ಬೆಳಗಾವಿ: ತಾಲೂಕಿನ ಬಡಾಲ ಅಂಕಲಗಿ ಗ್ರಾಮದ ಕೌರಿಗುಡ್ಡದಲ್ಲಿ ಸೌರ ವಿದ್ಯುತ ಘಟಕಕ್ಕಾಗಿ ಶ್ರೀಗಂಧ ಸಹಿತ ವಿವಿಧ ಮರಗಳನ್ನು ಅನಧಿಕೃತವಾಗಿ ಕಟಾವು ಮಾಡಿರುವ ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ನಗರದ ಅರಣ್ಯ ಇಲಾಖೆ ಕಚೇರಿ ಎದುರು ಶುಕ್ರವಾರ ಪ್ರತಿಭಟಿಸಲಾಯಿತು. ವಿವಿಧ ರೈತ ಸಂಘಟನೆ, ಪರಿಸರವಾದಿ, ಬಿಜೆಪಿ ಬೆಳಗಾವಿ ಗ್ರಾಮೀಣ ಘಟಕ ಸೇರಿದಂತೆ ವಿವಿಧ ಸಂಘಟನೆಗಳಿಂದ ಪ್ರತಿಭಟಿಸಿ, ಅರಣ್ಯ ಇಲಾಖೆಯ ಅನುಮತಿ ನೀಡುವ ಮೊದಲೇ ಶ್ರೀಗಂಧದ ಮರಗಳನ್ನೂ …
Read More »ಫೆ.8ರಿಂದ ರಾಷ್ಟ್ರಮಟ್ಟದ ವಿಚಾರ ಸಂಕಿರಣ
ಬೆಳಗಾವಿ:ನಗರದ ಕೆಎಲ್‌ಎಸ್ ಗೊಗಟೆ ಕಾಲೇಜಿನ ಕೆ.ಕೆ.ವೇಣುಗೋಪಾಲ ಸಭಾಂಗಣದಲ್ಲಿ ಫೆ.8ರಿಂದ 13ರ ವರಗೆ ಅಕಾಡೆಮಿ ಆಫ್ ಕಂಪೇರೆಟಿವ್ ಫಿಲಾಸಫಿ ಆ್ಯಂಡ್ ರಿಲಿಜನ್ (ಎಸಿಪಿಆರ್) ಮತ್ತು ಕೇಂದ್ರ ಸಂಸ್ಕೃತ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರಮಟ್ಟದ ತತ್ವಜ್ಞಾನಿ ಅಧಿವೇಶನ ಧಾರ್ಮಿಕ, ಸಾಂಸ್ಕೃತಿಕ ಹಾಗೂ ಚಿತ್ರಕಲಾ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸಿಪಿಆರ್ ಸಂಸ್ಥೆಯ ಕಾರ್ಯದರ್ಶಿ ಎಂ.ಬಿ.ಝಿರಲಿ ತಿಳಿಸಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಭಾಗದ ಮಕ್ಕಳಿಗೆ, ಯುವಕರಿಗೆ ಭಕ್ತಿ ಮತ್ತು ಯೋಗದ ಕುರಿತು ಹಲವು …
Read More »ಸಚಿವೆ ಹೆಬ್ಬಾಳ್ಕರ್‌ಗೆ ಚಿನ್ನದ ಸರ ಸಮೇತ ಸನ್ಮಾನ
ಬೆಳಗಾವಿ: ತಾಲೂಕಿನ ಕೊಂಡಸಕೊಪ್ಪ ಗ್ರಾಮದಲ್ಲಿ ಶುಕ್ರವಾರ ಜರುಗಿದ ವಿಠ್ಠಲ ಬೀರದೇವರ ಮತ್ತು ಬಾಗುಬಾಯಿ ದೇವಿಯ ನೂತನ ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ್ದ ತಮ್ಮ ಕ್ಷೇತ್ರದ ಶಾಸಕಿಯೂ ಆಗಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಗ್ರಾಮಸ್ಥರು ಚಿನ್ನದ ಸರ ನೀಡಿ ಸನ್ಮಾನಿಸುವ ಮೂಲಕ ವಿಶೇಷ ಅಭಿಮಾನ ಪ್ರದರ್ಶಿಸಿದ್ದಾರೆ. ನೂತನ ದೇವಸ್ಥಾನವನ್ನು ಒಂದೂವರೆ ಕೊಟಿ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಹಿನ್ನೆಲೆಯಲ್ಲಿ ತೆರೆದ ವಾಹನದಲ್ಲಿ ಸಚಿವರನ್ನು ಮೆರವಣಿಗೆಯಲ್ಲಿ ಸ್ವಾಗತಿಸಿಕೊಂಡು, ಚಿನ್ನದ ಸರದ ಸಮೇತ ಸನ್ಮಾನಿಸಿದರು. ದೇವಸ್ಥಾನ ಉದ್ಘಾಟಿಸಿ, ಸನ್ಮಾನ …
Read More »ಮಲ್ಲಮ್ಮಳ ಉತ್ಸವಕ್ಕೆ 75 ಲಕ್ಷ ರೂ.
