ವೈದ್ಯರ ಸಲಹೆ ಮೇರೆಗೆ ಇಂದಿನಿಂದ ಐದು ದಿನಗಳವರೆಗೆ “ಹೋಮ್ ಕ್ವಾರಂಟೈನ್” ಒಳಗಾದ ಬಾಲಚಂದ್ರ ಜಾರಕಿಹೊಳಿ.

ಗೋಕಾಕ: ಶನಿವಾರದಂದು ನಡೆದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಂಗಳಾ ಸುರೇಶ ಅಂಗಡಿ ಅವರ ಪರ ಕ್ಷೇತ್ರಾದಾಧ್ಯಂತ ಮತಯಾಚಿಸಿ, ಹಗಲಿರುಳು ದುಡಿದ ಅರಭಾವಿ-ಗೋಕಾಕ ಕ್ಷೇತ್ರದ ಎಲ್ಲ ಮುಖಂಡರು, ಪದಾಧಿಕಾರಿಗಳು ಮತ್ತು ಸಮಸ್ತ ಕಾರ್ಯಕರ್ತರಿಗೆ ಶಾಸಕ ಹಾಗೂ ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ಚುನಾವಣಾ ಪ್ರಚಾರಕ್ಕೆ ಮೂಡಲಗಿಗೆ ಏ-14ರಂದು ಆಗಮಿಸಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೋರೋನಾ ಸೋಂಕು ದೃಢಪಟ್ಟಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಚಾರಕ್ಕೆ ಆಗಮಿಸಿದ್ದ …

Read More »

ಧಾರ್ಮಿಕ ಆಚರಣೆ-ಸಮಾರಂಭ ನಿಷೇಧ,ಮಾರ್ಗಸೂಚಿ ಪಾಲಿಸದಿದ್ದರೆ ಕಠಿಣ ಕ್ರಮ: ಜಿಲ್ಲಾಧಿಕಾರಿ

ಬೆಳಗಾವಿ : ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಈ ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು  ಜಿಲ್ಲಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ. ಭಾರತ ಸರ್ಕಾರದ ಕೇಂದ್ರ ಗ್ರಹ ಮಂತ್ರಾಲಯದ ಆದೇಶದ ಪ್ರಕಾರ ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು  ಸಾರ್ವಜನಿಕ ಸಮಾರಂಭ, ಆಚರಣೆ ಸೇರಿದಂತೆ ಮನರಂಜನೆ ಕಾರ್ಯಕ್ರಮ ಹಾಗೂ ಇತರೆ ಸಂದರ್ಭಗಳಲ್ಲಿ ಸೇರಬಹುದಾದ ಸಾರ್ವಜನಿಕರ ಸಂಖ್ಯೆಯನ್ನು ಮಿತಿಗೊಳಿಸಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. …

Read More »

ಮಂಗಳಾ ಅಂಗಡಿ ಗೆಲವು ನಿಶ್ಚಿತ- ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರ ಗೆಲುವು ಖಚಿತವೆಂದು ಕೆಎಮ್‍ಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು. ಶನಿವಾರ ಸಂಜೆ ನಗರದ ಹೊಸಪೇಟ ಗಲ್ಲಿಯಲ್ಲಿರುವ ಕೆಬಿಎಸ್ ನಂ 3 ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಭ್ಯರ್ಥಿ ಪರ ಜಿಲ್ಲೆಯ ಎಲ್ಲ ಸಚಿವರು, ಶಾಸಕರು ಮತ್ತು ಮುಖಂಡರು ಒಗ್ಗಟ್ಟಾಗಿ ಪ್ರಚಾರ ಕಾರ್ಯ ನಡೆಸಿದ್ದೇವೆ. ಮತದಾರರು ಸಹ ಬಿಜೆಪಿ ಜನೋಪಯೋಗಿ …

Read More »

ಅಂಚೆ ಮತದಾನ ಮಾಡಿದ ರಮೇಶ್ ಜಾರಕಿಹೊಳಿ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ರಮೇಶ್ ಜಾರಕಿಹೊಳಿ ಪತ್ನಿ ಜಯಶ್ರೀ ವೋಟಿಂಗ್

ಬೆಳಗಾವಿ; ಕೊರೊನಾ ಸೋಂಕು ಹಿನ್ನಲೆಯಲ್ಲಿ ಹೋಂ ಕ್ವಾರಂಟೈನ್ ನಲ್ಲಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿ ಲೋಕಸಭಾ ಉಪಚುನಾವನೆಯಲ್ಲಿ ಅಂಚೆ ಮತದಾನ ಮಾಡಿದ್ದಾರೆ. ಚುನಾವಣಾ ಆಯೋಗ ಕೊರೊನಾ ಸೋಂಕಿತರಿಗೆ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಿದ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಎರಡು ದಿನಗಳ ಹಿಂದೆಯೇ ಅಂಚೆ ಮತದಾನದ ಮೂಲಕ ಹಕ್ಕು ಚಲಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಇಂದು ರಮೇಶ್ ಜಾರಕಿಹೊಳಿ ಪತ್ನಿ ಜಯಶ್ರಿ ಗೋಕಾಕ್ ನ ನ್ಯೂ ಇಂಗ್ಲೀಷ್ ಶಾಲೆಯಲ್ಲಿ ಮತದಾನ ಮಾಡಿದರು.

