Breaking News

ಬೆಳಗಾವಿ

ನಡು ರಸ್ತೆಯಲ್ಲಿಯೇ ಭಾರಿ ವಾಹನಗಳನ್ನು ನಿಲ್ಲಿಸಿ ವಿವಿಧ ವಸ್ತುಗಳ ಲೋಡಿಂಗ್, ಅನ್‍ಲೋಡಿಂಗ್ ಮಾಡುತ್ತಿರುವುದಕ್ಕೆ ಸಾರ್ವಜನಿಕರ ತೀವ್ರ ಆಕ್ರೋಶ

ಬೆಳಗಾವಿಯ ಯಡಿಯೂರಪ್ಪ ಮಾರ್ಗದಲ್ಲಿ ನಡು ರಸ್ತೆಯಲ್ಲಿಯೇ ಭಾರಿ ವಾಹನಗಳನ್ನು ನಿಲ್ಲಿಸಿ ವಿವಿಧ ವಸ್ತುಗಳ ಲೋಡಿಂಗ್, ಅನ್‍ಲೋಡಿಂಗ್ ಮಾಡುತ್ತಿರುವುದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು ಯಡಿಯೂರಪ್ಪ ಮಾರ್ಗದ ರಸ್ತೆ ರಾಷ್ಟ್ರೀಯ ಹೆದ್ದಾರಿ-4ರಿಂದ ಬೆಳಗಾವಿ ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ. ದಿನನಿತ್ಯ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಇಂತಹ ಸಮಯದಲ್ಲಿಯೇ ಬೇಕಾಬಿಟ್ಟಿಯಾಗಿ ದೊಡ್ಡ ಕ್ಯಾಂಟರ್‍ಗಳನ್ನು ನಡು ರಸ್ತೆಯಲ್ಲಿಯೇ ನಿಲ್ಲಿಸಿ, ಲೋಡ್, ಅನ್‍ಲೋಡ್ ಮಾಡುತ್ತಿರುವ ದೃಶ್ಯ ಕಂಡು ಬಂದಿದೆ. ಇಷ್ಟೇಲ್ಲಾ …

Read More »

ತಾವೇ ಬೂತ್ ಎಜೇಂಟ್ ಆಗ್ತಾರಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ,

  ತಾವೇ ಬೂತ್ ಎಜೇಂಟ್ ಆಗ್ತಾರಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಗೋಕಾಕ ಚುನಾವಣಾ ವ್ಯವಸ್ಥೆ ಹೇಗಿದೆ ಎಲ್ಲರಿಗೂ ಗೊತ್ತೆ ಇದೆ, ಹೀಗಾಗಿ ನಾನೇ ಬೂತ್ ಎಜೆಂಟ್ ಆಗಿ ಚುನಾವಣೆಯ ದಿನ ಕೂರುತ್ತೆನೆ ಎಂದ ಸತೀಶ್, ಗೋಕಾಕದ ಹಿಲ್ ಗಾರ್ಡನ್ ನಲ್ಲಿ ಮಾಧ್ಯಮಗಳಿಗೆ ಸತೀಶ್ ಹೇಳಿಕೆ, ಗುಜನಾಳ ಗ್ರಾಂ ಪಂ ನಲ್ಲಿ ನಾನೇ ಬೂತ್ ಎಜೆಂಟ್ ಆಗುವೆ, ಪೂಜಾರಿ ಮಮದಾಪೂರ ದಲ್ಲಿ ಬೂತ್ ಏಜೆಂಟ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಎಂದ …

Read More »