ಬೈಲಹೊಂಗಲ: ಶಿವಾಜಿ ಮಹಾರಾಜರೊಂದಿಗೆ ಸಹೋದರತ್ವ ಬಾಂಧವ್ಯ ಬೆಸೆದು ಕನ್ನಡ, ಮರಾಠಿಗರ ಮಧ್ಯೆ ಸಮನ್ವಯತೆ ಹೊಂದಲು 16ನೇ ಶತಮಾನದಲ್ಲಿಯೇ ಕಾರಣೀಕರ್ತಳಾದ ವೀರವನಿತೆ ಬೆಳವಡಿ ಮಲ್ಲಮ್ಮಳ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರದಿಂದ 75 ಲ ರೂ. ಅನುದಾನ ಮಂಜೂರಾಗಿದೆ.ಇನ್ನು 25 ಲ ರೂ. ಅನುದಾನಕ್ಕಾಗಿ ಬೇಡಿಕೆ ಇಡಲಾಗಿದೆ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ವೀರ ರಾಣಿ ಬೆಳವಡಿ ಮಲ್ಲಮ್ಮ ಸ್ಮಾರಕ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೆಳವಡಿ …
Read More »ಮುರಗೋಡ ಮಹಾಂತ ಶ್ರೀ ಜಾತ್ರೆ ಫೆ.20ರಿಂದ
ಮುರಗೋಡ: ಗ್ರಾಮದ ಮಹಾಂತ ದುರದುಂಡೀಶ್ವರ ಮಠದ ಸಭಾಭವನದಲ್ಲಿ ಲಿಂ.ಮಹಾಂತ ಶಿವಯೋಗಿಗಳ 54ನೇ ಪುಣ್ಯಸ್ಮರಣೆ ಅಂಗವಾಗಿ ನಡೆಯಲಿರುವ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆ ನೀಲಕಂಠ ಸ್ವಾಮೀಜಿ ನೇತೃತ್ವದಲ್ಲಿ ಈಚೆಗೆ ಜರುಗಿತು. ನೀಲಕಂಠ ಸ್ವಾಮೀಜಿ ಮಾತನಾಡಿ, ಫೆ.20 ರಿಂದ ಐದು ದಿನಗಳ ಶರಣರ ಅನುಭಾವ ಪ್ರವಚನ, ಫೆ.25ರಿಂದ ರೈತ ಸಮಾವೇಶ, ಉದ್ಯೋಗ ಮೇಳ, ಭಜನಾ ಸ್ಪರ್ಧೆ, ಮಹಿಳಾ ಗೋಷ್ಠಿ, ಶರಣರ ಸಿದ್ಧಾಂತ ದರ್ಶನ ಹಾಗೂ ಮುರಗೋಡ ಮುಕುಟ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಾಮೂಹಿಕ …
Read More »ಬೆಳಗಾವಿ ಜಿಲ್ಲೆ ವಿಭಜನೆ ಕುರಿತು ಸಿಎಂ ನಿರ್ಧರಿಸುತ್ತಾರೆ: ಸಚಿವ ಸತೀಶ್ ಜಾರಕಿಹೊಳಿ
ಬೆಳಗಾವಿ: ಬೆಳಗಾವಿ ಜಿಲ್ಲೆಯ ವಿಭಜನೆ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರೇ ನಿರ್ಧಾರ ಕೈಗೊಳ್ಳಬೇಕೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು. ಬೆಳಗಾವಿಯ ಶ್ರೀನಗರದಲ್ಲಿ 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಜಿಲ್ಲಾ ಬಾಲಭವನದ ಒಳಾಂಗಣ ಬಾಕ್ಸ್ ಕ್ರಿಕೆಟ್ ಮೈದಾನವನ್ನು ಉದ್ಘಾಟಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆಯನ್ನು ವಿಭಜಿಸಬೇಕೆಂದು ಈಗಾಗಲೇ ಹಲವು ಬಾರಿ ಜಿಲ್ಲೆಯ ಮುಖಂಡರೆಲ್ಲರೂ ಸೇರಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇವೆ. ಆದರೆ …
Read More »ಪರಸ್ಪರ ಒಪ್ಪಿಗೆಯಿಂದ ಪ್ರೇಮವಿವಾಹ ಇಬ್ಬರ ಸಾವಿಗೆ ಕಾರಣ