Read More »

ಬೆಳಗಾವಿ ಉಪಚುನಾವಣೆ : ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಮತದಾನ ಬಹಿಷ್ಕಾರ ಹಾಕಿದ ಗ್ರಾಮಸ್ಥರು

ಬೆಳಗಾವಿ : ಬೆಳಗಾವಿ ಲೋಕಸಭಾ ಉಪಚುನಾವಣೆ ಶಾಂತಿಯುತವಾಗಿ ಆರಂಭವಾಗಿದ್ದು ಬೆಳಿಗ್ಗೆ 9 ಗಂಟೆಯವರೆಗೆ ಶೇ 5.47 ರಷ್ಟು ಮತದಾನವಾಗಿದೆ. ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರು ತಮ್ಮ ಕುಟುಂಬ ಸಮೇತ ಮತಗಟ್ಟೆಗೆ ಬಂದು ಸರದಿಯಲ್ಲಿ ನಿಂತು ಮತ ಚಲಾಯಿಸಿದರು. ಶಾಂತಿಯುತ ಮತದಾನವಾಗುತ್ತಿರುವ ಮಧ್ಯೆ ತಮ್ಮ ಹಳ್ಳಿಯ ಸ್ಥಳಾಂತರಕ್ಕೆ ಒತ್ತಾಯಿಸಿ ರಾಮದುರ್ಗ‌ ತಾಲೂಕಿನ ಪ್ರವಾಹ ಪೀಡಿತ ಚಿಕ್ಕತಡಸಿ ಹಾಗೂ ಹಿರೇತಡಸಿ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದ್ದಾರೆ.‌ ಗ್ರಾಮದ ಸ್ಥಳಾಂತರ ವಿಷಯದಲ್ಲಿ ಅಧಿಕಾರಿಗಳ …

Read More »

ಗೋಕಾಕ ನಲ್ಲಿ ಮತ ಚಲಾವಣೆ ಮಾಡಿದ ಸಂತೋಷ್ ಜಾರಕಿಹೊಳಿ ದಂಪತಿ…

ಗೋಕಾಕ: ಬೆಳಗಾವಿ ಸೇರಿದಂತೆ ಎಲ್ಲಾಕಡೆ ಮತದಾನ ಮಂದಗತಿಯಿಂದ ಪ್ರಾರಂಭ ವಾಗಿದ್ದು ಸಮಯ್ ಕಳೆದಂತೆ ಜೋರಾಗಿಯೇ ನಡಿತಿದೆ ಸುಮಾರು 20ರಿಂದ 30 ಶೇಕಡಾ ಮತದಾನ ಗೋಕಾಕ ಹಾಗೂ ಅರಭಾವಿ ಕ್ಷೇತ್ರದಲ್ಲಿ ಆಗಿದೆ ಎಂಬ ಮಾಹಿತಿ ಸದ್ಯಕ್ಕೆ ಲಭ್ಯ ವಾಗುತ್ತಿದೆ. ಇಂದು ಮಾಜಿ ಸಚಿವ ಹಾಗೂ ಗೋಕಾಕ ಹಾಲಿ ಶಾಸಕ ರಮೇಶ್ ಜಾರಕಿಹೊಳಿ ಅವರ್ ಸುಪುತ್ರ ಶ್ರೀ ಸಂತೋಷ್ ಜಾರಕಿಹೊಳಿ ಹಾಗೂ ಅವರ್ ಸೊಸೆ ಅಂಬಿಕಾ ಸಂತೋಷ್ ಜಾರಕಿಹೊಳಿ ಅವರು ಎಲ್ಲರಂತೆ ಸರಳ …

Read More »

ಉಪ‌ಚುನಾವಣೆ: ಬೆಳಗಾವಿ ಮತ್ತು ಮಸ್ಕಿ, ಬಸವಕಲ್ಯಾಣದಲ್ಲಿ ಮತದಾನ ಆರಂಭ

ಬೆಳಗಾವಿ/ರಾಯಚೂರು: ಕಾಂಗ್ರೆಸ್‌ ಮತ್ತು ಬಿಜೆಪಿ ಮಧ್ಯೆ ತೀವ್ರ ಜಿದ್ದಾಜಿದ್ದಿನ ಕಣಗಳಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಆರಂಭವಾಗಿದೆ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸೋಂಕು ಹರಡದಂತೆ ಎಚ್ಚರ ವಹಿಸಲು ಮತಗಟ್ಟೆಗಳಲ್ಲಿ ಅಂತರ ಕಾಯ್ದುಕೊಂಡು ಮತದಾನ ಮಾಡಬೇಕಿದೆ. ಹೀಗಾಗಿ, ಮತದಾನದ ಅವಧಿಯನ್ನು ಒಂದು ಗಂಟೆ ಹೆಚ್ಚಿಸಲಾಗಿದ್ದು, ಬೆಳಿಗ್ಗೆ 7ರಿಂದ ಸಂಜೆ 7ರ ವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಕೇಂದ್ರದಲ್ಲಿ ಸಚಿವರಾಗಿದ್ದ ಸುರೇಶ ಅಂಗಡಿ …