ದಿನಕ್ಕೊಂದು ತಾಲ್ಲೂಕಿನಲ್ಲಿ ಮಿಂಚಿನ ಓಡಾಟ ನಡೆಸಿರುವ ರಮೇಶ್ ಜಾರಕಿಹೊಳಿ

ಬೆಳಗಾವಿ-ವಿಧಾನ ಪರಿಷತ್ರಿನ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರ ಪರವಾಗಿ ಮಿಂಚಿನ ಪ್ರಚಾರ ನಡೆಸಿದ್ದಾರೆ. ದಿನಕ್ಕೊಂದು ತಾಲ್ಲೂಕಿನಲ್ಲಿ ಮಿಂಚಿನ ಓಡಾಟ ನಡೆಸಿರುವ ರಮೇಶ್ ಜಾರಕಿಹೊಳಿ ನಿನ್ನೆ ಗುರುವಾರ ಖಾನಾಪೂರ ತಾಲ್ಲೂಕಿನಲ್ಲಿ ಭರ್ಜರಿ ಪ್ರಚಾರ ಮಾಡಿದ್ದಾರೆ. ಒಂದೇ ದಿನ ಖಾನಾಪೂರ ತಾಲ್ಲೂಕಿನ 50 ಕ್ಕೂ ಹೆಚ್ವು ಗ್ರಾಮ ಪಂಚಾಯತಿ ಸದಸ್ಯರನ್ನು ಭೇಟಿಯಾಗಿ ‌ಮತಯಾಚನೆ ಮಾಡುವ ಮೂಲಕ ರಾಜಕೀಯ ವಿರೋಧಿಗಳಿಗೆ ನಡುಕ ಹುಟ್ಟಿಸಿದ್ದಾರೆ. …

Read More »

ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿದ ವಿಪ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ

ಬೆಳಗಾವಿ : ಡಿ. 10 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಮತ್ತು ಕಾಂಗ್ರೇಸ್ ಅಭ್ಯರ್ಥಿಯ ಸೋಲಿಗೆ ಅನುಸರಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ನೇತೃತ್ವದಲ್ಲಿ ಬೆಳಗಾವಿಯಲ್ಲಿ ಗುರುವಾರ ರಾತ್ರಿ ಸಭೆ ನಡೆಸಲಾಯಿತು. ನಗರದ ಖಾಸಗಿ ಹೊಟೇಲ್‍ನಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಮತ್ತು ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಅವರುಗಳು ಪಾಲ್ಗೊಂಡು …

Read More »

ಕಬ್ಬು ಪೂರೈಸಿದ ಬಾಕಿ ಹಣ ನೀಡುವಂತೆ ಆಗ್ರಹಿಸಿ ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ ಮನೆ ಎದುರು ರೈತರು ಪ್ರತಿಭಟನೆ

ಬೆಳಗಾವಿ: ಕಬ್ಬು ಪೂರೈಸಿದ ಬಾಕಿ ಹಣ ನೀಡುವಂತೆ ಆಗ್ರಹಿಸಿ ರಾಮದುರ್ಗ ಶಾಸಕ ಮಹದೇವಪ್ಪ ಯಾದವಾಡ ಮನೆ ಎದುರು ರೈತರು ಪ್ರತಿಭಟನೆ ನಡೆಸಿದರು. ಉದಪುಡಿ ಗ್ರಾಮದ ಬಳಿಯಿರುವ ಶಿವಸಾಗರ ಸಹಕಾರಿ ಸಕ್ಕರೆ ಕಾರ್ಖಾನೆಗೆ ರೈತರು ಪೂರೈಸಿದ್ದ ಕಬ್ಬಿಗೆ ಈವರೆಗೆ ಹಣ ನೀಡಿಲ್ಲ. ಕಾರ್ಖಾನೆ ಅಧ್ಯಕ್ಷರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ ರೈತರು, ಬಾಕಿ ಹಣ ನೀಡುವವರೆಗೂ ಕಾರ್ಖಾನೆ ಮುಚ್ಚುವಂತೆ ಆಗ್ರಹಿಸಿದರು. ಸಕ್ಕರೆ ಸಚಿವರಿಂದ ಸೂಕ್ತ ಭರವಸೆ ಸಿಗುವವರೆಗೂ ಮನೆಗಳಿಗೆ ತೆರಳುವುದಿಲ್ಲ ಎಂದು ಧರಣಿ …

Read More »