ಚಿಕ್ಕೋಡಿ: ಪರಸ್ಪರ ಒಪ್ಪಿಗೆಯಿಂದ ಯುವಕ-ಯುವತಿ ಮಾಡಿಕೊಂಡ ಪ್ರೇಮವಿವಾಹ ಇಬ್ಬರ ಸಾವಿಗೆ ಕಾರಣವಾಗಿದೆ. ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಠಾಣೆ ವ್ಯಾಪ್ತಿಯ ಕಮತನೂರಿನ ಪ್ರೇಮಿಗಳಿಬ್ಬರೂ ಕುಟುಂಬಸ್ಥರಿಗೆ ತಿಳಿಯದಂತೆ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ಮಾಡಿಕೊಂಡಿದ್ದಾರೆ. ತಂಗಿ ಮನೆತನದ ಕಳೆದಿದ್ದಾಳೆಂದು ಬೇಸರಗೊಂಡು ವಧುವಿನ ಅಣ್ಣ ಪ್ರಶಾಂತ ನಿಕ್ಕಂ(೨೫)ಬುಧವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದುವೆಯಾದ ಯುವಕನನ್ನು ಪ್ರೀತಿಸುತ್ತಿದ್ದ ಮತ್ತೋರ್ವ ಯುವತಿ ಕಮತನೂರ ಗ್ರಾಮದ ರಕ್ಷಿತಾ ಕಾಂಬಳೆ (20), ತನಗೆ ಮೋಸವಾಗಿದೆ ಎಂಬ ನೋವಿನಿಂದ ಅದೇ …
Read More »Belagavi-ಹೆಚ್ಚುವರಿ ವಿಮಾನಯಾನಕ್ಕೆ ಶೀಘ್ರ ಕ್ರಮ
ಬೆಳಗಾವಿ: ಬೆಳಗಾವಿಯಿಂದ ವಿಮಾನ ಸಂಚಾರ ಕಡಿಮೆಯಾಗಿರುವುದನ್ನು ಖಂಡಿಸಿ ವಾಣಿಜ್ಯೋದ್ಯಮ ಸಂಘ ಪ್ರತಿಭಟನೆಗೆ ಮುಂದಾಗಿದ್ದರಿಂದ ವಿವಿಧ ಖಾಸಗಿ ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ವಿಮಾನ ನಿಲ್ದಾಣ ಅಧಿಕಾರಿಗಳು ಗುರುವಾರ ಸಂಘದ ಕಚೇರಿಗೆ ಭೇಟಿ ನೀಡಿ ಚರ್ಚಿಸಿದರು. ಸಂಚಾರ ದಟ್ಟಣೆ ಇದ್ದರೂ ಬೆಳಗಾವಿಯಿಂದ ಸಂಚರಿಸುತ್ತಿದ್ದ ಹಲವಾರು ವಿಮಾನಗಳು ಏಕಾಏಕಿ ರದ್ದಾಗುತ್ತಿರುವುದು ಉದ್ಯಮಗಳ ಕಾರ್ಯಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತ್ತು. ಜತೆಗೆ ಬೆಳಗಾವಿ ಅಭಿವೃದ್ಧಿಗೆ ಇದು ಹಿನ್ನಡೆಯುಂಟು ಮಾಡುವ ಆತಂಕ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ವಾಣಿಜ್ಯೋದ್ಯಮ …
Read More »ಡಾ.ಕೋರೆಗೆ ಗೋವಾ ಮಾಜಿ ಸಿಎಂ ಕಾಮತ ಸನ್ಮಾನ
ಬೆಳಗಾವಿ: ಗೋವಾದ ಮಾಜಿ ಮುಖ್ಯಮಂತ್ರಿ, ಹಾಲಿ ಸಚಿವ ದಿಗಂಬರ ಕಾಮತ, ಗುರುವಾರ ನಗರದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆಯವರನ್ನು ಸನ್ಮಾಸಿದರು ಈ ವೇಳೆ ಮಾತನಾಡಿ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪೂರ್ವ ಸೇವೆ ಗುರುತಿಸಿ ಡಾ.ಕೋರೆಯವರಿಗೆ ಪದ್ಮಶ್ರೀ ಪ್ರಶಸ್ತಿ ಸಂದಿರುವುದು ಅವರ ಸಾಧನೆಗೆ ಸಲ್ಲಿಸಿದ ಗೌರವವಾಗಿದೆ ಎಂದು ಶ್ಲಾಘಿಸಿದರು. ಸೋಮಣ್ಣ ಭೇಟಿ: ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಫೆ.7ರಂದು ಡಾ.ಕೋರೆಯವರ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಹುಬ್ಬಳ್ಳಿಯಿಂದ ರಸ್ತೆ ಮಾರ್ಗವಾಗಿ ನಗರಕ್ಕೆ …
Read More »ಮುಗಳಿಹಾಳ ಜಾತ್ರಾ ಮಹೋತ್ಸವ ಹಾಗೂ ನಾಟಕ ಚಾಲನೆ ನೀಡಿದ ಅಶ್ವಥ್ ವೈದ್ಯ
ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ಜರುಗಿದ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ ಹಾಗೂ ನಾಟಕ ಉದ್ಘಾಟನಾ ಸಮಾರಂಭದಲ್ಲಿ ಅಶ್ವಥ್ ವೈದ್ಯ ಅವರು ಭಾಗವಹಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮುಖಂಡರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
Read More »
Laxmi News 24×7