Read More »

ಬೆಳಗಾವಿ: ಕೋವಿಡ್ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಮುಂಜಾಗ್ರತಾ ಕ್ರಮ

ಬೆಳಗಾವಿ: ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಏ.17ರಂದು ನಡೆಯಲಿದೆ. ಕೋವಿಡ್-19 ಎರಡನೇ ಅಲೆಯ ಆತಂಕದ ಹಿನ್ನೆಲೆಯಲ್ಲಿ, ಮತಗಟ್ಟೆಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ. ಹರೀಶ್‌ಕುಮಾರ್‌ ತಿಳಿಸಿದರು. ಇಲ್ಲಿ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಮತಯಂತ್ರವನ್ನು ಎಲ್ಲರೂ ಬಳಸುತ್ತಾರೆ ಎಂಬ ಆತಂಕ ಮತದಾರರಿಗೆ ಇದೆ. ರಾಜಕೀಯ ಪಕ್ಷದವರೂ ಈ ಬಗ್ಗೆ ಗಮನಸೆಳೆದಿದ್ದರು. ಹೀಗಾಗಿ, ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಚುನಾವಣಾ ಆಯೋಗ ಹಾಗೂ ಆರೋಗ್ಯ …

Read More »

ಮತದಾನ ಮಾಡಿ ಗೆಲ್ಲುವ ವಿಶ್ವಾಸ ನನ್ನಲಿದೆ ಎಂದ ಮಂಗಲ್ ಅಂಗಡಿ

ಬೆಳಗಾವಿ, ಏಪ್ರಿಲ್ 17: ಬೆಳಗಾವಿ ಲೋಕಸಭೆ ಉಪಚುನಾವಣೆ ಮತದಾನ ಪ್ರಕ್ರಿಯೆ ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ. ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಮತದಾನ ಮಾಡಿದ ಪ್ರಮುಖರಲ್ಲಿ ಮೊದಲಿಗರಾಗಿದ್ದು ವಿಶೇಷ. ವಿಶ್ವೇಶ್ವರಯ್ಯ ನಗರದಲ್ಲಿರುವ ಸರ್ಕಾರಿ ಶಾಲೆಯ ಮತಗಟ್ಟೆ ಸಂಖ್ಯೆ ಎರಡರಲ್ಲಿ ಬೆಳಗ್ಗೆ 7 ಗಂಟೆಗೆ ಆಗಮಿಸಿದ ಮಂಗಲ ಅವರು ಮತದಾನ ಮಾಡಿದರು. ಮತಗಟ್ಟೆ ಆಗಮಿಸುತ್ತಿದ್ದಂತೆ ಮೊದಲಿಗೆ ಮತದಾರರ ಕಾಲು ಮುಗಿದು ಆಶೀರ್ವಾದ ಪಡೆದ ಮಂಗಲ ಅವರು ನಂತರ ಸರತಿ ಸಾಲಿನಲ್ಲಿ ನಿಂತರು. …

Read More »

ಕಾಂಗ್ರೆಸ್‌ ಶಾಸಕಿ ‌ʼಲಕ್ಷ್ಮಿ ಹೆಬ್ಬಾಳ್ಕರ್ʼ ಮತ್ತವರ ಕುಟುಂಬದ 8 ಸದಸ್ಯರಿಗೆ ʼಕೊರೊನಾ ಪಾಸಿಟಿವ್‌ʼ

ರಾಜ್ಯದಲ್ಲಿ ಕೊರೊನಾದ 2ನೇ ಅಲೆ ಉಲ್ಭಣವಾಗ್ತಿದ್ದು, ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವ್ರಿಗೆ ಕೊರೊನಾ ಸೋಂಕು ದೃಢ ಪಟ್ಟಿದೆ. ಆತಂಕಕಾರಿ ಅಂಶವೆಂದ್ರೆ ಶಾಸಕಿ ಮತ್ತವ್ರ ಕುಟುಂಬದ 8 ಮಂದಿಗೆ ಹೆಮ್ಮಾರಿ ಕೊರೊನಾ ವಕ್ಕರಿಸಿದೆ ಎಂದು ಹೇಳಲಾಗ್ತಿದೆ. ಬೆಳಗಾವಿ ಉಪ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ‌ಲಕ್ಷ್ಮಿ ಹೆಬ್ಬಾಳ್ಕರ್ ಸೇರಿ ಕುಟುಂಬದ 8 ಜನರಿಗೆ ಸೋಂಕು ದೃಢಪಟ್ಟಿದ್ದು, ಅವ್ರ ಕಾರು ಚಾಲಕ ಮತ್ತು ಮನೆಯ ಅಡುಗೆ ಭಟ್ಟರಿಗೂ ಸೋಂಕು ತಗುಲಿದೆ ಎನ್ನುವ …

Read More »