ಛೋಟಾ ಸಾಹುಕಾರರ ಪ್ರಚಾರ ಇಂದಿನಿಂದ ಪ್ರಾರಂಭ ,ಸವದತ್ತಿ ಯಲ್ಲಮ್ಮನ ಗುಡ್ಡಕ್ಕೆ ಕೂಡ ಭೇಟಿ ನೀಡಿದ ಲಖನ ಜಾರಕಿಹೊಳಿ

ಬೆಳಗಾವಿ: ಬೆಳಗಾವಿ ಲೋಕಸಭೆ ಚುನಾವಣೆ ಫುಲ್ ಜೋರಾಗಿ ಪ್ರಚಾರ ನಡೆಸಿದ್ದಾರೆ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ನಿನ್ನೆ ವರೆಗೂ ಸುಮ್ಮನಿದ್ದ ಛೋಟಾ ಸಾಹುಕಾರ ಇಂದಿನಿಂದ ಪ್ರಚಾರ ಪ್ರಾರಂಭ ಮಾಡಿದ್ದಾರೆ ಯರಗಟ್ಟಿ ಯಲ್ಲಿ ಕಾರ್ಯಕರ್ತರಿಗೆ ಭೇಟಿಯಾದಲಖನ ಜಾರಕಿಹೊಳಿ ಅವರು ಎಲ್ಲ ಕಾರ್ಯ ಕರ್ತರನ್ನು ಒಗ್ಗೂಡಿಸಿ ಮಾತ ಯಾಚನೆ ಮಾಡಿದ್ದಾರೆ . ಬಹುಶಃ ಲಖನ ಜಾರಕಿಹೊಳಿ ಅವರ ನಾಮ ನಿರ್ದೇಶನ ಮಾಡಲು ಬಂದ ದಿನವೇ ಅವರು ಗೆದ್ದ ಹಾಗೆ ಎಂದು ಎಲ್ಲ ಅಭಿಮಾನಿ …

Read More »

ಹೆಬ್ಬಾಳ್ಕರ್-ಜಾರಕಿಹೊಳಿ ಕುಟುಂಬಕ್ಕೆ ಪ್ರತಿಷ್ಠೆಯಾದ ಪರಿಷತ್ ಚುನಾವಣೆ

ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿ ಜಿಲ್ಲಾ ರಾಜಕಾರಣದ ಕಡು ವೈರಿಗಳೆಂದೇ ಬಿಂಬಿತರಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಹಾಗೂ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಮತ್ತೊಂದು ಸೆಣಸಾಟಕ್ಕೆ ಪರಿಷತ್ ಚುನಾವಣೆ ಕಣ ವೇದಿಕೆಯಾಗಿದೆ. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳಿ ಕಾಂಗ್ರೆಸ್ ‌ಅಭ್ಯರ್ಥಿ ಆಗಿ ಕಣಕ್ಕಿಳಿದಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ‌ ಸಹೋದರ ಲಖನ್ ಜಾರಕಿಹೊಳಿ‌ ಪಕ್ಷೇತರ ಅಭ್ಯರ್ಥಿ ಆಗಿ ಕಣದಲ್ಲಿದ್ದಾರೆ. ತಮ್ಮ ಸಹೋದರರನ್ನು ಗೆಲ್ಲಿಸಲೇಬೇಕು ಎಂದು ಪಣತೊಟ್ಟಿರುವ …

Read More »

ಲೋಪದೋಷ ರಹಿತ ಚುನಾವಣೆಗೆ ಸೂಚನೆ,ವೀಕ್ಷಕರಾದ ಏಕರೂಪ್ ಕೌರ್ ಭೇಟಿ, ಮತಗಟ್ಟೆಗಳ ಪರಿಶೀಲನೆ

ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯ ಮತದಾನ ಹಾಗೂ ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ರೀತಿಯ ಲೋಪದೋಷಗಳು ಉಂಟಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಬೆಳಗಾವಿ ಜಿಲ್ಲೆಯ ವಿಧಾನ ಪರಿಷತ್ ಚುನಾವಣಾ ವೀಕ್ಷಕರಾದ ಹಿರಿಯ ಐ.ಎ.ಎಸ್. ಅಧಿಕಾರಿ ಏಕರೂಪ್ ಕೌರ್ ಅವರು ಸೂಚನೆ ನೀಡಿದರು. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶುಕ್ರವಾರ (ನ.26) ನಡೆದ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಚುನಾವಣಾ ಆಯೋಗದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ …

Read More »

ಎಮ್ಮ ಮನೆಯಂಗಳದಿ ಬೆಳೆದೊಂದು ಹೂವನ್ನ ಒಪ್ಪಿಸಲಾರೆವು ಹೀಗೆಲ್ಲ’ ಇನ್ನಾದರೂ ಮಾಡಿರೈ ಶಪಥ

ಗೋಕಾಕ ಫಾಲ್ಸ್ – ಹದಿನೈದು ವರ್ಷಕ್ಕೆ ಅವಳಿಗೆ ಮದುವೆಯಾಗಿತ್ತು, ಈಗವಳಿಗೆ ಹದಿನೆಂಟೊ-ಹತ್ತೊಂಬತ್ತೋ ಇದ್ದಿರಬೇಕು. ಮದುವೆಯಾಗಿ ಇಷ್ಟು ದಿನವಾದರೂ ಮಕ್ಕಳಾಗಿಲ್ಲ ಎಂಬ ಕಾರಣ ಕೊಟ್ಟು ಅತ್ತೆಮನೆಯವರು ದಿನಾ ಕಾಟ ಕೊಡಲು ಶುರು ಮಾಡಿದ್ದರು. ಯಾರೋ ಭವಿಷ್ಯ ಹೇಳುವವನು, ಅವಳಿಗೆ ಆ ಭಾಗ್ಯವೇ ಇಲ್ಲ ಎಂದಿದ್ದ. ಅವನ ಮಾತು ಕೇಳಿದ ಅತ್ತೆಮನೆಯವರು ಆಕೆಯನ್ನು ಬಂಜೆ ಎಂಬ ಹಣೆಪಟ್ಟಿ ಕಟ್ಟಿ ತಿರಸ್ಕಾರ ಭಾವದಿಂದ ದಿನವೂ ಚುಚ್ಚಿ ಮಾತನಾಡತೊಡಗಿದರು. ಒಂದು ದಿನ ಆಕೆ ಅದನ್ನೆಲ್ಲ ಸಹಿಸದೇ ತನ್ನ …

Read More »

ಸಂವಿಧಾನ ಸಮರ್ಪಕ ದಿನದಂದು ಗೃಹದಳ ಇಲಾಖೆ ಯಿಂದ ಗೌರವ ಪ್ರತಿಜ್ಞೆ .

ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ, ಗೋಹತ್ಯೆ ನಿಷೇಧ ಕಾಯ್ದೆ ವಾಪಸ್‌ಗೆ ಆಗ್ರಹ.     ಬೆಳಗಾವಿ ಜಿಲ್ಲಾ ಗೃಹ ರಕ್ಷಣಾ ದಳದಿಂದ ಸಂವಿಧಾನ ಪ್ರತಿಜ್ಞೆ ಶಪತ ಗೌರವ ಅರ್ಪಣೆ, ನವೆಂಬರ್ ೨೬ ರಂದು ಭಾರತ‌ ದೇಶಕ್ಕೆ ಡಾ ಬೀ ಆರ್ ಅಂಬೇಡ್ಕರ್ ಅವರು ಸಂವಿಧಾನ ಅರ್ಪಣೆ ಮಾಡಿ ದೇಶದ ಪ್ರಜಾಪ್ರಭುತ್ವ ಭದ್ರತೆ ಹಾಗೂ ಕಾನೂನಿನ ಚೌಕಟ್ಟಿನ ಮಹತ್ವ ಮತ್ತು ಸಮರ್ಪಕ ಸಮಾನತೆಯ ಬಗ್ಗೆ ಬರೆದಿಟ್ಟ ಸಂವಿಧಾನವನ್ನು ದೇಶಕ್ಕೆ …

Read More »